Saturday 27th, April 2024
canara news

ಗೋರೆಗಾಂವ್ ಕರ್ನಾಟಕ ಸಂಘ ಸಂಭ್ರಮಿಸಿದ 59ನೇ ನಾಡಹಬ್ಬ

Published On : 13 Feb 2017   |  Reported By : Rons Bantwal


ಸೇವಾ ಯಜ್ಞಭಾವದಿಂದ ಮಾತ್ರ ಸತ್ಕರ್ಮಸಿದ್ಧಿ: ಜಯ ಕೆ.ಶೆಟ್ಟಿ

(ಚಿತ್ರ /  ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.12: ಗೋರೆಗಾಂವ್ ಕರ್ನಾಟಕ ಸಂಘವು ವಿಶೇಷ ರಚನಾತ್ಮಕ ಸಂಘಟಯಾಗಿದೆ. ಅತ್ಯಂತ ಕ್ರೀಯಾಶೀಲವಾದ ಈ ಸಂಘ ಮಹಾನಗರದಲ್ಲಿನ ಅನೇಕ ಸಂಘಗಳಿಗೆ ಮಾದರಿಯಾಗಿದೆ. ಸಂಘವು ಸದಸ್ಯರ ಯೋಗ್ಯತೆ ಹೊಂದಿದ್ದು ಜೀವನದಲ್ಲಿ ಸಂಘಗಳಿಂದ ಬಹಳಷ್ಟು ಅನುಭವ ಪಡೆಯಬಹುದು. ವರ್ತಮಾನ ಭಾರತ ಎನ್ನುವುದು ದೇಶವಾಸಿಗಳಿಗೆ ಸಮಯೋಚಿತವಾದ ವಿಷಯವಾಗಿದ್ದು ರಾಷ್ಟ್ರದ ನಿರ್ಮಾಣಕ್ಕೆ ಈ ವಿಚಾರ ಸ್ತುತ್ಯರ್ಹ. ಇದು ನಮ್ಮ ನಾಗರಿಕರಿಗೆ ಜ್ಞಾನನುಭವ ನೀಡಲಿ. ಪ್ರಸಕ್ತ ಸಂಘ ಸಂಸ್ಥೆಗಳಲ್ಲಿ ಹಳೇ ಸೇವಾನುಭವ ಈಗಿಲ್ಲ. ಹೆಚ್ಚಿನವುಗಳು ಪ್ರಚಾರಕ್ಕಾಗಿ, ವೈಯಕ್ತಿಕ ವ್ಯಾಮೋಹಕ್ಕಾಗಿ ಸಂಘಟನೆಗಳನ್ನುಬಳುವುದು ಬೇಜಾರು ವಿಚಾರ. ಸಂಘ ಸಂಸ್ಥೆಗಳ ಸೇವೆ ನಿಷ್ಕಾಕರ್ಮವಾಗಿರಬೇಕು. ಅಂತಹ ಸೇವಾ ಯಜ್ಞಭಾವದಿಂದ ಮಾತ್ರ ಫಲಪ್ರದ ಕರ್ಮಸಿದ್ಧಿ ಆಗುವುದು. ಪೂಜೆಕ್ಕಿಂತ ಜನಸೇವೆಯೇ ದೇವರಿಗೆ ಸಲ್ಲುವ ಪರಮ ಪೂಜೆ ಆಗಿದ್ದು ಅಂತಹ ಸ್ಥಾನಮಾನಕ್ಕೆ ಪಾತ್ರವಾದ ಈ ಸಂಘವು ಸಾಂಪ್ರದಾಯಿಕವಾಗಿ ಈ ಮುನ್ನಡೆಯಲಿ ಎಂದು ಮಹಾನಗರದಲ್ಲಿನ ಹೆಸರಾಂತ ಸಮಾಜ ಸೇವಕ, ಸೇವಾ ಭಾರತಿ ಮುಂಬಯಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಯ ಕೆ.ಶೆಟ್ಟಿ ಮುಲುಂಡ್ ತಿಳಿಸಿದರು.

ಗೋರೆಗಾಂವ್ ಕರ್ನಾಟಕ ಸಂಘವು ಇಂದಿಲ್ಲಿ ರವಿವಾರ ಮಲಾಡ್ ಪಶ್ಚಿಮ ಬಜಾಜ್ ಸಭಾಗೃಹದಲ್ಲಿ ಸಂಭ್ರಮಿಸಿದ್ದ ಐವತ್ತ ಒಂಭತ್ತನೇ ನಾಡಹಬ್ಬ ಆ ನಿಮಿತ್ತ ಆಯೋಜಿಸಿದ್ದ `ವರ್ತಮಾನ ಭಾರತ' ವಿಚಾರಿತ ಸಾಹಿತ್ಯ ಗೋಷ್ಠಿ ದೀಪ ಪ್ರಜ್ವಲಿಲಿ ಉದ್ಘಾಟಿಸಿ ಜಯ ಶೆಟ್ಟಿ ಮಾತನಾಡಿದರು.

ದಿನಪೂರ್ತಿ ಆಯೋಜಿಸಲಾಗಿದ್ದ ನಾಡಹಬ್ಬ ಸಂಭ್ರಮದಲ್ಲಿ ಮಹಾರಾಷ್ಟ್ರ ಸರಕಾರದ ರಾಷ್ಟ್ರೀಯ ತನಿಖಾ ಕರ್ತೃತ್ವ ಸಂಸ್ಥೆ (ಎನ್‍ಐಎ) ಇದರ ವಿಶೇಷ ವ್ಯಾಜ್ಯದಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ, ಮಹಾರಾಷ್ಟ್ರ ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾ| ರೋಹಿಣಿ ಜೆ.ಸಾಲಿಯಾನ್ ಅವರು `ನ್ಯಾಯಾಂಗದ ಔನ್ನತ್ಯ' ವಿಚಾರವಾಗಿ ಮತ್ತು ಪ್ರಶಸ್ತಿ ಪುರಸ್ಕೃತ ರಂಗತಜ್ಞ ಡಾ| ಭರತ್‍ಕುಮಾರ್ ಪೆÇಲಿಪು `ಯುವ ಜನಾಂಗದ ದಿಕ್ಕು ದೆಸೆ' ಬಗ್ಗೆ ಉಪನ್ಯಾಸ ನೀಡಿದರು.


ನಮ್ಮ ದೇಶ ಯಾವ ಕಾಲದಲ್ಲಿ ಭ್ರಷ್ಟಾಚಾರದಿಂದ ಮುಕ್ತವಾಗುತ್ತದೆಯೋ ಅಂದೇ ನಮ್ಮ ದೇಶ ಪ್ರಗತಿ ಪಥದಿಂದ ಸಾಗುವುದು. ಭ್ರಷ್ಟಾಚಾರ ಮುಕ್ತ ಭಾರತವನ್ನು ಕಾಣಬೇಕಾದರೆ ಯುವ ಜನಾಂಗಕ್ಕೆ ಸಾಮಾಜಿಕ ಮೌಲ್ಯಗಳನ್ನು ತಿಳಿಸಬೇಕಾಗುತ್ತದೆ. ಇತ್ತೀಚಿಗೆ ನಮ್ಮ ದೇಶದಲ್ಲಿ ನೋಟುಬಂದಿ ಬದಲಾವಣೆಯಿಂದ ರಾಜಕಾರಣಿಗಳಿಗೆ ಮಾತ್ರ ಕಷ್ಟವಾಗಿದೆ ಹೊರತು ಜನಸಾಮಾನ್ಯರಿಗೆ ಕಷ್ಟವಾಗಿಲ್ಲ. ಆದರೂ ವಿರೋಧ ಪಕ್ಷದವರು ಅದನ್ನು ವಿರೋಧಿದ್ದಾರೆ. ಭೂಮಸೂದೆ ನೀತಿ ಬಂದಾಗ ಹಲವಾರು ಮನೆಮಠಗಳನ್ನು ಕಳೆದು ಕೊಂಡವರನೇಕರಿದ್ದಾರೆ. ಆವಾಗ ಯಾರು ಆದನ್ನು ವಿರೋಧಿಸಿಲ್ಲ. ಆ ಸಮಯದಲ್ಲಿ ನಿಜವಾಗಿ ಕಷ್ಟವಾಗಿತ್ತು. ಈ ಎರಡೂ ಕಾನೂನುಗಳು ಸಾಮಾಜಿಕವಾಗಿ ಒಳ್ಳೆಯದ್ದಾಗಿತ್ತು ಎಂದು ಪ್ರಕಾಶ್ ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

ರೋಹಿಣಿ ಸಾಲಿಯಾನ್ `ನ್ಯಾಯಾಂಗದ ಔನ್ನತ್ಯ' ವಿಚಾರವಾಗಿ ತಿಳಿಸುತ್ತಾ ದೇಶದ ಗೌರವಕ್ಕೆ ಪೂರಕವಾದ ವಿಷಯ ಇದ್ದದ್ದನ್ನು ಇದ್ದಂತೆ ಹೇಳಿದರೆ ಕೆಂಡದಂತೆ ಕೋಪಿಸುವ ಜನರಿಗೆ ನ್ಯಾಯಾಂಗದ ಅರಿವು ಇರಬೇಕು. ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ ಧಕ್ಕಿಸಿ ನಮಗೋಸ್ಕಾರ ಜನತೆಯ ಅಶೋತ್ತರಗಳಿಗಾಗಿ ಸಂವಿಧಾನ ರಚಿಸಲ್ಪಟ್ಟಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆ ಜನಹಿತಕ್ಕಾಗಿ ರಚಿಸಲಾಗಿದೆ. ಈ ಪಯ್ಕಿ ನ್ಯಾಯಂಗ ಎಂದರೇನು ಎಂದಾಗ ಸವಿಂಧಾನಾತ್ಮಕ ನೆಲೆಯಲ್ಲಿ ಕಾನೂನಾತ್ಮಕವಾಗಿ ಬದುಕುವ ವ್ಯವಸ್ಥೆಯಾಗಿದೆ. ಅವುಗಳಿಗೆ ತಲೆಬಾಗುವುದು ಪ್ರತೀ ಪ್ರಜೆಯ ಕರ್ತವ್ಯ. ಇದು ನಮಗೆ ಸಂವಿಧಾನತ್ಮಕವಾಗಿ ಆಸ್ತಿತ್ವವನ್ನು ನೀಡಿದೆ. ಇಂತಹ ಕಾನೂನು ಚಿಂತನೆಯ ಅಂಧೋಲನ ನಮ್ಮಲ್ಲಾಗಬೇಕು. ಕಾನೂನು ಗೌರವಿಸಿ ಮುನ್ನಡೆದಾಗ ಎಲ್ಲವೂ ಸುಗಮವಾಗಿ ಸಾಗುತ್ತದೆ. ಮಾನವ ವಿಚಾರ ಒಳಿತ್ತಿದ್ದಾಗ ಆತನ ಆಚಾರವೂ ಸರಿ ಇರುತ್ತದೆ ಎಂದರು.

`ಯುವ ಜನಾಂಗದ ದಿಕ್ಕು ದೆಸೆ' ಬಗ್ಗೆ ಭರತ್‍ಕುಮಾರ್ ಪೆÇಲಿಪು ಉಪನ್ಯಾಸ ನೀಡಿ ಆಧುನಿಕ ಶಿಕ್ಷಣ ಮಕ್ಕಳ ಸಾಮಾಜಿಕ ಮೌಲ್ಯಗಳಿಂದ ದೂರಇರಿಸುವಂತಿದೆ. ಆದುದರಿಂಅದ್ಲೇ ಸಾಮಾಜಿಕ ಜವಾಬ್ದಾರಿಯಿಂದ ಯುವ ಜನಾಂಗ ದೂರವಾಗುತ್ತದೆ. ಯುವ ಪೀಳಿಯಲ್ಲಿ ವೈಚಾರಿಕ ಚಿಂತನೆ ಬೇಕು. ಹಣವೇ ಅಂತಿಮವಲ್ಲ, ಸಾಮಾಜಿಕ ಮೌಲ್ಯವು ಬದುಕನ್ನು ರೂಪಿಸುತ್ತದೆ ಎಂದರು.

ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ 1958ರಲ್ಲಿ ಮುಳೂರು ಸಂಜೀವ ಶೆಟ್ಟಿ ನೇತೃತ್ವದಿಂದ ಸ್ಥಾಪಿತ ಈ ಸಂಘವು ಕ್ರೀಯಾಶಿಲ ಚಟುವಟಿಕೆಗಳಿಂದ ಕರ್ತವ್ಯ ಪೂರೈಸಿ ಅಂಬೆಗಾಲಿನಿಂದ ನಡೆದು ಯೌವನದ ಮಹತ್ತರ ಘಟ್ಟವನ್ನು ದಾಟಿ ಇದೀಗ 60ರ ಹರೆಯದ ಉತ್ಸಾಹಕ್ಕೆ ಸಜ್ಜುಗೊಳ್ಳುತ್ತಿದೆ. ಸಂಘದ ವೈಶಿಷ್ಟ ್ಯವೇನೆಂದರೆ ಸಂಘವು ಜಾತಿಯ ಅಲ್ಲ ನೀತಿಯ ಸಂಸ್ಥೆಯಾಗಿ ಬೆಳೆದಿದೆ. ರಾಜಕೀಯದ ಸುನಾಮಿ ವಿನಃ ನಡೆದು ವೈಮನಸ್ಸುವಿಲ್ಲದ ನಿಸ್ವಾರ್ಥ ಸೇವೆಯ ಸಂಘವೆಂದೇ ಗುರುತಿಸಿ ಕೊಂಡಿದೆ. ಮುಂಬಯಿಯಲ್ಲಿನ ಮಾದರಿ ಸಂಘಗಳಲ್ಲಿ ಒಂದಾಗಿ ಮುಂಚೂಣಿಯಲ್ಲಿದೆ ಎನ್ನಲೂ ಹೆಮ್ಮೆ ಪಡುತ್ತೇವೆ ಎಂದರು.

ಸಂಘದ ಮಾಜಿ ಅಧ್ಯಕ್ಷರುಗಳಾದ ರವಿ ರಾ.ಅಂಚನ್, ಮುಂಡ್ಕೂರು ಸುರೇಂದ್ರ ಸಾಲ್ಯಾನ್ (ಪ್ರಸಕ್ತ ಪಾರುಪತ್ಯಗಾರರು) ಹಾಗೂ ಸಂಘದ ಮಾಜಿ ಅಧ್ಯಕ್ಷರುಗಳಾದ ವಿ.ಪಿ ಕೋಟ್ಯಾನ್, ಶಕುಂತಳಾ ಆರ್.ಪ್ರಭು, ಎಸ್.ಎಂ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ಸಂಘವು ವಾರ್ಷಿಕವಾಗಿ ಸ್ಥಳಿಯ ಮುನ್ಸಿಪಾಲಿಟಿ ಶಾಲಾ ಮಕ್ಕಳಿಗೆ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರದಾನಿಸುವ ವಿದ್ಯಾಥಿರ್üಗಳ ಆಥಿರ್üಕ ನೆರವನ್ನು ಅತಿಥಿsಗಳು ಹಸ್ತಾಂತರಿಸಿ ಶುಭಾರೈಸಿದರು. ಭಾಸ್ಕರ ಟಿ.ಅವಿೂನ್, ಪದ್ಮಜಾ ಮಣ್ಣೂರು, ಲಕ್ಷ್ಮೀ ಆರ್.ಶೆಟ್ಟಿ, ವಿದ್ಯಾ ದೇಶಪಾಂಡೆ, ಸಚ್ಚೀಂದ್ರ ಕೆ.ಕೋಟ್ಯಾನ್, ಗುಣೋದಯ ಎಸ್.ಐಲ್, ಸುಗುಣಾ ಎಸ್.ಬಂಗೇರಾ ಮತ್ತಿತರರು ಕಲಾವಿದÀರಿಗೆ ಸ್ಮರಣಿಕೆ, ಪುಷ್ಪಗುಪ್ಚ ನೀಡಿ ಗೌರವಿಸಿದರು.

ಸೀಮಾ ಕುಲ್ಕರ್ಣಿ, ವೇದ ಶೆಟ್ಟಿ ಮತ್ತು ಶಾಂತಾ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ವಸಂತಿ ಕೋಟೆಕರ್, ಮೋಹಿನಿ ಎಲ್.ಪೂಜಾರಿ ಮತ್ತು ವೇದ ಸುವರ್ಣ ಸ್ವಾಗತ ಗೀತೆಯನ್ನಾಡಿದರು. ಕಾರ್ಯಕ್ರಮದ ಅಂಗವಾಗಿ ಸಂಘದ ಉಪ ವಿಭಾಗಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿಭಾನ್ವಿತರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸುತ ಪಡಿಸಿದರು. ಶಿವಾನಂದ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ವಿಶಾಲಾಕ್ಷಿ ವೂಲವಾರ, ಮೀನಾ ಬಿ.ಕಾಳಾವರ್, ಸುಜಾತ ಪೂಜಾರಿ ಮತ್ತು ವಸಂತಿ ಕೋಟೆಕರ್ ಅತಿಥಿsಗಳನ್ನು ಪರಿಚಯಿಸಿದರು. ಸಂಘದ ಗೌರವ ಕೋಶಾಧಿಕಾರಿ ನಾರಾಯಣ ಆರ್. ಮೆಂಡನ್, ಸಂಘದ ಮಾಜಿ ಅಧ್ಯಕ್ಷರುಗಳಾದ ಜಿ.ಟಿ ಆಚಾರ್ಯ (ಹಾಲಿ ಪಾರುಪತ್ಯಗಾರ), ಪಯ್ಯಾರು ರಮೇಶ್ ಶೆಟ್ಟಿ, ಸುಮಿತ್ರಾ ಗುಜರನ್ ಅತಿಥಿsಗಳಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಡಿ.ಪೂಜಾರಿ ಕಾರ್ಯಕ್ರಮ ನಿರ್ವಾಹಿಸಿ ಧನ್ಯವದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here