Friday 26th, April 2024
canara news

ಜಿಲ್ಲಾ ಪ. ಪೂ. ಕಾಲೇಜುಗಳ ‘ಶೈನ್-2016’ ಕ್ರೀಡೊತ್ಸವ ಸಮಾರೋಪ ಸಮಾರಂಭ ಸಮಗ್ರ ತಂಡ ಪ್ರಶಸ್ತಿ ಮಿಲಾಗ್ರಿಸ್‍ಗೆ

Published On : 17 Nov 2016   |  Reported By : Bernard J Costa


ಕುಂದಾಪುರ, ನ.16: ‘ಸಂತ ಮೇರಿಸ್ ಪ.ಪೂ.ಕಾಲೇಜು ಇದರ ವತಿಯಿಂದ ನೆಡೆದ ಈ ಶೈನ್ ಕ್ರೀಡಾಕೂಟದಿಂದ ಇವತ್ತು ಹಲವರು ಸ್ಪರ್ಧಾಳುಗಳು ಶೈನ್ ಆಗಿದ್ದಾರೆ, ಈ ಮೈದಾನದಿಂದ ಗೆದ್ದು ಬಂದು ಸ್ಪೂರ್ತಿ ಪಡೆದ ಕ್ರೀಡಾಗಳು ಮುಂದೆ ರಾಜ್ಯ ರಾಶ್ಠ್ರಮಟ್ಟದಲ್ಲಿ ತಮ್ಮ ಕಿರ್ತಿಯನ್ನು ಬೆಳಗಿಸಲಿ’ ಎಂದು ಚಾನ್ಸಲರ್ ಉದುಪಿ ಧರ್ಮ ಪ್ರಾಂತ್ಯದ ಅ|ವಂ|ವಲೇರಿಯನ್ ಮೆಂಡೊನ್ಸಾ ಉಡುಪಿ ಜಿಲ್ಲಾ ಪ. ಪೂ. ಕಾಲೇಜುಗಳ ‘ಶೈನ್-2016’ ಸಂತ ಮೇರಿಸ್ ಪ. ಪೂ. ಸಂ. ಕಾಲೇಜು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನೆಡೆದ ಸಮಾರೋಪ ಸಮಾರಂಭದಲ್ಲಿ ತಮ್ಮ ಸಂದೇಶವನ್ನು ನೀಡಿ ಆಯೋಜಿಸಿದವರಿಗೆ ಶ್ಲಾಘಿಸಿದರು.

ಶೈನ್ ಕ್ರೀಡಾ ಕೂಟದ ಹೊಣೆ ಹೊತ್ತ ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವಂ| ಪ್ರವೀಣ್ ಅಮ್ರತ್ ಮಾರ್ಟಿಸ್ ಸಂಬಂದ್ದ ಪಟ್ಟ ಎಲ್ಲರಿಂದ ಉತ್ತಮ ಸಹಕಾರ ನೀಡಿದ್ದರಿಂದ ಕ್ರೀಡೊತ್ಸವಕ್ಕೆ ಯಶಸಿವಾಯಿತು ಎನ್ನುತ್ತಾ ಅಭಿನಂದನೆಗಳನ್ನು ಸಲ್ಲಿಸಿದರು.

ಪ.ಪೂ.ಕಾ. ಕ್ರೀಡಾ ಸಂಯೋಜಕರಾದ ಎಸ್. ಶ್ರೀಧರ್ ಶೆಟ್ಟಿ ‘ಸೈಂಟ್ ಮೇರಿಸ್ ವಿಧ್ಯಾ ಸಂಸ್ಥೆಯಿಂದ ಒಂದು ಅತ್ಯುತ್ತಮ, ಶಿಸ್ತುಬದ್ದವಾದ ಯಶಸ್ವಿ ಕ್ರೀಡಾಕೂಟ ನೆಡೆದಿದೆ’ ಎಂದು ಸಂಘಟಕರನ್ನು ಶ್ಲಾಘಿಸಿದರು. ಆರ್.ಬಿ.ನಾಯಕ್ ಪ.ಪೂ.ಕಾ. ಉಪ ನಿರ್ದೇಶಕರು ಸಾ.ಶಿ.ಇಲಾಖೆ ಇವರು ಮಾತಾಡಿ ‘ನಾವು ಸಂಘಟಕರಲ್ಲಿ ಕ್ರಿಡೋತ್ಸವ ವಹಿಸಿಕೊಳ್ಳ ಬೇಕೆಂದು ಕೇಳಿಕೊಂಡಾಗ, ಬರೆ ಹತ್ತು ನಿಮಿಷದಲ್ಲಿ ತಮ್ಮ ಒಪ್ಪಿಗೆ ಕೊಟ್ಟು ಇವತ್ತು ನಮ್ಮ ನಿರೀಕ್ಷೆಗೆ ಮಿರಿದ ಬಹಳ ಉತ್ತಮ ಮಟ್ಟದ ಕ್ರಿಡೋತ್ಸವವನ್ನು ನೆಡೆಸಿಕೊಟ್ಟಿದ್ದಾರೆ ಎನ್ನುತಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ವಿಧ್ಯಾ ಸಂಸ್ಥೆಯ ಸಂಚಾಲಕರಾದ ಧರ್ಮಗುರು ವಂ| ಅನಿಲ್ ಡಿಸೋಜಾ ‘ಈ ಕ್ರೀಡಾ ಕೂಟ ಯಶಸ್ವಿಯಾಗಿ ನೆಡೆದಿದೆ ಇದರ ಯಶಸ್ವಿಗಾಗಿ ನಾವು ದೇವರಲ್ಲಿ ಬೇಡುತಿದ್ದೆವು, ಸಹಕಾರ ನೀಡಿದವರಿಗೆ ಕ್ರತಜ್ಞತೆ ಭಾಗವಹಿಸಿದ ಎಲ್ಲಾ ಕ್ರೀಡಾಳುಗಳಿಗೆ ಶುಭವಾಗಲೆಂದು’ ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿದ ಪುರಸಭಾ ಉಪಧ್ಯಕ್ಷ ಕ್ರೀಡಾಪಟು ‘ನಾನು ಕಲಿತ ಈ ವಿಧ್ಯಾ ಸಂಸ್ಥೆ ಶಿಸ್ತಿಗೆ ಹೆಸರಾದದ್ದು, ನಾನು ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡಿದ್ದರೆ ಅದಕ್ಕೆ ಕಾರಣ ಈ ವಿಧ್ಯಾ ಸಂಸ್ಥೆ, ನಾವು ಕಲಿಯುವಾಗ ಆಟಕ್ಕೆ ಪ್ರಾಮುಖ್ಯತೆ ಇರಲಿಲ್ಲಾ, ಆದರೆ ಈಗ ಪಾ|ಅನೀಲ್, ಫಾ|ಪ್ರವೀಣ್ ಬಂದ ಮೇಲೆ ಈ ವಿಧ್ಯಾ ಸಂಸ್ಥೆ ಶಿಸ್ತು ಶಿಕ್ಷಣ ಆಟ ಜೊತೆಯಲ್ಲಿ ಸಾಗಿಸುತ್ತಾ ಯಶಸ್ವಿಯ ಪಥದಲ್ಲಿ ಸಾಗುತ್ತಿದೆ. ಇದಕ್ಕೆ ನಿರ್ದೀಶನ, ಇವತ್ತು ಸಮಾಪನಗೊಂಡ ಈ ಯಶಸ್ವಿ ಕ್ರೀಡಾ ಕೂಟ’ ಶ್ಲಾಘಿಸಿಸುತ್ತ, ಗೆದ್ದ ಕ್ರೀಡಾಗಳಿಗೆ ಸಾಂತ್ವನಿಸಿ, ಗೆದ್ದವರಿಗೆ ಮುಂದೆಯು ಯಶಸು ಸಿಗಲೆಂದು ಹಾರೈಸಿದರು.

ಈ ಕ್ರೀಡಾ ಕೂಟವನ್ನು ಸಂಘಟಿಸುವಲ್ಲಿ ದುಡಿದ ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ಇವರನ್ನು ಸನ್ಮಾನಿಸಲಾಯಿತು. ಹಾಗೆ ಈ ಕ್ರೀಡಾ ಕೂಟದಲ್ಲಿ ಬಹಳವಾಗಿ ಶ್ರಮಿಸಿದವರನ್ನು ಗುರುತಿಸಿಕೊಳ್ಳಲಾಯಿತು.

ಈ ಕ್ರೀಡಾ ಕೂಟದಲ್ಲಿ ಮಣಿಪಾಲ ಪ.ಪೂ.ಕಾಲೇಜಿನ ವಿಧ್ಯಾರ್ತಿ ಸಂಗಮೇಶ್ 1500, 3000, 5000 ಮೀಟರ್ ಒಟದ ಸ್ಪರ್ಧೆಯಲ್ಲಿ ಗೆದ್ದು ವೀರಾಗ್ರೆಸರ (ವಯಕ್ತಿಕ ಚಾಂಪಿಯೆನ್) ಪ್ರಶಸ್ತಿ ಪಡೆದನು. ಡಾ. ಎಸ್.ಎ.ಎಂ.ನಿಟ್ಟೆ ಕಾಲೇಜಿನ ವಿಧ್ಯಾರ್ತಿಣಿ ಭೂಮಿಕಾ 800, 1500, 3000 ಮೀಟರ್ ಒಟದ ಸ್ಪರ್ಧೆಯಲ್ಲಿ ಗೆದ್ದು ವೀರಾಗ್ರಣಿ (ವಯಕ್ತಿಕ ಚಾಂಪಿಯೆನ್) ಪ್ರಶಸ್ತಿ ಪಡೆದಳು.

74 ಅಂಕ ಪಡೆದ ಮಿಲಾಗ್ರಿಸ್ ಪ.ಪೂ.ಕಾಲೇಜು ತಂಡ ಬಾಲಕರ ಸಮಗ್ರ ಪ್ರಶಸಿಯನ್ನು ಪಡೆದರೆ 66 ಅಂಕ ಪಡೆದ ಡಾ. ಎಸ್.ಎ.ಎಂ.ನಿಟ್ಟೆ ಕಾಲೇಜು ಸಮಗ್ರ ಬಾಲಕಿಯರ ತಂಡ ಪ್ರಶಸ್ತಿಯನ್ನು ಪಡೆಯಿತು. ಒಟ್ಟಾರೆ 91 ಅಂಕ ಗಳಿಸಿದ ಅಂಕ ಪಡೆದ ಮಿಲಾಗ್ರಿಸ್ ಪ.ಪೂ.ಕಾಲೇಜು ತಂಡ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದು ಬಿಗಿತು.

ಸಮಾರೋಪದ ಕಾರ್ಯಕ್ರಮದ ವೇದಿಕೆಯಲ್ಲಿ ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಉಪ ಪ್ರಾಂಶುಪಾಲೆ ಮಂಜುಳಾ ನಾಯರ್, ಚರ್ಚಿನ ಉಪಾಧ್ಯಕ್ಷೆ ಫೆಲ್ಸಿಯಾನ್ ಡಿಸೋಜಾ, ದೈಹಿಕ ಶಿಕ್ಷಕರಾದ ಶಾಂತಿರಾಣಿ ಬಾರೆಟ್ಟೊ, ರತ್ನಾಕರ ಶೆಟ್ಟಿ, ವಿಧ್ಯಾ ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ ಚೇತನ, ಸಿಸ್ಟರ್ ಜೊಯ್‍ಸ್ಲಿನ್, ಡೋರಾ ಸುವಾರಿಸ್ ಮುಂತಾದದವರು ಹಾಜರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here