Thursday 8th, June 2023
canara news

ಥಾಣೆ ಮಹಾನಗರಪಾಲಿಕೆ ಮೇಯರ್ ವಿೂನಾಕ್ಷಿ ಪೂಜಾರಿಗೆ ಸನ್ಮಾನ

Published On : 09 Mar 2017


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.08: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ ಬುಧವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಸಂಭ್ರಮಿಸಿದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಥಾಣೆ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಆಯ್ಕೆಗೊಂಡ ವಿೂನಾಕ್ಷಿ ಪೂಜಾರಿ ಮತ್ತು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಸದಸ್ಯರಾಗಿ ಚುನಾಯಿತ ಜಗದೀಶ್ ಕೆ.ಅವಿೂನ್ ಅವರನ್ನು ಅಸೋಸಿಯೇಶನ್ ಪರವಾಗಿ ಸನ್ಮಾನಿಸಿ ಶುಭಾರೈಸಲಾಯಿತು.

 

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಪದಾಧಿಕಾರಿಗಳನ್ನೊಳ ಗೊಂಡು ಪೇಟ ತೊಡಿಸಿ, ಶಾಲು ಹೊದಿಸಿ, ಫಲಪುಷ್ಪಗುಪ್ಚ, ಸ್ಮರಣಿಕ, ಮಾನಪತ್ರವನ್ನಿತ್ತು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ರಾಜಕೀಯ ಧುರೀಣರುಗಳಾದ ಲಕ್ಷ್ಮಣ ಪೂಜಾರಿ, ಶ್ರಿನಿವಾಸ ಆರ್.ಕರ್ಕೇರ, ಅಸೋಸಿಯೇ ಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆಯರುಗಳಾದ ವಿಲಾಸಿನಿ ಕೆ.ಸಾಲ್ಯಾನ್ ಮತ್ತು ಪ್ರಭಾ ಕೆ.ಬಂಗೇರಾ, ಗೌ| ಪ್ರ| ಕಾರ್ಯದರ್ಶಿ ಸುಮಿತ್ರಾ ವಿ.ಬಂಗೇರ, ಜೊತೆ ಕಾರ್ಯದರ್ಶಿಗಳಾದ ಡಾ| ಗೀತಾಂಜಲಿ ಎಲ್.ಸಾಲ್ಯಾನ್, ಮಕ್ಕಳ ಮನಶಾಸ್ತ್ರಜ್ಞೆ ಡಾ| ಮೇಘ ಭಯಾನಿ, ನ್ಯಾ| ರೋಹಿಣಿ ಜೆ.ಸಾಲ್ಯಾನ್, ವಿದ್ಯಾರಾಜ ಸಾಲ್ಯಾನ್, ಬೇಬಿ ಎಸ್.ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದು ಅವರನ್ನು ಗೌರವಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ ಮತ್ತು ಡಾ| ಯು.ಧನಂಜಯ ಕುಮಾರ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು ಅಸೋಸಿಯೇಶನ್‍ನ ವಿವಿಧ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮಹಿಳಾ ವಿಭಾಗಗಳ ಯುವತಿಯರು ಮತ್ತು ಸದಸ್ಯೆಯರು ವೈವಿಧ್ಯಮಯ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು.

 




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here