Friday 26th, April 2024
canara news

ಕುಂದಾಪುರಕ್ಕೆ ರಾಷ್ಟ್ರೀಯ ಯುವ ಸಮ್ಮೇಳನೋತ್ಸೊವದ ಶಿಲುಬೆ ಯಾತ್ರೆ

Published On : 08 Dec 2016   |  Reported By : Bernard J Costa


ಕುಂದಾಪುರ, ಡಿ.8; ಭಾರತೀಯ ಕಥೋಲಿಕ್ ಯುವ ಸಂಚಾಲನೇಯ ರಾಷ್ಟ್ರೀಯ ಮಟ್ಟದ ಸಮಾವೇಷವು ಈ ವರ್ಷದಲ್ಲಿ ಮಂಗ್ಳೂರಿನಲ್ಲಿ ಜರುಗಲಿದೆ. ಅಂದು ಭಾರತದ ಎಲ್ಲಾ ರಾಜ್ಯಗಳ ಯುವಸಂಚಾಲನದ ಪ್ರತಿನಿಧಿಗಳು ಈ ಸಮಾವೇಷದಲ್ಲಿ ಭಾಗವಹಿಸುವರು.

1995 ರ ಕೇರಳದಲ್ಲಿ ನೆಡೆದ ಈ ಯುವ ಜನ ಸಮ್ಮೇಳನಕ್ಕೆ, ಭಾರತೀಯ ಕಥೋಲಿಕ್ ಧರ್ಮಾಧ್ಯಕ್ಷರ ಒಕ್ಕೂಟದಿಂದ, ಮಾನವಕುಲಕ್ಕಾಗಿ ಕ್ರಿಸ್ತರ ಪ್ರೀತಿಯ ಗುರುತು ಹಾಗೂ ಈ ಸಮಾವೇಷದ ಸಂಕೇತಕ್ಕಾಗಿ ನೀಡಿದ್ದು ಈ ಶಿಲುಬೆಯ ಪ್ರತೀತಿ. ಈ ಶಿಲುಭೆಯನ್ನು ‘ವಸಯ್’ಯ ಒಬ್ಬ ಕಲಾಕಾರನು ದಾನ ನೀಡಿದ್ದಾಗಿದೆ. ಈ ಶಿಲುಬೆ ಸುಮಾರು ನಾಲ್ಕು ಅಡಿಯದಾಗಿದ್ದು, ಶಿಲುಬೆಯಲ್ಲಿ ನೇತಾಡುವ ಏಸುವಿನ ದೇಹ ಮತ್ತು ಶಿಲುಬೆ ಒಂದೆ ಮರದ ತುಂಡಿನಿಂದ ಕೊರೆದದ್ದು ಈ ಶಿಲುಬೆಯ ವೀಶೆಷೆತೆಯಾಗಿದೆ.

ಪ್ರತಿ ವರ್ಷ ಒಂದೊಂದು ರಾಜ್ಯದಲ್ಲಿ ನೆಡೆಯುವ ಈ ಸಮಾವೇಷದ ಪೂರ್ವಭಾವಿ ಶಿಲುಬೆಯಾತ್ರೆಯಾಗಿರುತ್ತದೆ. ಈ ವರ್ಷ ಮಂಗ್ಳೂರಿನಲ್ಲಿ ‘ಕ್ರಿಸ್ತರ ಸ್ಪರ್ಶದ ಜೊತೆ, ಆತನ ಹಾದಿಯಲ್ಲಿ ನೆಡೆಯಲು’ ಎಂಬ ಧ್ಯೇಯದೊಂದಿಗೆ ಯುವ ಸಮಾವೇಷ ಜರುಗುವುದು, ಇದಕ್ಕಾಗಿ ನೆಡೆಯುವ ಈ ಶಿಲುಬೆಯಾತ್ರೆ ಎಪ್ರಿಲ್ 3 ರಂದು ಬೆಂಗಳೂರಿನಿಂದ ಆರಂಭಗೊಂಡು, ನಂತರ ಮಂಡ್ಯ, ಮೈಸೂರು, ಚಿಕ್ಕಮಂಗಳೂರು, ಬಳ್ಳಾರಿ, ಗುಲ್ಬರ್ಗಾ, ಬೆಳಗಾಂವಿ, ಕಾರವಾರ, ಶಿವಮೊಗ್ಗ, ಭದ್ರಾವತಿ, ಪುತ್ತುರೂ, ಬೆಳ್ತಗಂಡಿ, ಉಡುಪಿ ಹೀಗೆ ಸುಮಾರು 1800 ಕಿ.ಮಿ. ಯಾತ್ರೆ ಮಾಡಿ ಮಂಗಳವಾರದಂದು ಕುಂದಾಪುರಕ್ಕೆ ತಲುಪಿತು.

ಕುಂದಾಪುರ ವಲಯದ ಯುವ ಸಂಚಾಲನದ ನಿರ್ದೇಶಕ ಗಂಗೊಳ್ಳಿ ಚರ್ಚಿನ ಧರ್ಮಗುರುಗಳಾದ, ವಂ| ಆಲ್ಬರ್ಟ್ ಕ್ರಾಸ್ತಾ, ಸಂಚಾಲನದ ಸದಸ್ಯರೊಂದಿಗೆ ಉಡುಪಿಯಿಂದ ಯಾತ್ರೆ ಮೂಲಕ ತಂದ ಈ ಶಿಲುಬೆಯನ್ನು ಕುಂದಾಪುರ ರೋಜರಿ ಮಾತೆಯ ಧರ್ಮಕೇಂದ್ರದ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಸಂತ ಮೇರಿಸ್ ವಿಧ್ಯಾಮಂಡಳಿಯ ಮೈದಾನದಲ್ಲಿ ಭಕ್ತಿ ಪೂರ್ವಕವಾಗಿ ಸ್ವೀಕರಿಸಿದರು.

ಅಲ್ಲಿಂದ ಕಾಲ್ನಡಿಗೆಯ ಮೂಲಕ, ಗಾಯನ, ಪೆÇೀಪ್‍ರ ಬಾವುಟ, ಅಲಂಕ್ರಿತ ಕೋಡೆಗಳೊಂದಿಗೆ. ಶಿಲುಬೆಯನ್ನು ಅಲಂಕ್ರಿತ ವಾಹನದಲ್ಲಿಟ್ಟು, ಚರ್ಚ್ ರಸ್ತೆ ಮುಖಾಂತರ ಮೆರವಣಿಗೆಯಲ್ಲಿ ಕುಂದಪುರ ಚರ್ಚಿಗೆ ತೆರಳಿ ಅಲ್ಲಿ ಪ್ರಾರ್ಥನ ವಿಧಿಗಳನ್ನು ನೆಡಸಲಾಯಿತು.

ಈ ಪ್ರಾರ್ಥನ ವಿಧಿಯಲ್ಲಿ ಸಹಾಯಕ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಕಾಲೇಜಿನ ಪ್ರಾಂಶುಪಾಲ ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಬಸ್ರೂರು ಚರ್ಚಿನ ಧರ್ಮಗುರು ವಂ|ವಿಶಾಲ್ ಲೋಬೊ, ಹಲವಾರು ಧರ್ಮಭಗಿನಿಯರು, ವಲಯದ ಎಲ್ಲಾ ಚರ್ಚುಗಳ ಐ.ಸಿ.ವಾಯ್.ಎಮ್. ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಹಿರಿಯರು, ಕಿರಿಯರೆಂದು ಹಲವಾರು ಭಕ್ತಾಧಿಗಳು ಈ ಪ್ರಾರ್ಥನ ವಿಧಿಯಲ್ಲಿ ಭಾಗವಹಿಸಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here