Saturday 11th, May 2024
canara news

ಬಿಲ್ಲವ ಜಾಗೃತಿ ಬಳಗದ ಡೊಂಬಿವಲಿ ಸ್ಥಳೀಯ ಸಮಿತಿಯಿಂದ 162ನೇ ನಾರಾಯಣಗುರು ಜಯಂತಿ ಆಚರಣೆ

Published On : 27 Sep 2016   |  Reported By : Rons Bantwal


ಮುಂಬಯಿ, ಸೆ.27: ಬಿಲ್ಲವ ಜಾಗೃತಿ ಬಳಗವು ಕಳೆದ ಭಾನುವಾರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಡೊಂಬಿವಲಿ ಪೂರ್ವ ಸರ್ವೇಶ್ ಸಭಾಗೃಹದಲ್ಲಿ 162ನೇ ನಾರಾಯಣಗುರು ಜಯಂತಿ ಆಚರಣೆಯನ್ನು ಸಂಭ್ರಮೋಲ್ಲಾಸದಿಂದ ಆಚರಿಸಿತು.

ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ ಪೂಜಾರಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ಜರುಗಿದ್ದು, ಎನ್.ಟಿ ಪೂಜಾರಿ ಮಾತನಾಡಿ ಬಿಲ್ಲವ ಸಮಾಜವು ಇದೀಗ ವಿವಿಧ ಕ್ಷೇತ್ರದಲ್ಲಿ ಮುಂದುವರಿದಿದ್ದು ಒಗ್ಗಟ್ಟಿನ ಕೊರತೆಯಿಂದ ಸಮುದಾಯದ ಸರ್ವಾಂಗೀಣ ಪ್ರಗತಿ ಕುಂಠಿತವಾಗಿದೆ. ರಾಜಕೀಯ ಕ್ಷೇತ್ರದಲ್ಲೂ ಬಿಲ್ಲವರ ಕೊರತೆ ಕಂಡುಬರುತ್ತಿದ್ದು, ಭವಿಷ್ಯತ್ತಿನ ದಿನಗಳಲ್ಲಿ ಇವೆಲ್ಲವನ್ನೂ ಸಾಂಘಿಕವಾಗಿ ಬಲಪಡಿಸಿ ನಮ್ಮ ಪ್ರಬಾಲ್ಯವನ್ನು ರಾಷ್ಟ್ರವ್ಯಾಪಿ ತೋರ್ಪಡಿಸೋಣ ಎಂದರು.

ಪ್ರಧಾನ ಅಭ್ಯಾಗತರಾಗಿ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಉಪಸ್ಥಿತರಿದ್ದು ಮಾತನಾಡಿ ನಾರಾಯಣ ಗುರುಗಳ ತತ್ವದಂತೆ ನಾವೆಲ್ಲರೂ ಜೀವನದಲ್ಲಿ ಸೂಕ್ತ ಬದಲಾವಣೆ ತರುತ್ತಾ ಏಕತೆಯಿಂದ ಬಾಳುತ್ತ ತಮ್ಮ ಅಸ್ತಿತ್ವವನ್ನು ಬಲಪಡಿಸೋಣ ಎಂದರು.

ಪುರೋಹಿತ ಎಂ.ಜೆ ಪ್ರವೀಣ್ ಭಟ್ ಆಶೀರ್ವಚನ ನೀಡಿ ಮಾತನಾಡಿ ಸಂಘಟನೆಯೇ ಬಲವಾದ ಶಕ್ತಿ ಎಂದು ಗುರುಗಳು ಪ್ರತಿÀತಿಪಾದಿಸಿದ್ದು ಒಗ್ಗಟ್ಟಿನಿಂದ ಸಮಾಜ ಬಾಂಧವರು ಒಂದಾಗುತ್ತಾರೆ ಎಂದರು.

ಮುಖ್ಯ ಅತಿಥಿ ಹರೀಶ್ ಶೆಟ್ಟಿ, ಬಳಗದ ಗೌರವ ಅಧ್ಯಕ್ಷ ಸತೀಷ್ ಪೂಜಾರಿ, ಉಪಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ಮಹಿಳಾ ವಿಭಾಗಧ್ಯಕ್ಷೆ ಶಾರದಾ ಕರ್ಕೇರ ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಕಾರ್ಯಕ್ರಮದಲ್ಲಿ ಜಯ ಸಿ.ಸುವರ್ಣ ಹಾಗು ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಶಿಕ್ಷಕ ಜೆ.ಎಂ ಕೋಟ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಳಗದ ಪದಾಧಿಕಾರಿಗಳು, ಸದಸ್ಯರುಗಳು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದು, ಜೆ.ಎಂ ಕೋಟ್ಯಾನ್ ಕಾರ್ಯಕ್ರÀಮ ನಿರ್ವಹಿಸಿದ್ದು, ರವಿ ಕುಕ್ಯಾನ್ ವಂದಿಸಿದರು.

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here