Friday 26th, April 2024
canara news

ಕುಂದಾಪುರ ಸಾಂಪ್ರಾದಾಯಿಕ ತಿನಿಸುಗಳ ಸ್ಪರ್ಧೆ

Published On : 17 Oct 2016   |  Reported By : Bernard J Costa


ಕುಂದಾಪುರ,ಅ.17: ಇವತ್ತಿನ ಅಧುನಿಕ ಸಿದ್ದ ತಿನಿಸುಗಳ ಭರಾಟೆಗೆ ನಮ್ಮ ನಾಡಿನ ಸಾಂಪ್ರಾದಾಯಿಕ ತಿನಿಸುಗಳು ಮರೆಯಾಗುವ ಈ ಸಂದರ್ಭದಲ್ಲಿ, ಕುಂದಾಪುರ ಕೆಥೊಲಿಕ್ ಸ್ತ್ರೀ ಸಂಘಟನೆ ಘಟಕವು, ಚರ್ಚ್ ಸಭಾ ಭವನದಲ್ಲಿ ಸಾಂಪ್ರಾದಾಯಿಕ ತಿನಿಸುಗಳ ಸ್ಪರ್ಧೆಯನ್ನು ಆಯೋಜಿಸಿತ್ತು.

 

 

ಈ ಕಾರ್ಯದ ಅಧ್ಯಕ್ಷತೆಯನ್ನು ವಹಿಸಿದ ಇಗರ್ಜಿಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾರವರು ವಹಿಸಿದ್ದು ‘ನನಗೆ ಈ ತಿನಿಸುಗಳನ್ನು ನೋಡಿದಾಗ ನನ್ನ ತಾಯಿಯ ನೆನಪು ಮರಕಳಿಸಿತು, ನಮ್ಮ ತಾಯಿ ಇದನ್ನೆಲ್ಲಾ ನನ್ನ ತುಂಬು ಕುಟಂಬಕ್ಕೆ ಮಾಡಿಕೊಡುತಿದ್ದರು, ಇವತ್ತಿನ ತಾಯಂದಿರು ಮಕ್ಕಳಿಗೆ ಸಿದ್ದ ತಿನಿಸುಗಳನ್ನು ತಿನಿಸುತಿದ್ದಾರೆ, ಕೆಲವರಿಗೆ ಬಿಸ್ಕಿಟ್ ಮನೆ ತಿಂಡಿಯಾಗಿದೆಯಂತೆ, ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಮ್ಮ ಹಿರಿಯರು ಮಾಡಿಕೊಡುತಿದ್ದ ಸಾಂಪ್ರಾದಾಯಿಕ ತಿನಿಸುಗಳನ್ನು ಮಾಡಿಕೊಡಿ, ಅದರಿಂದ ಅವರಿಗೆ ಉತ್ತಮ ಆರೋಗ್ಯವು ದೊರಕಿ ಮಕ್ಕಳು ಲವಲವಿಕೆಯಿಂದ ಇದ್ದು ಅವರು ಪ್ರತಿಭಾವಂತರಾಗಿ ರೂಪುಗೊಳ್ಳುತ್ತಾರೆ’ ಎಂದು ವೀಜೆತರಿಗೆ ಬಹುಮಾನಗಳನ್ನು ನೀಡಿ ಸಂದೇಶ ನೀಡಿದರು.

ಸಂಘಟನೇಯ ಅಧ್ಯಕ್ಷೆ ವಿನಯಾ ಡಿಕೋಸ್ತಾ, ಸ್ವಾಗತ ಕೋರಿದರು, ತೀರ್ಪುದಾರಾಗಿ ಆಗಮಿಸಿದ ಧರ್ಮಗುರು ವ|ಪ್ರಕಾಶ್ ಪಾವ್ಲ್ ಡಿಸೋಜಾ, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ರೊನಾಲ್ಡ್ ರೊಡ್ರಿಗಸ್, ಬೀನಾ ಲುವಿಸ್ ಇನ್ನಿಬ್ಬರು ತಿರ್ಪುಗಾರಗಾಗಿದರು. ಮಣ್ಣಿ (ಮಾಣ್ಣಿ) ತಿನಿಸು ಸ್ಪರ್ಧೆಯಲ್ಲಿ ಶಾಂತಿ ಕರ್ವಾಲ್ಲೊ ಪ್ರಥಮ, ಐರಿನ್ ಬಾರೆಟ್ಟೊ ದ್ವೀತಿಯ ಬಹುಮಾನವನ್ನು ಪಡೆದುಕೊಂಡರೆ, ಹಲಸಿನ ಎಲೆಯ ಸಿಹಿ ಕಡುಬು (ಇಡಿಯೊ) ವಿಭಾಗದಲ್ಲಿ ಐವಿ ಡಿಸೋಜಾ ಪ್ರಥಮ, ವೀಡಾ ಕರ್ವಾಲ್ಲೊ ದ್ವೀತಿಯ ಬಹುಮಾನವನ್ನು ಪಡೆದರು. ಭಾಗವಹಿಸಿದ ಸ್ಪರ್ಧಿಕರಿಗೆಲ್ಲರಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.

ವೇದಿಕೆಯಲ್ಲಿ ಸಹಾಯಕ ಧರ್ಮಗುರು ವ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಸಂಘಟನೆ ಸಚೇತಕಿ ಸಿಸ್ಟರ್ ಪ್ರೇಮಲತಾ, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಉಪಸ್ಥಿತರಿದ್ದರು. ಉಪಕಾರ್ಯದರ್ಶಿ ಶಾಂತಿ ಬಾರೆಟ್ಟೊ ಧನ್ಯವಾದವನ್ನು ನೀಡಿದರು. ಜೂಲಿಯೆಟ್ ಪಾಯ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here