Saturday 27th, April 2024
canara news

ಬೆಂಗಳೂರು ಬಿಲ್ಲವರ ಭವನದ ಸಂಕುಲದಲ್ಲಿ ಭಾರತ್ ಬ್ಯಾಂಕ್ ವಿಸ್ತಾರಿತ ಶಾಖೆ ಸೇವಾರಂಭ

Published On : 20 Jan 2017   |  Reported By : Rons Bantwal


ಸೇವಾ ತೃಪ್ತ ಗ್ರಾಹಕರಿಂದ ಬಿಸಿಬಿ ಘನತೆ ಹೆಚ್ಚಿದೆ : ಎಂ.ವೇದಕುಮಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಬೆಂಗಳೂರು, ಜ.17: ನಮ್ಮ ಹಾಗೂ ಗ್ರಾಹಕರನೇಕರ ಆಶಯದ ಮೇರೆಗೆ ಜಯ ಸುವರ್ಣರ ಧುರೀಣತ್ವದ ಭಾರತ್ ಬ್ಯಾಂಕ್‍ನ ವಿಸ್ತಾರಿತ ಶಾಖೆಯು ಸ್ವಸಮುದಾಯದ ಸಂಕೀರ್ಣದಲ್ಲೇ ಸೇವಾರಂಭಿಸಿರುವು ದು ಸಂತಸ ತಂದಿದೆ. ಭಾರತ್ ಬ್ಯಾಂಕ್ ಬಿಲ್ಲವರ ಕೀರ್ತಿಯಾಗಿದ್ದು ಇದು ಸಮಗ್ರ ಬಿಲ್ಲವರ ಅಭಿಮಾನವಾಗಿದೆ. ಶೀಘ್ರವೇ ವಿಸ್ತಾರಿತ ಶಾಖೆಯಿಂದ ಪ್ರಧಾನ ಶಾಖೆಯಾಗಿ ರೂಪುಗೊಳ್ಳಲಿ. ಸೇವಾ ತೃಪ್ತ ಗ್ರಾಹಕರೇ ಬ್ಯಾಂಕ್‍ನ ಘನತೆ ಹೆಚ್ಚಿಸಿರುತ್ತಾರೆ. ಸರ್ವರ ಸಹಕಾರದಿಂದ ಬ್ಯಾಂಕ್ ಭವಿಷ್ಯತ್ತಿನಲ್ಲಿ ರಾಷ್ಟ್ರವ್ಯಾಪಿ ಪಸರಿಸಿ ಸರ್ವ ಜನತೆಯ ಹಣಕಾಸು ಸ್ಪಂದನೆಗೆ ಪೂರಕವಾಗಲಿ. ಅಂತೆಯೇ ನಾವೆಲ್ಲರೂ ಒಗ್ಗೂಡಿ ಭಾರತ್ ಬ್ಯಾಂಕ್‍ನ್ನು ರಾಷ್ಟ್ರದ ಬೃಹತ್ ಬ್ಯಾಂಕ್ ಆಗಿಸೋಣ ಎಂದು ಬಿಲ್ಲವರ ಅಸೋಶಿಯೇಶನ್ ಬೆಂಗಳೂರು ಅಧ್ಯಕ್ಷ ಎಂ.ವೇದಕುಮಾರ್ ಆಶಯ ವ್ಯಕ್ತಪಡಿದರು.

ಭಾರತ ರಾಷ್ಟ್ರದ ಸಹಕಾರಿ ರಂಗದ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬ ಯಿ) ಲಿಮಿಟೆಡ್ ತನ್ನ ಬೆಂಗಳೂರು ಕೆ.ಹೆಚ್ ರೋಡ್ ಶಾಖೆಯ ವಿಸ್ತಾರಿತ ಶಾಖೆಯನ್ನು ಇಂದಿಲ್ಲಿ ಗುರುವಾರ ಪೂರ್ವಾಹ್ನ ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿನ ಬಿಲ್ಲವರ ಭವನದ ಸಂಕುಲದಲ್ಲಿ ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಸೇವಾರ್ಪಣೆ ಗೊಳಿಸಿ ಎಂ.ವೇದಕುಮಾರ್ ಆಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಬಿಲ್ಲವರ ಅಸೋಶಿಯೇಶನ್ ಬೆಂಗಳೂರು ಅಧ್ಯಕ್ಷ ಎಂ.ವೇದಕುಮಾರ್ ಉಪಸ್ಥಿತರಿದ್ದು, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ರಿಬ್ಬನ್ ಬಿಡಿಸಿ ಶಾಖೆಯನ್ನು ಉದ್ಘಾಟಿಸಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ. ಸಾಲಿಯಾನ್ ಎಟಿಎಂ ಮತ್ತು ಲಾಕರ್ ಸೇವೆ ಹಾಗೂ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನೀಡಿ ಶುಭಕೋರಿದರು.

ಸಮಾರಂಭದಲ್ಲಿ ಗೌರವ್ವಾನಿತ ಅತಿಥಿüಗಳಾಗಿ ಡಾ| ಭುಜಂಗ ಶೆಟ್ಟಿ, ಡಾ| ನರೇನ್ ಶೆಟ್ಟಿ, ಬಿಲ್ಲವರ ಅಸೋಶಿಯೇಶನ್ ಬೆಂಗಳೂರು ಇದರ ಪದಾಧಿಕಾರಿಗಳಾದ ಭಾಸ್ಕರ್ ಪೂಜಾರಿ, ಉದಯ ಕುಮಾರ್, ಶಾರದಾ ಕೃಷ್ಣ, ವಸಂತ್ ಬಂಗೇರ, ಭಾಸ್ಕರ್ ಸಿ.ಅಮೀನ್, ಬ್ಯಾಂಕ್‍ನ ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನೀಲ್, ಕೇಶವ ಪೂಜಾರಿ, ಉದ್ಯಮಿಗಳಾದ ವಾಚಾ ಬಿಲ್ಲವ, ರಮೇಶ್ ಬಿಲ್ಲವ, ಕೆ.ರಾಜ್‍ಕುಮಾರ್, ಹರೀಶ್ ಮೂಲ್ಕಿ, ವಿ.ಎಸ್ ಹಳ್ಳಿಕೆರೆ, ದಿಲೀಪ್ ಮೂಲ್ಕಿ, ಶಿಕ್ಷಕ ರಾಮಕೃಷ್ಣ ನಾಯಕ್ ಹಾಗೂ ಬ್ಯಾಂಕ್‍ನ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಹಾಗೂ ಉಪ ಪ್ರಧಾನ ಪ್ರಬಂಧಕ ಬಾಲಕೃಷ್ಣ ಎಸ್.ಕರ್ಕೇರ, ಹಿರಿಯ ಪ್ರಬಂಧಕರುಗಳಾದ ಸತೀಶ್ ಪಿ.ಪೂಜಾರಿ, ಉದಯ ಎಂ.ಹಳೆಯಂಗಡಿ, ನೂತನ ಶಾಖೆಯ ಮುಖ್ಯಸ್ಥ ರವಿಶಂಕರ್ ಎನ್.ಕರ್ಕೇರ, ಸಹಾಯಕ ಪ್ರಬಂಧಕ ಅಜಿತ್‍ಕುಮಾರ್ ಎನ್.ಪೂಜಾರಿ, ಲತೀಶ್ ಎನ್.ಶೆಟ್ಟಿ, ಪೂಜಾ ಪಿ.ಸಾಲ್ಯಾನ್ ಮತ್ತು ಅವಿನಾಶ್ ಎ.ಪೂಜಾರಿ ಉಪಸ್ಥಿತರಿದ್ದು ಅವರಿಗೆ ಹಾಗೂ ಅತಿಥಿüಗಳಿಗೆ ಪುಷ್ಫಗುಪ್ಚವನ್ನೀಡಿ ಶುಭಾರೈಸಿದರು.

ನಮ್ಮ ಪರಿಸರದ ಆಥಿರ್üಕ ವ್ಯವಸ್ಥೆಗೆ ರಾಷ್ಟ್ರೀಯ ಗುರುತರ ಭಾರತ್ ಬ್ಯಾಂಕ್‍ನಂತಹ ಸಹಕಾರಿ ಪಥಸಂಸ್ಥೆಯ ಅಗತ್ಯವಿತ್ತು ಅದು ಇಂದು ರೂಪುಗೊಂಡಿದೆ. ಈ ಪ್ರದೇಶದ ಸುತ್ತಮುತ್ತಲೂ ಕನಿಷ್ಟ 45,000 ಜನರು ವಾಸವಾಗಿದ್ದು ಅವರಲ್ಲಿ ಹೆಚ್ಚಿನವರು ವಿದ್ಯಾವಂತರೂ, ಮಧ್ಯಮವರ್ಗವರೂ ಇದ್ದು ನೌಕರಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಅವರೆಲ್ಲರ ಬೇಡಿಕೆಗೆ ಈ ಬ್ಯಾಂಕ್ ಸಹಕಾರಿ ಆಗಲಿದೆ ಎನ್ನುವ ಆಶಯ ನಮ್ಮದು. ಅವರೆಲ್ಲರ ಅನುಕೂಲಕರ ಸೇವೆಗೆ ಈ ಬ್ಯಾಂಕ್ ಸ್ಪಂದಿಸಲಿ ಎಂದು ಮೀನಾಕ್ಷೀ ಮಾಲ್‍ನ ಕಾರ್ಯಾಧ್ಯಕ್ಷ ಯು.ಬಿ ವೆಂಕಟೇಶ್ ಆಶಯ ವ್ಯಕ್ತ ಪಡಿಸಿದರು.

ಬಿಸಿಬಿಗೆ ಬೆಂಗಳೂರುನಲ್ಲಿ ಒಳ್ಳೆಯ ಭವಿಷ್ಯವಿದೆ. ಸ್ಥಾನೀಯ ಜನತೆಗೆ ಸಕಾಲಿಕವಾಗಿ ಸ್ಪಂದಿಸಿ ಎಲ್ಲರ ಸರ್ವೋನ್ನತಿಗೆ ಈ ಬ್ಯಾಂಕ್ ವರವಾಗಲಿ ಎಂದು ಮೀನಾಕ್ಷಿ ಮಂದಿರದ ಧರ್ಮದರ್ಶಿ ಎನ್.ಸ್ವರೂಪ್ ಕುಮಾರ್ ಶುಭಾರೈಸಿದರು.

ಶಿವಯೋಗಿ ಹಳ್ಳಿಕೆರೆ, ರಶ್ಮೀ ಬಾಲಕೃಷ್ಣ, ವಿಮಲಾ ಪೂಜಾರಿ, ಸೂರ್ಯನಾರಾಯಣ ಅಡಿಗ, ಕೇಶವ ಪೂಜಾರಿ, ಎನ್.ಎಂ ಸನೀಲ್ ಮಾತನಾಡಿ ಶುಭಾರೈಸಿದರು.

ನವೀನ್ ಶಾಂತಿ ಕುದ್ರೋಳಿ ತಮ್ಮ ಪೌರೋಹಿತ್ಯದಲ್ಲಿ ವಾಸ್ತುಹೋಮ, ವಾಸ್ತುಬಲಿ, ಪುಣ್ಯಾವಚನ, ನವಗ್ರಹಪೂಜೆ, ಪೂಜೆ, ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ದ್ವಾರಪೂಜೆ ನೆರವೇರಿಸಿ ಅನುಗ್ರಹಿಸಿದರು. ಅಭಿಷೇಕ್ ಶಾಂತಿ ಮತ್ತು ಪುರುಷೋತ್ತಮ ಶಾಂತಿ ತೀರ್ಥಪ್ರಸಾದ ವಿತರಿಸಿದರು. ರಮಾನಂದ ಅಮೀನ್ ಮತ್ತು ದಾಕ್ಷಾಯಿಣಿ ರಮಾನಂದ್ ಹಾಗೂ ಸುಜ್ಞೇಶ್ ಪಿ.ಇಡ್ಯಾ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಬ್ಯಾಂಕ್‍ನ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಹಾಗೂ ಉಪ ಪ್ರಧಾನ ಪ್ರಬಂಧಕ ಬಾಲಕೃಷ್ಣ ಎಸ್.ಕರ್ಕೇರ, ಹಿರಿಯ ಪ್ರಬಂಧಕರುಗಳಾದ ಸತೀಶ್ ಪಿ.ಪೂಜಾರಿ, ಉದಯ ಎಂ.ಹಳೆಯಂಗಡಿ, ಬ್ಯಾಂಕ್‍ನ ನಗರದಲ್ಲಿನ ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ರವೀಂದ್ರ ಡಿ.ಕುಂದರ್, ಮುರಳೀಧರ್ ವಿ.ಕೋಟ್ಯಾನ್, ರವಿ ಕುಮಾರ್, ಅಭಿವೃದ್ಧಿ ವಿಭಾಗದ ಸುನೀಲ್ ಎ.ಗುಜರನ್, ವಿಜಯ ಪಾಲನ್, ಅವೀಶ್ ಪೂಜಾರಿ, ಭಾಸ್ಕರ್ ಸರಪಾಡಿ ಮತ್ತಿತರರು ಹಾಜರಿದ್ದು ಶಾಖೆಯ ಉನ್ನತಿಗೆ ಶುಭ ಕೋರಿದರು.

ಅಸೋಸಿಯೇಶನ್‍ನ ಬ್ರಹ್ಮಶ್ರೀ ನಾರಾಯಣ ಮಂದಿರದಲ್ಲಿ ಪೂಜೆ ನೆರವೇರಿಸಿ ಶಾಖಾ ಶುಭಾರಂಭಕ್ಕೆ ಚಾಲನೆಯನ್ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ನೂರಾರು ಗ್ರಾಹಕರು, ಷೇರುದಾರರು, ಹಿತೈಷಿಗಳು ಆಗಮಿಸಿ ನೂತನ ಶಾಖೆಯ ಶ್ರೇಯೋಭಿವೃದ್ಧಿಗೆ ಶುಭ ಕೋರಿದರು. ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧÀಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿ ಸೇವಾ ವೈಖರಿಯನ್ನು ಪ್ರಸ್ತಾಪಿಸಿದರು. ರವಿಶಂಕರ್ ಎನ್.ಕರ್ಕೇರ ಸುಖಾಗಮನ ಬಯಸಿ ಅಭಾರ ಮನ್ನಿಸಿದರು.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here