Friday 26th, April 2024
canara news

ಮೈಸೂರುಹುಲಿ ಹಜರತ್ ಟಿಪ್ಪೂಸುಲ್ತಾನ್ ಜಯಂತಿ ಮಹೋತ್ಸವ

Published On : 10 Nov 2016   |  Reported By : Ronida Mumbai


ರಾಜ್ಯಕ್ಕೆ ಟಿಪ್ಪ್ಪೂಸುಲ್ತಾನರ ಕೊಡುಗೆ ಅಪಾರ-ಶಾಸಕ ನಾರಾಯಣ ಗೌಡ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ (ಕೃಷ್ಣರಾಜಪೇಟೆ), ನ.11: ಸ್ವಾಭಿಮಾನವನ್ನು ಬದಿಗೊತ್ತಿ ಬ್ರಿಟೀಷರೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳದೇ ತನ್ನ ಸ್ವಂತ ಮಕ್ಕಳನ್ನೇ ಒತ್ತೆಯಿಟ್ಟು ರಾಜ್ಯದ ಉಳಿವಿಗಾಗಿ ಹೋರಾಟ ನಡೆಸುತ್ತಲೇ ವೀರಮರಣವನ್ನಪ್ಪಿದ ಮೈಸೂರುಹುಲಿ ಹಜರತ್ ಟಿಪ್ಪೂಸುಲ್ತಾನ್ ದೇಶದಲ್ಲಿ ಪ್ರಪ್ರಥಮ ಬಾರಿಗೆ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಸ್ವಾತಂತ್ರ್ಯ ಸೇನಾನಿಯಾಗಿದ್ದಾನೆ. ಇಂತಹ ಮಹಾನ್ ನಾಯಕರ ಜಯಂತಿ ಮಹೋತ್ಸವವನ್ನು ರಾಜಕೀಯ ಬದಿಗಿಟ್ಟು ಪಕ್ಷಾತೀತವಾಗಿ ಆಚರಿಸಬೇಕು ಎಂದು ಮುಂಬಯಿ ಉದ್ಯಮಿ ಕೆ.ಆರ್ ಪೇಟೇ ಶಾಸಕ ಡಾ| ನಾರಾಯಣ ಆರ್.ಗೌಡ ಕರೆ ನೀಡಿದರು.

 

ಡಾ| ನಾರಾಯಣ ಗೌಡ ಇಂದು ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತವು ಆಯೋಜಿಸಿದ್ದ ಸ್ವಾತಂತ್ರ್ಯ ಸೇನಾನಿ, ದಕ್ಷ ಆಡÀಳಿತಗಾರ ಮೈಸೂರು ಹುಲಿ ಹಜರತ್ ಟಿಪ್ಪೂಸುಲ್ತಾನ್ ಅವರ ಜಯಂತಿ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಲ್ಕು ಮೈಸೂರು ಮಹಾ ಯುದ್ಧಗಳಲ್ಲಿಯೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದ ದಕ್ಷ ಆಡಳಿತಗಾರ ಟಿಪ್ಪ್ಪೂಸುಲ್ತಾನರ ಕೊಡುಗೆ ರಾಜ್ಯಕ್ಕೆ ಅಪಾರವಾಗಿದೆ. ಮುಸ್ಲಿಂ ರಾಜನಾಗಿದ್ದರೂ ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತಿದ್ದ, ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಣುತ್ತಿದ್ದ ಸರ್ವಧರ್ಮ ಸಹಿಷ್ಣು ರಾಜನಾದ ಟಿಪ್ಪೂಸುಲ್ತಾನ್ ಶ್ರೀರಂಗಪಟ್ಟಣದ ಆರಾಧ್ಯ ದೈವವಾದ ಶ್ರೀರಂಗನಾಥನ ನೆಚ್ಚಿನ ಭಕ್ತನಾಗಿದ್ದುದು ಮಾತ್ರವಲ್ಲದೇ ಅರಸೀಕರೆ ಬಳಿಯ ಕೋಡಿಮಠ, ತಾಲೂಕಿನ ಕಾಪನಹಳ್ಳಿಯ ಗವೀಮಠ. ನಂಜನಗೂಡಿನ ನಂಜುಂಡೇಶ್ವರ ದೇವಾಲಯ, ಕೊಲ್ಲೂರಿನ ಮೂಕಾಂಬಿಕ ಹಾಗೂ ಶೃಂಗೇರಿಯ ಶಾರದಾಂಬೆ ದೇವಾಲಯಗಳಿಗೆ ನೂರಾರು ಎಕರೆ ಭೂಮಿಯನ್ನು ಜಹಗೀರಾಗಿ ಕೊಡುಗೆ ನೀಡಿದ್ದು ಮಾತ್ರವಲ್ಲದೇ ನಿಯಮಿತವಾಗಿ ದೇವಾಲಯಗಳಿಗೆ ಭೇಟಿನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಎಂದು ಇತಿಹಾಸದ ಪುಟಗಳು ತಮ್ಮಲ್ಲಿನ ಸತ್ಯವನ್ನು ಸಾರಿ ಹೇಳುತ್ತಿವೆ. ಇಂದಿಗೂ ನಂಜನಗೂಡು, ಶೃಂಗೇರಿ ಮತ್ತು ಕೊಲ್ಲೂರಿನಲ್ಲಿ ನಡೆಯುತ್ತಿರುವ ಸಲಾಂ ಆರತಿಯ ವಿಶೇಷ ಪೂಜೆಗಳು ಟಿಪ್ಪ್ಪೂಸುಲ್ತಾನ್ ಹಿಂದೂ ದೇವಾಲಯಗಳ ಮೇಲಿಟ್ಟಿದ್ದ ಪ್ರೀತಿ ಮತ್ತು ಅಭಿಮಾನವನ್ನು ತೋರಿಸುತ್ತದೆ ಎಂದು ಕೃತಜÐತೆಯನ್ನು ಅರ್ಪಿಸಿದ ಶಾಸಕ ನಾರಾಯಣ ಗೌಡ ಸರ್ವಧರ್ಮ ಶರಣ ಶ್ರದ್ಧಾ ಕೇಂದ್ರವಾದ ಗವೀಮಠಕ್ಕೆ ಟಿಪ್ಪೂ 900 ಎಕರೆ ಭೂಮಿಯನ್ನು ಜಹಗೀರಾಗಿ ಕೊಡುಗೆ ನೀಡಿರುವುದರಿಂದ ತಾಲೂಕಿನ ಲಿಂಗಾಯತ ಸಮೂಧಾಯದ ಭಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಹೃದಯ ವೈಶಾಲ್ಯತೆಯನ್ನು ಪ್ರದರ್ಶನ ಮಾಡಬೇಕಿತ್ತು ಎಂದು ಹೇಳಿದರು.

ಟಿಪ್ಪ್ಪೂಜಯಂತಿಯನ್ನು ರಾಜಕೀಯ ಪಕ್ಷಗಳು ಕೇವಲ ರಾಜಕಾರಣಕ್ಕಾಗಿ ವಿರೋಧಿಸುತ್ತಿವೆ. ಟಿಪ್ಪೂ ಜಯಂತಿಯನ್ನು ಆಚರಿಸಬೇಕೆಂಬ ಸರ್ಕಾರದ ಬದ್ಧತೆಯನ್ನು ತಾವು ಅಭಿನಂದಿಸುವುದಾಗಿ ನಾರಾಯಣಗೌಡ ಹೇಳಿದರು.

ಮೈಸೂರು ಹುಲಿ ಟಿಪ್ಪೂಸುಲ್ತಾನದ ಹೇಗೆ ಒಬ್ಬ ಹೋರಾಟಗಾರನಾಗಿ ವಿಶ್ವದಾಧ್ಯಂತ ಖ್ಯಾತಿಯನ್ನು ಗಳಿಸಿದ್ದಾರೆಯೋ ಅದೇ ಮಾದರಿಯಲ್ಲಿ ತಾಲೂಕಿನ ಹೆಮ್ಮೆಯ ಪುತ್ರರಾದ ಕೆ.ರೆಹಮಾನ್‍ಖಾನ್ ಶಿಕ್ಷಣದ ಶಕ್ತಿಯ ಫಲವಾಗಿ ಜ್ಞಾನವನ್ನು ಸಂಪಾದಿಸಿ ಈ ದೇಶದ ಅತ್ಯುನ್ನತವಾದ ಹುದ್ದೆಗಳನ್ನು ಅಲಂಕರಿಸುವ ಮೂಲಕ ಕೆ.ಆರ್‍ಪೇಟೆ ತಾಲೂಕಿನ ಕೀರ್ತಿಯನ್ನು ನಾಡಿನಾಧ್ಯಂತ ಬೆಳಗುತ್ತಿದ್ದಾರೆ. ಮುಸ್ಲಿಂ ಸಮೂದಾಯದ ಬಂಧುಗಳು ತಮ್ಮ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೇ ಮೊಟುಕುಗೊಳಿಸಿ ಬಾಲ ಕಾರ್ಮಿಕರನ್ನಾಗಿ ಮಾಡಿ ದುಡಿಯಲು ಹಚ್ಚದೇ ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಶ್ರೇಷ್ಠ ಸಾಧನೆ ಮಾಡಲು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಕಿವಿ ಮಾತು ಹೇಳೀದರು. ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಆಧಿಹಳ್ಳಿಯ ಬಳಿ ಕೇಂದ್ರೀಐ ನವೋದಯ ಮಾದರಿಯ ಅಲ್ಪಸಂಖ್ಯಾತರ ವಸತಿ ಶಾಲೆಯ ಕಟ್ಟಡ ಹಾಗೂ ಶಾಲಾ ಕ್ಯಾಂಪಸ್ 25ಕೋಟಿ ರೂಗಳ ವೆಚ್ಚದಲ್ಲಿ ಆರಂಭವಾಗುತ್ತಿದೆ. ಮೆಟ್ರಿಕ್ ನಂತರದ ವಿದ್ಯಾಭ್ಯಾಸಕ್ಕಾಗಿ ಅಲ್ಪಸಂಖ್ಯಾತರ ವಸತಿ ನಿಲಯವಿದೆ. ಆದ್ದರಿಂದ ಮುಸ್ಲಿಂ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಕಿಕ್ಕೇರಿ ಕೆ.ಎಂ ಗಂಗಾಧರ್ ಮಾತನಾಡಿ ಟಿಪ್ಪೂ ಸುಲ್ತಾನ್ ಅಪ್ರತಿಮ ದೇಶಭಕ್ತ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟಗಾರನಾಗಿದ್ದಾನೆ. ಟಿಪ್ಪೂವಿನಂತೆ ಜೀವನದಲ್ಲಿ ಎದುರಾಗುವ ಸಂಕಷ್ಠಗಳು ಹಾಗೂ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಗುರಿಮುಟ್ಟುವ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು. ಟಿಪ್ಪೂವಿನ ಇತಿಹಾಸವನ್ನು ತಿಳಿಯದವರು ಮಾತ್ರ ಟಿಪ್ಪೂಸುಲ್ತಾನನನ್ನು ವಿರೋಧಿಸುತ್ತಾರೆ. ಆದರೆ ಈ ಸಮಾಜಕ್ಕೆ ಟಿಪ್ಪೂವಿನ ಕೊಡುಗೆಯು ಅಪಾರವಾಗಿದೆ. ಟಿಪ್ಪೂ ನಿಜವಾದ ಹೋರಾಟಗಾರ, ಜೀವನದಲ್ಲಿ ಎಷ್ಟೇ ಕಷ್ಟ ನಷ್ಟಗಳು ಎದುರಾದರೂ ಹೇಡಿಯಂತೆ ರಾಜಿ ಮಾಡಿಕೊಳ್ಳದೇ ರಣರಂಗದಲ್ಲಿ ಹೋರಾಢಿ ಮಡಿದಿ ಸ್ವಾತಂತ್ರ್ಯ ಸೇನಾನಿಯಾಗಿದ್ದಾನೆ ಎಂದು ವಿವರಿಸಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷೆ ಕೆ.ರತ್ನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕೆ ಗಾಯತ್ರಿರೇವಣ್ಣ ಟಿಪ್ಪೂ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎಲ್.ದೇವರಾಜು, ಹೆಚ್.ಟಿ ಮಂಜು, ರಾಮದಾಸು, ತಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ಜಾನಕೀರಾಂ, ಸದಸ್ಯರಾದ ಮಾಧವಪ್ರಸಾದ್, ರಾಜಾಹುಲಿ ದಿನೇಶ್, ಡಿ.ಪ್ರೇಮಕುಮಾರ್, ತಾಲೂಕು ಕಾಂಗ್ರೇಸ್ ಅಧ್ಯಕ್ಷ ಎಂ.ಡಿ ಕೃಷ್ಣಮೂರ್ತಿ, ಬಸ್ತಿರಂಗಪ್ಪ, ಮುಸ್ಲಿಂ ಸಮಾಜದ ಹಿರಿಯ ಮುಖಂಡ ಕೆ.ಯೂನಸ್ ಖಾನ್, ಪುರಸಭೆಯ ಮಾಜಿಅಧ್ಯಕ್ಷ ಕೆ.ಗೌಸ್‍ಖಾನ್, ನವೀದ್‍ಅಹಮದ್, ಅಸ್ಮತುಲ್ಲಾಷರೀಫ್, ಎಂ.ಕೆ ಕಲೀಲ್, ಚಾಂದ್‍ಪಾಶ, ಜಮೀರ್‍ಅಹಮದ್, ಆಶ್ರಫ್ ಪಾಶ, ಆರೀಫ್‍ಪಾಶ, ಸೈಯ್ಯದ್ ಆಬೀದ್, ದಡದಹಳ್ಳಿ ಅತೀಕ್, ಸರ್ಕಲ್ ಇನ್ಸ್‍ಪೆಕ್ಟರ್ ವೆಂಕಟೇಶಯ್ಯ, ಸಬ್‍ಇನ್ಸ್‍ಪೆಕ್ಟರ್ ಅರುಣ್‍ಕುಮಾರ್, ತಾಲೂಕು ಸಮಾಜಕಲ್ಯಾಣಾಧಿಕಾರಿ ಸುಧಾಮಣಿ, ಬಿಸಿಎಂ ಕಲ್ಯಾಣಾಧಿಕಾರಿ ಈರಪ್ಪಗೌಡ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ| ಚಿಕ್ಕಾಡೆ ಅರವಿಂದ್, ಕ್ಷೇತ್ರ ಶಿಕ್ಷಣಾಧಿಕಾರಿ ಜವರೇಗೌಡ ಮತ್ತಿತರರು ಭಾಗವಹಿಸಿದ್ದರು.

ಗಮನಸೆಳೆದ ಟಿಪ್ಪೂ ವೇಶಧಾರಿ ಬಾಲಕ ಇಂದಿನ ಟಿಪ್ಪೂ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಪ್ಪೂ ವೇಶಧಾರಿ ಬಾಲಕ ನವೋದಯ ಮಾದರಿಯ ಅಲ್ಪಸಂಖ್ಯಾತರ ವಸತಿಶಾಲೆಯ ವಿದ್ಯಾಥಿರ್ü ಸೈಯದ್ ಶೋಯೆಬ್ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಗಮನ ಸೆಳೆದನು. ರಾಜಶ್ವನಿರೀಕ್ಷಕ ಮರಿಸಿದ್ಧೇಗೌಡ ಸ್ವಾಗತಿಸಿದರು. ಉಪತಹಶೀಲ್ದಾರ್ ಮಹದೇವೇಗೌಡ ವಂದಿಸಿದರು. ಲಕ್ಷ್ಮೀಕಾಂತ್ ಕಾರ್ಯಕ್ರಮ ನಡೆಸಿಕೊಟ್ಟರು. ಬಿಗಿಯಾದ ಪೆÇೀಲಿಸ್ ಬಂದೋಬಸ್ತಿನ ಹಿನ್ನೆಲೆಯಲ್ಲಿ ಕಾರ್ಯಕ್ರಮವು ಗಲಾಟೆ ಗದ್ದಲಗಳಿಲ್ಲದೇ ಶಾಂತಿಯುತವಾಗಿ ನಡೆಯಿತು. ಮುಸ್ಲಿಂ ಮಕ್ಕಳು ಖುರಾನ್ ಪಠಣ ಮಾಡಿದರು. ಟಿಪ್ಪ್ಪೂ ವೈಭವ ಕುರಿತ ಪ್ರಾರ್ಥನೆಯನ್ನು ಮಾಡಿ ರಂಜಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here