Saturday 27th, April 2024
canara news

ಬೊಯಿಸರ್‍ನಲ್ಲಿ ಅಲಂಕೃತ ಪಲ್ಲಕ್ಕಿಯೊಂದಿಗೆ ಸಾಗುತ್ತ ಭಕ್ತರನ್ನರಸಿದ ಶ್ರೀ ವೆಂಕಟೇಶ್ವರ

Published On : 20 Nov 2016   |  Reported By : Rons Bantwal


ತಿರುಪತಿ ಶ್ರೀ ಪದ್ಮಾವತಿ ಶ್ರೀನಿವಾಸ ಮಂಗಲ ಮಹೋತ್ಸವ ಸಂಪನ್ನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.19: ಓಂ ಶ್ರೀ ಸಾಯಿ ಧಾಮ್ ಮಂದಿರ ಟ್ರಸ್ಟ್ ವಿರಾರ್ ಸಂಸ್ಥೆಯು ಶ್ರೀ ಪದ್ಮಾವತಿ ಶ್ರೀನಿವಾಸ ಮಂಗಳ ಮಹೋತ್ಸವ ಸಮಿತಿ ಬೊಯಿಸರ್ ಸಹಯೋಗದೊಂದಿಗೆ ತಿರುಮಲ ತಿರುಪತಿ ದೇವಸ್ಥಾನದಿಂದ ಚಿತ್ತೈಸಿದ ಶ್ರೀನಿವಾಸ ದೇವರೊಂದಿಗೆ ಇಂದಿಲ್ಲಿ ಶನಿವಾರ ಬೊಯಿಸರ್‍ನಲ್ಲಿ ಶ್ರೀ ವೆಂಕಟೇಶ್ವರ ವೈಭೋತ್ಸವ ನೆರವೇರಿಸಿತು.

ಶ್ರೀನಿವಾಸ ಕಲ್ಯಾಣೋತ್ಸವ ನಿಮಿತ್ತ ಪುಣ್ಯಾಧಿ ತಿರುಪತಿ ಬಾಲಾಜಿ ದೇವಸ್ಥಾನ ತಿರುಮಲ ಇಲ್ಲಿಂದ ಕಳೆದ ಶುಕ್ರವಾರ ತಡರಾತ್ರಿ ಬೊಯಿಸರ್‍ನ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ವಠಾರದ ಶ್ರೀ ರಾಮ ಮಂದಿರಕ್ಕೆ ಶ್ರೀಕ್ಷೇತ್ರ ತಿರುಪತಿಯಿಂದ ಚಿತ್ತೈಸಿದ ಶ್ರೀವೆಂಕಟೇಶ್ವರ ದೇವರನ್ನು ಅಪಾರ ಭಕ್ತಾಭಿಮಾನಿಗಳು ಶ್ರದ್ಧಾಪೂರ್ವಕವಾಗಿ ಪೂಜಿಸಿದರು.

ಇಂದು ಶನಿವಾರ ಮುಂಜಾನೆ ಸುಪ್ರಬಾತ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ದೇವರ ಉಪಾಸನೆ ನಡೆಸಿದ ಭಕ್ತರು ವೆಂಕಟೇಶ್ವರ ದೇವರ ಆರಾಧನೆಗೈದರು. ತಿರುಪತಿ ವೈಧಿಕವೃಂದವನ್ನೊಳಗೊಂಡು ತಿರುಪತಿ ದೇವಸ್ಥಾನದ ವಿಶೇಷ ಅಧಿಕಾರಿ ಶ್ರೀ ಪಿ.ಆರ್ ಅನಂತ ತೀರ್ಥ ಆಚಾರ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪೂಜಾಧಿಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಆಶೀರ್ವಚಿಸಿದರು.

ಬೊಯಿಸರ್ ಪಶ್ಚಿಮದಲ್ಲಿನ ಟಿಮಾ ಸಭಾಗೃಹದಿಂದ ಅಶ್ವದಳ, ಬೇತಳ, ಹುಲಿವೇಷ, ಭೂತಾರಾಧನಾ ನೃತ್ಯ, ಸತಾರ ಬ್ಯಾಂಡ್, ಕೇರಳದ ಕಾವಡಿ ನೃತ್ಯ, ಕೀಳುಕುದುರೆ, ಪಂಡರಪುರ ಭಜನೆ ಇತ್ಯಾದಿಗಳೊಂದಿಗೆ ವೈಭವೋಪೇತವಾಗಿ ಜೈಅಂಬೆ ರಥದಲ್ಲಿ ಅಲಂಕೃತ ಪಲ್ಲಕ್ಕಿಯೊಂದಿಗೆ ಶ್ರೀ ವೆಂಕಟೇಶ್ವರ ದೇವರನ್ನು ಚಿಕ್ಕುವಾಡಿ ಮೈದಾನಕ್ಕೆ ಭಕ್ತಿಪೂರ್ವಕವಾಗಿ ಬರಮಾಡಿ ಕೊಂಡು ಸಜ್ಜುಗೊಳಿಸಲಾಗಿದ್ದ ಧಾರ್ಮಿಕ ಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಶ್ರೀ ಪದ್ಮಾವತಿ ಶ್ರೀನಿವಾಸ ಮಂಗಳ ಮಹೋತ್ಸವ ನೆರವೇರಿಸಿದರು. ದೈವಿಕ ಉತ್ಸವದಲ್ಲಿ ಅಪಾರ ಸಂಖ್ಯೆಯ ಪದ್ಮಾವತಿ ದೇವಿ ಹಾಗೂ ಬಾಲಾಜಿ ಭಕ್ತರು ಭಕ್ತಾಧಿಗಳು ಪಾಲ್ಗೊಂಡು ದಿವ್ಯ ದರ್ಶನ ಪಡೆದು ತಿರುಪತಿ ಲಡ್ಡುಗಳನ್ನು ಪ್ರಸಾದ ರೂಪವಾಗಿ ಸ್ವೀಕರಿಸಿ ಶ್ರೀ ತಿರುಮಲ ವೇಕಟೇಶ್ವನ ಕೃಪೆಗೆ ಪಾತ್ರರಾದರು.

ಉತ್ಸವದಲ್ಲಿ ಬಿ.ಗೋಪಾಲ ಆಚಾರ್ಯ ಉಡುಪಿ ಇವರ ಧಾರ್ಮಿಕ ನಿರ್ದೇಶನದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮಗಳಲ್ಲಿ ಸಾಯಿ ಧಾಮ್ ಟ್ರಸ್ಟ್‍ನ ಪದಾಧಿಕಾರಿಗಳು, ಶ್ರೀ ಪದ್ಮಾವತಿ ಶ್ರೀನಿವಾಸ ಮಂಗಳ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ| ನಂದಕುಮಾರ್ ಎಸ್.ವರ್ತಕ್, ಪದಾಧಿಕಾರಿಗಳಾದ ವಿರಾರ್ ಶಂಕರ್ ಶೆಟ್ಟಿ, ಕೆ.ಭುಜಂಗ ಶೆಟ್ಟಿ ಬೊಯಿಸರ್, ಸತ್ಯ ಕೋಟ್ಯಾನ್, ರಘುರಾಮ ರೈ, ಅವಿನಾಶ್ ಚೂರಿ, ಶಿವಸೇನಾ ನೇತಾರರಾದ ಪ್ರಭಾಕರ ರಾವುಲ್, ಜಗದೀಶ ದೋಡಿ, ಉದ್ಯಮಿಗಳಾದ ಜಯೇಂದ್ರ ಠಾಕೂರ್, ಹರೀಶ್ ಶೆಟ್ಟಿ ವಸಾಯಿ, ಸಾಂತೂರು ಅರುಣ್ ಶೆಟ್ಟಿ, ಪ್ರವೀಣ್ ರಾವುತ್, ಗಂಧರ್ವ ಸುರೇಶ್ ಶೆಟ್ಟಿ, ಸಂಜಯ್ ಪಾಟೇಲ್, ರಘುರಾಮ ರೈ, ಮಂಜುನಾಥ ಬನ್ನೂರು, ತೋನ್ಸೆ ನವೀನ್ ಶೆಟ್ಟಿ, ಹರೀಶ್ ಶಾಂತಿ, ಉಷಾ ರೈ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶ್ರೀನಿವಾಸ ಕಲ್ಯಾಣೋತ್ಸವ ಧರ್ಮನಿಷ್ಠರಾಗಿ ನಡೆಸಿಕೊಟ್ಟರು. ಬಸ್ತಿ ಕವಿತಾ ಶೆಣೈ ಮಂಗಳೂರು ಬಳಗ ಭಕ್ತಿಗೀತಾಗುಂಜನ ಪ್ರಸ್ತುತಪಡಿಸಿದ್ದು ನಂದಿನಿ ರಾವ್ ಪುಣೆ ಹಿನ್ನಲೆ ಗಾಯನ ನೀಡಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here