Friday 26th, April 2024
canara news

ಮುಂಬಯಿಯಲ್ಲಿ ಕಾರ್ಕಳ ಕ್ಷೇತ್ರಾಭಿಮಾನಿ ಬಳಗದ ಸ್ನೇಹಮಿಲನ

Published On : 23 Oct 2016   |  Reported By : Rons Bantwal


ಮುಂಬಯಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ:ಶಾಸಕ ಸುನೀಲ್ ಕುಮಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.23: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಮುಂಬಯಿ ಆಗಿದ್ದು, ಮಹಾನಗರದಲ್ಲಿ ಕಾರ್ಕಳ ಕ್ಷೇತ್ರದ ಸುಮಾರು ಏಳೆಂಟು ಸಾವಿರ ಜನತೆ ಇಲ್ಲಿ ನೆಲೆಹೊಂದಿದ್ದಾರೆ. ಆದರೂ ಸದಾ ತಮ್ಮೂರನ್ನು ಮರೆಯದೆ ತಾಯ್ನಾಡ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಇಂತಹ ಇತಿಹಾಸ ಪ್ರಸಿದ್ಧ ಊರಿನ ಶಾಸಕನನ್ನಾಗಿಸಿದ ತಮ್ಮೆಲ್ಲರ ಮತ್ತು ಕ್ಷೇತ್ರದ ಸಮಗ್ರ ಜನತೆಯ ದೊಡ್ಡ ಋಣ ನನ್ನಲಿದೆ. ಕಾರ್ಕಳವನ್ನು ವಿಭಿನ್ನ ಕ್ಷೇತ್ರವಾಗಿ ಮಾರ್ಪಡಿಸಿ ಕರ್ನಾಟಕಕ್ಕೆನೇ ಒಂದನೆ ಸ್ಥಾನದ ಕ್ಷೇತ್ರವನ್ನಾಗಿಸುವ ಕನಸು ನನ್ನಲ್ಲಿದೆ. ಇಲ್ಲಿನ ಜನಪ್ರತಿನಿಧಿಯನ್ನಾಗಿಸಿದ ಜನತೆಗೆ ಸಾಧಿಸಿದ ಸೇವೆ ಮತ್ತು ಮಾಡಬೇಕಾದ ಸೇವೆ ಬಗ್ಗೆ ಮನವರಿಸಲು ಈ ಸ್ನೇಹಮಿಲನ ಆಯೋಜಿಸಲಾಗಿದೆ ಎಂದು ಬಿಜೆಪಿ ಯುವ ನೇತಾರ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಸಂಜೆ ಅಂಧೇರಿ ಪೂರ್ವದ ಎಂಐಡಿಸಿ ಅಲ್ಲಿನ ಗೋಲ್ಡ್‍ಫಿಂಚ್ ಹೊಟೇಲ್‍ನಲ್ಲಿ ಆಯೋ ಜಿಸಲಾಗಿದ್ದ ಕಾರ್ಕಳ ಕ್ಷೇತ್ರಾಭಿಮಾನಿ ಬಳಗದ ಸ್ನೇಹಮಿಲನದಲ್ಲಿ ಶಿವರಾಮ ಜಿ.ಶೆಟ್ಟಿ ಅಜೆಕಾರು ಅಧ್ಯಕ್ಷತೆಯಲ್ಲಿ ನಡೆಸಲಾದ ಸಭೆಯನ್ನು ಉದ್ದೇಶಿಸಿ ಶಾಸಕ ಸುನೀಲ್ ಮಾತನಾಡಿ ನಮ್ಮೂರ ಉದ್ಧಾರವೇ ನನ್ನ ಉಸಿರಾಗಿದೆ. ಇಲ್ಲಿ ಜಾತಿ,ಮತ, ಧರ್ಮ ರಾಜಕೀಯ ಅಥವಾ ಹಣ ಸಂಗ್ರಹಣಾ ಉದ್ದೇಶವಿಲ್ಲ. ನಾಡಿನ ಸರ್ವರ ಸಲಹೆ ಸೂಚನೆ, ವಿಶ್ವಾಸದೊಂದಿಗೆ ಸ್ನೇಹ ಮಿಲನ ಮೂಲಕ ಒಗ್ಗೂಡಿ ಹಿರಿಯರ ಅನುಭವ ಮತ್ತು ಕಿರಿಯರ ದೂರದೃಷ್ಠಿತ್ವದ ಚಿಂತನೆ ಮೂಲಕ ಕ್ಷೇತ್ರದ ಸರ್ವೋನ್ನತಿಯನ್ನು ಬಯಸುತ್ತಿದ್ದೇನೆ. ಪೈಪೆÇೀಟಿಯ ಕಾಲ ಘಟ್ಟ ಇದಾಗಿದ್ದು ಸರ್ವರ ಸಲಹೆ ಸೂಚನೆ ಮೂಲಕ ಕ್ಷೇತ್ರವನ್ನು ಯಾವರೀತಿ ಅಭಿವೃದ್ಧಿ ಪಡಿಸಿ ಬಹುಪಾಲು ಜನರ ಸಮಾಧಾನ ಸೇವಾ ತೃಪ್ತಿ ನಾವೆಲ್ಲಾ ಪದೆಯಬೇಕಾಗಿದೆ. ನಕ್ಸಲ್ ಚಟುವಟಿಕೆ ಕಾರ್ಕಳಕ್ಕೆ ಅಪಕೀರ್ತಿ ಆಗಿದ್ದರೂ, ಇದನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿದ್ದೇನೆ. ಕ್ಷೇತ್ರದ ಭವಿಷ್ಯಕ್ಕಾಗಿ ಸಾಂಘಿಕವಾಗಿ ಯೋಜನೆಗಳನ್ನು ಪ್ರಯತ್ನಿಸಿದಾಗ ದೂರಕ್ಕಾದರೂ ಇದರ ಫಲಿತಾಂಶ ಲಭಿಸುವ ಆಶಯ ನನ್ನಲ್ಲಿದೆ. ಕಾರ್ಕಳ ಕ್ಷೇತ್ರಕ್ಕೆ ಈ ವರೇಗೆ ನಾನು ಪ್ರಾಮಾಣಿಕವಾಗಿ ನ್ಯಾಯ ನೀಡುವ ಕೆಲಸ ಮಾಡಿದ ವಿಶ್ವಾಸ ನನಗಿದೆ. ಎಲ್ಲಾವನ್ನೂ ಮಾಡಿದೆ ಎನ್ನುವ ಎದೆಗಾರಿಕೆ ನನ್ನಲ್ಲಿಲವಾದರೂ ಮಾಡಿದ ಎಲ್ಲಾ ಕೆಲಸದಿಂದ ತೃಪ್ತಿಯುತನಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್, ರಘುವೀರ ಶೆಟ್ಟಿ ಕುರ್ಲಾಡಿ, ಎಲ್.ವಿ ಅವಿೂನ್, ಎನ್.ಟಿ ಪೂಜಾರಿ, ಅನೀಲ್ ಆರ್.ಸಾಲ್ಯಾನ್ ವೇದಿಕೆಯಲ್ಲಿ ಅಸೀನರಾಗಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಕಾರ್ಕಳ ಕ್ಷೇತ್ರದ ಶ್ರೇಯೋಭಿವೃದ್ಧಿಯೇ ನಮ್ಮ ಅಭಿವೃದ್ಧಿ ಎಂದರು.

ನಲ್ಲೂರು ಧನಂಜಯ ಅಧಿಕಾರಿ, ಕೃಷ್ಣ ವೈ.ಶೆಟ್ಟಿ, ಕರಿಯಣ್ಣ ಶೆಟ್ಟಿ ಮುಲುಂಡ್, ಮಹಾಬಲ ಪೂಜಾರಿ ಮಿಯಾರು, ಇರ್ವತ್ತೂರು ಭಾಸ್ಕರ್ ಕೋಟ್ಯಾನ್ ವೇದಿಕೆಯಲ್ಲಿ ಅಸೀನರಾಗಿದ್ದು, ಶ್ಯಾಮ ಎನ್.ಶೆಟ್ಟಿ, ಆದರ್ಶ್ ಶೆಟ್ಟಿ (ಆಹಾರ್), ರತ್ನಾಕರ ಶೆಟ್ಟಿ ಮುಂಡ್ಕೂರು, ಜಯರಾಮ ಶೆಟ್ಟಿ ಇನ್ನಬೀಡು, ಮಹೇಶ್ ಶೆಟ್ಟಿ ಮಾತನಾಡಿ ತಮ್ಮ ಅನಿಸಿಕೆಗಳನ್ನು ವಿನಿಯೋಗಿಸಿದರು.

ನ್ಯಾಯವಾದಿ ಬಿ.ಮೊಯ್ಧೀನ್ ಮುಂಡ್ಕೂರು, ಜೆ.ಪಿ ಶೆಟ್ಟಿ, ಇನ್ನಬೀಡು ರವೀಂದ್ರ ಶೆಟ್ಟಿ, ಶೇಖರ್ ಶೆಟ್ಟಿ, ಗಂಗಾಧರ ಜೆ.ಪೂಜಾರಿ, ದಯಾನಂದ ಪೂಜಾರಿ ವಾರಂಗ, ರಿತೇಶ್ ಪೂಜಾರಿ ಮತ್ತನೇಕ ಗಣ್ಯರು ಉಪಸ್ಥಿತರಿದ್ದರು. ಬಾಲಕೃಷ್ಣ ಸಿ.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here