Friday 26th, April 2024
canara news

ಲೇಡಿಗೋಶನ್ ಹೊಸ ಕಟ್ಟಡ 3 ತಿಂಗಳಲ್ಲಿ ಪೂರ್ಣ

Published On : 07 Jan 2017   |  Reported By : Canaranews Network


ಮಂಗಳೂರು : ಲೇಡಿಗೋಶನ್ ಆಸ್ಪತ್ರೆ ಆವರಣದಲ್ಲಿ ಒಎನ್ ಜಿಸಿ- ಎಂಆರ್ಪಿಎಲ್ ಮತ್ತು ರಾಜ್ಯ ಸರಕಾರದ ನೆರವಿನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು, ಇದೇ 2017 ಮಾರ್ಚ್ 23ರಂದು ಉದ್ಘಾಟನೆಗೊಂಡು ಮಾರ್ಚ್ ಅಂತ್ಯದ ವೇಳೆಗೆ ಆಸ್ಪತ್ರೆ ಹೊಸ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಸಂಸದ ಎಂ. ವೀರಪ್ಪ ಮೊಯಿಲಿ ತಿಳಿಸಿದರು. ಬುಧವಾರ ಆಸ್ಪತ್ರೆಗೆ ತೆರಳಿ ನೂತನ ಕಟ್ಟಡದ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

ಲೇಡಿಗೋಶನ್ ಆಸ್ಪತ್ರೆ ಕಟ್ಟಡಕ್ಕೆ ಒಎನ್ಜಿಸಿ-ಎಂಆರ್ಪಿಎಲ್ ವತಿಯಿಂದ 21.7 ಕೋಟಿ ರೂ. ಅನುದಾನ ಮಂಜೂರಾಗಿದೆ. 18.43 ಕೋಟಿ ರೂ. ಗಳಿಗೆ ಟೆಂಡರ್ ಕರೆಯಲಾಗಿದ್ದು, ಈಗಾಗಲೇ 17 ಕೋಟಿ ರೂ. ಖರ್ಚಾಗಿದೆ. ಉಳಿಕೆ ಹಣದಲ್ಲಿ 5ನೇ ಮಾಳಿಗೆ ನಿರ್ಮಿಸಲಾಗುವುದು ಎಂದರು. ಮುಂದಿನ 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮಾ. 23ರಂದು ಉದ್ಘಾಟನೆ ನೆರವೇರಿಸಲು ರಾಜ್ಯದ ಆರೋಗ್ಯ ಸಚಿವರು ದಿನಾಂಕ ನಿಗದಿ ಪಡಿಸಿದ್ದಾರೆ ಎಂದರು.ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂ ಡೆಂಟ್ ಡಾ| ಸವಿತಾ, ಎಂಆರ್ಪಿಎಲ್ನ ಎಚ್ಆರ್ ವಿಭಾಗದ ಹರೀಶ್ ಬಾಳಿಗಾ, ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಎಂಜಿನಿಯರ್ ರಾಜೇಂದ್ರ ಕಲಾºವಿ, ಕರ್ನಾಟಕ ಆರೋಗ್ಯ ವ್ಯವಸ್ಥೆ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಎಂಜಿನಿಯರ್ ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here