Friday 26th, April 2024
canara news

ಡಿ.18:ಆದಮಾರು ಮಠದಲ್ಲಿ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದ 19ನೇ ವಾರ್ಷಿಕ ಸಾಮಾಜಿಕ ಮಹಾಗಣಪತಿ ಯಾಗ ಹಾಗೂ ಲಕ್ಷಿ ಮೀ ನಾರಾಯಣ ಪೂಜೆ

Published On : 14 Dec 2016   |  Reported By : Rons Bantwal


ಮುಂಬಯಿ, ಡಿ.13: ನಗರದ ಧಾರ್ಮಿಕ ಸಾಮಾಜಿಕ ಸಂಸ್ಥೆ ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ 19ನೇ ವಾರ್ಷಿಕ ಉತ್ಸವದ ಅಂಗವಾಗಿ ಬರುವ ಡಿಸೆಂಬರ್ 18 ರವಿವಾರ ಅಂಧೇರಿ ಪಶ್ಚಿಮದ ಎಸ್.ವಿ ರೋಡ್‍ನಲ್ಲಿರುವ ಆದಮಾರು ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಬೆಳಿಗ್ಗೆ 7.00 ಗಂಟೆಯಿಂದ ಅಷ್ಠೋತ್ತರ ಸಹಸ್ರ ಮೋದಕ ಸಾಮೂಹಿಕ ಮಹಾಗಣಪತಿ ಯಾಗವೂ ಹಾಗೂ ವಿಷ್ಣುಸಹಸ್ರನಾಮ ಪೂಜೆ, ಶ್ರೀ ಲಕ್ಷ್ಮೀನಾರಾಯಣ ಮಹಾಪೂಜೆಗಳು ಜರುಗಲಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, 1.00 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ. ಕಾರಣಾಂತರಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಭೆ, ಸನ್ಮಾನ ಇತ್ಯಾದಿಗಳನ್ನು ಈ ವರ್ಷದ ಮಟ್ಟಿಗೆ ಮೊಟಕು ಗೊಳಿಸಲಾಗಿದ್ದು ಕೇವಲ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಸುವಂತೆ ಸಂಸ್ಥೆಯು ನಿರ್ಧರಿಸಿದೆ.

ಮಧ್ವೇಶ ಭಜನಾ ಮಂಡಳಿ, ಮಧ್ವೇಶ ಭಜನಾ ಮಂಡಳಿ, ವಾಗ್ದೇವಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ವೇದ ಮಂತ್ರಘೋಷ, ವಾದ್ಯ ಹಿಮ್ಮೇಳನಗಳು, 18 ವರ್ಷಗಳಿಂದ ನಡೆದು ಬಂದಂತೆ ನಡೆಯಲಿದೆ. ಜೀವನದಲ್ಲಿ ಭಕ್ತರಿಗೆ ಬರುವ ಎಲ್ಲಾ ರೀತಿಯ ಸಂಕಷ್ಟ ಗೃಹಾಚಾರ ದೋಷ, ರೇಗಾದಿ ಉಪದ್ರವಗಳನ್ನು ನಾಶಪಡಿಸಿ ಉತ್ತಮ ಸಂಪತ್ತು ಶಾಂತಿ ಸುಖಭಾಗ್ಯಗಳನ್ನು ನೀಡುವ ದೇಶಕ್ಕೆ ಕಲ್ಯಾಣಕಾರಿಯಾದ ಈ ಉತ್ತಮ ಯಾಗ ಹಾಗೂ ಪೂಜೆಗೆ ಎಲ್ಲಾ ಭಕ್ತರು ಆಗಮಿಸಿ, ತನಮನಧನಗಳಿಂದ ಸಹಕರಿಸಲು ಶ್ರೀ ಮಹಾಗಣಪತಿ ದೇವರು ಹಾಗೂ ಶ್ರೀ ಕೃಷ್ಣ ವಿಠಲ ದೇವರ ಅನುಗ್ರಹವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ವತಿಯಿಂದ ಆದರ ಪೂರ್ವಕವಾಗಿ ಆಮಂತ್ರಿಸಲಾಗಿದೆ.

ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿ ಸುಮ ವಿ.ಭಟ್, ಕೋಶಾಧಿಕಾರಿ ಅವಿನಾಶ್ ಶಾಸ್ತ್ರೀ, ಉಪಾಧ್ಯಕ್ಷರುಗಳಾದ ವಿರಾರ್ ಶಂಕರ್ ಶೆಟ್ಟಿ, ಗೋಪಾಲ್ ಎಸ್.ಪುತ್ರನ್, ವಿಶ್ವಸ್ಥರಾದ ರಮೇಶ್ ಡಿ.ಸಾವಂತ್, ಅಶೋಕ ಕುಮಾರ್ ಶೆಟ್ಟಿ ಪೆರ್ಮುದೆ, ಕಳತ್ತೂರು ವಿಶ್ವನಾಥ ಶೆಟ್ಟಿ, ಸುರೇಂದ್ರ ವಿ.ಪೂಜಾರಿ, ಹರೀಶ್ ಎಸ್.ಶೆಟ್ಟಿ, ಮಹಿಳಾ ವಿಭಾಗದ ಮುಖ್ಯಸ್ಥೆ ಸುನಂದ ಉಪಾಧ್ಯಾಯ, ಕಾರ್ಯದರ್ಶಿ ಸುಶೀಲಾ ದೇವಾಡಿಗ ಸಂಸ್ಥೆಯ ಜೊತೆ ಕಾರ್ಯದರ್ಶಿಗಳಾದ ಕುಕ್ಕೇಹಳ್ಳಿ ಸದಾನಂದ ಶೆಟ್ಟಿ, ಕೈರಬೆಟ್ಟು ರವೀಂದ್ರ ಕರ್ಕೇರ ಮುಂತಾದವರು ಶ್ರಮಿಸುತ್ತಿದ್ದಾರೆ.

ಸಂಸ್ಥೆಯ ಕಾರ್ಯಕಾರಿ ಮಂಡಳಿಯಲ್ಲಿ ಗುರುಮೂರ್ತಿ ಶಶಿಧರ್ ಬಿ.ಶೆಟ್ಟಿ, ಸುಧೀರ್ ಅಮೀನ್, ಸುಧಾಕರ ಶೆಟ್ಟಿ, ವಿಶ್ವನಾಥ ಸಿ.ಶೆಟ್ಟಿ, ದಿನೇಶ ಕರ್ಕೇರ, ಹ್ಯಾರಿ ಸಿಕ್ವೇರಾ, ವಾದಿರಾಜ ಕುಬೇರ್, ಅಶೋಕ ಪಕ್ಕಳ, ಶೇಖರ ಸಸಿಹಿತ್ಲು, ಪದ್ಮನಾಭ ಸಸಿಹಿತ್ಲು, ದಿನೇಶ್ ಕುಲಾಲ್, ಜಗನ್ನಾಥ ಪುತ್ರನ್, ಜಗನ್ನಾಥ ಕಾಂಚನ್, ವಸುಂಧರ ಶೆಟ್ಟಿ, ರಮಾನಾಥ ಕೋಟ್ಯಾನ್, ಭರತ್ ಶೆಟ್ಟಿ, ಗೋಪಾಲ ನಾೈಕ್,ರಾಜು ಪೂಜಾರಿ, ನವೀನ್ ಪೂಜಾರಿ, ಸತೀಶ ಪೂಜಾರಿ, ಮಾಧವ ಕೋಟ್ಯಾನ್, ಸುರೇಶ ಗಿಡ್‍ಬಿಡ ಭೀಮ್ ಶಿಂಧ ಮುಂತಾದವರು ಸಹಕರಿಸುತ್ತಿದ್ದಾರೆ. ಮಹಿಳಾ ಸದಸ್ಯೆಯರಾಗಿ ಛಾಯಾ ರಾವ್, ವಿಜಯಾ ರಾವ್, ಶ್ಯಾಮಲಾ ಶಾಸ್ತ್ರಿ, ಜಯಂತಿ ಉಳ್ಳಾಲ್, ಸತ್ಯಭಾಮಾ ನಿಡ್ವಣ್ಣಾಯ, ಲಕ್ಷ್ಮೀ ಕೋಟ್ಯಾನ್, ಯಶೋದಾ ಆರ್.ಪೂಜಾರಿ, ಅಖೀಲಾ ಸುರೇಶ್, ಅಮೃತ ಶೆಟ್ಟಿ ಮುಂತಾದವರು ಸಹಕರಿಸುತ್ತಿದ್ದಾರೆ.

ಮುಂಬಯಿ ಮಹಾನಗರದ ಎಲ್ಲಾ ಸಂಘ ಸಂಸ್ಥೆಯ ಅಭಿಮಾನಿಗಳನ್ನು ಪ್ರತಿವರ್ಷ ಸೇವೆ ಸಲ್ಲಿಸುವ ಸದ್ಭಕ್ತರನ್ನು ಈ ಬಾರಿಯೂ ಭಾಗವಹಿಸುವಂತೆ ಅಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಮತ್ತು ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here