Friday 26th, April 2024
canara news

59ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆ

Published On : 13 Feb 2017   |  Reported By : Rons Bantwal


ಕರ್ಮಭೂಮಿಯಲ್ಲ್ಲಿ ಕನ್ನಡದ ಕ್ರಾಂತಿ ಸ್ತುತ್ಯರ್ಹ : ಪ್ರಭಾಕರ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.12: ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ತನ್ನ 59ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ಗುರು ನಾರಾಯಣ ಸಭಾಗೃಹದಲ್ಲಿ ಸಂಭ್ರಮಿಸಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಗೌರವ ಅತಿಥಿüಗಳಾಗಿ ಹಿರಿಯ ಕೇಟರಿಂಗ್ ಉದ್ಯಮಿ ರಾಘು ಪಿ.ಶೆಟ್ಟಿ, ಭಾರತ್ ಬ್ಯಾಂಕ್ ನಿರ್ದೇಶಕ ದಾಮೋದರ ಸಿ.ಕುಂದರ್ ಉಪಸ್ಥಿತರಿದ್ದು ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ದೀಪ ಪ್ರಜ್ವಲಿಸಿ ವಾರ್ಷಿಕೋತ್ಸವವ ಸಮಾರಂಭ ಉದ್ಘಾಟಿಸಿ ತನ್ನ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಸಿದರು.

ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಎಲ್ವೀ ಅವಿೂನ್
ನಮ್ಮ ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ದಿನೇಶ್ ಬಿ.ಅವಿೂನ್ ಕಳೆದ ಅನೇಕ ವರ್ಷಗಳಿಂದ ಓರ್ವ ಬಿಜೆಪಿ ಸಕ್ರೀಯ ಕಾರ್ಯಕರ್ತ. ಆದರೆ ಅವರಿಗೆ ಪಕ್ಷವು ಕೊನೆಗೂ ಬಿಎಂಸಿ ಚುನಾವಣೆಯಲ್ಲಿ ಸೀಟು ನೀಡುವಲ್ಲಿ ವಿಫಲವಾಯಿತು. ಇದು ಪಕ್ಷವು ಕನ್ನಡಿಗರಿಗೆ ಬಗೆದ ದ್ರೋಹ ಎಂದೆಣಿಸಿ ಕೊಂಡಿದ್ದೇನೆ ಎಂದು ತೀವ್ರ ಖೇದ ವ್ಯಕ್ತ ಪಡಿಸಿದರು. ಆದರೆ ಸ್ಥಾನೀಯವಾಗಿ ಇವರಿಗೆ ಭಾರೀ ಜನಬೆಂಬಲವಿದ್ದು ಎನ್‍ಸಿಪಿ ತನ್ನ ಅಭ್ಯಥಿರ್üಯಾಗಿ ಸಾಂತಕ್ರೂಜ್ ಪೂರ್ವದ ವಕೋಲಾ ವಾರ್ಡ್ ಸಂಖ್ಯೆ 91ನಿಂದ ಒಬಿಸಿ ನೆಲೆಯಲ್ಲಿ ದಿನೇಶ್ ಬಿ.ಅವಿೂನ್ ಅವರಿಗೆ ಸ್ಪರ್ಧಿಸುವ ಅವಕಾಶ ನೀಡಿದೆ. ನಾವೆಲ್ಲರೂ ಅವರನ್ನು ಅತ್ಯಾಧಿಕ ಬಹುಮತದಿಂದ ಗೆಲ್ಲಿಸಬೇಕಾಗಿದೆ. ಇವರೇ ಬಿಎಂಸಿಯಲ್ಲಿ ನಮ್ಮ ತುಳು ಕನ್ನಡಿಗರ ದನಿಯಾಗ ಬೇಕಾಗಿದೆ. ಅದಕ್ಕಾಗಿ ಅವರ ವಾರ್ಡ್‍ನ ಇಲ್ಲಿದ್ದ ಎಲ್ಲರೂ ಕೈಯೆತ್ತಿ ತಮ್ಮ ಬೆಂಬಲ ಸೂಚಿಸುವಂತೆ ಕೋರುತ್ತಾ ದಿನೇಶ್ ಅವಿೂನ್ ಪರ ಬಿಜೆಪಿ ನೇತಾರರೂ ಆದ ಎಲ್ವೀ ಮತಯಾಚಿಸಿದರು. ಮತ್ತು ಇದು ಅವರ ವಿಜಯದ ಸಂಕೇತ ಎನ್ನುತ್ತ ದಿನೇಶ್ ಅವಿೂನ್ ಅವರನ್ನು ಶಾಲು ಹೊದಿಸಿ ಪುಷ್ಫಗುಪ್ಚ ನೀಡಿ ಶುಭಾರೈಸಿದರು.

ಕರ್ಮಭೂಮಿಯಲ್ಲಿ ಕನ್ನಡದ ಕ್ರಾಂತಿ ಪ್ರಶಂಸನೀಯವಾದದ್ದು. ಇಂತಹ ಕನ್ನಡದ ಸೇವೆಗೆ ಈ ಸಂಘ ಮಾದರಿ ಆಗಿದೆ. ಮುಂಬಯಿಯಲ್ಲಿ ಕನ್ನಡದ ಉಳಿವು ಬೆಳವಣಿಗೆಗಾಗಿ ಹಲವಾರು ಸಂಸ್ಥೆಗಳಿದ್ದರೂ ಕನ್ನಡ ಸಂಘ ಸಾಂತಾಕ್ರೂಜ್ ಇದರ ವೈಸಿಷ್ಟ ್ಯತೆಯೇ ಬೇರೆ ರೀತಿಯದ್ದು. ನಮ್ಮ ಬಂಟ್ಸ್ ಸಂಘವು ಕನ್ನಡಾಂಭೆಯ ಸೇವೆಗೆ ಶ್ರಮಿಸುತ್ತಿದ್ದು ನಮ್ಮ ಪಾಠ್ಯ ಮತ್ತು ಪ್ರಾದೇಶಿಕ ಭಾಷೆಯ ಉಳಿವು ನಮ್ಮ ಕರ್ತವ್ಯವಾಗಬೇಕು. ಇಂಗ್ಲೀಷ್ ಅಭ್ಯಾಸ ವ್ಯಾವಹರಿಕಕ್ಕೂ ತುಳು-ಕನ್ನಡ ಭಾಷೆ ಸಂಸ್ಕೃತಿ, ಪರಂಪರೆಗಳ ಉಳಿವಿಗಾಗಿ ವೃದ್ಧಿಸಬೇಕು ಎಂದು ನೆರೆದ ಮಕ್ಕಳು ಹಾಗೂ ಪಾಲಕರಿಗೆ ಪ್ರಭಾಕರ ಶೆಟ್ಟಿ ಸಲಹಿದರು.

ದಾಮೋದರ ಕುಂದರ್ ಮಾತನಾಡಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಗೆ ಎಲ್.ವಿ ಅವಿೂನ್ ಓರ್ವ ಸಂಘಟಕರಾಗಿದ್ದಾರೆ. ನಾನು ಬಿಲ್ಲವರ ಧುರೀಣ ಜಯ ಸುವರ್ಣರ ಅನುಜ್ಞೆಯಂತೆ ನನ್ನನ್ನು ಸಮಾಜ ಸೇವೆಗೆ ತೊಡಗಿಸಿ ಕೊಂಡಿದ್ದೇನೆ. ಈಗ ಸಮಾಜ ಸೇವೆಯಿಂದ ನೆಮ್ಮೆದಿಯಿದೆ ಎನ್ನುವುದನ್ನು ಅರಿತಿದ್ದು ನನ್ನ ಗಳಿಕೆಯ ಕನಿಷ್ಠ 10%ವನ್ನಾದರೂ ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದೇನೆ. ಇದನ್ನು ಪ್ರಸಕ್ತ ಯುವ ಜನತೆ ತಿಳಿಯುವ ಅವಶ್ಯವಿದೆ. ಅಂತೆಯೇ ವಿದ್ಯಾಥಿರ್üಗಳೂ ಈಗಿಂದಲೇ ಇಂತಹ ಪಾವಿತ್ರ ್ಯತೆಯ ಸದ್ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದರು.

ತುಳುಕನ್ನಡಿಗರು ಅಪ್ಪಟ ಸಂಸ್ಕೃತಿವುಳ್ಳವರಾಗಿದ್ದಾರೆ. ಆದುದರಿಂದ ಭಾರತೀಯ ನೈಜ್ಯ ಸಂಸ್ಕೃತಿ ನಮ್ಮ ಹಿರಿಮೆಯಾಗಬೇಕು. ಇಲ್ಲಿನ ಮಕ್ಕಳ ನೃತ್ಯಾವಳಿಗಳನ್ನು ಕಂಡಾಗ ನಮ್ಮ ವೈಭವೋಪೇತ ಸಂಸ್ಕೃತಿಯ ಸಂಪತ್ತು ಇಂದಿಗೂ ಜೀವಂತವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಮಕ್ಕಳೇ, ನೀವು ಪಾಶ್ಚತ್ಯ ಸಂಸ್ಕೃತಿ ಪ್ರಿಯರಾಗದೆ ಭಾರತೀಯತೆಯ ಹಿತದೃಷ್ಟಿಗಾಗಿ ನಮ್ಮ ಸಂಸ್ಕೃತಿಯನ್ನೇ ಮೈಗೂಡಿಸಿ ಸಂಸ್ಕಾರಯುತ ಭವಿಷ್ಯ ರೂಪಿಸಿ ಕೊಳ್ಳಿರಿ ಎಂದು ರಾಘು ಶೆಟ್ಟಿ ತಿಳಿಸಿದರು.

ಮುಂದಿನ ವರ್ಷ ನಮ್ಮ ಸಂಸ್ಥೆಯ ವಜ್ರಮಹೋತ್ಸವದ ಪರ್ವಕಾಲ. ಇದೊಂದು ಮಾದರಿ ವರ್ಷವನ್ನಾಗಿಸುವ ಅಭಿಲಾಷೆ ನಮ್ಮಲ್ಲಿದೆ. ನಾಡಿನ ಸರ್ವ ಸಹೃದಯಿಗಳ ಪೆÇ್ರೀತ್ಸಾಹದಿಂದ ಇದು ಫಲಪ್ರದ ಗೊಳಿಸುವ ಭರವಸೆ ನನಗಿದೆ. ಆ ಮೂಲಕ ಹೊರನಾಡ ಕನ್ನಡಿಗರಾಗಿ ಕನ್ನಡಾಂಭೆಯ ಪತಾಕೆ ಶಿಖರದತ್ತ ಹಾರಿಸಲಿದ್ದೇವೆ. ಎಂದು ಅಧ್ಯಕ್ಷೀಯ ಭಾಷಣದಲ್ಲಿ ಎಲ್.ವಿ ಅವಿೂನ್ ತಿಳಿಸಿದರು.


ಅತಿಥಿüಗಳು ಮತ್ತು ದಾನಿಗಳಾದ ಸದಾನಂದ ಉಚ್ಚಿಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವರಾಮ ಕೋಟ್ಯಾನ್, ಪ್ರಸನ್ನ ಶೆಟ್ಟಿ, ಲಿಂಗಪ್ಪ ಅವಿೂನ್, ಆರ್.ಪಿ ಹೆಗ್ಡೆ, ಸಿಎ| ಪ್ರಕಾಶ್ ಶೆಟ್ಟಿ, ದಿನೇಶ್ ಬಿ.ಅವಿೂನ್, ಸುಮಾ ಎಂ.ಪೂಜಾರಿ, ಉಷಾ ವಿ.ಶೆಟ್ಟಿ ಮತ್ತಿತರರÀನ್ನೊಳಗೊಂಡು ಸಂಘವು ವಾರ್ಷಿಕವಾಗಿ ಕೊಡಮಾಡುವ ಶೈಕ್ಷಣಿಕ ವಿದ್ಯಾಥಿರ್ü ವೇತನವನ್ನು ವಿತರಿಸಿ ಫಲಾನುಭವಿ ಮಕ್ಕಳಿಗೆ ಶುಭ ಕೋರಿದರು.

ಸಂಘದ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌರವ ಕೋಶಾಧಿಕಾರಿ ಸಿಎ| ರಮೇಶ್ ಎ.ಶೆಟ್ಟಿ, ಜೊತೆ ಕೋಶಾಧಿಕಾರಿ ಆರ್.ಪಿ ಹೆಗ್ಡೆ, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಸಲಹಾ ಸಮಿತಿ ಸದಸ್ಯರಾದ ನಾರಾಯಣ ಶೆಟ್ಟಿ, ಬಿ.ಡಿ ಸುವರ್ಣ ವೇದಿಕೆಯಲ್ಲಿ ಆಸೀನರಾಗಿದ್ದರು.

ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶಾರದಾ ಎಸ್.ಪೂಜಾರಿ ಸ್ವಾಗತಿಸಿದರು. ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು. ಮಹಿಳಾ ವಿಭಾಗದ ವನಿತಾ ವೈ.ನೊಂದಾ, ಶಾಲಿನಿ ಜಿ. ಶೆಟ್ಟಿ, ಶಕೀಲಾ ಪಿ.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿದರು. ಎಲ್.ವಿ ಅವಿೂನ್ ಅತಿಥಿüಗಳಿಗೆ ಶಾಲು ಹೊದಿಸಿ ಪುಷ್ಫಗುಪ್ಚ ನೀಡಿ ಗೌರವಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಮಿತಿ ಕಾರ್ಯದರ್ಶಿ ಸುಧಾಕರ ಉಚ್ಚಿಲ್ ವಿದ್ಯಾಥಿರ್ü ವೇತನದ ಯಾದಿ ವಾಚಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದ್ಯರ ಮಕ್ಕಳು ವಿನೋದಾವಳಿ, ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಹಾಗೂ ದಿನೇಶ್ ಕಂಕನಾಡಿ ರಚಿಸಿ ಭಾಸ್ಕರ್ ಸಸಿಹಿತ್ಲು ನಿರ್ದೇಶಿಸಿದ `ಯಮುನ ದಾನೆ ನಮೂನೆ' ತುಳು ಹಾಸ್ಯಮಯ ನಾಟಕವನ್ನು ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್ ಮುಂಬಯಿ ಕಲಾವಿದರು ಪ್ರದರ್ಶಿಸಿದರು. ಮನೋಹರ್ ನಂದಳಿಕೆ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿ ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here