Tuesday 17th, May 2022
canara news

ಬಿಎಸ್‍ಕೆಬಿ ಅಸೋಸಿಯೇಶನ್ ಆಶ್ರಯದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

Published On : 31 Jan 2017   |  Reported By : Rons Bantwal


ಅಗಲಿದ ಅಸೋಸಿಯೇಶನ್ ಗೌರವ ಕಾನೂನು ಸಲಹೆಗಾರ ಭಾಸ್ಕರ್ ರಾವ್ ನಿಧನಕ್ಕೆ ಸಂತಾಪ

ಮುಂಬಯಿ, ಜ.31: ಭಾರತದ 68ನೇ ಗಣರಾಜ್ಯೋತ್ಸವವನ್ನು ಕಳೆದ ಗುರುವಾರದಂದು ಬಿಎಸ್‍ಕೆಬಿ ಅಸೋಸಿಯೇಶನ್ ತನ್ನ ನೆರೂಲ್ ಅಲ್ಲಿರುವ ಹಿರಿಯ ನಾಗರಿಕರ ಆಶ್ರಯಧಾಮ `ಆಶ್ರಯ'ದಲ್ಲಿ ಸಂಭ್ರಮದಿಂದ ಆಚರಿಸಿತು. ಸಂಘದ ಉಪಾಧ್ಯಕ್ಷ ವಾಮನ್ ಹೊಳ್ಳ ಧ್ವಜಾರೋಹಣಗೈದು ನೆರೆದವರಿಗೆಲ್ಲಾ ಗಣರಾಜ್ಯದಿನೋತ್ಸವದ ಶುಭಾಶಯಗಳನ್ನು ಸಲ್ಲಿಸಿದರು.

ನಂತರ `ವಿವಿಧತೆಯಲ್ಲಿ ಏಕತೆ' ಪರಿಕಲ್ಪನೆಯಲ್ಲಿ ಸಂಘದ ವಲಯದ ಸದಸ್ಯರು ಹಾಗೂ ಆಶ್ರಯ ಹಿರಿಯ ನಾಗರಿಕರಿಂದ ಕನ್ನಡ, ತಮಿಳು, ಮಲಯಾಳಿ, ಬಂಗಾಳಿ, ಮರಾಠಿ, ಹಿಂದಿ, ಸಂಸ್ಕೃತ, ಹೀಗೆ ವಿವಿಧ ಭಾಷೆಗಳ ದೇಶಭಕ್ತಿಗೀತೆಗಳ ರಸಮಂಜರಿ ಕಾರ್ಯಕ್ರಮ ಜರಗಿತು. ಪಕ್ಕವಾದ್ಯದಲ್ಲಿ, ತಬಲಾದಲ್ಲಿ ಜನಾರ್ದನ್ ಸಾಲಿಯಾನ್, ಕೀಬೋರ್ಡ್ ನಲ್ಲಿ ಶ್ರೀಕಾಂತ್, ಹಾಗೂ ಒಕ್ಟೋಪ್ಯಾಡ್ ನಲ್ಲಿ ವೈಭವ್ ಅವರು ಸಹಕರಿಸಿದರು. ಚಂದ್ರಶೇಖರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ನಂತರ ವಿದುಷಿ ಸಹನಾ ಭರದ್ವಾಜ್ ರವರ ಪರಿಕಲ್ಪನೆ ಹಾಗೂ ನಿರೂಪಣೆಯಲ್ಲಿ, ನವರಸಗಳಾದ ಶೃಂಗಾರ ಹಾಸ್ಯ, ಕರುಣಾ, ವೀರ, ರೌದ್ರ, ಭಯಾನಕ, ಭೀಭತ್ಸ, ಅದ್ಭುತ ಹಾಗೂ ಶಾಂತರಸಗಳ ಪ್ರಾತ್ಯಕ್ಷಿಕೆಗಳನ್ನು ವಲಯದ ಸುಮಾರು 60ಕ್ಕೂ ಮಿಕ್ಕಿದ ಕಲಾವಿದ ಕಲಾವಿದೆಯರು, ನೃತ್ಯ, ಸಂಗೀತನಾಟಕ, ಪ್ರಹಸನ, ಸ್ಕಿಟ್ ಮುಂತಾದುವುಗಳ ಮೂಲಕ ಮನೋಜ್ಞವಾಗಿ ಅಭಿನಯಿಸಿ ಪ್ರಸ್ತುತ ಪಡಿಸಿದರು. ವಿಜಯ ಆಚಾರ್ಯ ಹಾರ್ಮೋನಿಯಂನಲ್ಲಿ ಸಹಕರಿಸಿದರು. ಪ್ರಿಯಾಂಜಲಿ ರಾವ್ ನವರಸಾಭಿನಯಗಳನ್ನು ಭರತನಾಟ್ಯದ ಮೂಲಕ ಸಾದರಪಡಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಮಧ್ಯಂತರದಲ್ಲಿ, ಡಾ ಸುರೇಶ್ ಎಸ್ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಸಮಾಜದ ಖ್ಯಾತ ವಕೀಲರೂ, ದಶಕದ ಕಾಲ ಅಸೋಸಿಯೇಶನ್ ಗೌರವ ಕಾನೂನು ಸಲಹೆಗಾರರೂ ಆಗಿದ್ದ ಭಾಸ್ಕರ್ ರಾವ್ ಅವರ ಅನಿರೀಕ್ಷಿತ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳ, ಶೈಲಿನಿ ರಾವ್, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್, ಗುರುರಾಜ್ ಭಟ್, ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜೊತೆ ಕೋಶಾಧಿಕಾರಿ ಕುಸುಮ್ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಂಘದ ನಿಕಟಪೂರ್ವಾಧ್ಯಕ್ಷ ಕೆ.ಸುಬ್ಬಣ್ಣ ರಾವ್ ಮತ್ತಿತರರು ಮಾತನಾಡಿ ಭಾಸ್ಕರ್ ರಾವ್ ನಿಧನದಿಂದ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಕಾನೂನು ಸಲಹೆಗಾರರಾಗಿ ಸಂಘಕ್ಕೆ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅಂತೆಯೇ ತಮಗೆಲ್ಲಾ ಉತ್ತಮ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು. ಪ್ರೇಮಾ ಎಸ್.ರಾವ್ ಅವರು ಸಂತಾಪ ಸೂಚಕಪತ್ರ ವಾಚಿಸಿದರು. ನಂತರ ಎರಡು ನಿಮಿಷಗಳ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಿ ಸಲ್ಲಿಸಲಾಯಿತು.

ನಂತರ ವೃತ್ತಿಪರ ಶಿಕ್ಷಣದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾಥಿರ್ü ವಿದ್ಯಾಥಿರ್üನಿಯರನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ಮರಣಿಕೆಗಳನ್ನಿತ್ತು ಪುರಸ್ಕರಿಸಿದರು. ಇಂದ್ರಾಣಿ ರಾವ್ ಪ್ರತಿಭಾ ಪುರಸ್ಕೃತರ ಹೆಸರುಗಳನ್ನು ವಾಚಿಸಿದರು. ಡಾ| ಸುರೇಶ್ ಎಸ್.ರಾವ್ ಕಟೀಲು ಈ ಸಂದರ್ಭದಲ್ಲಿ ಮಾತನಾಡುತ್ತಾ ಸದ್ಯದಲ್ಲೇ ಗೋಕುಲದ ಪುನರ್ನಿರ್ಮಾಣದ ಕಾರ್ಯವು ಪ್ರಾರಂಭವಾಗುವುದು. ಸಂಘವು ಧನ ಸಂಗ್ರಹಕ್ಕಾಗಿ ಪ್ರಾರಂಭಿಸಿದ `ಅಕ್ಷಯ ನಿಧಿಗೆ' ಸದಸ್ಯ ಬಾಂಧವರೆಲ್ಲರೂ ತಂತಮ್ಮ ದೇಣಿಗೆಯನ್ನಿತ್ತು ಸಹಕರಿಸಬೇಕು ಎಂದರು. ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here