Friday 26th, April 2024
canara news

ಗ್ರಾಹಕರ ನಗದು ರಹಿತ ವ್ಯವಹಾರದ ಸೇವಾ ಶುಲ್ಕ ರದ್ದುಗೊಳ್ಳಲಿ

Published On : 16 Nov 2016   |  Reported By : Rayee Rajkumar


ಹೇಳಿದ್ದನ್ನು ಮಾಡಿ ತೋರಿಸುತ್ತಿರುವ ಕೇಂದ್ರದ ಮೋದಿ ಸರ್ಕಾರಕ್ಕೆ ಸಾಮಾನ್ಯ ಜನರಂತೆ ಮಾಧ್ಯಮದ ಮಂದಿಯೂ ಬೆಲೆ ನೀಡುತ್ತಿದ್ದಾರೆ. ನವೆಂಬರ್ 8 ರಂದು ರಾತ್ರೆ 8 ಗಂಟೆಗೆ ಅಭೂತ ಪೂರ್ವವಾಗಿ ಘೋಷಿಸಿದ 500, 1000 ರೂ.ಗಳ ನೋಟಿನ ಚಲಾವಣೆ ಹಿಂತೆಗೆತದಿಂದ ನಿದ್ದೆ ಇಲ್ಲದೆ ಇಡೀ ರಾತ್ರೆಯನ್ನು ಕಳೆದ ಹಲವಾರು ಕಾಳಧನಿಕರು, ಅಪ್ರಾಮಾಣಿಕ ವ್ಯವಹಾರಿಗಳು, ರಾಜಕೀಯ ನೆತಾರರು ಏನೂ ಮಾಡಲಾಗದೇ ತಮ್ಮ ಕಪ್ಪು ಹಣ, ದಾಖಲೆ ರಹಿತ ಹಣವನ್ನು ಸುಟ್ಟು , ಎಸೆದು ಸಿಟ್ಟನ್ನು ಬಹಿರಂಗಗೊಳಿಸಿದರು. ಆದರೆ ಸ್ವ ಪರಿಶ್ರಮದಿಂದ ದುಡಿದು ಸಂಪಾದಿಸಿದ ಮಂದಿ ಬಹಳ ಶಾಂತವಾಗಿ ಸರದಿಯಲ್ಲಿ ನಿಂತು ಪ್ರಾಮಾಣಿಕ ಪ್ರಯತ್ನಕ್ಕೆ ತಮ್ಮ ಬೆಂಬಲವನ್ನು ಸೂಚಿಸಿತು.

ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಬಹಳ ಮೊದಲೇ ಸಾಮಾನ್ಯರಿಗೆ ಎಲ್ಲಾ ರೀತಿಯ ಸ್ವಲಭ್ಯಗಳನ್ನೂ, ಕಾಳಧನಿಕರಿಗೆ ಎಲ್ಲ ರೀತಿಯ ಎಚ್ಚರಿಕೆಯ ಗಂಟೆಯನ್ನೂ ಬಾರಿಸುತ್ತಾ ಬಂದ ಮೋದಿಯವರು ಸುಳುಹು ರಹಿತವಾಗಿ ನೋಟಿನ ಚಲಾವಣೆಯನ್ನು ಹಿಂತೆಗೆಯುವ ನಿರ್ಧಾರ ಪ್ರಕಟಿಸಿತು. ಆದರೆ ಈಗಲೂ ಕೂಡಾ ದಾಖಲೆ ರಹಿತ ಹಣಕ್ಕೆ ಸೂಕ್ತ ತೆರಿಗೆಯನ್ನು ಕಟ್ಟಿ ಅಧಿಕೃತ ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ. ಜನರೆಲ್ಲ ಈ ಪ್ರಕ್ರಿಯೆಯನ್ನು ಬಲವಾಗಿ ಬೆಂಬಲಿಸಿದ್ದಾರೆ. ಆದ್ದರಿಂದಲೇ ಈ ಪ್ರಾಮಾಣಿಕ ಪ್ರಯತ್ನಕ್ಕೆ ಯಾರ ವಿರೋಧವೂ ವ್ಯಕ್ತವಾಗಿಲ್ಲ.

ಆದರೆ ಹಲವಾರು ತಿಂಗಳುಗಳ ಹಿಂದೆ ಸೂಚಿಸಿದಂತೆ ದೇಶದೆಲ್ಲೆಡೆ ನಡೆಯುವ ಎಲ್ಲಾ ವ್ಯವಹಾರಗಳು ನಗದು ರಹಿತವಾಗಿ ಇರುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‍ಗಳ ಮೂಲಕವೇ ನಡೆಯ ಬೇಕಿದ್ದಲ್ಲಿ ಆ ಎಲ್ಲಾ ವ್ಯವಹಾರದ ಸಂದರ್ಭದಲ್ಲೂ ವಿಧಿಸುತ್ತಿರುವ ಸೇವಾ ಶುಲ್ಕವನ್ನು ರದ್ದುಗೊಳಿಸಬೇಕು. ಒಂದು ವೇಳೆ ಕ್ರೆಡಿಟ್ ಕಾರ್ಡ್‍ಗೆ ಇರುವ ಜವಾಬ್ದಾರಿಯ ಮತ್ತು ಹಣದ ಒದಗಣೆಯಲ್ಲಾಗುವ ಕಾರ್ಯದ ದೆಸೆಯಿಂದ ಸ್ವಲ್ಪ ಮಟ್ಟಿನ ಸೇವಾಶುಲ್ಕ ಅಗತ್ಯವಿದ್ದರೂ ಕೂಡಾ ಡೆಬಿಟ್ ಕಾರ್ಡ್‍ನ ವ್ಯವಹಾರಕ್ಕೆ ಸೇವಾಶುಲ್ಕವನ್ನು ಸಂಪೂರ್ಣ ನಿಷೇಧಿಸ¨ಹುದು.

ಡೆಬಿಟ್ ಕಾರ್ಡ್‍ನ್ನುÀ ವ್ಯವಹಾರದ ಸಂದರ್ಭದಲ್ಲಿ ಬಳಸುವುದರಿಂದ ಕಾರ್ಡ್‍ನಲ್ಲಿ ಹಣವಿದ್ದರೆ ಮಾತ್ರ ವ್ಯವಹಾರ ನಡೆಯುವದರಿಂದ ಹಣಕ್ಕಾಗಿ ವಿಳಂಬವಾಗುವುದಿಲ್ಲ. ಸ್ವೈಪ್ ಮಾಡಿದಾಕ್ಷಣ ಹಣ ಯಾರಿಗೆ ಸಂದಾಯವಾಗಬೇಕೋ ಅವರಿಗೆ ಸಂದಾಯವಾಗುವದರಿಂದ (ಏಕೆಂದರೆ ಖಾತೆಯಲ್ಲಿ ಸಾಕಷ್ಟು ಹಣ ಮೊದಲೇ ಜಮೆ ಇರುವದರಿಂದ) ಹಣ ದೊರಕುವಲ್ಲಿ ಯಾವದೇ ವಿಳಂಬವಾಗುವದಿಲ್ಲ. ಹೀಗಾಗಿ ವ್ಯವಹಾರಕ್ಕೆ ನಗದಿನಂತೆಯೇ ತಕ್ಷಣವೇ ಹಣ ದೊರಕುವದರಿಂದ ಡೆಬಿಟ್ ಕಾರ್ಡ್‍ನ ವ್ಯವಹಾರದ ಸೇವಾ ಶುಲ್ಕವನ್ನು ತಕ್ಷಣವೇ ಎಲ್ಲಾ ರಂಗದಲ್ಲೂ, ಎಲ್ಲಾ ಸೇವೆಗಳಲ್ಲೂ, ನಿಷೇಧಿಸ¨ಹುದು.

ಕೆಲವು ಪೆಟ್ರೋಲ್ ಬಂಕ್, ಮಾಲ್‍ಗಳ ಅಂಗಡಿಗಳಲ್ಲೂ ಡೆಬಿಟ್ ಕಾರ್ಡ್‍ನ್ನು ಬಳಸಿ ಮಾಡಿದ ವ್ಯವಹಾರದ ವಹಿವಾಟಿಗೆ ರೂ.30-40 ರಂತೆ ಪ್ರತೀ ಬಾರಿಗೆ ಹಣ ಪಡೆಯುವದರಿಂದ ಡೆಬಿಟ್ ಕಾರ್ಡ್ ಹೊಂದಿರುವ ಹಲವಾರು ಮಂದಿ ಹತ್ತಿರದ ಎ.ಟಿ.ಎಂ. ನಿಂದ ನಗದು ಹಣ ತಂದು ಸ್ವೈಪ್ ಮಾಡುವದರಿಂದ ಆಗುವ ಅಷ್ಟೂ ಸೇವಾ ಶುಲ್ಕವನ್ನು ಉಳಿಸಿ ಅದರಿಂದ ಸುಮಾರು ಒಂದು ಲೀಟರಷ್ಟು ಇಂಧನವನ್ನು ಹೆಚ್ಚುವರಿ ಹಾಕಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಸರಕಾರ ಒಂದು ವೇಳೆ ನಗದು ರಹಿತ ವ್ಯವಹಾರವನ್ನು ಹೆಚ್ಚಿಸುವ ನೈಜ ಇರಾದೆಯಮನ್ನು ಹೊಂದಿದ್ದರೆ ಕನಿಷ್ಠ ಪಕ್ಷ ತಕ್ಷಣದಿಂದಲೇ ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸೇವಾ ಶುಲ್ಕ ಪಡೆಯುವದನ್ನು ಎಲ್ಲ ಕಡೆ ನೀಷೇಧಿಸಲಿ. ನಂತರ ಅದರ ಆಧಾರದಲ್ಲಿ ಹಾಗೂ ಕ್ರೆಡಿಟ್ ಕಾರ್ಡ್‍ನ ವಹಿವಾಟಿನ ಪ್ರಕ್ರಿಯೆಗಳು ಸರಳಗೊಂಡ ನಂತರದಲ್ಲಿ ಅದರ ಸೇವಾ ಶುಲ್ಕವನ್ನೂ ತೆಗೆದು ಹಾಕುವ ಬಗೆಗೆ ಯೋಚಿಸಬಹುದಾಗಿದೆ.

ನಗದು ರಹಿತ ವ್ಯವಹಾರಕ್ಕೆ ನೀಡುವ ಕಾರ್ಡ್‍ಗಳಿಗೆ ಬ್ಯಾಂಕುಗಳು ಪ್ರತೀವರ್ಷ ನಿಗದಿತ ಶುಲ್ಕವನ್ನು ಗ್ರಾಹಕರ ಖಾತೆಯಿಂದ ಯಾವ ಸೂಚನೆಯನ್ನೂ ನೀಡದೇ ಕಟಾಯಿಸುತ್ತಿವೆ. ಮೆಸೇಜ್ ಗಾಗಿ ಕೂಡಾ ಶುಲ್ಕವನ್ನು ಸಂಗ್ರಹಿಸುತ್ತಿವೆ. ಈ ಎಲ್ಲಾ ಪ್ರಕ್ರಿಯೆಗೆ ಕೇವಲ ಒಮ್ಮೆ ಮಾತ್ರ ಕೆಲಸ ಇರುವದರಿಂದ ಪ್ರತೀ ವರ್ಷ ಅಥವಾ ವರ್ಷಕ್ಕೆ 3-4 ಬಾರಿ ಶುಲ್ಕವನ್ನು ಪಡೆಯುವ ಅಗತ್ಯವಿದೆಯೇ? ಪ್ರಾರಂಭದಲ್ಲಿ ಒಂದು ಬಾರಿ ಸಂಬಂಧಿತ ಕಂಪ್ಯೂಟರಿಗೆ ಸೂಕ್ತ ನಿರ್ದೇಶನವನ್ನು ಕೊಟ್ಟ ತರುವಾಯ ಅಗತ್ಯವಿದ್ದಲ್ಲಿ ಮಾತ್ರ ಬದಲಾವಣೆಯ ಕೆಲಸ ಇರುತ್ತದೆ. ಇಲ್ಲದಿದ್ದಲ್ಲಿ ಏನೂ ಕೆಲಸ ಇಲ್ಲದಿರುವದರಿಂದ ಪ್ರತಿಯೊಂದೂ ಪ್ರಕ್ರಿಯೆ ಯಾವದೇ ಹೆಚ್ಚಿನ ಶ್ರಮವಿಲ್ಲದೆ ಮುಂದುವರೆಯುತ್ತಿರುತ್ತದೆ. ಹೀಗಾಗಿ ಬೇಂಕುಗಳು ಗ್ರಾಹಕರ ಹಿತದೃಷ್ಟಿಯಿಂದ ಹಾಗೂ ಹೆಚ್ಚಿನ ಸೌಲಭ್ಯವನ್ನು ಉಚಿತವಾಗಿ ಒದಗಿಸುವ ದಿಶೆಯಲ್ಲಿ ಈ ಎಲ್ಲಾ ವಾರ್ಷಿಕ, ತ್ರೈಮಾಸಿಕ ಇತ್ಯಾದಿ ಶುಲ್ಕಗಳಿಂದ ಮುಕ್ತಿ ನೀಡಲು ಯೋಚಿಸಬಹುದು. ಅಥವಾ ಕೇಂದ್ರ ಸರಕಾರ ತಾನಾಗಿಯೇ ಈ ಎಲ್ಲಾ ಸೇವಾ ಶುಲ್ಕಗಳಿಂದ ನೆಮ್ಮದಿಯನ್ನು ಗ್ರಾಹಕರಿಗೆ ತಲುಪಿಸಬಹುದು.

ಕೇಂದ್ರ ಸರಕಾರವೇ ನಗದು ರಹಿತ ಖಾತೆ, ರೂಪೇ ಕಾಡರ್ï ಇತ್ಯಾದಿ ನೀಡಿರುವದರಿಂದ ಇಂತಹ ಸೇವಾ ಶುಲ್ಕಗಳಿಂದಲೂ ಗ್ರಾಹಕರಿಗೆ ಮುಕ್ತಿ ನೀಡಿದಲ್ಲಿ ಅದೊಂದು ಉತ್ತಮ ಗ್ರಾಹಕ ಸ್ನೇಹಿ ಕ್ರಮವಾಗಿ ಎಲ್ಲಾ ನಾಗರಿಕರೂ, ಅದರಲ್ಲೂ, ಮುಖ್ಯವಾಗಿ ಗ್ರಾಮೀಣರು ಬಹಳಷ್ಟು ಉಳಿತಾಯ ಹಾಗೂ ಪ್ರಯೋಜನ ಪಡೆಯಲು ಸಾಧ್ಯವಿದೆ. ಇಲ್ಲದಿದ್ದಲ್ಲಿ ಸರಕಾರವೇನೋ ನಗದು ರಹಿತ ವ್ಯವಹಾರಕ್ಕೆ ಹೇಳುತ್ತಿದ್ದರೂ ಕೂಡಾ ಅನವಶ್ಯಕವಾಗಿ ಪ್ರತೀ ವ್ಯವಹಾರಕ್ಕೆ ಸುಮಾರು 40-50 ರೂಪಾಯಿ ಕಳೆದುಕೊಳ್ಳಲು ಯಾವ ಮಧ್ಯಮ ವರ್ಗದವರೂ ತಯಾರಿರುವುದಿಲ್ಲ. ಏಕೆಂದರೆ ಅವರು ತಮ್ಮ ಸಂಪಾದನೆಯ ಪ್ರತೀ ಪೈಸೆಯನ್ನೂ ಎರಡೆರಡು ಬಾರಿ ಯೋಚಿಸಿ ಖರ್ಚು ಮಾಡುತ್ತಾರೆ. ಹೀಗಾಗಿ ಸರಕಾರದ ಯಾವ ಪ್ರಯತ್ನವೂ ಸಫಲವಾಗಲಿಕ್ಕಿಲ್ಲ. ಹಾಗಾಗಿ ಕನಿಷ್ಠ ಪಕ್ಷ ಡೆಬಿಟ್ ಕಾರ್ಡ್‍ನ ವ್ಯವಹಾರದ ಸೇವಾ ಶುಲ್ಕವನ್ನು ತತ್‍ಕ್ಷಣದಿಂದಲೇ ನಿಷೇಧಿಸಲಿ ಮತ್ತು ಎಲ್ಲಾ ಬೇಂಕುಗಳವರಿಗೂ ಹೆಚ್ಚುವರಿ ಸೇವೆ ನೀಡಲು ಒತ್ತಾಯಿಸಲಿ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here