Friday 26th, April 2024
canara news

ಬೀಜಾಡಿ: ಕನ್ನಡ ಭುವನೇಶ್ವರಿ ರಥಯಾತ್ರೆಗೆ ಸ್ವಾಗತ

Published On : 12 Jan 2017   |  Reported By : Bernard J Costa


ಕುಂದಾಪುರ: ಪ್ರಪಂಚದ ಅತ್ಯಂತ ಪುರಾತನ ಭಾಷೆಗಳಲ್ಲಿ ಕನ್ನಡ ಒಂದು. ಕನ್ನಡ ಭಾಷೆಯನ್ನು ಊಳಿಸಿ ಬೆಳಸುವ ಕೆಲಸಗಳಾಗಬೇಕು. ಕನ್ನಡ ಅತ್ಯಂತ ಪುರಾತ ಭಾಷೆ ಎಂದು ಎಂದು ಹಿರಿಯ ಸಾಹಿತಿ, ಜಿಲ್ಲಾ ಕಸಾಪ ಪೂರ್ವಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.

ಅವರು ಬುಧವಾರ ಬ್ರಹ್ಮಾವರದಲ್ಲಿ ಜ.13ರಿಂದ 15ರವರೆಗೆ ನಡೆಯಲಿರುವ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಕನ್ನಡದ ಕಂಪನ್ನು ಎಲ್ಲಡೆ ಪಸರಿಸಲು ಪ್ರಥಮ ಬಾರಿಗೆ ಸಂಚರಿಸುತ್ತಿರುವ ಕನ್ನಡ ರಥಕ್ಕೆ ಬೀಜಾಡಿಯಲ್ಲಿ ಭವ್ಯ ಸ್ವಾಗತ ನೀಡಿ ಮಾತನಾಡಿದರು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮ್ಮೇಳನದ ಬಗ್ಗೆ ಮಾತನಾಡಿ,ಸಾಂಸ್ಕøತಿಕ, ಶೈಕ್ಷಣಿಕ, ಸಾಮಾಜಿಕ ಕೇತ್ರದಲ್ಲಿ ಸೇವೆಗೈದು ವಿಂಶತಿ ಉತ್ಸವದ ಆಚರಣೆಯಲ್ಲಿರುವ ಬೀಜಾಡಿ ಮಿತ್ರ ಸಂಗಮ ಸಂಸ್ಥೆಯನ್ನು ಸಮ್ಮೇಳನದಲ್ಲಿ ಪುರಸ್ಕರಿಲಾಗುವುದು ಎಂದರು. ಬೀಜಾಡಿ ಗೋಪಾಡಿ ಮಿತ್ರ ಸಂಗಮದ ಗೌರವಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಕನ್ನಡ ಮಾತೆ ಭುವನೇಶ್ವರಿಗೆ ಮಾಲಾರ್ಪಣೆ ಮಾಡಿ ಶುಭ ಹಾರೈಸಿದರು.

ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ಸೂರಾಲು ನಾರಾಯಣ ಮಡಿ, ತಾಲೂಕು ಕಸಾಪ ಅಧ್ಯಕ್ಷ ಡಾ.ಸುಬ್ರಮಣ್ಯ ಭಟ್, ಕಾರ್ಯದರ್ಶಿ ಡಾ.ಕಿಶೋರ್ ಕುಮಾರ್ ಶೆಟ್ಟಿ, ಪ್ರಕಾಶ್ ಹೆಬ್ಬಾರ್, ಕೋಟೇಶ್ವರ ಹೋಬಳಿ ಘಟಕದ ಅಶೋಕ ತೆಕ್ಕಟ್ಟೆ, ಕಾರ್ಯದರ್ಶಿ ರವಿ ಕಟ್ಕೆರೆ, ತಾಲೂಕು ಕಸಾಪ ನಿಕಟ ಪೂರ್ವಧ್ಯಕ್ಷ ನಾರಾಯಣ ಖಾರ್ವಿ,ಪ್ರಶಾಂತ್ ಶೆಟ್ಟಿ, ಬೀಜಾಡಿ ಗೋಪಾಡಿ ಮಿತ್ರ ಸಂಗಮ ಅಧ್ಯಕ್ಷ ಅನೂಪ್ ಕುಮಾರ್ ಬಿ.ಆರ್, ಉಪಾಧ್ಯಕ್ಷ ಗಿರೀಶ್ ಬೀಜಾಡಿ, ಚಂದ್ರ.ಬಿಎನ್, ಶ್ರೀಕಾಂತ್ ಭಟ್, ನಾರಾಯಣ ಭಂಡಾರಿ, ರಾಜೇಶ್ ಆಚಾರ್ ಗೋಪಾಡಿ, ವಿನಯ ಹೆಬ್ಬಾರ್, ಐಸಿರಿ ಎಂಟರ್‍ಪ್ರೈಸಸ್‍ನ ಮಾಲಿಕರಾದ ಸಂತೋಷ್ ದೇವಾಡಿಗ, ದಿನೇಶ ದೇವಾಡಿಗ, ಗೋಪಾಡಿ ಚಂದನ ಯುವಕ ಮಂಡಲದ ಗೋಪಾಲ ಮಡಿವಾಳ, ಬೀಜಾಡಿ-ಗೋಪಾಡಿ ರಿಕ್ಷಾ ಚಾಲಕರ ದಿನೇಶ್, ಅನಿಲ್, ಅಶೋಕ ಪೂಜಾರಿ ಮೊದಲಾದವರೂ ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here