Saturday 27th, April 2024
canara news

21ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕನ್ನಡ - ತುಳು ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಸಾಧಕ ಡಾ. ಕೆ. ಚಿನ್ನಪ್ಪ ಗೌಡ

Published On : 06 Jan 2017   |  Reported By : Rons Bantwal


ಜನಪದ ಸಾಹಿತ್ಯ ಹಾಗೂ ಸಾಂಸ್ಕøತಿಕ ಅಧ್ಯಯನ ಸಹಿತ ವಿಶೇಷವಾಗಿ, ಹಳೆಗನ್ನಡ ಮತ್ತು ಆಧುನಿಕ ಕನ್ನಡ, ತುಳು ಭಾಷಾ ಅಧ್ಯಯನ ನಡೆಸಿರುವ ಡಾ. ಕೆ. ಚಿನ್ನಪ್ಪ ಗೌಡ ಜನವರಿ, 27, 28, 29- 2017ರಂದು ಉಜಿರೆಯಲ್ಲಿ ಜರಗಲಿರುವ 21ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭೂತಾರಾಧನೆ – ಕೆಲವು ಅಧ್ಯಯನಗಳು, ಜಾಲಾಟ, ಭೂತಾರಾಧನೆ – ಜನಪದೀಯ ಅಧ್ಯಯನ, ಸಂಸ್ಕøತಿಸಿರಿ ಇತ್ಯಾದಿ ಸಾಹಿತ್ಯಿಕ ಕೆಲಸಗಳನ್ನೂ ಮಾಡಿರುವ ಇವರು ಅನೇಕ ಪುಸ್ತಕಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸೆಮಿನಾರ್‍ಗಳಲ್ಲಿ ಹಾಗೂ ಬೇಸಿಗೆ ಕಾಲದ ಶಾಲಾ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ವಿಸ್ತರಿಸಿದ್ದಾರೆ. ಟರ್ಕಿ, ಫಿನ್ಲೇಂಡ್, ಜರ್ಮನಿ, ಜಪಾನ್ ಇತ್ಯಾದಿ ದೇಶಗಳ ವಿಶ್ವವಿದ್ಯಾಲಯಗಳಿಗೆ ಭೇಟಿಯಿತ್ತು ಸಂಶೋಧನೆ ಅಧ್ಯಯನಗಳನ್ನು ನಡೆಸಿರುವರು.

 

ಬಂಟ್ವಾಳ ತಾಲೂಕಿನ ವಿಟ್ಲ ಕಸಬ ಗ್ರಾಮದ ಕೂಡೂರಿನ ಕೃಷಿ ಕುಟುಂಬದಲ್ಲಿ ಜನಿಸಿ ತನ್ನ ಸ್ವಂತ ಪ್ರತಿಭೆಯೊಂದಿಗೆ ವಿದ್ಯಾಕ್ಷೇತ್ರ, ವಿದ್ವತ್‍ಕ್ಷೇತ್ರ, ಜಾನಪದ, ಯಕ್ಷಗಾನ ಹಾಗೂ ಸಾಹಿತ್ಯದ ಎಲ್ಲಾ ನೆಲೆಗಳಲ್ಲಿ ಸಾಧನೆಗಳನ್ನು ಗೈದ ಡಾ. ಚಿನ್ನಪ್ಪ ಗೌಡರು ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಮಾರ್ಗದರ್ಶನ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳನ, ಮೂಡಬಿದ್ರೆಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಯಕ್ಷಗಾನ ಸಾಹಿತ್ಯ ಸಮ್ಮೇಳನಗಳು, ಆಳ್ವಾಸ್ ನುಡಿಸಿರಿ, ಮಂಗಳೂರು ವಿಶ್ವವಿದ್ಯಾನಿಲಯದ ಮತ್ತು ಕರ್ನಾಟಕ ಸರಕಾರ, ಜಿಲ್ಲಾಡಳಿತದ ಅನೇಕ ಸಾಹಿತ್ಯ ಸಾಂಸ್ಕøತಿಕ ಭೂಮಿಕೆಗಳು ಹೀಗೆ ಹತ್ತುಹಲವು ರಾಜ್ಯಮಟ್ಟದ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಮಾರ್ಗದರ್ಶಕರಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದುದು.

ಇವರ ಸಾಧನೆಗೆ ಅನೇಕ ಪ್ರಶಸ್ತಿಗಳೂ ಲಭಿಸಿವೆ. ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ವಾಸುದೇವ ಭೂಪಾಲಮ್ ಎಂಡೊಮೆಂಟ್ ಪ್ರಶಸ್ತಿ ಡಾ. ಶಿವರಾಮ ಕಾರಂತ ಎಂಡೋಮೆಂಟ್ ಪ್ರಶಸ್ತಿ, ಕು.ಶಿ. ಜಾನಪದ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂದೇಶ ಪುರಸ್ಕಾರ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ ಪ್ರಮುಖವಾದವುಗಳಾಗಿವೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಆಗಿ ಸೇವೆಗೈದಿದ್ದ ಇವರು ವಿದ್ಯಾರ್ಥಿ ಕ್ಷೇಮನಿಧಿ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ಸೇವೆಸಲ್ಲಿಸಿರುವರು.

ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ನಮ್ಮೀ ಜಿಲ್ಲೆಯ ಸಾರಸ್ವತ ಲೋಕದ ಓರ್ವ ಹಿರಿಯ ಸಾಧಕ ಶ್ರೇಷ್ಠ ಎನ್ನುವುದು ನಮ್ಮೆಲ್ಲರ ಅಭಿಮಾನದ ಸಂಗತಿ.

ಜನವರಿ 27, 28, 29ರಂದು 3 ದಿನಗಳ ಕಾಲ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ದನ ದೇವಸ್ಥಾನದ ಆವರಣದಲ್ಲಿ ಸಮ್ಮೇಳನದ ತಯಾರಿ ಪೂಜ್ಯ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಉಜಿರೆ ಜನಾರ್ದನ ದೇವಳದ ಧರ್ಮದರ್ಶಿಗಳಾದ ಶ್ರೀ ವಿಜಯ ರಾಘವ ಪಡುವೆಟ್ನಾಯ ಅವರ ಅಧ್ಯಕ್ಷತೆಯಲ್ಲಿ ಪ್ರೊ. ಪ್ರಭಾಕರ, ಶ್ರೀ ಡಿ. ಹರ್ಷೇಂದ್ರ ಕುಮಾರ್, ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಯಶೋವರ್ಮ ಇನ್ನೂ ಹಲವಾರು ಗಣ್ಯರನ್ನೊಳಗೊಂಡ ಸ್ವಾಗತ ಸಮಿತಿಯ ಉಸ್ತುವಾರಿಯಲ್ಲಿ ಕೆಲಸಕಾರ್ಯಗಳು ಈಗಾಗಲೇ ಭರದಿಂದ ಸಾಗುತ್ತಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here