Friday 26th, April 2024
canara news

ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವತಿಯಿಂದ

Published On : 17 Jan 2017   |  Reported By : Rons Bantwal


ನೆರೆವೇರಿದ ಮಕರ ಸಂಕ್ರಾಂತಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

ಮುಂಬಯಿ, ಜ.17: ಸಯಾನ್ ಪೂರ್ವದಲ್ಲಿನ ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಗೋಕುಲ ಮಂದಿರದಲ್ಲಿನ ಶ್ರೀ ಗೋಪಾಲಕೃಷ್ಣ ದೇವರನ್ನು ಇತ್ತೀಚಿಗೆ ನೆರೂಲ್ ಅಲ್ಲಿರುವ ಆಶ್ರಯದ ಬಾಲಾಲಯದಲ್ಲಿ ಪ್ರತಿಷ್ಠಾಪಿಸಿರುವುದರಿಂದ ಈ ಬಾರಿ ಮಕರ ಸಂಕ್ರಾಂತಿಯ ಪರ್ವಕಾಲವಾದ ಕಳೆದ ಶನಿವಾರ ಸಂಜೆ ಉಭಯ ಸಂಸ್ಥೆಗಳ ಸಹಯೋಗದೊಂದಿಗೆ `ಆಶ್ರಯ' ದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ವೇದಿಕೆಯಲ್ಲಿ ಪುಷ್ಪಾಲಂಕರಿತ ಮಂಟಪದಲ್ಲಿ ಶ್ರೀ ಸತ್ಯನಾರಾಯಣ ದೇವರ ಪ್ರತಿಷ್ಠಾಪನೆಗೈದು ವೇದಮೂ ರ್ತಿ ದಿನೇಶ್ ಉಪರ್ಣ ಹಾಗೂ ಮುಚ್ಚೂರು ಹರಿ ಭಟ್ ಅವರ ನೇತೃತ್ವದಲ್ಲಿ ಪ್ರಾರ್ಥನೆ ಹಾಗೂ ಸೇವಾಥಿರ್üಗಳ ಸಾಮೂಹಿಕ ಸಂಕಲ್ಪದೊಂದಿಗೆ ಪೂಜಾವಿಧಿಗಳು ಸಾಂಗವಾಗಿ ನೆರವೇರಿದವು. ಬಿಎಸ್‍ಕೆಬಿಎ ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್ ಹಾಗೂ ಆಶಾ ಭಟ್ ದಂಪತಿ ಯಜಮಾನತ್ವ ವಹಿಸಿದ್ದರು.

ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳ, ಶೈಲಿನಿ ರಾವ್, ಗೌಅರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಜತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್, ಗುರುರಾಜ್ ಭಟ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿಯ ಕೃಷ್ಣ ಆಚಾರ್ಯ, ಕಾರ್ಯದರ್ಶಿ ಎ. ಎಸ್ ರಾವ್ ಹಾಗೂ ಉಭಯ ಸಂಸ್ಥೆಗಳ ಕಾರ್ಯಕಾರೀ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗೋಕುಲ ಕಲಾವೃಂದ ಭಜನಾ ಮಂಡಳಿಯು ವಲಯದ ಭಜನಾ ಮಂಡಳಿಗಳ ಕೂಡುವಿಕೆಯಿಂದ `ಹರಿದಾಸ ವಿರಚಿತ ಬಾಲಕೃಷ್ಣನ ಲೀಲೆ ಹಾಗೂ ವರ್ಣನೆ'ಗಳ ದೇವರನಾಮಗಳ ಭಜನಾ ಕಾರ್ಯಕ್ರಮವನ್ನು ಆಯೋಜಿಸಲ್ಪಟ್ಟಿತ್ತು.

ಸಾಮೂಹಿಕ ಭಜನಾ ಕಾರ್ಯಕ್ರಮದಲ್ಲಿ, ಗೋಕುಲ ಕಲಾವೃಂದ ಭಜನಾ ಮಂಡಳಿ, ಗೋಪಾಲಕೃಷ್ಣ ಭಜನಾ ಮಂಡಳಿ, ವಿಠಲ ಭಜನಾ ಮಂಡಳಿ,ಶ್ರೀಕೃಷ್ಣ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ಶಾರದಾ ಭಜನಾ ಮಂಡಳಿ ಮತ್ತು ಗೋಕುಲ ಬಾಲಕಲಾವೃಂದ ಭಜನಾ ಮಂಡಳಿಗಳ ಸುಮಾರು 70 ಸದಸ್ಯರು ಪಾಲ್ಗೊಂಡಿದ್ದರು. ತಬಲಾದಲ್ಲಿ ಜನಾರ್ದನ್ ಸಾಲಿಯಾನ್ ಹಾಗೂ ಹಾರ್ಮೋನಿಯಂನಲ್ಲಿ ವಿಜಯ ಆಚಾರ್ಯ ಸಹಕರಿಸಿದರು. ಪ್ರೇಮಾ ಎಸ್. ರಾವ್ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

ಸಂಘದ ಮಹಿಳಾ ವಿಭಾಗದವರಿಂದ `ಅರಸಿನ ಕುಂಕುಮ' ಹಾಗೂ ಎಳ್ಳುಂಡೆ ವಿತರಣೆಯಾಯಿತು. ಶ್ರೀ ದೇವರಿಗೆ ಮಂಗಳಾರತಿಯಾದ ನಂತರ ದಿನೇಶ್ ಉಪರ್ಣರವರು ಪ್ರಾರ್ಥನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ಮಹತ್ವವನ್ನು ತಿಳಿಸುತ್ತಾ `ವರ್ಷಾರಂಭ ಉತ್ತರಾಯಣ ಪುಣ್ಯಕಾಲದಲ್ಲಿ ಬಾಲಾಲಯದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಭಕ್ತಿಶ್ರದ್ಧಾಪೂರ್ವಕವಾಗಿ ಆಚರಿಸಿದ್ದೇವೆ. ಶ್ರೀ ಭಗವದನುಗ್ರಹದಿಂದ ಗೋಕುಲದ ಪುನರ್ ನಿರ್ಮಾಣ ಕಾರ್ಯವು ನಿರ್ವಿಘ್ನವಾಗಿ ನೆರವೇರಿ ಅತಿಶೀಘ್ರದಲ್ಲಿ ನೂತನ ದೇವಾಲಯದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠೆಯಾಗಲಿ' ಎಂದು ಹಾರೈಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೂರಾರು ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here