Friday 26th, April 2024
canara news

ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ – ವಾರ್ಷಿಕ ಸಭೆ ‘ಅಭಿವ್ರದ್ದಿಯೆ ನಮ್ಮ ಗುರಿಯಾಗಬೇಕು’

Published On : 26 Sep 2016   |  Reported By : Bernard J Costa


ಕುಂದಾಪುರ, ಸೆ.26; ‘ನಮ್ಮ ಹಿರಿಯವರು ನಮ್ಮ ಭವಿಸ್ಯದ ಹಿತ ದ್ರಶ್ಟಿಯಿಂದ ಬಹಳ ಶ್ರಮ ಪಟ್ಟು ಸ್ಥಾಪಿಸಿದ ಈ ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿಯನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಿಕೊಳ್ಳ ಬೇಕು, ಹಾಗೆಯೆ ಈ ಸೊಸೈಟಿಯನ್ನು ಅಭಿವ್ರದ್ದಿ ಪಥದಲ್ಲಿ ಕೊಂಡಯ್ಯುವುದೆ ನಮ್ಮ ಗುರಿಯಾಗಬೇಕು’ ಸೊಸೈಟಿಯ ಮುಖ್ಯ ಸಲಹಗಾರರಾದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ|ಅನಿಲ್ ಡಿಸೋಜಾ, ಸಂತ ಮೇರಿಸ್ ಪ.ಪೂ.ಕಾಲೇಜಿನ ಸಭಾ ಭವನದಲ್ಲಿ ನೆಡೆದ ವಾರ್ಷಿಕ ಮಹಾ ಸಭೆಯಲ್ಲಿ ಸಂದೇಶ ನೀಡಿದರು.

ಸೊಸೈಟಿಯ ಸಿಂಬ್ಬದಿ ವರ್ಗ ಪ್ರಾರ್ಥನ ಗೀತೆ ಹಾಡಿತು. ಉಪಾಧ್ಯಕ್ಷರಾದ ಜೋನ್ ಮಿನೇಜೆಸ್ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಪಾಸ್ಕಲ್ ಡಿಸೋಜಾ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ನಿರ್ದೇಶಕಿ ಶಾಂತಿ ಆರ್. ಕರ್ವಾಲ್ಲೊ ಸೂಚನ ಪತ್ರವನ್ನು ವಾಚಿಸಿದರು.ನಿರ್ದೇಶಕರರಾದ ಕಿರಣ್ ಎಮ್.ಲೋಬೊ, ಸ್ಟ್ಯಾನ್ಲಿ ಡಿಸೋಜಾ, ಸೊಸೈಟಿಯ ಇತರ ವರದಿಗಳನ್ನು ನೀಡಿದರು.

ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿ’ಆಲ್ಮೇಡಾ ‘ನಮ್ಮ ಸಹಕಾರಿ ಸಂಘ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುತ್ತದೆ, ಸಂಘದ ಏಳಿಗೆಗಾಗಿ ಆಡಳಿತ ಮಂಡಳಿ ಶ್ರಮಿಸುವುದೆಂದು ತಿಳಿಸಿದರು. ನಿರ್ದೇಶಕ ಫಿಲಿಪ್ ಡಿ’ಕೋಸ್ತಾ ಸಲಹೆಯನ್ನು ನೀಡಿದರು. ನಿರ್ದೇಶಕರಾದ ಜೇಕಬ್ ಡಿಸೋಜಾ, ಮಾರ್ಟಿನ್ ಎ. ಡಾಯಸ್, ಶಾಖಾಧಿಕಾರಿ ಮೇಬಲ್ ಡಿ’ಸೋಜಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳೆದ ಕೆಲವು ತಿಂಗಳ ಹಿಂದೆ ತ್ರಾಸಿಯಲ್ಲಿ ನೆಡೆದ ಅಪಘಾತದಲ್ಲಿ ಸಂಘದ ಸದಸ್ಯರ ಮಡಿದ ಎಂಟು ಮಕ್ಕಳ ಆತ್ಮಕ್ಕೆ ಶಾಂತಿಯನ್ನು ಸಲ್ಲಿಸಲಾಯಿತು.

ಚಾಲಿತ ವರ್ಷದಲ್ಲಿ ಸುಮಾರು 37 ಲಕ್ಷ ನಿವಳ ಲಾಭ ಗಳಿಸಿದ ಸಂಸ್ಥೆ 15% ಡಿವಿಡೆಂಡ್ ಘೋಷಿಸಿತು. ಸಭೆಯಲ್ಲಿ ಸದಸ್ಯರ ಅಹಾವಾಲುಗಳನ್ನು ಆಲಿಸಲಾಯಿತು. ನಿರ್ದೇಶಕರಾದ ವಿನೋದ್ ಕ್ರಾಸ್ಟೊ ಕಾರ್ಯಕ್ರಮವನ್ನು ನಿರೂಪಿಸಿದರು. ನಿರ್ದೇಶಕ ಜೆರಾಲ್ಡ್ ಎನ್. ಕ್ರಾಸ್ತಾ ವಂದಿಸಿದರು




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here