Friday 26th, April 2024
canara news

ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017

Published On : 10 Feb 2017   |  Reported By : Rons Bantwal


ಇವರು ನಮ್ಮವರು...! ಕೌನ್ಸಿಲರ್ ಸ್ಪರ್ಧೆಗೆ ಸನ್ನದ್ಧರಾದ ತುಳು-ಕನ್ನಡಿಗರು
ಚಿತ್ರ / ಮಾಹಿತಿ: ರೋನ್ಸ್ ಬಂಟ್ವಾಳ್

ಮುಂಬಯಿ, ಫೆ.10: ಬೃಹನ್ಮುಂಬಯಿ ಮಹಾನಗರದ ಇತಿಹಾಸದಲ್ಲಿ ಕನ್ನಡಿಗ ಬಂಧುಗಳು ಮೂಡಿಸಿದ ಹೆಜ್ಜೆ ಗುರುತುಗಳು ನಗರದ ಸಮಗ್ರ ಬೆಳವಣಿಗೆಯಲ್ಲಿ ನಿರ್ಣಾಯಕವಾದುದು. ರಾಜಕೀಯ, ಆಥಿರ್üಕ, ಶೈಕ್ಷಣಿಕ, ಧಾರ್ಮಿಕ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಕನ್ನಡಿಗರು ತಮ್ಮ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ. ಮಹಾರಾಷ್ಟ್ರದ ನೆಲದಲ್ಲೂರಿ ಇಲ್ಲಿನ ಸಂಸ್ಕೃತಿ ಪರಂಪರೆಗಳಿಗೆ ಸ್ಪಂದಿಸಿ ಸೌಹಾರ್ದತೆಯ ಬದುಕನ್ನು ರೂಪಿಸುತ್ತಾ ಯಾವುದೇ ರಾಜಿಪಂಚಾಯತಿಕೆ ಇಲ್ಲದೆ ತಮ್ಮೂರ, ತಾಯ್ನಾಡ ಸಂಸ್ಕೃತಿ, ದೈವದೇವರುಗಳನ್ನು ಇಲ್ಲಿ ಪ್ರತಿಷ್ಠಾಪಿಸಿ ಸಾಮರಸ್ಯ ಜೀವನಕ್ಕೆ ತುಳು-ಕನ್ನಡಿಗರು ಹೆಸರಾಗಿದ್ದಾರೆ.

ಇಂತಹ ಶ್ರೇಷ್ಠ ಪರಂಪರೆಯಲ್ಲಿ ಅನೇಕ ರಾಜಕೀಯ ನಾಯಕರು ಪಕ್ಷ ಭೇದವಿಲ್ಲದೆ ಕನ್ನಡ ಭಾಷೆ, ಸಂಸ್ಕೃತಿ, ನೆಲದ ಗೌರವದ ಕೀರ್ತಿಪತಾಕೆ ಇಲ್ಲಿ ಹಾರಿಸಿದ್ದಾರೆ. ಆ ಪಯ್ಕಿ ಕೆಲವರು ಇದೀಗಲೇ ಜನಪ್ರತಿನಿಧಿಗಳಾಗಿ ಕೇಂದ್ರ ಸಚಿವರು, ಸಂಸದರುಗಳಾಗಿ, ಮಹಾರಾಷ್ಟ್ರ ರಾಜ್ಯದ ವಿಧಾನ ಸಭೆಗೆ ಪ್ರತಿನಿಧಿಸಿ ಮಂತ್ರಿಗಳು, ಶಾಸಕರೂ, ಮುನ್ಸಿಪಾಲ್ ಕಾಪೆರ್Çೀರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಯಾನೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಯಲ್ಲಿ ಉಪಮೇಯರ್ ಕೂಡಾ ಆಗಿದ್ದಾರೆ.

ಇದೀಗ ಮತ್ತೆ ವಿಶ್ವದ ಅತೀ ಶ್ರೀಮಂತ ಬಜೆಟ್‍ವುಳ್ಳ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಮತ್ತೆ ನೂತನ ಸಂಪುಟ ರಚಿಸಲು ಸಿದ್ಧವಾಗಿ ಚುನಾವಣೆಗೆ ಸಜ್ಜಾಗಿದ್ದು ಕೌನ್ಸಿಲರ್ ಆಯ್ಕೆಯ ಸ್ಥಾನ ಗಿಟ್ಟಿಸಿ ಕೊಳ್ಳಲು ಈ ಬಾರಿಯೂ ತುಳು ಕನ್ನಡಿಗ ಸ್ಪರ್ಧಿಗಳು ಅಖಾಡಕ್ಕಿಳಿದಿದ್ದಾರೆ.

     

Winni B.DSouza (W-83)      Meenakshi R. Shinde  (Thane W-20C)   Jagadish K.Amin (W-82)

    

Suryaprakash Shettigar (W-57)  Vijayalaxmi Shetty (W-16)   Sumalatha D.Shetty (W-188)

      

                 Dinesh Shridhar Rao (W-50)   Nisha Bangera (W25                   Sangeeta Kiran Suvarna (Thane W-3C)

 Dinesh B.Amin (W-91)

ಹೊರನಾಡ ಕರ್ಮಭೂಮಿಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿ ಜನತಾ ಸೇವೆಯಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುವ ಈ ತುಳು-ಕನ್ನಡಿಗ ನಾಯಕರಿಗೆ ಮಾತೃಭಾಷೆ-ಪ್ರಾದೇಶಿಕ ನೆಲೆಯ ವಿಚಾರ ಎಂದೂ ಅಡ್ಡಿ ಆಗಿಲ್ಲ. ಮಹಾರಾಷ್ಟ್ರ ರಾಜ್ಯದ ಯಾವುದೇ ಜನಪ್ರತಿನಿಧಿತ್ವಕ್ಕೆ ಸ್ಪರ್ಧಿಸಲು ಇಲ್ಲಿ ಮುಕ್ತ ಅವಕಾಶವಿದೆ ಎನ್ನುವುದನ್ನು ಶಾಬೀತು ಪಡಿಸಿ ರಾಷ್ಟ್ರದ ಪ್ರಜಾಪ್ರಭುತ್ವ ಹಿರಿಮೆಯನ್ನು ಎತ್ತಿಹಿಡಿದ ನಮ್ಮವರು ಮತ್ತೆ ಸ್ಪರ್ಧಾ ಕಣದಲ್ಲಿ ಎಂಟೆ ದೆ ಬಂಟರಾಗಿ ಸಿದ್ಧರಾಗಿದ್ದಾರೆ.

ಅವರಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಇಎಂಸಿ) ನಗರ ಸದಸ್ಯತ್ವಕ್ಕೆ ಕಾಂದಿವಿಲಿ ಪೂರ್ವದ ಠಾಕೂರ್ ವಿಲೇಜ್ ವಾರ್ಡ್ ಸಂಖ್ಯೆ 25ನಿಂದ ಬಿಜೆಪಿ ಅಭ್ಯಥಿರ್üಯಾಗಿ ಮಂಜೆಶ್ವರ ಮೂಲದ ಕನ್ನಡತಿ, ಮರಾಠಿ ಚಿತ್ರನಟಿ ನೀಶಾ (ಪರುಲೇಖರ್) ಸುರೇಶ್ ಬಂಗೇರ ಕಣದಲ್ಲಿದ್ದಾರೆ.

ಸಾಂತಕ್ರೂಜ್ ಪೂರ್ವದ ವಕೋಲಾ ವಾರ್ಡ್ ಸಂಖ್ಯೆ 91ನಿಂದ ಇತರೇ ಹಿಂದುಳಿದ ವರ್ಗದ (ಒಬಿಸಿ) ಎನ್‍ಸಿಪಿ (ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ) ಅಭ್ಯಥಿರ್üಯಾಗಿ ದಿನೇಶ್ ಬಿ.ಅವಿೂನ್ ಸ್ಪರ್ಧಿಸಿದ್ದಾರೆ. ಅಂಧೇರಿ ಪೂರ್ವದ ಚಕಾಲ, ಸಹಾರ್‍ರೋಡ್ ಪಾರ್ಸಿವಾಡ ವಾರ್ಡ್ ಸಂಖ್ಯೆ 83ರಿಂದ ವಿನ್ನಿಫ್ರೆಡ್ ಬಿ.ಡಿ'ಸೋಜಾ (ಹಾಲಿ ನಗರ ಸೇವಕಿ) ಮತ್ತೆ ಸ್ಪರ್ಧಿಸುತ್ತಿದ್ದಾರೆ. ಅಂಧೇರಿ ಪೂರ್ವದ ಮರೋಲ್ ಪೈಪ್‍ಲೇನ್ ಇಲ್ಲಿನ ವಾರ್ಡ್ ಸಂಖ್ಯೆ 82ನಿಂದ ಜಗದೀಶ್ ಕೆ.ಅವಿೂನ್ (ಅಣ್ಣಾ), ಗೋರೆಗಾಂ ಬಂಗೂರ್ ನಗರದ ವಾರ್ಡ್ ಸಂಖ್ಯೆ 57ನಿಂದ ಸೂರ್ಯಪ್ರಕಾಶ್ ಶೆಟ್ಟಿಗಾರ್, ಬೋರಿವಿಲಿ ಪಶ್ಚಿಮದ ಉತ್ಕರ್ಷ್, ಎಲ್‍ಟಿ ರೋಡ್ ವಾರ್ಡ್ ಸಂಖ್ಯೆ 16ನಿಂದ ವಿಜಯಲಕ್ಷ್ಮೀ ನಾರಾಯಣ ಶೆಟ್ಟಿ, ಸಯಾನ್ ಧಾರವಿ ಕ್ರಾಸ್ ರೋಡ್‍ನ ವಾರ್ಡ್ ಸಂಖ್ಯೆ 188ನಿಂದ ಸುಮಲತಾ ಭಾಸ್ಕರ್ ಶೆಟ್ಟಿ ಸ್ಪರ್ಧಿಸಿದ್ದು ಈ ಎಲ್ಲಾ ಐದು ಅಭ್ಯಥಿರ್üಗ ಳೂ ಕಾಂಗ್ರೇಸ್ (ಐ) ಪಕ್ಷದ ಉಮೇದುವಾರಗಳಾಗಿದ್ದಾರೆ. ಗೋರೆಗಾಂ ಪಶ್ಚಿಮದ ಚಿಂಚೋಲಿ, ಪವನ್‍ಬಾಗ್ ಅಲ್ಲಿನ ವಾರ್ಡ್‍ಸಂಖ್ಯೆ 50ನಿಂದ ಶಿವಸೇನಾ ಪಕ್ಷದ ಅಭ್ಯಥಿರ್üಯಾಗಿ ದಿನೇಶ್ ಶ್ರೀಧರ್ ರಾವ್ (ಕುಕ್ಯಾನ್) ಸ್ಪರ್ಧಿಸಿದ್ದಾರೆ.

ಅಂತೆಯೇ ಥಾಣೆ ಮಹಾನಗರ ಪಾಲಿಕೆ (ಟಿಎಂಸಿ)ಗೂ ಮತ್ತು ಪುಣೆ ಮಹಾನಗರ ಪಾಲಿಕೆ (ಪಿಎಂಸಿ) ಗೂ ಚುನಾವಣೆ ನಡೆಯಲಿದ್ದು ಇಲ್ಲೂ ತುಳುಕನ್ನಡಿಗ ಆಕಾಂಕ್ಷಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಥಾಣೆ ಮಹಾನಗರ ಪಾಲಿಕೆಗೆ

ಶಿವಸೇನಾ ಪಕ್ಷದ ಅಭ್ಯಥಿರ್üಯಾಗಿ ಮಾನ್ಪಾಡ ಮನೋರಮ ನಗರದ ವಾರ್ಡ್ ಸಂಖ್ಯೆ 3ಸಿ ಇಂದ ವಿೂನಾಕ್ಷಿ ರಾಜೇಂದ್ರ ಶಿಂಧೆ (ದಿ| ಗುರುವ ಕಾಂತಪ್ಪ ಪೂಜಾರಿ ಸುಪುತ್ರಿ) ಹಾಗೂ ಪುಣೆ ಮಹಾನಗರ ಪಾಲಿಕೆಗೆ ಪಿಂಪ್ರಿ, ಕಾಸರವಾಡಿ ಇಲ್ಲಿನ ವಾರ್ಡ್ ಸಂಖ್ಯೆ 20ಸಿ ನಿಂದ ಎನ್‍ಸಿಪಿ (ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ) ಅಭ್ಯಥಿರ್üಯಾಗಿ ಸಂಗೀತ ಕಿರಣ್ ಸುವರ್ಣ ಸ್ಪರ್ಧಿಸುತ್ತಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here