Friday 26th, April 2024
canara news

ಬೋರಿವಲಿಯಲ್ಲಿ ಜರುಗಿಸಲ್ಪಟ್ಟ ಕನ್ನಡ ರಾಜ್ಯೋತ್ಸವ-ಶ್ರೀ ಸತ್ಯನಾರಾಯಣ ಮಹಾಪೂಜೆ

Published On : 19 Nov 2016   |  Reported By : Rons Bantwal


ಕನ್ನಡ ಮನಸ್ಸುಗಳ ಬೆಸೆಯುವ ಕೆಲಸವಾಗಲಿ:ರಂಗಪ್ಪ ಸಿ.ಗೌಡ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ನ.19: ಬಹುಬಾಷಾ, ಬಹುಸಂಸ್ಕøತಿಯ ನೆಲೆವೀಡಾದ ಕನ್ನಡ ನೆಲದ ಮನಸ್ಸುಗಳನ್ನು ಕದಕುವ ಶಕ್ತಿಗಳನ್ನು ಬಗ್ಗು ಬಡಿಯುತ್ತ, ನಾಡಿನ ಸರ್ವಾಂಗೀಣ ಅಭಿವೃದ್ದಿಗೆ, ಕನ್ನಡ ನೆಲದ ಶೀಮಂತ ಪರಂಪರೆಯನ್ನು ವಿಶ್ವಮಾನ್ಯಗೊಳಿಸಲು ಕನ್ನಡಿಗರು ಶ್ರಮಿಸುವ ಅಗತ್ಯವಿದೆ. ಜನತೆ ನಮಗೆ ಸಮಾಜವನ್ನು ಮುನ್ನಡೆಸಲು ನೀಡಿದ ಸದಾವಕಾಶ ಬಳಸಿಕೊಂಡು ಕಳೆದ ಸುಮಾರು ಹತ್ತಾರು ವರ್ಷಗಳಲ್ಲಿ ನಾವು ಈ ಪರಿಸರದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಶ್ರೀದೇವರ ಆಶೀರ್ವಾದ ಹಾಗೂ ದೈವಕ್ಯ ಯುಗಯೋಗಿ ಜಗದ್ಗುರು ಶ್ರೀ ಬಾಲಗಂಗಾಧರನಾಥೇಶ್ವರ ಮಹಾಗುರುಗಳ ಶುಭಾನುಗ್ರಹ ಗಳೊಂದಿಗೆ ಸಮರ್ಥವಾಗಿ ಕಾರ್ಯಕ್ರಮ ನಡೆಸಿ, ಹತ್ತನೇ ವರ್ಷಾಚರಣೆ ನಡಿಗೆಯತ್ತ ಸಾಗಿದ್ದೇವೆ. ಸ್ಥಳಿಯ ಸಮಗ್ರ ಜನತೆಯ, ಕನ್ನಡ ಮನಸ್ಸುಗಳನ್ನು ಬೆಸೆಯುವ ಕೆಲಸದೊಂದಿಗೆ, ಕನ್ನಡ ನಾಡು-ನುಡಿ, ಸಂಸ್ಕøತಿ ಕಲೆ ಹಾಗೂ ಸಾಮಾನ್ಯರ ಬದುಕನ್ನು ಹಸನಗೊಳಿಸುವ ನಿರಂತರವಾದ ನಮ್ಮ ಕಾರ್ಯಕ್ಕೆ ಸರ್ವರ ಸಹಯೋಗವಿದ್ದು ಆ ಮೂಲಕ ಸಾಮರಸ್ಯದ ಬದುಕಿಗೆ ಸಾಕ್ಷಿಯಾಗಿದ್ದೇವೆ ಎಂದು ಒಕ್ಕಲಿಗರ ಸಂಘ ಮಹಾರಾಷ್ಟ್ರ (ರಿ.) ಇದರ ಅಧ್ಯಕ್ಷ ರಂಗಪ್ಪ ಸಿ.ಗೌಡ ಹರ್ಷ ವ್ಯಕ್ತ ಪಡಿಸಿದರು.

ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ ಸ್ಥಾಪಿತ ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ಸಹಯೋಗದೊಂದಿಗೆ ಟಾಟಾ ಪವರ್ ಕನ್ನಡ ಬಳಗ ಬೋರಿವಲಿ ಪೂರ್ವಸಂಸ್ಥೆಯು ವಾರ್ಷಿಕವಾಗಿ ಆಯೋಜಿಸುತ್ತಿರುವ ಕನ್ನಡ ರಾಜ್ಯೋತ್ಸವ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಇಂದಿಲ್ಲಿ ನೆರವೇರಿಸಿತು.

ಬೊರಿವಲಿ ಪೂರ್ವದ ಮಾಗಠಾಣೆ ಡೆಪೆÇೀ ಸನಿಹದಲ್ಲಿ ದಶವಾರ್ಷಿಕ ಸಾರ್ವಜನಿಕ ಸತ್ಯನಾರಾಯಣ ಮಹಾಪೂಜೆ ಆಯೋಜಿತ್ತು. ಮಧ್ಯಾಹ್ನ ಗಣಹೋಮ, ಸಾಯಂಕಾಲ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಸಲ್ಪಟ್ಟಿತು. ಪುರೋಹಿತರಾದ ಸಂತೋಷ್ ಭಟ್ ಚಾರ್ಕೋಪ್ ಮತ್ತು ರಮೇಶ್ ಭಟ್ ಧಾರ್ಮಿಕ ವಿಧಿಗಳೊಂದಿಗೆ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಕೇಶವ ಗೌಡ ಮತ್ತು ಸುಶ್ಮಿತಾ ಕೇಶವ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಒಕ್ಕಲಿಗ ಸಂಘ ಮಹಾರಾಷ್ಟ್ರ ಮುಂಬಯಿ ಸಾರಥ್ಯದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಟಾಟಾ ಪವರ್ ಕನ್ನಡ ಬಳಗ ಅಧ್ಯಕ್ಷ ಗುಜ್ಜೇ ಗೌಡ, ಕಾರ್ಯದರ್ಶಿ ರಾಮಕೃಷ್ಣ ಎನ್.ಗೌಡ, ಉಪಾಧ್ಯಕ್ಷ ಕೃಷ್ಣೇ ಗೌಡ, ಯುವ ವಿಭಾಗದ ಸುರೇಶ್ ಗೌಡ, ಮಲ್ಲೇಶ್ ಗೌಡ ಸೇರಿದಂತೆ ಸಾವಿರಾರು ತುಳು-ಕನ್ನಡಿಗರು, ಮರಾಠಿ ಮತ್ತಿತರ ಸಮುದಾಯಗಳ ಭಕ್ತರು ಪಾಲ್ಗೊಂಡರು.

ಸ್ಥಾನೀಯ ಕ್ರೀಡಾ ಮೈದಾನದಲ್ಲಿ ನಡೆಸಲಾದ ಅನ್ನ ಸಂತರ್ಪಣೆಯಲ್ಲಿ ಸುಮಾರು ಹದಿನಾಲ್ಕು ಸಾವಿರ ಭಕ್ತರು ಪಾಲ್ಗೊಂಡಿದ್ದು ರಂಗಪ್ಪ ಗೌಡ ಅವರು ಪಾಕಶಾಲೆಯ ವ್ಯವಸ್ಥೆಗೆ ಚಾಲನೆಯನ್ನೀಡಿದರು. ಸಂಘದ ಮಹಿಳಾ ಮತ್ತು ಮುಖ್ಯಸ್ಥರು, ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶ್ರೀದೇವರ ಕೃಪೆಗೆ ಪಾತ್ರರಾದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here