Friday 26th, April 2024
canara news

ಮೊದಲ `ಕೋಟಿ' ಸುಭಾಶ್ಚಂದ್ರ ಪಡಿವಾಳ್ ಇನ್ನಿಲ್ಲ

Published On : 19 Oct 2016   |  Reported By : Rons Bantwal


ಮೂಡಬಿದಿರೆ, ಅ.18: ಪ್ರಗತಿಪರ ಕೃಷಿಕರಾಗಿ, ಶಿಕ್ಷಣ, ಸಹಕಾರಿ, ಧಾರ್ಮಿಕ, ಸಾಹಿತ್ಯ, ಸಾಂಸ್ಕøತಿಕ, ಕ್ರೀಡಾರಂಗಗಳಲ್ಲಿ ಕ್ರಿಯಾಶೀಲರಾಗಿದ್ದ ತುಳು ಚಿತ್ರರಂಗದಲ್ಲಿ ವಿಶಿಷ್ಟ ದಾಖಲೆ ನಿರ್ಮಿಸಿದ ಕಪ್ಪು ಬಿಳುಪು ಚಿತ್ರ `ಕೋಟಿ ಚೆನ್ನಯ'ದಲ್ಲಿ ಕೋಟಿ ಪಾತ್ರದಲ್ಲಿ ಮಿಂಚಿದ್ದ ಕಲ್ಲಮುಂಡ್ಕೂರು ಮಾಲ್ದಬೆಟ್ಟು ಸುಭಾಶ್ಚಂದ್ರ ಚೌಟ (70) ಅ. 17ರಂದು ನಿಧನ ಹೊಂದಿದರು. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅವರು ಅಗಲಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ಸರ್ವ ರಂಗಗಳಲ್ಲಿ ತೆರೆದ ಮನಸ್ಸಿನ ವ್ಯಕ್ತಿತ್ವ ಹೊಂದಿದ್ದ ಸುಭಾಶ್ಚಂದ್ರ ಪಡಿವಾಳ್ ತಂದೆ ಶ್ರೀಧರ ಪಡಿವಾಳ್ ಅವರ ಸಮಾಜ ಸೇವಾ ಪರಂಪರೆಯನ್ನು ಬೆಳೆಸಿಕೊಂಡು ಜನಾನುರಾಗಿದ್ದರು. ಮೂಡಬಿದಿರೆ ಕೃಷಿವಿಚಾರ ವಿನಿಮಯ ಕೇಂದ್ರ, ಕಲ್ಲಮುಂಡ್ಕೂರು ವ್ಯ.ಸೇ. ಸಹಕಾರಿ ಸಂಘ, ಅಬ್ಬಗ ದಾರಗ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಮೂಡಬಿದಿರೆ ತುಳುಕೂಟ, ಮೂಡಬಿದಿರೆ ಜೈನ್ ಮಿಲನ್ ಅಧ್ಯಕ್ಷರಾಗಿ, ಕಲ್ಲಮುಂಡ್ಕೂರು ಅಭಿನಯ ಕಲಾವೃಂದ, ಸರ್ವೋದಯ ಯುವಕ ಮಂಡಲ ಇವುಗಳ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲಾ ಸಂಚಾಲಕ, ಮೂಡಬಿದಿರೆ ಸ್ಕೌಟ್ಸ್ ಮತ್ತು ಗೈಡ್ಸ್ ವಲಯ ಉಪಾಧ್ಯಕ್ಷ, ಶ್ರೀ ಮಹಾವೀರ ಕಾಲೇಜ್ ಟ್ರಸ್ಟ್ ಸದಸ್ಯ ಹೀಗೆ ಹತ್ತಾರು ಸಂಘಸಂಸ್ಥೆಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು.

ಎಳವೆಯಿಂದಲೂ ರಂಗಭೂಮಿಯಲ್ಲಿ ಕಾಣಿಸಿಕೊಂಡಿದ್ದ ಸುಭಾಶ್ಚಂದ್ರ ಪಡಿವಾಳ್ 80ಕ್ಕೂ ಅ„ಕ ಸಾಮಾಜಿಕ, ಚಾರಿತ್ರಿಕ, ನಾಟಕಗಳಲ್ಲಿ ನಟ, ನಿರ್ದೇಶಕರಾಗಿ ಮಿಂಚಿದ್ದರು. ಸಮ್ರಾಟ್ ಷಹಜಹಾನ್, ಸಮ್ರಾಟ್ ಅಶೋಕ, ಸಮ್ರಾಟ್ ಚಂದ್ರಗುಪ್ತ, ಅಂಗೂಲಿಮಾಲ, ಕಲಿ ಕಂಠೀರವ, ಬÉೈಯ್ಯಮಲ್ಲಿಗೆ, ಬÉೈರನ ಬದ್ಕ್, ಕರಿಯಣಿ ಕಟ್ಟಂದಿ ಕಂಡನಿ, ಯೇರ್ ಮಲ್ತಿನ ತಪ್ಪು, ಸಾವಿತ್ರಿ, ಕಾವೇರಿ, ಮೋಕೆದ ಮೆಗ್ಯಮೊದಲಾದ ನಾಟಕಗಳು ಇವರಿಗೆ ಹೆಸರು ತಂದಿವೆ.

ಇವರ ತಂಡದ `ಚೆನ್ನೆ ತೆಲಿಪುನಗ' ನಾಟಕವು ಕಾರ್ಕಳದಲ್ಲಿ ಪ್ರಥಮ, ಇನ್ನಂಜೆ, ಸುಳ್ಯ, ಕಿನ್ನಿಗೋಳಿ ಇಲ್ಲಿ ದ್ವಿತೀಯ ಬಹುಮಾನ ಗಳಿಸಿತ್ತು.1974ರಲ್ಲಿ ಬಿಡುಗಡೆಯಾಗಿದ್ದ ಕಟಪಾಡಿಯ ಪ್ರಜಾ ಫಿಲ್ಮ್ಸ್ ನಿರ್ಮಾಣದ `ಕೋಟಿ ಚೆನ್ನಯ'ದಲ್ಲಿ ತಮ್ಮ ಸುಂದರ, ಸದೃಢ ಶಾರೀರ, ಅಭಿನಯದೊಂದಿಗೆ ನೋಟಕರ ಮನಗೆದ್ದಿದ್ದ ಅವರು `ಯೇರ್ ಮಲ್ತಿನ ತಪ್ಪು ' ತುಳು ಚಲನ ಚಿತ್ರದಲ್ಲಿ ಮಿನುಗುತಾರೆ ಕಲ್ಪನಾ ಅವರ ಪತಿಯಾಗಿ ನಟಿಸಿದ್ದಾರೆ.

ಮುಂಬೈಯ ರಂಗಕರ್ಮಿ ಮೋಹನ್ ಮಾರ್ನಾಡ್ ಅವರ ಚಿತ್ರಕತೆ, ನಿರ್ದೇಶನದ, ಅಂತಾರಾಷ್ಟ್ರೀಯ ಏಶಿಯನ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪುರಸ್ಕøತ `ಸುದ್ದ' ಕಲಾತ್ಮಕ ಕಿರುಚಿತ್ರದಲ್ಲಿ `ತಂದೆ'ಯಾಗಿ ಹೃದಯಂಗಮವಾಗಿ ಅಭಿನಯಿಸಿ ಸಾಯುವ ದೃಶ್ಯದಲ್ಲಿ ವೀಕ್ಷಕರ ಮನ ಕಲಕಿದವರು ಸುಭಾಶ್ಚಂದ್ರ ಪಡಿವಾಳ್. ಗುತ್ತುಮನೆತನದವರಾಗಿದ್ದರೂ ಬಹಳ ಮೃದು, ಸಾತ್ವಿಕ ಸ್ವಭಾವದ ನಡೆನುಡಿಗಳಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದವರು ಪಡಿವಾಳರು .

`ನಿಡ್ಡೋಡಿ ಯೋಜನೆ ಬತ್ತ್‍ಂಡ ನಮ ಮಾತ ಸಯ್ಯೊಡಾತೆ'
ಕೃಷಿಕ, ಕಲಾವಿದನೊಳಗೆ ಊರ ಹಿತ ಚಿಂತನೆಯ ಹೋರಾಟಗಾರನೂ ಇದ್ದ ಎನ್ನುವುದಕ್ಕೆ ಸಾಕ್ಷಿಯಾಗಿ, ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧ ನಡೆದ ಹೋರಾಟದಲ್ಲಿಯೂ ಗುರುತಿಸಿ ಕೊಂಡಿದ್ದರು. ಒಂದು ವೇಳೆ ಯೋಜನೆ ಕಾರ್ಯಗತವಾದರೆ ಏನು ಮಾಡುವಿರಿ ಎಂದು ಪತ್ರಕರ್ತರು ಕೇಳಿದಾಗ, `ಅವು ಬತ್ತ್‍ಂಡ ನಮ ಮಾತ ಸಯ್ಯೊಡಾತೆ' ಎಂದು ಮುಗ್ಧವಾಗಿ ಉತ್ತರಿಸಿದ್ದರು.

 

ಪಡಿವಾಳ್ ನಿಧನ: ಕಲ್ಲಮುಂಡ್ಕೂರಲ್ಲಿ ಹರತಾಳ, ಮಡುಗಟ್ಟಿದ ಶೋಕ
ಸುಭಾಶ್ಚಂದ್ರ ಪಡಿವಾಳ್ ಅವರ ನಿಧನದಿಂದಾಗಿ ಕಲ್ಲಮುಂಡ್ಕೂರಿನಲ್ಲಿ ಮಂಗಳವಾರ ಶೋಕ ಮಡುಗಟ್ಟಿದ ವಾತಾವರಣ ಕಂಡುಬಂದಿತು. ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಲ್ಲಮುಂಡ್ಕೂರು ವ್ಯ. ಸೇ. ಸ. ಸಂಘ ಸಹಿತ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಚರಿಸಿದವು. ರಾಷ್ಟ್ರೀಕೃತ ಬ್ಯಾಂಕ್ ಹೊರತು ಪಡಿಸಿ ಯಾವುದೇ ವ್ಯವಹಾರ ನಡೆಯಲಿಲ್ಲ.

ಪಡಿವಾಳರ ಮನೆಯೆದುರಿನ ಬಾಕಿಮಾರು ಗದ್ದೆಯಲ್ಲಿ , ಮನೆತನದ ಗುರಿಕಾರರಿಗೆ ಮಾತ್ರ ಅವಕಾಶವಿರುವ ಪದ್ದತಿಯಂತೆ , ಅಂತ್ಯಬೆಳಗ್ಗೆ 9 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಿತು.

ಗಣ್ಯರ ಸಂತಾಪ:
ಕಲ್ಲಮುಂಡ್ಕೂರು ಬಾನಂಗಡಿ ಪೇಟೆಯಲ್ಲಿ ಮಂಗಳವಾರ ಸಂಜೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಶಾಸಕ ಕೆ. ಅಭಯಚಂದ್ರ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಬಿಜೆಪಿ ಮುಖಂಡ ಜಗದೀಶ ಅ„ಕಾರಿ, ಊರ ಪ್ರಮುಖರಾದ ವರದರಾಯ ಕಾಮತ್, ಕಮಲಾಕ್ಷ ಭಟ್ , ಸವೇಶ್ ಶೆಟ್ಟಿ, ಗಂಗಾಧರ ಸುವರ್ಣ ಮೊದಲಾದವರ ಉಪಸ್ಥಿತಿಯಲ್ಲಿ ಜರಗಿತು.

ಮೂಡಬಿದಿರೆ ಶ್ರೀ ಜೈನ ಮಠಾದೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸುಭಾಶ್ಚಂದ್ರ ಪಡಿವಾಳರ ನಿಧನದ ಬಗ್ಗೆ ಸದ್ಗತಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಾಸಕ ಕೆ. ಅಭಯಚಂದ್ರ, ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಡಾ| ಎಂ.ಮೋಹನ ಆಳ್ವ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಉದ್ಯಮಿ ರಾಜವರ್ಮ ಬಲ್ಲಾಳ್, ಕಾಂತೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ| ಕೆ. ಜೀವಂಧರ ಬಲ್ಲಾಳ್, ಹೊಸನಾಡು ಕೊಡ್ಯಡ್ಕ ಕ್ಷೇತ್ರದ ಸ್ಥಾಪಕ ಮೊಕ್ತೇಸರ ಡಾ. ಕೊಡ್ಯಡ್ಕ ಜಯರಾಮ ಹೆಗ್ಡೆ, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿರ್ತಾಡಿ ಸಂಪತ್ ಸಾಮ್ರಾಜ್ಯ, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸದಸ್ಯರಾದ ರಘು ಇಡ್ಕಿದು, ಮೋಹನ್ , ಕಲ್ಲಮುಂಡ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಜೋಕಿಂ ಕೊರೆಯ, ಕಲ್ಲಮುಂಡ್ಕೂರು ವ್ಯ.ಸೇ. ಸ. ಸಂಘದ ಅಧ್ಯಕ್ಷ ವರದರಾಯ ಕಾಮತ್, ಮಾಜಿ ಅಧ್ಯಕ್ಷ ಜಗತ್ಪಾಲ ಭಂಡಾರಿ, ಮುಂಬÉೈಯ ರಂಗಕರ್ಮಿ, `ಸುದ್ದ' ತುಳು ಕಿರುಚಿತ್ರದ ನಿರ್ದೇಶಕ ಮೋಹನ್ ಮಾರ್ನಾಡ್, ಸುರೇಂದ್ರ ಮಾರ್ನಾಡ್, ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ.ಪಿಜಗದೀಶ ಅಧಿಕಾರಿ, ಜಿಲ್ಲಾ ಪ್ರ. ಕಾರ್ಯದರ್ಶಿ ಸುದರ್ಶನ ಎಂ., ಮಂಡಲಾಧ್ಯಕ್ಷ ಈಶ್ವರ ಕಟೀಲು, ಕಿಜನಬೆಟ್ಟು ಶ್ರೀನಾಥ್ ಬಲ್ಲಾಳ್, ಸರ್ವೋದಯ ಹೈಸ್ಕೂಲು ಮುಖ್ಯೋಪಾಧ್ಯಾಯ ಪಶುಪತಿ ಶಾಸ್ತ್ರಿ, ಮೂಡಬಿದಿರೆ ತುಳು ಕೂಟದ ಕಾರ್ಯಾಧ್ಯಕ್ಷ ಚಂದ್ರಹಾಸ ದೇವಾಡಿಗ, ಕಲ್ಲಮುಂಡ್ಕೂರು ಸುರೇಶ್ ಶೆಟ್ಟಿ ಸಹಿತ ಗಣ್ಯರು ಸುಭಾಶ್ಚಂದ್ರ ಪಡಿವಾಳ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here