Friday 26th, April 2024
canara news

12ನೇ ವಾರ್ಷಿಕ `ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ-2016'ಗೆ ಶ್ರೀ ಕಡಂದಲೆ ಸುರೇಶ್ ಎಸ್.ಭಂಡಾರಿ ಮುಂಬಯಿ ಆಯ್ಕೆ

Published On : 26 Oct 2016   |  Reported By : Rons Bantwal


ಮುಂಬಯಿ, ಅ.26: ಅವಿಭಜಿತ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ ಸ್ಥಳೀಯವಾಗಿ ಅಥವ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ಕರಾವಳಿಯ `ಪಿಂಗಾರ' ಕನ್ನಡ ಸಾಪ್ತಾಹಿಕ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ 12ನೇ ವಾರ್ಷಿಕ `ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ-2016'ಗೆ ಈ ಬಾರಿ ಅನನ್ಯ ಸಮಾಜ ಸೇವಕ, ಕೊಡುಗೈದಾನಿ, ಭಂಡಾರಿ (ಸವಿತಾ) ಸಮಾಜದ ಧೀಮಂತ ನಾಯಕರಾಗಿದ್ದು ಸಮಾಜವನ್ನು ಸರ್ವೋಭಿವೃದ್ಧಿಯ ಪಥದತ್ತ ಒಯ್ಯುತ್ತಾ ಅಖಂಡ ಸಮಾಜದ ಧೀಶಕ್ತಿಯಾಗಿ ಮುನ್ನಡೆಯುತ್ತಿರುವ ಶ್ರೀ ಕಡಂದಲೆ ಸುರೇಶ್ ಸಂಜೀವ ಭಂಡಾರಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪಿಂಗಾರ ಪ್ರಶಸ್ತಿ ಸಮಿತಿ ಸಂಚಾಲಕ ರೋಯ್ ಕಾಸ್ತೆಲಿನೋ ಪ್ರಕಟಿಸಿದರು.

ಇಂದಿಲ್ಲಿ ಮಂಗಳೂರುನ ವುಡ್‍ಲ್ಯಾಂಡ್‍ಸ್ ಹೊಟೇಲ್‍ನಲ್ಲಿ ನಡೆಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಪ್ರಕಟಿಸಿ ಮಾತನಾಡಿ ಸುರೇಶ್ ಭಂಡಾರಿ ಅವರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರರು ಮತ್ತು ಅಧ್ಯಕ್ಷರಾಗಿ, ಜಾಗತಿಕ ಭಂಡಾರಿ ಸಮಾಜ ಸಂಸ್ಥೆಗಳ ಒಕ್ಕೂಟ ಭಂಡಾರಿ ಮಹಾ ಮಂಡಲ, ಕಡಂದಲೆ ಸುರೇಶ್ ಭಂಡಾರಿ ಚಾರಿಟೇಬಲ್ ಫ್ಯಾಮಿಲಿ ಟ್ರಸ್ಟ್ ಹಾಗೂ ಸಾಯಿನಾಥ್ ಮಿತ್ರ ಮಂಡಳ್ (ನೋ.) ಕಪ್‍ಪರೇಡ್ ಮುಂಬಯಿ ಇದರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಉದಾರ ದಾನಿ (ಫಿಲಾಂಥ್ರಾಪಿಸ್ಟ್), ಆಗಿ ತನ್ನ ಗಳಿಕೆಯ ಬಹುಭಾಗವನ್ನು ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಸೇವೆಗಾಗಿ ವ್ಯಯಿಸಿ ಅಖಂಡ ಸಮಾಜ ಪ್ರೀತ್ಯಾಧಾರಕ್ಕೆ ಪಾತ್ರರಾಗಿದ್ದಾರೆ.

ಪ್ರಶಸ್ತಿ ಸಮಿತಿ ಜಂಟಿ ಸಂಚಾಲಕ ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಂಟಿ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್, ಸದಸ್ಯ ಸಿ.ಜಿ ಪಿಂಟೋ ಪತ್ರಿಕಾಗೋಷ್ಠಿಯ ವೇದಿಕೆಯಲ್ಲಿ ಉಪಸ್ಥಿತರಿದ್ದು, ಇದೇ 2016ರ ನವಂಬರ್.22ನೇ ಮಂಗಳವಾರ ಸಂಜೆ ಮಂಗಳೂರು ಪುರಭವನದಲ್ಲಿ ಅದ್ದೂರಿಯಾಗಿ ನಡೆಸಲ್ಪಡುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸುರೇಶ್ ಭಂಡಾರಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಿ ಅಭಿನಂದಿಸಿ ಗೌರವಿಸಲಾಗುವುದು ಎಂದು ಪತ್ರಕರ್ತ, ಪಿಂಗಾರ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ರೇಮಂಡ್ ಡಿ'ಕುನ್ಹ್ಹಾ ತಿಳಿಸಿದರು.

ಈ ವರೇಗಿನ ಪ್ರಶಸ್ತಿ ಪುರಸ್ಕøತರು: 1. ಬರಿಗಾಲ ಗ್ರಾಮಾಂತರ ಪತ್ರಕರ್ತ ಕುಂಟಾಡಿ ದಯಾನಂದ ಪೈ ಕಾರ್ಕಳ ಕನ್ನಡ ಪ್ರಭ, 2. ಶಿಕ್ಷಣಕಾಶಿಯ ಪ್ರವರ್ತಕ ಡಾ| ಎಂ.ಮೋಹನ್ ಆಳ್ವ, 3. ದಾಯ್ಜಿವಲ್ರ್ಡ್‍ಡಾಟ್ ಕಾಂ ಸಂಸ್ಥೆಯ ಸ್ಥಾಪಕ ಶ್ರೀ ವಾಲ್ಟರ್ ನಂದಳಿಕೆ 4. ಧರ್ಮಸ್ಥಳ ಗ್ರಾಮಾಂತರ ಅಭಿವೃದ್ಧಿಯ ಸಿರಿ ಮಹಿಳಾ ಸಬಲೀಕರಣದ ರೂವಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, 5. ರಾಯನ್ ಅಂತರಾಷ್ಟ್ರೀಯ ಶಿಕ್ಷಣ ಸಮೂಹದ ಪ್ರವರ್ತಕಿ ಮೇಡಂ ಗ್ರೇಸ್ ಪಿಂಟೋ 6. ಕೊಂಕಣಿಗಾಗಿ ಸಂಸ್ಥೆ ಮಾಂಡ್‍ಸೊಭಾಣ್ ಸಂಸ್ಥಾಪಕ ಶ್ರೀ ಎರಿಕ್ ಒಝೆಯೋ, 7. ನೂರಒಂದು ನಿವೇಶನಗಳನ್ನು ಕಟ್ಟಿ ಬಡವರಿಗೆ ಸೂರು ಒದಗಿಸಿದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, 8. ಬಿಲ್ಲವ ಮಹಾಮಂಡಲ ರೂಪಿಸಿ ಬಿಲ್ಲವ ಭೀಷ್ಮರೆಣಿಸಿದ ಭಾರತ್ ಬ್ಯಾಂಕ್‍ನ ಸರ್ವೋಭಿವೃದ್ಧಿಯ ಸರದದಾರ ಶ್ರೀ ಜಯ ಸಿ.ಸುವರ್ಣ, 9. ಅಸಂಖ್ಯಾತ ಮನೆಗಳನ್ನು ಕಟ್ಟಿ ದಾನ ಮಾಡಿದ ಮಹಾದಾನಿ ಶ್ರೀ ಎರಿಕ್ ಕೊರೆಯಾ,10. ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ವಿಶಿಷ್ಟ ಕೇಂದ್ರ ಮಾನಸ ತರಬೇತಿ ಮತ್ತು ಪುನರ್ ವಸತಿ ಕೇಂದ್ರ ಪಾಂಬೂರ್, 11. ಮಂಗಳೂರು ವೆನ್‍ಲಾಕ್ ಆಸ್ಪತ್ರೆಯಲ್ಲಿ ಪ್ರತೀದಿನ ಒಂದಕ್ಕೆ 700 ಊಟ ನೀಡುತ್ತಿರುವ ಸ್ನೇಹಾಲಯ ಪ್ರವರ್ತಕ ಶ್ರೀ ಜೊಸೆಫ್ ಕ್ರಾಸ್ತಾ ಅವರಿಗೆ ಪ್ರದಾನಿಸಿ ಗೌರವಿಸಲಾಗಿದೆ.

ಆಯ್ಕೆ ಸಮಿತಿಯಲ್ಲಿ:
ಪ್ರಶಸ್ತಿ ಸಮಿತಿ ಸಂಚಾಲಕರಾಗಿ ರೋಯ್ ಕಾಸ್ತೆಲಿನೋ (ಅಧ್ಯಕ್ಷರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ) ಜಂಟಿ ಸಂಚಾಲಕರು: ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಂಯೋಜಕರಾಗಿ ರೆ| ಫಾ| ವಿಲಿಯಂ ಮಿನೇಜಸ್ (ಸಾರ್ವಜನಿಕ ಸಂಪರ್ಕಧಿಕಾರಿ ಬಿಷಪ್ ಹೌಸ್ ಮಂಗಳೂರು), ಜಂಟಿ ಸಂಯೋಜಕರಾಗಿ ಎಲಿಯಾಸ್ ಫೆರ್ನಾಂಡಿಸ್ (ನಿರ್ದೇಕರು ಫೋರ್‍ವಿಂಡ್ಸ್ ಮಾಸ್ ಕಮ್ಯುನಿಕೇಶನ್) ಸದಸ್ಯರಾಗಿ: ಸಿ.ಜಿ ಪಿಂಟೋ (ನಿವೃತ್ತ ಉನ್ನತಾಧಿಕಾರಿ, ಕಾಪೆರ್Çೀರೇಶನ್ ಬ್ಯಾಂಕ್) ಡಾ| ಬಿ.ಜಿ ಸುವರ್ಣ, (ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೊಳಿ ಇದರ ಅಭಿವೃದ್ಧಿ ಸಮಿತಿ ಸದಸ್ಯ) ಶ್ರೀ ಜಗನ್ನಾಥ ಶೆಟ್ಟಿ ಬಾಳ (ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಘ ದ.ಕ. ಜಿಲ್ಲೆ) ಕಾರ್ಯದರ್ಶಿಯಾಗಿ ಪತ್ರಕರ್ತ ರೇಮಂಡ್ ಡಿ'ಕುನ್ಹ್ಹಾ ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here