Friday 26th, April 2024
canara news

ನವೋದಯ ಕನ್ನಡ ಸೇವಾ ಸಂಘ ಥಾಣೆ ಸಂಚಾಲಕತ್ವದ ಶೈಕ್ಷಣಿಕ ಸಂಸ್ಥೆಗಳ ವಾರ್ಷಿಕೋತ್ಸವ

Published On : 08 Feb 2017   |  Reported By : Rons Bantwal


ಕನಿಷ್ಠ ವಿದ್ಯಾ ಶುಲ್ಕದಲ್ಲಿ ಗರಿಷ್ಠ ದರ್ಜೆಯ ಶಿಕ್ಷಣ : ಬಿ.ಆರ್ ಶೆಟ್ಟಿ

ಮುಂಬಯಿ, ಫೆ.08: ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೆÇೀಷಕರ ನಡುವಿನ ಸಂಬಂಧ ತುಂಬಾ ಮುಖ್ಯ ಹಾಗೆಯೇ ಈ ಶಾಲೆಯನ್ನು ಇತರ ಶಾಲೆಗಳೊಂದಿಗೆ ತುಲನೆ ಮಾಡಿದರೆ ಅತೀ ಕಡಿಮೆ ವಿದ್ಯಾಶುಲ್ಕ ಪಡೆದು ಉತ್ತಮ ದರ್ಜೆಯ ವಿದ್ಯಾಭ್ಯಾಸವನ್ನು ಒದಗಿಸಿ ಕೊಡುವುದ ಶ್ಲಾಘನೀಯ ಎಂದು ಬಂಟ್ಸ್ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿ ಉಪ ಕಾರ್ಯಧ್ಯಕ್ಷ ಹಾಗೂ ನಹೂರ್ ಸಿಟಿಝನ್'ಸ್ ವೆಲ್ಫೇರ್ ಅಸೋಸಿಯೇಶನ್‍ನ ಕಾರ್ಯದರ್ಶಿ ಬಿ.ಆರ್ ಶೆಟ್ಟಿ ನುಡಿದರು.

ನವೋದಯ ಕನ್ನಡ ಸೇವಾ ಸಂಘ ಥಾಣೆ ಇದರ ಸಂಚಾಲಕತ್ವದ ನವೋದಯ ಇಂಗ್ಲೀಷ್ ಹೈಸ್ಕೂಲಿನ 47ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ಶಾಲಾ ವಾರ್ಷಿಕ ಮ್ಯಾಗಜಿನ್ `ಆರ್ಚೀವ್‍ಸ್' ಬಿಡುಗಡೆ ಗೊಳಿಸಿ, 2015-16ನೇ ಸಾಲಿನ ಹತ್ತನೇ ತರಗತಿಯಲ್ಲಿ ಅಧಿಕ ಅಂಕಗಳಿಸಿ ಪ್ರಥಮ ಸ್ಥಾನಗಳಿಸಿದ ಶಾಲಾ ವಿದ್ಯಾಥಿರ್ü ಕು| ಸುಶ್ಮಿತಾ ಎಸ್.ಪಾಂಡೆ ಆಕೆಯನ್ನು ಪಾಲಕರೊಂದಿಗೆ ಹೂಗುಚ್ಛ ಹಾಗೂ ಸ್ಮರಣಿಕೆಗಳನ್ನಿತ್ತು ಸತ್ಕರಿಸಿ, ಮಾತನಾಡಿ ಮುಂಬರುವ ಶೈಕ್ಷಣಿಕ ವರ್ಷದಿಂದ ನವೋದಯ ಜೂನಿಯರ್ ಕಾಲೇಜನ್ನು ಆರಂಭಿಸಲು ಆದೇಶವು ಲಭಿಸಿರುವುದರ ಬಗ್ಗೆ ನೆನಪಿಸಿ ಕೊಟ್ಟರು. ಪಾಲಕರು ತಮ್ಮ ಮಕ್ಕಳನ್ನು ಇದೇ ಕಾಲೇಜ್‍ಗೆ ಸೇರಿಸಿದರೆ ಉತ್ತಮ ವಿದ್ಯಾಭ್ಯಾಸ ಲಭ್ಯವಾಗುವುದರಲ್ಲಿ ಯಾರಿಗೂ ಸಂಶಯವಿಲ್ಲ ಎಂದು ಬಿ.ಆರ್ ಶೆಟ್ಟಿ ನುಡಿದರು.

ಕಳೆದ ಶನಿವಾರ ಥಾಣೆ ರಾಮ್ ಗಣೇಶ್ ಗಡ್ಕರಿ ರಂಗಾಯತನ್ ಸಭಾಗೃಹದಲ್ಲಿ ಬಹಳ ಅದ್ದೂರಿಯಿಂದ ನಡೆಸಲ್ಪಟ್ಟ ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಹೆಸರಾಂತ ಉದ್ಯಮಿ ಹಾಗೂ ಮುಲುಂಡ್ ಬಂಟ್ಸ್ ಅಧ್ಯಕ್ಷ ಸುರೇಶ್ ಬಿ. ಶೆಟ್ಟಿ ಮಾತನಾಡಿ ಭಾರತದ ಶ್ರೇಷ್ಠ ಕ್ರಿಕೇಟಿಗರಾದ ಸಚಿನ್ ತೆಂಡುಲ್ಕರ್ ಅವರು ತಮ್ಮ ವಿದ್ಯಾಥಿರ್ü ಜೀವನದಲ್ಲಿ ಇಂಗ್ಲೀಷ್ ವಿಷಯದಲ್ಲಿ ಅನುತ್ತೀರ್ಣರಾಗಿದ್ದರು. ಆದರೆ ಇಂದಿನ ಪಠ್ಯಪುಸ್ತಕದಲ್ಲಿ ಅವರ ಜೀವನ ಚರಿತ್ರೆಯನ್ನು ಒಂದು ಪಾಠವಾಗಿ ಕಲಿಸುತ್ತಿರುವರು ಎಂದು ಹೇಳುತ್ತಾ, ಕೇವಲ ವಿದ್ಯೆಯಿಂದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ವಿದ್ಯೆಯ ಜೊತೆಗೆ ಇತರ ಚಟುವಟಿಕೆಯಲ್ಲೂ ಭಾಗವಹಿಸುವುದು ತುಂಬಾ ಮುಖ್ಯ ಹಾಗೂ ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ತುಲನೆ ಮಾಡದೆ ಅವರವರ ಪ್ರತಿಭೆಗೆ ತಕ್ಕಂತೆ ಪೆÇ್ರೀತ್ಸಾಹಿಸಬೇಕು ಹಾಗೆಯೇ ಮಕ್ಕಳಲ್ಲಿ ದೇಶ ಭಕ್ತಿ ಮೂಡಿ ಬರುವಂತಹ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅವರನ್ನು ಉತ್ತೇಜಿಸಬೇಕು ಎಂದು ವಿದ್ಯಾಥಿರ್üಗಳಿಗೆ ಹಾಗೂ ಪಾಲಕ ಪೆÇೀಷಕರಿಗೆ ಮನದಟ್ಟು ಆಗುವಂತೆ ಮನವರಿಸಿದರು.

ಶಾಲಾಡಳಿತ ಮಂಡಳಿಯ ಅಧ್ಯಕ್ಷ ಜಯ.ಕೆ ಶೆಟ್ಟಿ ಅವರು ಜೀವನವು ನಿರಂತರವಾದ ಬದಲಾವಣೆಯ ಪ್ರಕ್ರಿಯೆಯಾಗಿದೆ. ಹಾಗೆಯೇ ಶಾಲಾ ಮಕ್ಕಳ ಪ್ರಗತಿಗೆ ಅನುಭವವುಳ್ಳ ಅಧ್ಯಾಪಕ ವರ್ಗ ಹಾಗೂ ಮುಖ್ಯೋ ಪಾದ್ಯಾಯಿನಿಯರೇ ಕಾರಣ ಆಗಿರುವರು ಎನ್ನುತ್ತಾ ಸರ್ವರಿಗೂ ಅಭಿವಂದನೆಗಳು ಎಂದರು.

ನವೋದಯ ಕನ್ನಡ ಸೇವಾ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ್ ಎಸ್.ಶೆಟ್ಟಿ ಅವರು 25 ವರುಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಹಾಗೂ ಪ್ರಸ್ತುತ ವರ್ಷದಲ್ಲಿ ನಿವೃತ್ತಿ ಹೊಂದಲಿರುವ ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು.

ವಿದ್ಯಾಥಿರ್üಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ವಿದ್ಯಾಥಿರ್üಗಳು ಅತಿಥಿüಗಳಿಗೆ ಹಾಗೂ ಶಾಲಾಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಹೂಗುಚ್ಛ ನೀಡಿ ಸ್ವಾಗತ ನೀಡಿದರು. ನವೋದಯ ಇಂಗ್ಲೀಷ್ ಹೈಸ್ಕೂಲ್‍ನ ಮುಖ್ಯೋಪಾದ್ಯಾಯಿನಿ ಅಜಿತಾ ಪ್ರದೀಪ್ ಕುಮಾರ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿ ಅನುರಾಧ ಅರ್ಜುನ್‍ವಾಡ್ಕರ್ ಕ್ರಮವಾಗಿ ಶಾಲಾ ವಾರ್ಷಿಕ ವರದಿ ವಾಚಿಸಿದರು. ನವೋದಯ ಇಂಗ್ಲೀಷ್ ಹೈಸ್ಕೂಲು ವತಿಯಿಂದ ನಡೆಸಲ್ಪಟ್ಟ ಅಂತರ್ ಶಾಲಾ ಸ್ಪರ್ಧೆಗಳ ವಿಜೇತರಿಗೆ, ಶಾಲೆಯ ಪ್ರಾಥಮಿಕ ಹಾಗೂ ಮಾಧ್ಯಮಿಕ ವರ್ಗದಲ್ಲಿ 2015-16ರ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಾಧಿಕ ಅಂಕಗಳಿಸಿ ಉತ್ತೀರ್ಣರಾದ ವಿದ್ಯಾಥಿರ್üಗಳಿಗೆ ಹಾಗೂ ವರ್ಷದ ಉತ್ಕೃಷ್ಟ ವಿದ್ಯಾಥಿರ್üಗಳಿಗೆ ಭಾಜಕರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ಶಾಲೆಯ ಪ್ರಾಥಮಿಕ ವಿಭಾಗದಲ್ಲಿ 25 ವರುಷಗಳ ಅಭೂತಪೂರ್ವ ಸೇವೆ ಸಲ್ಲಿಸಿದ ರಜುಲಾ ಧರ್ಮರಾಜ್, ಮಾಧ್ಯಮಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ಕ್ರಿಸ್ಟಿನಾ ಮಹಾಧಿಕ್ ಹಾಗೂ ಪ್ರಸ್ತುತ ವರ್ಷದಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿರುವ ಶಿಕ್ಷಕರುಗಳಾದ ಪೂರ್ಣಿಮಾ ಡೇ, ಜಲಜಾಕ್ಷಿ ಉಚ್ಚಿಲ್, ಅರವಿಂದ್ ರಾಯರ್, ಚಂದ್ರಿಕಾ ಗೋಪಾಲನ್ ಅವರನ್ನು ಪುಷ್ಪಗುಚ್ಛ, ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು.

ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವು ಪೂಜಾ ನೃತ್ಯದೊಂದಿಗೆ ಆರಂಭ ಗೊಂಡಿತು. ಪೂರ್ವ ಪ್ರಾಥಮಿಕ ವಿಭಾಗದ ಚಿಣ್ಣರ ನೃತ್ಯ, ಬಾಲ ಕಾರ್ಮಿಕತೆಯ ನಿರ್ಮೂಲನೆ, ಹೆಣ್ಣು ಮಗುವನ್ನು ರಕ್ಷಿಸಿ, ಶಿಕ್ಷಣದ ಮಹತ್ವ ಇತ್ಯಾದಿ ಸಂದೇಶಗಳನ್ನು ನೀಡುವ ನೃತ್ಯಗಳು ಹಾಗೂ ನಾಟಕಗಳು ಪ್ರದರ್ಶಿಸಲ್ಪಟ್ಟವು. ಪ್ರಾಥಮಿಕ ಶಾಲಾ ವಿದ್ಯಾಥಿರ್ü ನಾಯಕ ಮಾ| ಧೈರ್ಯ ಠಕ್ಕರ್ ಹಾಗೂ ಮಧ್ಯಮ ಶಾಲಾ ವಿದ್ಯಾಥಿರ್üನಿ ಕು| ಲಕ್ಷ್ಮಿತಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆ ಯೊಂದಿಗೆ ವಾರ್ಷಿಕೋತ್ಸವ ಸಮಾರಂಭ ಸಮಾಪನ ಕಂಡಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here