Friday 26th, April 2024
canara news

ಖಾಲ್ಸಾ ಕಾಲೇಜು ಮುಂಬಯಿ ಕನ್ನಡ ಪ್ರೇಮಿ ಮಂಡಳಿಯ ವಾರ್ಷಿಕ ಸ್ನೇಹಕೂಟ

Published On : 13 Dec 2016


ಕನ್ನಡ ಪ್ರೇಮಿ ಸದಸ್ಯರ ಬತ್ತದ ಪ್ರೀತಿ ಅವಿಸ್ಮರಣೀಯ : ಡಾ| ಸುನೀತಾ ಎಂ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.11: ಕನ್ನಡ ಪ್ರೇಮಿ ಮಂಡಳಿ ಖಾಲ್ಸಾ ಕಾಲೇಜು ಮಾಟುಂಗಾ ಮುಬಯಿ ಇದರ ಹಳೆ ವಿದ್ಯಾಥಿರ್üಗಳ ವಾರ್ಷಿಕ ಸ್ನೇಹಕೂಟವು ಇಂದಿಲ್ಲಿ ಆದಿತ್ಯವಾರ ಸಂಜೆ ಮಾಟುಂಗದಲ್ಲಿನ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಡಾ| ಸುನೀತಾ ಎಂ.ಶೆಟ್ಟಿ ಅಧ್ಯಕ್ಷತೆಯಲ್ಲಿ ನೇರವೇರಿತು.

ಮೂರವರೆ ದಶಕಗಳ ಕಾಲ ಕನ್ನಡ ಪ್ರೇಮಿ ಮಂಡಳಿಯ ಸದಸ್ಯರು ನೀಡಿದ ಪ್ರೀತಿ ನಾನೆಂದೂ ಮರೆಯಲಾರೆ. ಈ ಕಾಲಾವಧಿ ನನ್ನ ಜೀವನದಲ್ಲಿ ಮಹತ್ತರ ತಿರುವನ್ನು ತಂದ ಕಾಲ. ನಮ್ಮ ವಿದ್ಯಾಥಿರ್sಗಳು ಅಂತರ್‍ಕಾಲೇಜು ಪ್ರತಿಭಾ ಸ್ಪರ್ಧೆಗಳಾದ ಭಾಷಣ, ಸಮೂಹಗೀತೆ, ಏಕಾ ಪಾತ್ರಾಭಿನಯ, ಛದ್ಮವೇಷಗಳಲ್ಲಿ ಭಾಗವಹಿಸಿ ವೈಯುಕ್ತಿಕ ಮತ್ತು ಚಲಿತ ಫಲಕಗಳನ್ನು ಗೆದ್ದು ತಂದು ಕಾಲೇಜಿಗೆ ಮತ್ತು ಮಂಡಳಿಗೆ ಕೀರ್ತಿ ತಂದಿದೆ. ಮುಂಬಯಿ ವಿಶ್ವ ವಿದ್ಯಾಲಯ ಅಯೋಜಿಸಿದ ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಹೃದಯ ದೇಗುಲ ಎಂಬ ನಾಟಕಕ್ಕೆ ಪ್ರಥಮ ಬಹುಮಾನ ಪಡೆದು ಕನ್ನಡ ಪ್ರೇಮಿ ಮಂಡಳಿಯ ಹೆಸರನ್ನು ಅಜರಾಮರ ಗೊಳಿಸಿದೆ. ಕಳೆದ ಮೂರು ದಶಕಗಳಲ್ಲಿ ಮಂಡಳಿ ನಡೆಸಿದ ಕಾರ್ಯ ಚಟುವಟಿಕೆಗಳ ಸುಮಾರು 26 ಪುಟಗಳ ಪೆÇೀಟೋ ಅಲ್ಬಮ್ ಶೀರ್ಷಿಕೆಯೊಂದಿಗೆ ಕಾಲೇಜು ಲೈಬ್ರೆರಿಯಲ್ಲಿ ಉಪಲಬ್ಧವಿದೆ. ಇಂದು ಸೂರತ್, ದೆಹಲಿ, ಪೂನಾ ಮತ್ತು ಮಂಗಳೂರು, ಗುಜರಾತ್‍ನಿಂದ ನಮ್ಮ ಮೇಲಿನ ಪ್ರೀತಿಯಿಂದ ನೀವೆಲ್ಲ ಬಂದಿದ್ದೀರಿ. ನಿಮ್ಮ ಪ್ರೀತಿ ಸದಾ ನಮ್ಮೊಡನೆ ಇರಲಿ. ಪ್ರತಿವರ್ಷ ನಾವೂ ಒಂದೆಡೆ ಸೇರಿ ಪ್ರೀತಿ ಸದ್ಬಾವನೆಯನ್ನು ಹಂಚಿಕೊಳ್ಳೋಣ ಎಂದÀು ಅಧ್ಯಕ್ಷೀಯ ನುಡಿಗಳನ್ನಾಡಿ ಸುನೀತಾ ಶೆಟ್ಟಿ ತಿಳಿಸಿದರು.

ನನ್ನ ಅಜ್ಜ ಡಾ| ಅಂಬೇಡ್ಕರ್ ಅವರಿಗೆ ಸಂಸ್ಕೃತ ಕಲಿಸುತ್ತಿದ್ದರು. ಖಾಲ್ಸಾ ಕಾಲೇಜಿಗೆ ಅಡಿಗಲ್ಲು ಹಾಕಿದ ಅಂಬೇಡ್ಕರ್ ಅವರು ನನ್ನ ಅಜ್ಜನನ್ನು ಲೆಕ್ಟರರ್ ಆಗಿ ನೇಮಿಸಿದ್ದರು. ಅವರೇ ಈ ಸಂಸ್ಥೆಗೆ ಕನ್ನಡ ಪ್ರೇಮಿ ಮಂಡಳಿ ಎಂದು ಹೆಸರಿಟ್ಟರು ಎಂದು ಅತಿಥಿsಯಾಗಿದ್ದ ಡಾ| ಬಿ.ಆರ್ ಮಂಜುನಾಥ ತಿಳಿಸಿದರು.

ವೇದಿಕೆಯಲ್ಲಿ ಸಂತೋಷ್ ಶೆಟ್ಟಿ, ರಾಧಾಕೃಷ್ಣ ರೈ ಅವರು ಉಪಸ್ಥಿತರಿದ್ದು, ಹಳೆ ವಿದ್ಯಾಥಿರ್üಗಳಾದ ವಿಕ್ರಾಂತ್ ಉರ್ವಾಲ್, ಅಶೋಕ್ ಶೆಟ್ಟಿ, ನಾಗೇಶ್ ಕುಂದರ್, ಸತ್ಯ ಶೆಟ್ಟಿ, ಅರ್ಚನಾ ಹೆಗ್ಡೆ, ಎನ್.ಎಂ ರಮೇಶ್, ಕೆ.ಎಸ್.ಜಿ ಶೆಟ್ಟಿ, ಸಂತೋಷ್ ಶೆಟ್ಟಿ, ರಾಜೀವ್ ಶೆಟ್ಟಿ ಮತ್ತಿತರ ಸದಸ್ಯರ ನೇಕರು ಉಪಸ್ಥಿತರಿದ್ದು ಸುನೀತಾ ಶೆಟ್ಟಿ ಅವರು ಪುಷ್ಪಗುಚ್ಛ ನೀಡಿ ಗೌರವಿಸಿದರು. ಅನೇಕ ವಿದ್ಯಾಥಿರ್üಗಳು ಪಾಲ್ಗೊಂಡು ಕಾಲೇಜು ದಿನಗಳ ಬದುಕಿನ ವಿಚಾರಗಳನ್ನು ತಿಳಿಸಿ ಭವಿಷ್ಯತ್ತಿನ ಸಾಂಘಿಕತೆಯ ಅವಶ್ಯಕತೆಯನ್ನು ವ್ಯಕ್ತ ಪಡಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರವೀಂದ್ರ ಸುವರ್ಣ, ಶಾಂತಿ ರೊನಾಲ್ಡ್ ಒಲಿವೆರಾ, ತಿಥಿs ಪಿ.ಶ್ರೀಪಾದ್, ತಿಥಿsಕ್ಷಾ ಪಿ.ಶ್ರೀಪಾದ್, ಸುಜಾತಾ ರಾವ್, ಸಾಯಿದೀಪ್ ಕುಂದರ್ ಸಂಗೀತ ಕಾರ್ಯಕ್ರಮ ನೀಡಿ ಮನೋರಂಜನೆ ನೀಡಿದರು. ತಿಥಿs ಶ್ರೀಪಾದ್, ತಿಥಿsಕ್ಷಾ ಶ್ರೀಪಾದ್,ಪ್ರಾರ್ಥನೆಯನ್ನಾಡಿದರು. ಮುಖ್ಯ ಸಂಘಟಕ ಎನ್.ಎಂ ರಮೇಶ್ ಕಳೆದ ಸಭೆಯ ಮಾಹಿತಿ ಹಾಗೂ ವಸಂತ ರೈ ಲೆಕ್ಕಪತ್ರಗಳ ಬಗ್ಗೆ ತಿಳಿಸಿದರು. ನಿವೃತ್ತ ಸಹಾಯಕ ಗ್ರಂಥಪಾಲ ಹರೀಶ್ ಜಿ.ಪೂಜಾರಿ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here