Wednesday 8th, May 2024
canara news

ಕವಯತ್ರಿ ಅನಿತಾ ಪೂಜಾರಿ ತಾಕೋಡೆ ಅವರ ಎರಡು ಕೃತಿಗಳ ಬಿಡುಗಡೆ

Published On : 21 Feb 2017   |  Reported By : Rons Bantwal


ಕೃತಿಗಳನ್ನು ಬರೆಯುವುದು ಕಷ್ಟದ ಕೆಲಸ : ಡ್ಯಾ| ವ್ಯಾಸರಾವ್ ನಿಂಜೂರ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.21: ಮಹಾನಗರದಲ್ಲಿನ ಹೆಸರಾಂತ, ಪ್ರಶಸ್ತಿ ವಿಜೇತ ಯುವ ಕವಯತ್ರಿ ಅನಿತಾ ಪಿ. ಪೂಜಾರಿ ತಾಕೋಡೆ ಅವರ ಕನ್ನಡ ಕವನ ಸಂಕಲನ `ಅಂತರಂಗದ ಮೃದಂಗ' ಮತ್ತು ತುಳು ಕವನ ಸಂಕಲನ `ಮರಿಯಲದ ಮದಿಮಾಲ್' ಎರಡು ಕೃತಿಗಳನ್ನು ಇಂದಿಲ್ಲಿ ಆದಿತ್ಯವಾರ ಸಂಜೆ ಮಾಟುಂಗಾ ಪೂರ್ವದ ಸೆಂಟ್ರಲ್ ರೈಲ್ವೇಯ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹÀದಲ್ಲಿ ಬಿಡುಗಡೆಗೊಂಡಿತು.

ಹಿರಿಯ ಲೇಖಕ, ವಿಜ್ಞಾನಿ, ಗೋಕುಲ ಮಾಸಿಕದ ಸಂಪಾದಕ, ಡಾ| ವ್ಯಾಸರಾವ್ ನಿಂಜೂರು ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಂತರಂಗದ ಮೃದಂಗ' ಕೃತಿಯನ್ನು ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಮನೋಹರ ಎಂ.ಕೋರಿ ಮತ್ತು ಮರಿಯಲದ ಮದಿಮಾಲ್' ಕೃತಿಯನ್ನು ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಗೌರವ ಕಾರ್ಯದರ್ಶಿ, ಕಥೆಗಾರ, ಪತ್ರಕರ್ತ, ಲೇಖಕ ಓಂದಾಸ್ ಕಣ್ಣಂಗಾರ್ ಅನಾವರಣಗೊಳಿಸಿದರು. ವೇದಿಕೆಯಲ್ಲಿ ಪದ್ಮನಾಭ ಪೂಜಾರಿ, ರಕ್ಷಾ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ವ್ಯಾಸರಾವ್ ನಿಂಜೂರು ಅವರು ಕವಿತೆ ಬರೆಯುವುದು ಕಷ್ಟದ ಕೆಲಸ. ಅದೊಂದು ತಪಸ್ಸು ಪ್ರಯತ್ನಪಟ್ಟರೆ ಅದೊಂದು ಮನಸ್ಸಿಗೆ ಮುದ ನೀಡುವ ಸಿಂಚನವಾಗಬಹುದು. ಕನ್ನಡದ ಹಿರಿಯ ಕವಿಗಳ ಆಳವಾದ ಅರ್ಥವತ್ತಾದ ಕವನಗಳು, ಅದರ ಮಾಧುರ್ಯ ಇಂದಿಗೂ ಶಾಶ್ವತವಾಗಿ ಉಳಿದಿದೆ. ನಮ್ಮ ಆಕಾಂಕ್ಷೆಯ ಕವನಗಳು ನಮ್ಮ ಬಾಳಿಗೆ ಅರ್ಥಮಾಡಿ ಕೊಡುವ ಕವಿತೆಗಳಾಗಬಹುದು. ಅನಿತಾ ಪೂಜಾರಿ ವಯಸ್ಸಿನಲ್ಲಿ ಕಿರಿಯವಳಾಗಿದ್ದರೂ ಯಶಸ್ವಿ ಕವಿತೆಗಳನ್ನು ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅವರಿಂದ ಇನ್ನಷ್ಟು ಕೃತಿಗಳು ಬೆಳಕು ಕಾಣುವಂತಾಗಲಿ ಎಂದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಅಂತರಂಗದ ಮೃದಂಗ ಕೃತಿ ಪರಿಚಯಿಸಿ ಮಾತನಾಡಿದ ಅವರು ಕವನಗಳು ಹೊರಣದ ಮೂಲಕ ಕಾವ್ಯ ಕೃಷಿಯನ್ನು ನಿರಂತರ ನೀಡುತ್ತಿರುವ ಅನಿತಾ ಅವರ ಕೃತಿಗಳ ಲೋಕಾರ್ಪಣೆ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಆಶಾಭಾವ, ನೋವು, ನಿರಾಸೆ, ಪ್ರಕೃತಿ ಜೀವನ, ಪ್ರೇಮಕಾವ್ಯದ ವಿರಹದ ನೋವುಗಳು ಸೊಗಸಾಗಿ ಈ ಕೃತಿಯಲ್ಲಿ ಚಿತ್ರಿತವಾಗಿದೆ. ಎರಡು ಜೀವನವನ್ನು ಬೆಸೆಯುವ ಕಾವ್ಯ ಸೇತುವೆ ಈ ಕವನಗಳ ವಿಶೇಷತೆಯಾಗಿದೆ. ಭವಿಷ್ಯದಲ್ಲಿ ಅವರಿಂದ ಕಾವ್ಯಲೋಕ ಇನ್ನಷ್ಟು ಶ್ರೀಮಂತಗೊಳ್ಳಲಿ ಎಂದರು.

ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಅವರು ಮರಿಯಲದ ಮದಿಮಾಲ್ ಕೃತಿಯನ್ನು ಪರಿಚಯಿಸಿದ ಅವರು ತುಳುನಾಡ ಪ್ರಕೃತಿ ನಡುವಿನ ಸುಖ-ದುಃಖಗಳ ಸಮ್ಮಿಳಿತವು ಪ್ರಾಮಾಣಿಕತೆ ಕವಿತೆಯಲ್ಲಿ ಎದ್ದು ಕಾಣುತ್ತಿದೆ. ಪ್ರಕೃತಿಯ ಒಳನೋಟಗಳ ಅನುಸಂಧಾನ, ಸೂಕ್ಷ್ಮ ದರ್ಶನ ಈ ಕವಿತೆಗಳಲ್ಲಿ ಕಾಣಬಹುದು ಎಂದು ನುಡಿದರು.

ಜಯಲಕ್ಷ್ಮೀ ದೇವಾಡಿಗ ಅವರು ಅನಿತಾ ಪೂಜಾರಿ ಅವರ ಕವಿತೆಗಳನ್ನುಹಾಡಿದರು. ಅಭಿಜಿತ್ ಪ್ರಕಾಶನದ ವತಿಯಿಂದ ಲೇಖಕಿ, ಕವಿ ಆನಿತಾ ಪೂಜಾರಿ ಅವರಿಗೆ ಅಭಿನಂದಿಸಲಾಯಿತು. ನಗರದ ಹಲವಾರು ಹಿರಿಯ, ಕಿರಿಯ ಕವಿಗಳು, ಸಾಹಿತಿಗಳು, ರಂಗ ನಿರ್ದೇಶಕರು, ಕಲಾವಿದರು ಉಪಸ್ಥಿತರಿದ್ದರು. ಡಾ| ಮಮತಾ ರಾವ್ ಅವರು ಸ್ವಾಗತಿಸಿ ಅತಿಥಿsಗಳನ್ನು ಪರಿಚಯಿಸಿದರು.

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here