Friday 26th, April 2024
canara news

ಕನಾ೯ಟಕ ಸಂಘ ಮುಂಬಯಿ: ಸಾಹಿತ್ಯ ಚಿಂತನ - 12 ಅಕ್ಟೋಬರ್ 18ರಂದು ಪ್ರಖ್ಯಾತ ಕನ್ನಡ ಪತ್ರಕರ್ತ ಹಾಗೂ ಸಾಹಿತಿ ಜಿ. ಪಿ. ಬಸವರಾಜು ಅವರಿಂದ ವಿಶೇಷ ಉಪನ್ಯಾಸ

Published On : 14 Oct 2014   |  Reported By : Omdas K


ಸುವರ್ಣ ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕನಾ೯ಟಕ ಸಂಘ ಮುಂಬಯಿ ಇದರ ಸಾಹಿತ್ಯ ಭಾರತಿ ಆಶ್ರಯದಲ್ಲಿ ಜರಗುವ ಸಾಹಿತ್ಯ ಚಿಂತನ - 12 ರ ಕಾರ್ಯಕ್ರಮ ಅಕ್ಟೋಬರ್ 18, ಶನಿವಾರ ಸಂಜೆ 5.00 ಗಂಟೆಗೆ ಕನಾ೯ಟಕ ಸಂಘದ ಸಮರಸ ಭವನದಲ್ಲಿ ಜರಗಲಿದೆ.

ಅಂದು ಖ್ಯಾತ ಸಾಹಿತಿ ಹಾಗೂ ಕನ್ನಡ ಪತ್ರಕರ್ತ ಜಿ.ಪಿ. ಬಸವರಾಜು ಅವರು ನಮ್ಮ ಭಾಷೆ ಮತ್ತು ನಮ್ಮ ಸಾಹಿತ್ಯ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಂತರ ಸಂವಾದ ಕಾರ್ಯಕ್ರಮ ಜರಗಲಿದೆ.

ಜಿ. ಪಿ. ಬಸವರಾಜು

ಪತ್ರಕರ್ತರಾಗಿ ವೃತ್ತಿ ಆರಂಬಿಸಿದರೂ ಜಿ. ಪಿ. ಬಸವರಾಜು ಅವರು ಸಾಹಿತ್ಯ , ಸಂಗೀತ, ಫೋಟೋಗ್ರಫಿಗಳಲ್ಲಿ ತೀವ್ರ ಆಸಕ್ತಿಯನ್ನು ಬೆಳಸಿಕೊಂಡವರು. 'ಮಯೂರ' ಪತ್ರಿಕೆಯ ಸಹಾಯಕ ಸಂಪಾದಕರಾಗಿ ಆ ಪತ್ರಿಕೆಗೆ ಒಂದು ಹೊಸ ರೂಪವನ್ನು ಕೊಟ್ಟವರು. 'ತಿಂಗಳು' ಪತ್ರಿಕೆಯ ಸಂಪಾದಕರಾಗಿ ಇದನ್ನೊಂದು ವಿಶಿಷ್ಟಬಗೆಯ ಮಾಸಿಕವನ್ನಾಗಿ ರೂಪಿಸಿದವರು. ಸದ್ಯ ಮೈಸೂರಿನಲ್ಲಿ ನೆಲಸಿ ಫ್ರೀಲಾನ್ಸ್ ಪತ್ರಕರ್ತರಾಗಿದ್ದಾರೆ.

ಕವಿತೆ, ಕತೆ, ಪ್ರವಾಸ ಕೃತಿಗಳಿಗಾಗಿ ಮೂರು ಬಾರಿ ಕನಾ೯ಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪುರಸ್ಕಾರವನ್ನು ಪಡೆದಿದ್ದಾರೆ. ಪು. ತಿ. ನ. ಕಾವ್ಯ ಪ್ರಶಸ್ತಿ, ಜಿ. ಎಸ್. ಎಸ್. ಕಾವ್ಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
ಇವರ ಪ್ರಕಟಿತ ಕೃತಿಗಳು:

ಕವಿತಾ ಸಂಕಲನಗಳು:

1. ತುಂಗೆಯಲ್ಲಿ ಹೆಣ, 2. ಸಮೀಪ 3. ಭೂಮಿಗಂಧ 4. ಬೊಗಸೆಯಲ್ಲಿ ಕಡಲು 5. ಸಾವಿರದ ರೆಕ್ಕೆ

ಕಥಾ ಸಂಕಲನಗಳು :

1. ರಾಜ ಮತ್ತು ಹಕ್ಕಿ 2. ಒಂದು ಗುಲಾಬಿ 3. ಬೆತ್ತಲೆಯ ಬೆಳಕನುಟ್ಟು (ಅಚ್ಚಿನಲ್ಲಿ)

ಪ್ರವಾಸ ಸಾಹಿತ್ಯ :

1. ನೀಲಾಚಲಗಳ ನಾಡಿನಲ್ಲಿ 2. ಭೂಕಂಪದ ಅಂತರಂಗ 3. ಪಂಚಮುಖಿ ಪಂಜಾಬ್ 4. ಕುಲು ಕಣಿವೆಯಲ್ಲಿ 5. ಕರೆಯಿತೋ ಕಡಲ ತೀರ.
ವಿಮಶೆ೯, ಅನುವಾದ ಮತ್ತು ಸಂಪಾದನೆ:

1. ಕಂಡಷ್ಟು 2. ರೂಪರೇಖೆ 3. ಸಣ್ಣ ಪರದೆಯ ಮೇಲೆ 4. ಲುಷನ್ ಕತೆಗಳು 5. ವರ್ತಮಾನದ ಕನ್ನಡಿಯಲ್ಲಿ 6. ಚಿತ್ರ ಪಲ್ಲವ

ಸಾಹಿತ್ಯಾಸಕ್ತರು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಗೌ. ಕಾರ್ಯದಶಿ೯ ಓಂದಾಸ್ ಕಣ್ಣಂಗಾರ್ ಪತ್ರಿಕಾ ಪ್ರಕಟನೆಯ ಮೂಲಕ ವಿನಂತಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here