Friday 26th, April 2024
canara news

ಕುಂದಾಪುರದಲ್ಲಿ ಜೀವನ ಜ್ಯೋತಿ ಶಿಬಿರ

Published On : 10 Oct 2016   |  Reported By : Bernard J Costa


ಕುಂದಾಪುರ: ಕುಂದಾಪುರ ವಲಯ ಮಟ್ಟದಲ್ಲಿ ಹತ್ತನೆ ತರಗತಿಯ ಕಥೊಲಿಕ್ ಮಕ್ಕಳಿಗೆ ಸಂತ ಜೋಸೆಫ್ ಶಾಲೆಯ ಸಭಾ ಭವನದಲ್ಲಿ 5 ದಿವಸಗಳ ಜೀವನ ಜ್ಯೋತಿ ಶಿಬಿರವನ್ನು ವಲಯ ಪ್ರಧಾನ ಧರ್ಮಗುರುಗಳಾದ ವ| ಅನಿಲ್ ಡಿಸೋಜಾರವರು ದೀಪ ಬೆಳೆಗಿಸುವ ಮೂಲಕ ಉದ್ಘಾಟಿಸಿದರು.

‘ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಪ್ರತಿಭೆಗಳು ಹೊರ ಹೊಮ್ಮುತ್ತವೆ. ಇಲ್ಲಿ ನಿಮ್ಮ ಭವಿಸ್ಯಕ್ಕೆ ಬೇಕಾದ ಎಲ್ಲಾ ಸಂಗತಿಗಳನ್ನು ಕಲಿಯುವ ಅವಕಾಶ ಸಿಗುತ್ತದೆ, ಜೊತೆಗೆ ‘ಎಸುವಿನ ಮೌಲ್ಯಗಳನ್ನು ಕಲಿಯುವ, ವಿಶ್ವಾಸವನ್ನು ಜೀವಂತ ಇರಿಸುವ’ ಶಿಬಿರದ ಮುಖ್ಯ ಧ್ಯೇಯದಂತೆ, ಈ ಶಿಬಿರದಿಂದ ಮನೆಗೆ ಮರಳುವಾಗ ಬರೆ ಕೈಯಿಂದ ಹೋಗ ಬೇಡಿ, ಎಸುವಿನ ಪ್ರೀತಿ, ತತ್ವಗಳನ್ನು ತಮ್ಮೊಟ್ಟಿಗೆ ಕೊಂಡಯ್ದು, ನೀವು ಸಮಾಜಕ್ಕೆ ಒಳಿತನ್ನೆ ಮಾಡಿ, ಕೆಡುಕನ್ನು ಮಾಡಲೇ ಬೇಡಿ’ ಎನ್ನುತ್ತಾ ಶಿಬಿರವನ್ನು ಅವರು ಆಶಿರ್ವದಿಸಿದರು.

ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು, ಶಿಬಿರದ ಮೇಲ್ವಿಚಾರಕ ವ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಶಿಬಿರಾರ್ಥಿಗಳಿಗೆ ಸಲಹೆ ಸೂಚನೆ ನೀಡಿದರು. ಅತಿಥಿಗಳಾದ ವಲಯದ ಧರ್ಮ ಕೇಂದ್ರಗಳ ಕಾರ್ಯದರ್ಶಿ ಲೀನಾ ತಾವ್ರೊ, ಕುಂದಾಪುರ ಇಗರ್ಜಿಯ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಶುಭ ಕೋರಿದರು. ಶಿಬಿರದ ಸಂಪನ್ಮುಲ ವ್ಯಕ್ತಿಗಳಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್, ಧರ್ಮಗುರು ವ|ರಾಯನ್ ಪಾಯ್ಸ್ ಮತ್ತು ಇತರರು ಉಪಸ್ಥಿತರಿದ್ದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವಿಭಾ ಪ್ರಾರ್ಥನ ವಿಧಿಯನ್ನು ನೆಡೆಸಿಕೊಟ್ಟರು. ಸಿಸ್ಟರ್ ಸುನೀತಾ ಸ್ವಾಗತವನ್ನು ಕೋರಿದರು. ಈ ಶಿಬಿರಕ್ಕೆ ಸ್ತ್ರೀ ಸಂಘಟನೆ ಮತ್ತು ಐ.ಸಿ.ವಾಯ್.ಎಮ್. ಸಂಘಟನೆಗಳು ತಮ್ಮ ನಿಸ್ವಾರ್ಥ ಸೇವೆಯನ್ನು ನೀಡುರ್ತವೆ. ಸಿಸ್ಟರ್ ಶಾಂತಿ ಲವೀನ ವಂದಿಸಿದರು ಕಾರ್ಯಕ್ರಮವನ್ನು ಡೊಮಿನಿಕ್ ಬ್ರಗಾಂಜಾ ನೆಡೆಸಿಕೊಟ್ಟರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here