Friday 26th, April 2024
canara news

ಕಲೀನಾ ಕ್ಯಾಂಪಸ್‍ನ ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಸಾಧಕರಿಗೆ ಸನ್ಮಾನ

Published On : 21 Oct 2016   |  Reported By : Ronida Mumbai


ಪ್ರಶಸ್ತಿಕ್ಕಿಂತ ಕನ್ನಡಿಗರ ಪ್ರೀತ್ಯಾಧಾರ ಶಕ್ತಿ ಮುಖ್ಯ : ಐಕಳ ಹರೀಶ್ ಶೆಟ್ಟಿ
(ಚಿತ್ರ / ವರದಿ : ರೋನಿಡಾ ಮುಂಬಯಿ)

ಮುಂಬಯಿ, ಅ.21: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಧಾರವಾಡ ಇದರ ಸಹಯೋಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮೆಮಿ ನವದೆಹಲಿ ಮತ್ತು ನಾರಾಯಣಾಮೃತ ಫೌಂಡೇಶನ್ ಮುಂಬಯಿ ಇವರ ಪ್ರಾಯೋಜಕತ್ವದಲ್ಲಿ ಇಂದಿಲ್ಲಿ ಗುರುವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ ನಾಯಕ್ ಭವನದಲ್ಲಿ ಆಯೋಜಿಸಲಾಗಿದ್ದ `ಬೇಂದ್ರೆ ಕಾವ್ಯಾನುಭವ' ರಾಷ್ಟ್ರೀಯ ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿತ್ತು.

ಹಿರಿಯ ಸಾಹಿತಿ, ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಧಾರವಾಡ ಇದರ ಅಧ್ಯಕ್ಷ ಡಾ| ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಘಟಕ ಐಕಳ ಹರೀಶ್ ಶೆಟ್ಟಿ ಮುಖ್ಯ ಅತಿಥಿüಯಾಗಿದ್ದರು. ಕಾರ್ಯಕ್ರಮದಲ್ಲಿ ಕನ್ನಡದಲ್ಲಿನ ಸಾಧಕರಾದ ಸಾಂಸ್ಕೃತಿಕ ಪರಿಚಾರಿಕ ಪದ್ಮನಾಭ ಸಸಿಹಿತ್ಲು, ಸಂಘಟಕ ಐಕಳ ಹರೀಶ್ ಶೆಟ್ಟಿ, ಪಿಹೆಚ್‍ಡಿ ಪದವೀಧರೆ ಎಂ.ಆರ್ ರಾಜೇಶ್ವರಿ ಅವÀರಿಗೆ ಸ್ವರ್ಣ ಪದಕವನ್ನಿತ್ತು, ಶಾಲು ಹೊದೆಸಿ ಕೃತಿಗೌರವದೊಂದಿಗೆ ಸನ್ಮಾನಿಸಿ ಡಾ| ಬಿದರಕುಂದಿ ಅಭಿನಂದಿಸಿದರು.

ಐಕಳ ಹರೀಶ್ ಮಾತನಾಡಿ ಇದೊಂದು ನನ್ನ ಪಾಲಿನ ಭಿನ್ನ ಮತ್ತು ಅಧ್ಬುತ ಕಾರ್ಯಕ್ರಮ. ಮುಂಬಯಿ ತುಳುಕನ್ನಡಿಗರಲ್ಲಿ ಪ್ರಶಸ್ತಿಕ್ಕಿಂತ ಪ್ರೀತ್ಯಾಧಾರೆಯೇ ಮುಖ್ಯ. ಹಿರಿಯರಿಂದ ಕಿರಿಯರು ತುಂಬಾ ಕಲಿಯಲಿಕ್ಕಿದೆ. ಇದಕ್ಕೆಲ್ಲಾ ಇದೇ ಸೂಕ್ತ ವೇದಿಕೆ. ಜ್ಞಾನಪೀಠ ಪುರಸ್ಕೃತ ದ.ರಾ ಬೇಂದ್ರೆ ಸಂಸ್ಮರಣಾ ರಾಷ್ಟ್ರ ಮಟ್ಟದ ಈ ಕಾರ್ಯಕ್ರಮದಲ್ಲಿ ಈ ಗೌರವ ಸ್ವೀಕಾರ ನನ್ನ ಅಭಿಮಾನ ಆಗಿರುತ್ತದೆ. ಮುಂಬಯಿಗರು ಜಾತಿಮತ ಬೇಧ ಮರೆತು ಬಾಳುವ ಕನ್ನಡಿಗರು ಒಗ್ಗಟ್ಟಿನಿಂದ ಬಾಳುತ್ತಿರುವುದೇ ರಾಷ್ಟ್ರಾಭಿಮಾನ. ಮುಂದಕ್ಕೂ ನಾವೂ ಸದಾ ಕನ್ನಡಿಗರಾಗಿದ್ದು ಸರ್ವರಿಗೂ ಆದರ್ಶತೆಯ ಕನ್ನಡಿ ಆಗೋಣ. ರಾಷ್ಟ್ರ ಮಟ್ಟದಲ್ಲಿ ಕನ್ನಡ ಬೆಳೆಸೋಣ ಎಂದು ಕರೆಯಿತ್ತರು.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಕಾರ್ಯಕ್ರಮದ ಮಾಹಿತಿ ನೀಡಿ ಮುಂಬಯಿ ಮಾಯಾನಗರಿಯಲ್ಲೇ ಸುಮಾರು 100ಕ್ಕೂ ಅಧಿಕ ಕನ್ನಡಿಗರ ಸಂಘ ಸಂಸ್ಥೆಗಳು ಸರಕಾರದ ವಿಶ್ವಸ್ಥತೆಯಲ್ಲಿ ನೊಂದಾವಣೆಗೊಂಡು ಸೇವಾ ನಿರತರಾಗಿರುವುದೇ ಬಹುದೊಡ್ಡ ಸಾಧನೆ. ಇಲ್ಲಿ ಕನ್ನಡ ಭುವನೇಶ್ವರಿ ಸೇವೆ ಗಣನೀಯ ಮತ್ತು ಗಮನೀಯ. ಇದು ಕನ್ನಡದ ದಾಖಲೀಕರಣಕ್ಕೆ ಪೂರಕವಾಗಿದೆ. ಮುಂಬಯಿ ಕನ್ನಡಿಗರ ಚರಿತ್ರೆ ಇತಿಹಾಸವುಳ್ಳದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅನಂತ ದೇಶಪಾಂಡೆ, ಡಾ| ಸರ್ಫಾಜ್ ಚಂದ್ರಗುತ್ತಿ, ಸುಕನ್ಯಾ ಎಸ್.ಪಾಟೀಲ, ಎಸ್.ನಳಿನಾ ಪ್ರಸಾದ್, ಗೀತಾ ಆರ್.ಎಸ್., ದಿನಕರ ಎನ್.ಚಂದನ್, ಪ್ರಕಾಶ ಬಾಳಿಕಾಯ, ಕುಮುದಾ ಕೆ.ಆಳ್ವ, ಧನಂಜಯ ಪಂಚಲ್, ಅಭಿಷೇಕ್ ವರೆಫರ್, ಮನೋಹರ್ ನಾಯಕ್, ಮುಕುಂದ ಹೆಚ್.ಕುಲ್ಕರ್ಣಿ, ದಾಕ್ಷಾಯಣಿ ಯಡಹಳ್ಳಿ, ಎ.ಅಂಜಲಿ, ಡಾ| ಸುಮಾ ದ್ವಾರಕನಾಥ್, ರವೀಂದ್ರ ಎನ್.ಕುಕ್ಯಾನ್, ಶಾರದಾ ಬಂಗೇರ, ಹೆಚ್.ಕರುಣಾಕರ್, ಕಟ್ಕರೆ ಸಂಜೀವ ಶೆಟ್ಟಿ, ಸುರೇಖಾ ಆರ್.ನಾಯ್ಕ್, ರಾಮಚಂದ್ರ ಸೂಲ್ಲಾಪೂರಕರ, ಡಾ| ವಿ.ಪಿ ಬೇಂದ್ರೆ, ಪಂ| ಜಿ.ಜಿ ಜೋಶಿ, ವಿಶ್ವನಾಥ್ ಆರ್.ಶೆಟ್ಟಿ ಪೇತ್ರಿ, ಅಮಿೃತಾ ಎ.ಶೆಟ್ಟಿ, ಯಜ್ಞ ನಾರಾಯಣ್, ಸುರೇಖಾ ಹೆಚ್.ಶೆಟ್ಟಿ, ಹರಿಜನ ಪರಸಪ್ಪ, ಜ್ಯೋತಿ ಎನ್.ಶೆಟ್ಟಿ, ಮಧುಸೂದನ ರಾವ್, ನ್ಯಾ| ಸತೀಶ್ ಎನ್.ಬಂಗೇರ ಮತ್ತಿತರನೇಕರು ಹಾಜರಿದ್ದರು.

ಡಾ| ಜ್ಯೋತಿ ಸತೀಶ್ ಸುಖಾಗಮನ ಬಯಸಿದರು. ಸುಶೀಲಾ ಎಸ್.ದೇವಾಡಿಗ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಹಾಡನ್ನುಹಾಡಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಧನ್ಯವದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here