Saturday 27th, April 2024
canara news

ಕಟೀಲುನಲ್ಲಿ ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್‍ಗೆ ಶಿಲಾನ್ಯಾಸ

Published On : 20 Feb 2017   |  Reported By : Rons Bantwal


ಪುರಾತನ ಸಂಸ್ಕೃತಿ, ಸಂಸ್ಕಾರಗಳು ಮನಸ್ಸನ್ನು ಸುಸಂಸ್ಕೃತರನ್ನಾಗಿಸುತ್ತದೆ: ವಿಶ್ವಪ್ರಿಯತೀರ್ಥಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.20: ನಮ್ಮ ಆಚಾರ, ವಿಚಾರ, ಆರೋಗ್ಯದ ಬಗ್ಗೆ ಹಲವು ವರ್ಷಗಳ ಹಿಂದೆ ಋಷಿ ಮುನಿಗಳು ಹಲವು ವಿಚಾರಗಳನ್ನು ಹೇಳಿದ್ದಾರೆ. ನಮ್ಮ ಆಹಾರ-ವಿಹಾರದ ಬಗ್ಗೆ ಜಾಗ್ರತೆ ವಹಿಸಬೇಕು. ಪುರಾತನ ಸಂಸ್ಕೃತಿ, ಸಂಸ್ಕಾರಗಳು ಮಾನವನ ಮನಸ್ಸನ್ನು ಸುಸಂಸ್ಕೃತರನ್ನಾಗಿಸಿ,ಆರೋಗ್ಯವಂತರಾಗಿ ಮಾಡಬಲ್ಲದು. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ದುರ್ಗೆಯ ಮಡಿಲಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಅಸ್ಪತ್ರೆ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಶ್ರೀ ಅದಮಾರು ಮಠಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ನುಡಿದರು.

ಸಂಜೀವನಿ ಟ್ರಸ್ಟ್ ಮುಂಬಯಿ ಮಂಗಳೂರು ಕಟೀಲು ಅಲ್ಲಿನ ಅಜಾರುನಲ್ಲಿ ನಿರ್ಮಿಸಲುದ್ದೇಶಿತ ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್ ಕಟೀಲು ಇದರ ಶಿಲಾನ್ಯಾಸ ಕಾರ್ಯಕ್ರಮ ಇಂದಿಲ್ಲಿ ಆದಿತ್ಯವಾರ ಸಂಜೆ ನೆರವೇರಿಸಲ್ಪಟ್ಟಿದ್ದು ವಿಶ್ವಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ನೆರೆದ ಸದ್ಭಕ್ತರನ್ನು ಹರಸಿದರು.

ಮಣಿಪಾಲ ವಿಶ್ವವಿದ್ಯಾಲಯದ ನಿರ್ವಾಹಣೆ ಹಾಗೂ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಮಂದಿರದ ಆಡಳಿತ ಮಂಡಳಿ ಸಹಯೋಗದೊಂದಿಗೆ ರಚಿಸಲ್ಪಡುವ ಆಸ್ಪತ್ರೆಯ ಶಿಲಾನ್ಯಾಸ ಸಮಾರಂಭಕ್ಕೆ ದೀಪಪ್ರಜ್ವಲಿಸಿ
ಕರ್ನಾಟಕ ಸರಕಾರದ ಅರಣ್ಯ, ದ.ಕ ಜಿಲ್ಲಾ ಉಸ್ತುವರಿ ಸಚಿವ ಬಿ.ರಮಾನಾಥ ರೈ ಚಾಲನೆಯನ್ನಿತ್ತರು. ಆ ಮುನ್ನ ಆಕ್ವವಾಟರ್ ಎಟಿಎಂ ಮೆಷಿನ್ ಸೇವೆಗೆ ಅದಮಾರುಶ್ರೀ ಚಾಲನೆಯನ್ನಿತ್ತರು.

ಸಮಾರಂಭ ಅಧ್ಯಕ್ಷತೆ ಮೂಡಬಿದ್ರಿ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ವಹಿಸಿದ್ದು ಶ್ರೀಕ್ಷೇತ್ರ ಕಟೀಲು ಇದರ ವಂಶಿಕ ವಿಶ್ವಸ್ಥ, ಪ್ರಧಾನ ಆರ್ಚಕ ಕೆ.ವಾಸುದೇವ ಅಸ್ರಣ್ಣ, ಆರ್ಚಕರುಗಳಾದ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ, ಕೆ.ಅನಂತಪದ್ಮನಾಭ ಅಸ್ರಣ್ಣ ಇವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರುಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಟೀಲು ತಾಲೂಕು ಪಂಚಾಯತ್ ಸದಸ್ಯ ಸುಕುಮಾರ್ ಸನಿಲ್, ಕಟೀಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಪೂಜಾರ್ತಿ, ಕಟೀಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಮಣಿಪಾಲ ವಿವಿ ಪೂರ್ವ ಉಪಕುಲಪತಿ ಡಾ| ಹೆಚ್.ಎಸ್ ಬಲ್ಲಾಳ್, ಮಣಿಪಾಲ ವಿವಿ ಪೂರ್ವ ಉಪಕುಲಪತಿ ಡಾ| ವಿ.ಸುರೇಂದ್ರ ಶೆಟ್ಟಿ, ಮಣಿಪಾಲ ವಿವಿ ಕುಲಸಚಿವ ಡಾ| ನಾರಾಯಣ ಸಭಹಿತ್, ಎಂಆರ್‍ಪಿಎಲ್ ಸಂಸ್ಥೆಯ ಆಡಳಿತ ನಿರ್ದೇಶಕ ಹರಿ ಕುಮಾರ್, ಚಕ್ರವರ್ತಿ ಸೂಲಿಬೆಲೆ, ಸುಬ್ರಹ್ಮಣ್ಯ ಕುಸ್ನೂರು, ಟ್ರಸ್ಟ್‍ನ ವಿಶ್ವಸ್ಥ ಸದಸ್ಯರುಗಳಾದ ಲಕ್ಷ್ಮೀಶ ಜಿ.ಆರ್ಚಾರ್ಯ, ವಿಜಯಲಕ್ಷ್ಮೀ ಸುರೇಶ್ ರಾವ್ ವೇದಿಕೆಯಲ್ಲಿ ಆಸೀನರಾಗಿದ್ದು ಶುಭಾರೈಸಿದರು.

ಸಚಿವ ಬಿ.ರಮಾನಾಥ ಶುಭಾರೈಸಿ ಯಕ್ಷಗಾನ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಕಟೀಲು ಕ್ಷೇತ್ರವು ಇದೀಗ ಜನರ ಆರೋಗ್ಯ ಕಾಳಜಿಯಿಂದ ಸಂಜೀವಿನಿ ಟ್ರಸ್ಟ್ ಹಾಗೂ ಮಣಿಪಾಲ ಅಸ್ಪತ್ರೆಯ ಸಹಭಾಗಿತ್ವದಲ್ಲಿ ಅಸ್ಪತ್ರೆಯನ್ನು ನಿರ್ಮಿಸುತ್ತಿರುವುದು ಮಹತ್ವದ ಕೆಲಸ. ಡಾ| ಸುರೇಶ್ ರಾವ್ ಅವರಿಗೆ ಕಟೀಲಿನ ಜತೆ ಭಾವನಾತ್ಮಕ ಸಂಬಂಧವಿದೆ. ಈ ನಿಟ್ಟಿನಲ್ಲಿ ಕಟೀಲಿಗೆ ಆರೋಗ್ಯ ಭಾಗ್ಯ ಕೊಡುವ ಕೆಲಸ ಮಾಡಿದ್ದಾರೆ. ನಿಯಮಿತ ಪೌಷ್ಟಿಕತೆಯ ಆಹಾರ ಹಾಗೂ ಪರಿಸರ ಸ್ನೇಹಿ ವಾರ್ತಾವರಣವಿರಬೇಕು ಮಾಲಿನ್ಯ ಮುಕ್ತ ಸ್ವಚ್ಛ ಸಮಾಜ ಮಾಡಲು ಎಲ್ಲರೂ ಸಹಕರಿಸಬೇಕು.ಗ್ರಾಮೀಣ ಭಾಗದಲ್ಲಿ ಇಂತಹ ಅಸ್ಪತ್ರೆ ನಿರ್ಮಾಣವಾಗುವುದು ಶ್ಲಾಘನೀಯ ಎಂದರು.

ಸಂಜೀವನಿ ಟ್ರಸ್ಟ್ ಮುಂಬಯಿ ಇದರ ಆಡಳಿತ ಟ್ರಸ್ಟಿ ಡಾ| ಸುರೇಶ್ ಎಸ್.ರಾವ್ ಕಟೀಲು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಕಟೀಲು ಇಲ್ಲಿನ ಜನತೆಯ ಮತ್ತು ಸ್ಥಳೀಯ ಸುಮಾರು 15 ಗ್ರಾಮಗಳ ಜನತೆಯ ದೇಹಾರೋಗ್ಯದ ಹಿತ ಕಾಪಾಡಲು ಒಟ್ಟು 100 ಬೆಡ್‍ಗಳುಳ್ಳ ಪರೋಪಕಾರದ ಸೇವೆಯೊಂದಿಗೆ ಆಸ್ಪತ್ರೆ ನಿರ್ಮಿಸಲಿದ್ದೇವೆ. ಬಡತನ ರೇಖೆಕ್ಕಿಂತ ಕೆಳವರ್ಗದ ಜನತೆ ಮತ್ತು ಹಿರಿಯ ನಾಗರಿಕರಿಗೆ ಆರೋಗ್ಯ ಸುರಕ್ಷಾ ಯೋಜನೆ ಮುಖೇನ ಧರ್ಮಾರ್ಥ ತಪಾಸನೆ ನೀಡುವ ಯೋಜನೆ, ಪ್ರಧಾನ ಮಂತ್ರಿ ಸ್ವಚ್ಛ ಭಾರತ ಯೋಜನೆ, ಪಾಯಖಾನೆ ಯೋಜನೆ, ಗ್ರಾಮಗಳ ಜನತೆಗೆ ಕುಡಿಯುವ ಶುದ್ಧ ನೀರು ಪೂರೈಕೆ, ಸ್ಥಳಿಯ ಜನತೆಗೆ ಉದ್ಯೋಗವÀಕಾಶ ಮತ್ತು ಸರ್ವರ ಸ್ವಸ್ಥ ಕಾಪಾಡಲು ಮುಂಚಿತವಾದ ಕ್ರಮಯೋಜನೆ ಮೂಲಕ ಸಂಜೀವಿನಿ ಟ್ರಸ್ಟ್ ಮೂಲಕ ಸೇವೆ ನಿರ್ವಾಹಿಸಲಿದೆ ಎಂದರು.

ಪೂರ್ವಾಹ್ನ ವಿದ್ವಾನ್ ರಾಮಚಂದ್ರ ಉಪಾಧ್ಯಾಯ ಅವರು ಭೂವರಹಾ ಹೋಮ, ಶಿಲಾನ್ಯಾಸ ಪೂಜೆ ನೆರವೇರಿಸಿ ಅನುಗ್ರಹಿಸಿದರು. ಸಾಂಸ್ಕೃತಿಕವಾಗಿ ಆಹ್ವಾನಿತ ಯಕ್ಷಗಾನ ಕಲಾವಿದÀರು `ಹಾಸ್ಯಲಾಸ್ಯ' ಯಕ್ಷಗಾನ ಬಯಲಾಟ ಪ್ರದರ್ಶಿಸಿದರು. ಚಕ್ರವರ್ತಿ ಸೂಲಿಬೆಲೆ ತಂಡವು ಜಾಗೋ ಭಾರತ್ ಕಾರ್ಯಕ್ರಮ ಸಾದರ ಪಡಿಸಿದರು.

ಕಾರ್ಯಕ್ರಮದಲ್ಲಿ ಕೆಎಂಸಿ ಮಂಗಳೂರು ಡೀನ್ ಡಾ| ವೆಂಕಟ್ರಾಯ ಪ್ರಭು, ಟ್ರಸ್ಟ್‍ನ ವಿಶ್ವಸ್ಥ ಸದಸ್ಯರುಗಳಾದ ಡಾ| ಶುೃತಿ ಎಸ್.ರಾವ್, ಡಾ| ದೇವಿಪ್ರಸಾದ್ ರಾವ್, ಡಾ| ಪ್ರಶಾಂತ್ ರಾವ್, ಐಕಳ ಹರೀಶ್ ಶೆಟ್ಟಿ, ತೋನ್ಸೆ ಬಿ.ರಮಾನಂದ ರಾವ್, ಮುರಳೀಧರ ರಾವ್, ರಾಮಪ್ರಸಾದ್ ರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕೆ.ಹರಿನಾರಾಯಣ ಅಸ್ರಣ್ಣ ಸ್ವಾಗತಿಸಿದರು. ಅರುಣಾ ಪಿ.ರಾವ್ ಶ್ಲೋಕ ಪಠಿಸಿದರು. ಶ್ರೀಪತಿ ರಾವ್ ಆಸ್ಪತ್ರೆಯ ಯೋಜನೆ ಬಗ್ಗೆ ಸ್ಥೂಲವಾದ ಮಾಹಿತಿಯನ್ನೀಡಿದರು. ಪತ್ರಕರ್ತ ಮನೋಹರ್ ಪ್ರಸಾದ್ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀಶ ಜಿ.ಆರ್ಚಾರ್ಯ ಧನÀ್ಯವಾದ ಸಮರ್ಪಿದಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here