Wednesday 8th, May 2024
canara news

ತೀಯಾ ಸಮಾಜ ಮುಂಬಯಿ ಸ್ವಕಛೇರಿಯಲ್ಲಿ ದಸರಾ ಸಂಭ್ರಮ ದುರ್ಗಾಷ್ಟಮಿ ಪೂಜೆ-ಭಜನೆ-ಧಾರ್ಮಿಕ ಕಾರ್ಯಕ್ರಮ

Published On : 10 Oct 2016   |  Reported By : Rons Bantwal


ಮುಂಬಯಿ, ಅ.09: ತೀಯಾ ಸಮಾಜ (ರಿ.) ಮುಂಬಯಿ ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಸಂಜೆ ಘಾಟ್ಕೋಪರ್ ಪೂರ್ವದ ಪಂತ್‍ನಗರ ಇಲ್ಲಿನ ಪಲ್ಲವಿ ಕಟ್ಟಡದಲ್ಲಿನ ಸ್ವಕಛೇರಿಯಲ್ಲಿ ದಸರಾ ನಿಮಿತ್ತಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದುರ್ಗಾರಾಧನೆ ಆಚರಿಸಿತು.

ಸಂಭ್ರಮಿಸಲ್ಪಟ್ಟ ಶಾರದೋತ್ಸವ, ದುರ್ಗಾರಾಧನಾ ಧಾರ್ಮಿಕ ಕಾರ್ಯಕ್ರಮಕ್ಕೆ ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು. ಪಶ್ಚಿಮ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಂಗಾಧರ್ ಕಲ್ಲಾಡಿ ತನ್ನ ಪೌರೋಹಿತ್ಯದಲ್ಲಿ ವೈಧಿಕ ಕಾರ್ಯಕ್ರಮಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಸದ್ಭಕ್ತರನ್ನು ಹರಸಿದರು. ಸದಸ್ಯರು ಪೂಜೆ, ಭಜನೆ ನೇರವೇರಿ ಶ್ರೀದುರ್ಗೆ, ಕುಲದೇವತೆ ಭಗವತೀ ಮಾತೆ ಮತ್ತು ಕುಲಗುರು ಬ್ರಹ್ಮಶ್ರೀ ಗುರು ನಾರಾಯಣರಿಗೆ ನಮಿಸಿದರು.

ಕಾರ್ಯಕ್ರಮದಲ್ಲಿ ವಿಶ್ವಸ್ಥ ಮಂಡಳಿ ಸದಸ್ಯರುಗಳಾದ ಡಾ| ದಯಾನಂದ ಕುಂಬ್ಳೆ, ಬಾಬು ಟಿ.ಬಂಗೇರ, ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಗೌರವ ಪ್ರಧಾನ ಕಾರ್ಯದರ್ಶಿ ಈಶ್ವರ್ ಎಂ.ಐಲ್ ಬಾಬು, ಸಂಸ್ಥೆಯ ಮುಖವಾಣಿ ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್.ಸುವರ್ಣ, ಆರೋಗ್ಯನಿಧಿ ಕಾರ್ಯಾಧ್ಯಕ್ಷ ತಿಮ್ಮಪ್ಪ ಕೆ.ಬಂಗೇರಾ, ನಿರ್ಗಮಿತ ಗೌ| ಪ್ರ| ಕಾರ್ಯದರ್ಶಿ ಐಲ್ ಬಾಬು, ಜತೆ ಕಾರ್ಯದರ್ಶಿಗಳಾದ ನ್ಯಾ| ಬಿ.ಕೆ ಸದಾಶಿವ, ನ್ಯಾ| ನಾರಾಯಣ ಸುವರ್ಣ, ಜತೆ ಕೋಶಾಧಿಕಾರಿ ಚಂದ್ರಶೇಖರ್ ಕೆ.ಬಿ, ಪೂರ್ವ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಬಿ.ಎಂ, ಪೂರ್ವ ವಲಯ ಮಹಿಳಾ ಕಾರ್ಯಾಧ್ಯಕ್ಷೆ ಪದ್ಮಿನಿ ಕೋಟೆಕಾರ್, ಪಶ್ಚಿಮ ವಲಯ ಮಹಿಳಾ ಕಾರ್ಯಾಧ್ಯಕ್ಷೆ ದಿವ್ಯಾ ಆರ್.ಕೋಟ್ಯಾನ್, ಇನ್ನಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು ಸೇರಿದಂತೆ ತೀಯಾ ಬಾಂಧವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ತೀಯಾ ಭಜನಾ ಮಂಡಳಿಯು ಪದ್ಮನಾಭ ಸುವರ್ಣ ಬಳಗವು ಭಜನೆ ನೆರವೇರಿಸಿದರು.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here