Friday 26th, April 2024
canara news

ಥಾಣೆಯಲ್ಲಿ ನವೋದಯ ಜೂನಿಯರ್ ಕಾಲೇಜು ನೂತನ ಕಟ್ಟಡದ ಉದ್ಘಾಟನೆ

Published On : 19 Nov 2016   |  Reported By : Rons Bantwal


ವಿದ್ಯೆಯೊಂದಿಗೆ ಜ್ಞಾನ ವಿನಯದ ಸಾಧನೆಯಾಗಲಿ: ಕೆ.ಎಸ್ ತಂತ್ರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.19: ಉಪನಗರ ಥಾಣೆ ವಾಗ್ಲೇ ಎಸ್ಟೇಟ್‍ನ ಕಿಸನ್ ನಗರದಲ್ಲಿನ ನವೋದಯ ಕನ್ನಡ ಸೇವಾ ಸಂಘ ಸಂಚಾಲಿತ ನವೋದಯ ಶೈಕ್ಷಣಿಕ ಸಂಸ್ಥೆಯು ಇಂದಿಲ್ಲಿ ನವೋದಯ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಜೂನಿಯರ್ ಕಾಲೇಜು ನೂತನ ಕಟ್ಟಡಕ್ಕೆ ಚಾಲನೆಯನ್ನೀಡಿತು.

ಆ ಪ್ರಯುಕ್ತ ನವೋದಯ ಕನ್ನಡ ಸೇವಾ ಸಂಘವು ಮೂರುದಿನಗಳ ಭವ್ಯ ಕಾರ್ಯಕ್ರಮ ಆಯೋಜಿಸಿ ಸಿದ್ಧತೆ ನಡೆಸಿದ್ದು ಮುಲುಂಡ್ ಪಶ್ಚಿಮದ ಶಿವಾಜಿ ನಗರದಲ್ಲಿನ ಮಿಡ್‍ಟೌನ್ ಪ್ಲಾಜ್ಹಾದ ಅನೆಕ್ಸ್ ಬಿಲ್ಡಿಂಗ್‍ನಲ್ಲಿನ ತನ್ನ ಶಿಕ್ಷಣ ಸಮುಚ್ಛಾಯದ ನೂತನ ಕಟ್ಟದಲ್ಲಿ ಕಳೆದ ಗುರುವಾರ ರಾತ್ರಿ ವಾಸ್ತುಪೂಜೆ ನೆರವೇರಿಸಿತು. ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ಗಣ ಹೋಮ, ಸರಸ್ವತಿ ಪೂಜೆ ಮತ್ತು ಸತ್ಯ ನಾರಾಯಣ ಪೂಜೆ ನೆರವೇರಿಸಿ ಮಧ್ಯಾಹ್ನ ಧಾರ್ಮಿಕ ಕೈಂಕರ್ಯಗಳೊ ಂದಿಗೆ ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು.

ಉದ್ಯಮಿ ಹಾಗೂ ಕೊಡುಗೈದಾನಿ ಸುಂದರ್‍ಜೀ ಎಂ.ಶ್ಹಾ ಅವರನ್ನೊಳಗೊಂಡು ನಿಧಿ ಸಂಗ್ರಹ ಸಮಿತಿ ಗೌರವಾಧ್ಯಕ್ಷ ಶಿವರಾಮ ಕೆ.ಶೆಟ್ಟಿ ರಿಬ್ಬನ್ ಕತ್ತರಿಸಿ ಬಳಿಕ ದೀಪ ಪ್ರಜ್ವಲನೆಗೈದು ನೂತನ ಕಟ್ಟಡ ಉದ್ಘಾಟಿಸಿದರು. ಶ್ರೀಮತಿ ಪ್ರಮೋದಾ ಶಿವರಾಮ ಶೆಟ್ಟಿ ಕಟ್ಟಡದ ನಾಮಫಲಕ ಅನಾವರಣಗೈದು ಶುಭಶಂಸನೆಗೈದರು.

ಪುರೋಹಿತರಾದ ಶ್ರೀ ಕೆ.ಎಸ್ ತಂತ್ರಿ ಹಾಗೂ ಶ್ರೀ ಪ್ರಸನ್ನ ಮಯ್ಯ ಅವರು ಶಾಸ್ತ್ರೋಕ್ತವಾಗಿ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಜಯ ಕೆ.ಶೆಟ್ಟಿ ಮತ್ತು ಸಾವಿತ್ರಿ ಜಯ ಶೆಟ್ಟಿ, ಸುನಿಲ್ ಎಸ್.ಶೆಟ್ಟಿ ಮತ್ತು ರೂಪಾಲಿ ಸುನಿಲ್ ಹಾಗೂ ದಯಾನಂದ ಎಸ್.ಶೆಟ್ಟಿ ಮತ್ತು ತ್ರಿವೇಣಿ ದಯಾನಂದ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ವಿದ್ಯೆಯೊಂದಿಗೆ ಜ್ಞಾನ, ಪ್ರಜ್ಞೆ , ವಿನಯದ ವಿಜಯದ ಸಾಧನೆ ಆಗಲಿ. ಈ ಎಲ್ಲಾ ಸಾಧನೆಗೆ ಮಂಗಳ ಅನುಗ್ರಹವಾಗಲಿ. ನೂತನ ಕಟ್ಟಡದಲ್ಲಿ ವಿದಾರ್ಜನೆಯಲ್ಲಿ ತೊಡಗಿಸುವ ಮತ್ತು ಅಧ್ಯಾಪನಗೈಯುವ ಸರ್ವರ ಬದುಕು ಹಸನಾಗುತ್ತಾ ನವೋದಯ ವಿದ್ಯಾಸಂಸ್ಥೆ ಸದಾ ಪ್ರಜ್ವಲಿಸುತ್ತಾ ಪ್ರಗತಿ ಸಾಧಿಸಲಿ ಎಂದು ಕೆ.ಎಸ್ ತಂತ್ರಿ ಹರಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಜಯ ಕೆ.ಶೆಟ್ಟಿ, ಉಪಾಧ್ಯಕ್ಷ ಕೇಶವ ಟಿ.ನಾಯಕ್, ಗೌ| ಪ್ರ| ಕಾರ್ಯದರ್ಶಿ ದಯಾನಂದ ಎಸ್.ಶೆಟ್ಟಿ, ಗೌ| ಕೋಶಾಧಿಕಾರಿ ಸುನಿಲ್ ಎಸ್.ಶೆಟ್ಟಿ, ಜೊತೆ ಕಾರ್ಯದರ್ಶಿ ಶಶಿಧರ್ ಕೆ.ಶೆಟ್ಟಿ, ಜೊತೆ ಕೋಶಾಧಿಕಾರಿ ದಯಾನಂದ್ ಬಿ.ಹೆಗ್ಡೆ, ನಿಧಿ ಸಂಗ್ರಹ ಸಮಿತಿ ಸದಸ್ಯ ಸಿಎ| ಶಂಕರ್ ಬಿ.ಶೆಟ್ಟಿ, ನಿಧಿ ಸಮಿತಿ ಸದಸ್ಯರುಗಳಾದ ಚಂದ್ರಶೇಖರ್ ಎಸ್.ಶೆಟ್ಟಿ, ಡಾ| ಸತ್ಯಪ್ರಕಾಶ್ ಎಸ್.ಶೆಟ್ಟಿ, ಚಂದ್ರಹಾಸ ಜಿ.ಶೆಟ್ಟಿ ಥಾಣೆ, ಅಶೋಕ್ ಎಂ.ಕೋಟ್ಯಾನ್, ಶ್ರೀನಾಥ್ ಶೆಟ್ಟಿ, ಉದ್ಯಮಿಗಳಾದ ರಾಘವ ಎಸ್.ಶೆಟ್ಟಿ, ಅಪ್ಪಣ್ಣ ಎಂ.ಶೆಟ್ಟಿ ಪೆÇವಾಯಿ, ಮಾಜಿ ಅಧ್ಯಕ್ಷರುಗಳಾದ ಆರ್.ಹೆಚ್ ಬೈಕಂಪಾಡಿ, ಕೆ.ಎಸ್ ಬಂಗೇರಾ, ಶಿವರಾಮ ರಾವ್, ಸುಂದರ ವಿ.ಶೆಟ್ಟಿ ಹಾಗೂ ಸಂಘದ ಎಸ್.ಎಂ ಬಿರಾದರ್, ಗೋಪಾಲ ಎ.ಸೇರಿಗಾರ, ಕೆ.ಸಂಜೀವ ಶೆಟ್ಟಿ, ರಮೇಶ್ ಕೆ.ಶೆಟ್ಟಿ, ಆಡಳಿತ ಸಮಿತಿಯ ಪ್ರಭಾಕರ್ ಎ.ಶೆಟ್ಟಿ, ಶಾಲಾಡಳಿತ ಸಮಿತಿಯ ಪುಸ್ತಕ ಭಂಡಾರದ ದಿನಕರ ಉಚ್ಚಿಲ್ ಹಾಗೂ ರಾಜೇಂದ್ರ ಎನ್.ಶೆಟ್ಟಿ, ಸುಧಾಕರ್ ಜಿ.ಕಾಂಚನ್, ಜಗದೀಶ್ ಶೆಟ್ಟಿ, ಪ್ರಶಸ್ಥ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿಯರುಗಳಾದ ಅನುರಾಧಾ ಅರ್ಜುನ್ ವಾಡ್ಕರ್, ಅಜಿತಾ ಪ್ರದೀಪ್ ಕುಮಾರ್, ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ವಿದ್ಯಾಥಿರ್üಗಳು ಮತ್ತು ಪಾಲಕರನೇಕರು ಉಪಸ್ಥಿತರಿದ್ದು ಶುಭಾರೈಸಿದರು.

ಇಂದು ಬಂಟರ ಭವನದಲ್ಲಿ ಭವ್ಯ ಸಮಾರಂಭ:
ಇಂದು (ನ.19) ಶನಿವಾರ ದಿನಪೂರ್ತಿ ಕುರ್ಲಾ ಪೂರ್ವದ ಬಂಟರ ಭವನದಲ್ಲಿನ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಭವ್ಯ ಸಮಾರಂಭ ಆಯೋಜಿಸಿದ್ದು, ಸಂಘದ ಅಧ್ಯಕ್ಷ ಹಾಗೂ ಶಾಲಾಡಳಿತ ಸಮಿತಿ ಕಾರ್ಯಾಧ್ಯಕ್ಷ ಜಯ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಅತಿಥಿü ಗಣ್ಯರ ಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮ, ಸಮ್ಮಾನ, ಸಂಗೀತ ಲಹರಿ ಹಾಗೂ ಶಾಲಾ ಮಕ್ಕಳಿಂದ `ಶಾಂಭವಿ ವಿಜಯ' ಯಕ್ಷಗಾನ ಪ್ರದರ್ಶನಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿಸಲಾಗುವುದು ಎಂದು ಗೌ| ಪ್ರ| ಕಾರ್ಯದರ್ಶಿ ಹಾಗೂ ಶಾಲಾ ಕಾರ್ಯನಿರ್ವಾಹಕ ದಯಾನಂ ದ ಎಸ್.ಶೆಟ್ಟಿ ತಿಳಿಸಿದ್ದಾರೆ.

ದಿ| ಯಶೋಧರ ಶೆಟ್ಟಿ ಸಂಸ್ಥಾಪಣೆಯಲ್ಲಿ ರೂಪಿಸಲ್ಪಟ್ಟ ನವೋದಯ ಆಂಗ್ಲ ಮಾಧ್ಯಮದ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಶಿವಾಜಿ ನಗರದಲ್ಲಿನ ಮಾಧ್ಯಮಿಕ ವಿಭಾಗವನ್ನೊಳಗೊಂಡ ಶೈಕ್ಷಣಿಕ ಸಂಸ್ಥೆಯು ತನ್ನ ವಿದ್ಯಾಕ್ಷೇತ್ರದ ಕಿರೀಟಕ್ಕೆ ಮತ್ತೊಂದು ಗರಿಯನ್ನು ಮೂಡಿಸಿ ಕೊಂಡು ಇಂದಿಲ್ಲಿ ನವೋದಯ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಜೂನಿಯರ್ ಕಾಲೇಜು ನೂತನ ಕಟ್ಟಡಕ್ಕೆ ಚಾಲನೆಯನ್ನೀಡಿ ವಿದ್ಯಾಕ್ಷೇತ್ರದಲ್ಲೊಂದು ಸಾಧನೆಗೈಯುವಂತಾಯಿತು ಎಂದು ಗೌ| ಕೋಶಾಧಿಕಾರಿ ಸುನಿಲ್ ಎಸ್.ಶೆಟ್ಟಿ ತಿಳಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here