Friday 26th, April 2024
canara news

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ದಶಮಾನೋತ್ಸವ ಸಂಭ್ರಮ-ವಿಶೇಷ ಸಭೆ

Published On : 08 Jan 2017   |  Reported By : Rons Bantwal


ಕಲಾವಿದರ ಅಶೋತ್ತರಗಳನ್ನು ಪರಿಗಣಿಸಬೇಕಾಗಿದೆ : ಐಕಳ ಹರೀಶ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.07: ಮಹಾನಗರ ಮುಂಬಯಿಯಲ್ಲಿ ಕನ್ನಡಿಗ ಕಲಾವಿದರ ಒಕ್ಕೂಟದ ಅವಶ್ಯಕತೆ ಮನಗಂಡು ಹತ್ತುವರ್ಷಗಳ ಹಿಂದೆ ರೂಪಿಸಲ್ಪಟ್ಟ ಕನ್ನಡ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಸ್ಥೆಯು ದಶಮಾನೋತ್ಸವದ ಹೊಸ್ತಿಲಲ್ಲಿದ್ದು, ಬರುವ ಫೆ.25ರ ಶನಿವಾರ ಬಂಟರಭವನದಲ್ಲಿ ನಡೆಸಲುದ್ದೇಶಿಸಿದ ದಶಮಾನೋತ್ಸವ ಉದ್ಘಾಟನಾ ಸಮಾರಂಭದ ಪೂರ್ವಸಿದ್ಧತಾ ಸಭೆಯು ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಮಾಲೋಚನಾ ಸಭಾಗೃಹದಲ್ಲಿ ಪರಿಷತ್ತುನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟಿತು.

 

ಕನ್ನಡಿಗ ಕಲಾವಿದರ ಸಂಸ್ಥೆಯಲ್ಲಿ ಕೇವಲ ಬೆಳವಣಿಕೆಯಷ್ಟಲ್ಲ ಸಾವಿರಕ್ಕೂ ಮಿಕ್ಕಿದ ಕಲಾವಿದ ಸದಸ್ಯರುಗಳಿದ್ದಾರೆ. ವಿದ್ವಾತ್ ಭರಿತ ಕಲಾವಿದರಿಗೆ ವೇದಿಕೆಗಳಿಲ್ಲ. ಧನ ಸಾಮರ್ಥ್ಯದ ಕೊರತೆಯೂ ಕಲಾವಿದ ಹಿಂಜರಿಕೆಗೆ ಕಾರಣ ಇರಬಹುದು. ಎಷ್ಟೋ ಪ್ರಬುದ್ಧ, ಶ್ರೀಮಂತ ಹಿರಿಯ, ಪ್ರತಿಭಾನ್ವಿತ ಕಲಾವಿದರು ಎಲೆಯ ಮರೆಯಲ್ಲಿದ್ದು ಅವರನ್ನು ಗುರುತಿಸುವ ಸಾಧನೆಯಲ್ಲಿದೆ. ಕಲಾವಿದರ ಬಗ್ಗೆ ಗೌರವ ಮೂಡಿಸುವಲ್ಲಿ ಈ ಸಂಸ್ಥೆ ಸಕ್ರೀಯವಾಗಿದ್ದರೂ ಮಹಾರಾಷ್ಟ್ರದಲ್ಲಿನ ಕಲಾವಿದರಿಗೆ ಕಲಾವಿದರೇ ಗುರುತಿಸುತ್ತಿಲ್ಲದಿರುವುದೇ ದುರದೃಷ್ಟಕರ. ಆದುದರಿಂದ ಕಲಾವಿದರಿಗೆ ಕ್ಷೇಮಾ ನಿಧಿ ಪೆÇ್ರೀತ್ಸಾಹ. ಮಹಾರಾಷ್ಟ್ರ ಕಲಾವಿದರಿಗೆ ಮಾಶಾಸನ ಸಿಗಬೇಕು ಎನ್ನುವ ಉದ್ದೇಶದಿಂದ ಸಕ್ರೀಯವಾಗಿರುವ ಈ ಸಂಸ್ಥೆ ಸದ್ಯ ದಶಉತ್ಸವಕ್ಕೆ ಸಜ್ಜಾಗಿದೆ ಎಂದು ದಶಮಾನೋತ್ಸವ ಬಗ್ಗೆ ಮಾಹಿತಿ ನೀಡಿದರು. ಹಾಗೂ ದಶಮಾನೋತ್ಸವ ಸಮಿತಿಯ ಪದಾಧಿಕಾರಿಗಳ ಯಾದಿಯನ್ನು ಪ್ರಕಟಿಸಿದರು.

ಪರಿಷತ್ತುನ ಉಪಾಧ್ಯಕ್ಷ ಕಮಲಾಕ್ಷ ಸರಾಫ್, ಗೌ| ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ಪರಿಷತ್ತುನ ಕಲಾವಿದರ ಮಾಹಿತಿ ಗ್ರಂಥ-ಕೈಪಿಡಿ ಕಾರ್ಯಾಧ್ಯಕ್ಷ ಜಿ.ಟಿ ಆಚಾರ್ಯ ಮತ್ತಿತರ ಪದಾಧಿಕಾರಿಗಳು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಮೋಗವೀರ ಬ್ಯಾಂಕ್‍ನ ಉಪಾಧ್ಯಕ್ಷ ಸುರೇಶ್ ಆರ್.ಕಾಂಚನ್, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಬಂಟ್ಸ್ ಸಂಘ ಮುಂಬಯಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಅಧ್ಯಕ್ಷ ಸುರೇಂದ್ರಕುಮಾರ್ ಅವರು ಆಯ್ಕೆಯಾಗಿ ಉಪಸ್ಥಿತ ಪದಾಧಿಕಾರಿಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು.

ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಹಾಗೂ ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿÀ ಮಾತನಾಡಿ ನಮ್ಮಲ್ಲಿನ ಸಭೆ ಸಮಾರಂಭಗಳಲ್ಲಿ ಪ್ರತಿಭಾನ್ವಿತ ಎಳೆಯರಿಗೆ ಭಾಗವಹಿಸುವ ಅವಕಾಶ ಕೊಡುವಲ್ಲಿ ಪರಿಷತ್ತು ಪ್ರಯತ್ನಿಸಬೇಕು. ಊರಿಂದ ಬರುವವರು ಇಲ್ಲಿ ಸಮಿತಿ ಮಾಡುವುದು ಬರೇ ಹಣ ಸಂಗ್ರಹಕ್ಕಾಗಿ ಹೊರತು ನಮ್ಮನ್ನು ಪೆÇ್ರೀತ್ಸಾಹಿಸಲು ಅಲ್ಲ. ಆದರೆ ನಾನು ತಾಯ್ನಾಡಿಗೆ ಹೋದಾಗ ಯಾವುದೇ ಅವರು ನಮಗೆ ಯಾವುದೇ ಪ್ರಾತಿನಿಧ್ಯ ನೀಡುವುದಿಲ್ಲ. ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಲ್ಲಿ ಒಳ್ಳೆಯ ಕಲಾವಿದರು ಇದ್ದಾರೆ. ಅವರನ್ನು ಗುರುತಿಸಿ ಬೆಳೆಸುವ ಕಾರ್ಯ ನಮ್ಮಿಂದಾಗಬೇಕು. ಪರಿಷತ್ತು ಉದ್ದೇಶಿತ ಕಲಾವಿದರ ನಿಧಿ ಸಂಗ್ರಹದ 30 ಲಕ್ಷ ರೂಪಾಯಿ ಕಾರ್ಯ ಅನುಕರಣೀಯ ಮತ್ತು ಶ್ಲಾಘನೀಯ. ಕಲಾವಿದರಿಗೆ ಸಹಾಯ ಮಾಡುವ ಪರಿಷತ್ತಿನ ಈ ಯೋಜನೆ ನಾವೆಲ್ಲರೂ ಸಾಂಘಿಕವಾಗಿ ಒಗ್ಗೂಡಿಸಿ ಕಲಾವಿದರಿಗಾಗಿ ಒದಗಿಸÀುವಲ್ಲಿ ಯಶಕಾಣೋಣ ಎಂದÀು ಕರೆಯಿತ್ತರು.

ಕಲಾವಿದರ ಪರಿಷತ್ತು ಸ್ಥಾಪಿಸಿ ಕಲಾವಿದರ ಶ್ರೇಯಸ್ಸಿಗಾಗಿ ದುಡಿಯುವ ಈ ಸಂಸ್ಥೆ ನಾಡಿಗೆನೇ ಹೆಮ್ಮೆ ತರುವಂತದ್ದು. ನಾವೆಲ್ಲರೂ ಓಗ್ಗೂಡಿ ದಶಮಾನೋತ್ಸವದ ಕಾರ್ಯ ವೈಭವಯುತವಾಗಿ ಆಚರಿಸಿ ಉದ್ದೇಶವನ್ನು ಅರ್ಥಪೂರ್ಣವಾಗಿಸೋಣ ಎಂದು ದಶಮಾನೋತ್ಸವ ಸಮಿತಿ ಅಧ್ಯಕ್ಷ, ಕಚ್ಚೂರು ಶ್ರೀನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ ತಿಳಿಸಿದರು.

ಸುರೇಶ್ ಕಾಂಚನ್ ಮಾತನಾಡಿ ಕಲಾರಾಧನೆ ನಮ್ಮ ಆದ್ಯ ಕರ್ತವ್ಯ. ನನಗೆ ಸ್ಥಾನಮಾನ ನೀಡದಿದ್ದರೂ ಕಲಾ ಪೆÇೀಷಕನಾಗಿ ಶ್ರಮಿಸುವೆ ಎಂದರು.

ಧರ್ಮಪಾಲ್ ದೇವಾಡಿಗ ಮಾತನಾಡಿ ಕಲಾವಿದರ ಪರಿಷತ್ತು ಕಲಾವಿದರ ರಕ್ಷಣೆ, ಪೆÇೀಷಣೆ, ಏಳಿಗೆ ಮತ್ತು ಸರ್ವೋಭಿವೃದ್ಧಿಗಾಗಿ ಶ್ರಮಿಸುವಲ್ಲಿ ಮುಂದೆ ಬಂದಿರುವುದು ಸ್ತುತ್ಯರ್ಹ. ನಾನೂ ತಮ್ಮೆಲ್ಲರನ್ನೊಳಗೊಂಡು ತನ್ನಿಂದಾದ ಸಹಯೋಗವನ್ನಿತ್ತು ಕಾರ್ಯಕ್ರಮದ ಯಶಸ್ವಿಗೆ ಪ್ರಯತ್ನಿಸುತ್ತೇನೆ ಎಂದರು.

ಹಿರಿಯ ಅರ್ಥಧಾರಿ ಕೆ.ಕೆ ಶೆಟ್ಟಿ, ಕರ್ನೂರು ಮೋಹನ್ ರೈ, ಪದ್ಮನಾಭ ಸಸಿಹಿತ್ಲು, ಪ್ರೇಮನಾಥ ಸುವರ್ಣ, ಸುಮಂಗಳ ಶೆಟ್ಟಿ, ವಿಜಯಲಕ್ಷಿ ್ಮೀ ಪೂಜಾರಿ, ತಾರಾ ಆರ್.ಬಂಗೇರ, ತೋನ್ಸೆ ಸಂಜೀವ ಪೂಜಾರಿ, ರವಿರಾಜ್ ಕಲ್ಯಾಣ್ಪುರ್, ಚಂದ್ರಾವತಿ ದೇವಾಡಿಗ, ಸಾ.ದಯಾ, ಗಣೇಶ್ ಎರ್ಮಾಳ್, ಜಯಕರ ಡಿ.ಪೂಜಾರಿ, ಗಣೇಶ್ ಕುಮಾರ್, ಸುಹಾನಿ ಶೆಟ್ಟಿ, ಸನ್ನಿಧಿ ಶೆಟ್ಟಿ, ಮುಂಡ್ಕೂರು ಪ್ರೇಮನಾಥ್, ವಿೂನಾಕ್ಷೀ ಆರ್.ಶ್ರೀಯಾನ್ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದು ತಮ್ಮ ಸಲಹೆ-ಸೂಚನೆಗಳನ್ನಿತ್ತರು.

ಕಲಾವಿದ ಸದಸ್ಯರ ಕಾಳಜಿ ಮತ್ತು ಪೆÇ್ರೀತ್ಸಾಹವಾಗಿ ದಶಮಾನೋತ್ಸವವನ್ನು ಅರ್ಥಪೂರ್ಣವಾಗಿ ನಡೆಸುವ ಚಿಂತನೆ ನಡೆಸಲಾಗಿ ಸಾಂಸ್ಕೃತಿಕ ಉತ್ಸವ, ವೈಭವೊಪೇತ ಮತ್ತು ಆದರ್ಶ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ನಿರ್ಧಾರಿಸಲಾಗಿದ್ದು ಗೌ| ಪ್ರ| ಕಾರ್ಯದರ್ಶಿ ನಾವುಂದ ರಾಜು ಶ್ರೀಯಾನ್ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here