Friday 26th, April 2024
canara news

ಮಾಹಿಮ್‍ನ ಸಾರಸ್ವತ್ ವಿದ್ಯಾ ಮಂದಿರದಲ್ಲಿ ಉದ್ಘಾಟಿಸಲ್ಪಟ್ಟ ವಿಶ್ವ ಕೊಂಕಣಿ ಸಿಗ್ಮೋತ್ಸವ

Published On : 18 Mar 2017   |  Reported By : Rons Bantwal


ಮಾತೃಭಾಷೆ ಭವಿಷ್ಯ ರೂಪಿಸುವ ಶಕ್ತಿ : ರಾಜ್ಯಪಾಲ ಆಚಾರ್ಯ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮಂಗಳೂರು, ಮಾ.18: ನಮ್ಮಲ್ಲಿ ಉಡುಪಿ, ಮಂಗಳೂರು, ಉತ್ತರ ಕನ್ನಡ, ಗೋವಾ, ಕೊಚ್ಚಿನ್ ಕೊಂಕಣಿ ಎನ್ನುವ ಭಿನ್ನತೆಗಳು ನಮ್ಮಲ್ಲಿವೆ. ಆದರೆ ಎಲ್ಲರಲ್ಲೂ ಇರುವ ವಿಚಾರ ಒಂದೇ ಅದೇನಂದರೆ ನಮ್ಮ ಮಾತೃಭಾಷೆ ಕೊಂಕಣಿ. ಇದೇ ನಮ್ಮನ್ನು ವಿಶ್ವಕ್ಕೆ ಪರಿಚಯಿಸಿದೆ. ಆದುದರಿಂದಲೇ ನಾವೆಲ್ಲರೂ ಜಾಗತಿಕವಾಗಿ ಪಸರಿಸಿದರೂ ಕೊಂಕಣಿಗರು ಎಂದೇ ಮಾನ್ಯರೆಣಿಸಿದ್ದೇವೆ. ಅದೇ ನಮ್ಮ ಹೆಗ್ಗಳಿಕೆ ಎಂದು ನಾಗಲ್ಯಾಂಡ್‍ನ ರಾಜ್ಯಪಾಲ ಪಿ.ಬಿ ಆಚಾರ್ಯ ನುಡಿದರು.

ವಿಶ್ವ ಕೊಂಕಣಿ ಕೇಂದ್ರ ಮಂಗಳುರು ಇದರ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಫೌಂಡೇಶನ್ ಸಂಸ್ಥೆಯು ಕರ್ನಾಟಕ ಸರಕಾರದ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ವಿಶ್ವ ಕೊಂಕಣಿ ಲೋಕ ಕಲಾ ಉತ್ಸವವನ್ನು ಉದ್ಘಾಟಿಸಿ ಮಾತೃಭಾಷೆ ಭವಿಷ್ಯ ರೂಪಿಸುವ ಶಕ್ತಿ ಆಗಿದ್ದು, ಆಮೂಲಕ ಗುರುತಿಸಿಕೊಂಡಿರುವುದು ಅಭಿಮಾನ ಅನಿಸುತ್ತದೆ. ಮಾತೃಭಾಷೆಯ ಮೂಲಕ ಸಮೃದ್ಧಿ ಸಾಧಿಸಿದ ಕೊಂಕಣಿಗರು ಸರ್ವಶ್ರೇಷ್ಠರು. ಭಾರತದ ಅಭಿವೃದ್ಧಿಗೆ ಕೊಂಕಣಿಗರ ಪಾತ್ರವೂ ಮಹತ್ತರವಾಗಿದ್ದು ವಿವಿಧತೆಯಲ್ಲಿ ಏಕತೆ ಕಂಡ ಕೊಂಕಣಿಗರ ಅಭೂತಪೂರ್ವ ಸಾಧನೆ ಸ್ತುತ್ಯರ್ಹ. ಮಾತೃಭಾಷೆ ವ್ಯಕ್ತಿತ್ವದ ವಿಕಾಸಕ್ಕೆ ಮೂಲವಾಗಿದ್ದು, ಮಾನವನ ಗುರುತರ ಸೇವೆಗೆ ಮಾತೃಭಾಷೆ ಅಸ್ಮಿತೆಯಾಗಿದೆ. ಆದುದರಿದ ಭವಿಷ್ಯತ್ತಿನಲ್ಲಿ ಕೊಂಕಣಿಗರು ಮುಂದುವರಿದ ಜನಾಂಗೀಯರಾಗಲು ಈ ಉತ್ಸವ ಸರ್ವರಲ್ಲೂ ಉತ್ಸಹ ತುಂಬುವಂತಾಗಲಿ. ಕೊಂಕಣಿಗರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಂಸ್ಕೃತಿಯ ಅನುಭವ ಆದಾಗ ಮಾತೃಭಾಷಾಭಿಮಾನ ತನ್ನಷ್ಟಕ್ಕೇ ಪುಳಕಿತಗೊಳ್ಳುವುದು. ಪ್ರತೀಯೊಂದು ಭಾಷಾ ಬಲಾಢ್ಯತೆಗೆ ಮಹತ್ವದ ಅಗತ್ಯವಿದೆ ಎಂದೂ ರಾಜ್ಯಪಾಲ ಆಚಾರ್ಯ ನುಡಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಹಿಮ್ ಇಲ್ಲಿನ ಸಾರಸ್ವತ್ ವಿದ್ಯಾ ಮಂದಿರದ ಏಕನಾಥ್ ಠಾಕೂರ್ ರಂಗಮಂಟಪದ ಲ್ಲಿ ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಇದರ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆಯಲ್ಲಿ ನೆರವೇರಿಸಲ್ಪಟ್ಟ ಕಲಾ ಉತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಪ್ರವರ್ತಕಿ ಮೇಡಂ ಗ್ರೇಸ್ ಪಿಂಟೋ, ಗೌರವ ಅತಿಥಿüಗಳಾಗಿ ಕವಿತಾ ಪಿ.ಆಚಾರ್ಯ, ಎನ್‍ಕೆಜಿಎಸ್‍ಬಿ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಕಿಶೋರ್ ಕುಲ್ಕರ್ಣಿ, ಸರಸ್ವತ್ ಬ್ಯಾಂಕ್‍ನ ನಿರ್ದೇಶಕ ಕಿಶೋರ್ ರಂಗ್ನೇಕರ್ ಮತ್ತು ಉದ್ಯಮಿ ಕೆ.ಉಲ್ಲಾಸ್ ಕಾಮತ್ ಉಪಸ್ಥಿತÀರಿದ್ದರು.

ಉದ್ದೇಶಭರಿತ ಜೀವನಕ್ಕೆ ಈ ಉತ್ಸವ ಮಾರ್ಗದರ್ಶಕವಾಗಿದೆ. ಕೊಂಕಣಿ ಮಹಿಳೆಯರೂ ಸಾಧನೆಯ ಮುಂಚೂಣಿಯಲ್ಲಿದ್ದಾರೆ. ದೇಶದಲ್ಲಿ ಕೊಂಕಣಿ ಜನತೆ ಮಾಡಿದಷ್ಟು ಕೆಲಸ ಬೇರ್ಯಾರೂ ಮಾಡಿಲ್ಲ. ಇದನ್ನು ನಾವೆಲ್ಲರೂ ಏಕತೆಯಿಂದ ಮುನ್ನಡೆಸಿ ಕೊಂಕಣಿ ಮೂಲಕ ರಾಷ್ಟ್ರವನ್ನು ಜಾಗತಿಕವಾಗಿ ಮೆರೆಸೋಣ ಎಂದು ಮೇಡಂ ಪಿಂಟೋ ನುಡಿದರು.

ರಾಂಗ್ನೇಕರ್ ಮಾತನಾಡಿ ಭಾಷೆಗೆ ಪ್ರಾದೇಶಿಕ ವಿಚಾರವಿದ್ದರೂ ಮಾತೃಭಾಷೆ ಎಂದಿಗೂ ಮಾತೃಭಾಷೆಯೇ ಆಗಿರುತ್ತದೆ. ಕೊಂಕಣಿ ವ್ಯಕ್ತಿಗಳು ಸಾಧನೆಯಲ್ಲಿ ನಿಪುಣರು. ಆದುದರಿಂದ ಇನ್ನೂ ಕೊಂಕಣಿ ವ್ಯಕ್ತಿಗಳು ಮತ್ತು ಕೊಂಕಣಿ ಸಂಸ್ಥೆಗಳು ಜೊತೆ ಜೊತೆಯಾಗಿ ಮುನ್ನಡೆಯಲಿ ಆ ಮೂಲಕ ಭಾಷೆ ಶಿಖರದತ್ತ ಸಾಗಲಿ ಎಂದರು.

ಭವಿಷ್ಯತ್ತಿನ ಪೀಳಿಗೆಗೆ ಮಾತೃ ಭಾಷಾ ಅರಿವು ಮೂಡಿಸಲು ಇಂತಹ ಉತ್ಸವಗಳು ಪೂರಕವಾಗಿವೆ. ಸಮಗ್ರ ಜನತೆಯು ಕೊಂಕಣಿಗರನ್ನು ಬುದ್ಧಿವಂತರು, ಗೌರವ್ವಾನಿತರು ಎನ್ನುವಷ್ಟು ನಮ್ಮ ಭಾಷೆ ನಮಗೆ ಗೌರವ ತಂದಿದೆ. ನಿರುದ್ಯೋಗಿಗಳನ್ನೆವುದು ನಮ್ಮಲ್ಲಿ ಇರದೆ ಮಹಿಳೆಯರೂ ಇನ್ನು ಮನೆ ಕೆಲಸಕ್ಕೆ ಮಾತ್ರ ಮೀಸಲಾಗಿಸದೆ ಸಮಾನತೆಯತ್ತ ಯೋಚಿಸುವ ಅಗತ್ಯ ನಮಗಿದೆ. ಇದಕ್ಕೂ ಕೊಂಕಣಿ ಭಾಷೆ ಪ್ರೇರಕವಾಗಲಿ ಎಂದು ಉಲ್ಲಾಸ್ ಕಾಮತ್ ತಿಳಿಸಿದರು.

ಕಿಶೋರ್ ಕುಲ್ಕರ್ಣಿ ಮಾತನಾಡಿ ಕೊಂಕ್ಣಿ ಭಾಷೆ ರಾಷ್ಟ್ರ ಮಾನ್ಯತೆ ಪಡೆದಿರುವುದೇ ಅಭಿನಂದನೀಯ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಕೊಂಕಣಿಗರ ಪಾತ್ರ ಹಿರಿದಾಗಿದೆ. ಇಂತಹ ಭಾಷೆಯ ಉಳಿವು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಬಸ್ತಿ ವಾಮನ ಶೆಣೈ ಪ್ರಾಸ್ತವಿಕ ನುಡಿಗಳನ್ನಾಡಿ ಗೋವಾದಲ್ಲಿ ಫಾಲ್ಗುಣಿ ಮಾಸದಲ್ಲಿ ಸಂಭ್ರಮಿಸುವ ಮಹತ್ತರವಾದ ಸಾಂಸ್ಕೃತಿಕ ಉತ್ಸವವೇ ಶಿಗ್ಮೋತ್ಸವ. ಇಂತಹ ಪರಂಪರೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. ಸಮುದಾಯದ ನಾಯಕತ್ವಕ್ಕಾಗಿ ಇಂತಹ ಕಾರ್ಯಕ್ರಮ ಅವಶ್ಯವಾಗಿದ್ದು, ಕೊಂಕಣಿ ಅಲ್ಲಿನ ಯುವ ಜನತೆಗೆ ಪೆÇ್ರೀತ್ಸಾಹಿಸಿದಾಗ ನಮ್ಮ ಭಾಷೆ, ಸಂಸ್ಕೃತಿ ತನ್ನಿಂತಾನೇ ಬೆಳೆಯುವುದು. ಮಾತೃಭಾಷಾ ಪರಿಣತೆಯ ತರಬೇತಿ ಇತ್ಯಾದಿಗಳೊಂದಿಗೆ ನಾವೂ ಭಾಷಾಭಿಮಾನ ಬೆಳೆಸ ಬೇಕಾUಗಿದ್ದು ಇದು ರಗ್ತಗತವಾಗಿ ಮುನ್ನಡೆಯ ಬೇಕಾಗಿದೆ. ಪರಂಪರೆಗಳ ಪ್ರಧಾನ್ಯತೆಯಿಂದ ಭಾಷಾಭಿಮಾನ ವೃದ್ಧಿಯಾಗುತ್ತಿದ್ದು ಪ್ರಾಚೀನ್ಯತೆ ಉಳಿಸುವಲ್ಲಿ ಯುವ ಜನತೆ ಉತ್ಸುಕತರಾಗಬೇಕು ಎಂದÀು ಕರೆಯಿತ್ತರು.

ಸತೀಶ್ ರಾಮ ನಾಯಕ್, ಉಲ್ಲಾಸ್ ಡಿ.ಕಾಮತ್, ಉಮೇಶ್ ಪೈ, ಟಿ.ವಿ.ಶೆಣೈ, ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಲಿಯೋ ಫೆರ್ನಾಂಡಿಸ್, ಪಿಲಿಫ್ ಕಾಂಜೂರ್‍ಮಾರ್ಗ್, ಯು.ಎನ್ ಕಿಣಿ, ಶ್ರಿಮತಿ ಬೆನೆಡಿಕ್ಟಾ ರೆಬೆಲ್ಲೊ ಸೇರಿದಂತೆÀ ನೂರಾರು ಕೊಂಕಣಿ ಕಲಾಸಕ್ತರು ಉಪಸ್ಥಿತರಿದ್ದು, ಕಾರ್ಯಕ್ರಮದ ಆದಿಯಲ್ಲಿ ದಿ| ವಿಜಯನಾಥ ಶೆಣೈ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಸಿಗ್ಮೋತ್ಸವ ಮುಂಬಯಿ ಸಮಿತಿ ಸಂಚಾಲಕ ಡಾ| ಚಂದ್ರಶೇಖರ್ ಎನ್.ಶೆಣೈ ಸ್ವಾಗತಿಸಿದರು. ಕಲಾಕೋಸ್ಟ್ ಬಳಗವು ಮುಕುಂದ್ ಪೈ ನಿರ್ದೇಶನದಲ್ಲಿ ಸ್ವಾಗತಗೀತೆಯನ್ನಾಡಿದರು. ಅನುಪಮಾ ಶೆಣೈ ಒಡಿಸ್ಸಿ ನೃತರೂಪಕವಾಗಿ ಗಣೇಶ ಸ್ತುತಿಗೈದರು.

ಸುಧಾ ಶೆಣೈ ಮತ್ತು ತಂಡವು ಕವಿತಾ ಆಚಾರ್ಯ ಅವರಿಗೆ ವೊಂಟಿ ಬೊರ್ಚಿ (0) ಪರಂಪರಿಕ ಕಾರ್ಯಕ್ರಮ ಮೂಲಕ ಗೌರವಿಸಿದರು. ಬಳಿಕ ಕಿಶೋರ್ ಕುಲಕರ್ಣಿ ಅವರ `ಉಪನಿಷದ್' ಕೃತಿಯನ್ನು ಅತಿಥಿüಗಳು ಬಿಡುಗಡೆ ಗೊಳಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಫೌಂಡೇಶನ್‍ನ ಕಾರ್ಯದಶಿ ಬಿ.ಪ್ರಭಾಕರ್ ಪ್ರಭು, ಕಮಾಲಾಕ್ಷ ಜಿ.ಸರಾಫ್, ಸುಧಾ ಶೆಣೈ ಅತಿಥಿüಗಳಿಗೆ ಪುಷ್ಫಗುಪ್ಚ, ಸ್ಮರಣಿಕೆ ನೀಡಿ ಗೌರವಿಸಿದರು. ಉದಯ ಮಲ್ಯ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಉಪಾಧ್ಯಕ್ಷ ವೆಂಕಟೇಶ್ ಎನ್.ಬಾಳಿಗಾ ವಂದನಾರ್ಪಣೆಗೈದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಪ್ಪಿನಕುದ್ರು ಭಾಸ್ಕರ್ ಕೊಗ್ಗ ಕಾಮತ್ ಬಳಗವು ಬೊಂಬೆಯಾಟ ಪ್ರದರ್ಶಿಸಲ್ಪಟ್ಟಿತು. ಹಾಗೂ ಮಾಲತಿ ಯು.ಕಾಮತ್ ಮತ್ತು ತಂಡವು ಉಡಿದಾ ಮುಹೂರ್ತ್ ಹೊವ್ಯೊ (ಪಾಡ್ದನ) ಕಾರ್ಯಕ್ರಮ ಪ್ರಸ್ತುತ ಪಡಿಸಿತು.

ಇಂದು ಭಾನುವಾರ ದಿನಪೂರ್ತಿ ನಡೆಯುವ ಉತ್ಸವದಲ್ಲಿ ಪೂರ್ವಾಹ್ನ ಕೊಂಕಣಿ ಕವಿಗೋಷ್ಠಿ, ಸಿಗ್ಮೋ ನೃತ್ಯ, ಶ್ರೀಕೃಷ್ಣ ಜನ್ಮ ಕಥಾ ನ್ಯತ್ಯರೂಪಕ, ಸಿದ್ಧಿ ದಮಾಮ್ ನೃತ್ಯ, ಗುಮ್ಟಾ ವಾದ್ಯ ಸಂಗೀತ, ವರ್ಸಾಕ್ ಏಕ್ ಪಾವ್ಟಿಂ ಕೊಂಕಣಿ ಕಿರು ನಾಟಕ, ದೀಪಮಾಲ ನೃತ್ಯ, ಗುಮ್ಟಾ ನೃತ್ಯ ಇತ್ಯಾದಿಗಳು ನಡೆಯಲಿದ್ದು ಸಂಜೆ ಗಂಟೆಗೆ ಸಮಾರೋಪ ಸಮಾರಂಭ, ಸನ್ಮಾನ ಕಾರ್ಯಕ್ರಮ ಜರಗಲಿದೆ ಎಂದು ಕಾರ್ಯಕ್ರಮ ಸಂಘಟಕರುಗಳಾದ ಬಸ್ತಿ ವಾಮನ ಶೆಣೈ ಹಾಗೂ ಡಾ| ಚಂದ್ರಶೇಖರ್ ಎನ್.ಶೆಣೈ ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here