Friday 26th, April 2024
canara news

ಡಿವೈಎಸ್‍ಪಿ ವಲೇಂಟೈನ್-ಕಾಗೋಡು ಅಣ್ಣಪ್ಪರಿಗೆ `ಕರ್ನಾಟಕ ಸೌರಭ ಪ್ರಶಸ್ತಿ' ಪ್ರದಾನ

Published On : 20 Mar 2017   |  Reported By : Ronida Mumbai


ಜೀವನವನ್ನು ನಾಡುನುಡಿಗೆ ಮೀಸಲಿಡಿರಿ - ಡಿವೈಎಸ್‍ಪಿ ವಲೇಂಟೈನ್ ಡಿ'ಸೋಜಾ
(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ಮಾ.19: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಮಂಜುನಾಥ್ ಎಜ್ಯುಕೇಷನ್ ಟ್ರಸ್ಟ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಚಿಂತನ ಮಾಲಿಕೆ-8, ಕಳೆದ ಶನಿವಾರ ಯೆಯ್ಯಾಡಿ ಅಲ್ಲಿನ ಮಹಿಳಾ ಐಟಿಐನಲ್ಲಿ ಜರಗಿತು. ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಾವಿದ ಕಾಗೋಡು ಅಣ್ಣಪ್ಪ ಸಾಗರ, ಸಮಾರಂಭವನ್ನು ಉದ್ಘಾಟಿಸಿದರು.

ಉದ್ಘಾಟನಾ ಭಾಷಣವನ್ನುದ್ದೇಶಿಸಿ ಮಾತನಾಡಿದ ಕಾಗೋಡು ಅಣ್ಣಪ್ಪ ಮಂಗಳೂರು ಎಂದರೆ ಪಂಜೆ, ಕಾರಂತ ಪೈ ಅವರ0ತಹ ಖ್ಯಾತನಾಮ ಸಾಹಿತಿಗಳು ನಡೆದಾಡಿದ ಭೂಮಿ. ಇಲ್ಲಿಯ ಜನ ಸಾಹಿತ್ಯದ ಅಭಿರುಚಿಯುಳ್ಳವರು, ಕಲಾಪೋಷಕರು. ಇವತ್ತು ಕನ್ನಡ ಭಾಷೆ, ಸಂಸ್ಕøತಿಗಳು ಎಲ್ಲ ಕಡೆ ಬೆಳೆಯಬೇಕು. ಅದು ವಿಶ್ವ ವ್ಯಾಪಿಯಾಗಬೇಕು. ನಮ್ಮ ಮಕ್ಕಳು ತಾಂತ್ರಿಕತೆಯಲ್ಲಿ ಮಾತ್ರ ಬೆಳೆದರೆ ಸಾಲದು, ಸಾಂಸ್ಕøತಿಕವಾಗಿ ಕೂಡ ಬೆಳೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಗೋಡು ಅಣ್ಣಪ್ಪ ಹಾಗೂ ಡೆಪ್ಯೂಟಿ ಸೂಪರಿನ್‍ಟ್ನೆಡಂಟಲ್ ಆಫ್ ಪೆÇಲೀಸ್ (ಡಿವೈಎಸ್‍ಪಿ) ಮಂಗಳೂರು ಮತ್ತು ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ಪುರಸ್ಕೃತ ವಲೇಂಟೈನ್ ಡಿ'ಸೋಜಾ ಅವರಿಗೆ `ಕರ್ನಾಟಕ ಸೌರಭ ಪ್ರಶಸ್ತಿ' ಪ್ರದಾನಿಸಿ ಗೌರವಿಸಲಾಯಿತು.

ಸನ್ಮಾನಕ್ಕೆ ಉತ್ತರಿಸಿದ ವಲೇಂಟೈನ್ ವಿದ್ಯಾಥಿರ್ü ಯುವಜನರು ದುಶ್ಚಟಗಳಿಗೆ ದಾಸರಾಗಬಾರದು. ದೇವರು ಒಂದಲ್ಲ ಒಂದು ಪ್ರತಿಭೆಯನ್ನು ನಮ್ಮ ಮಕ್ಕಳಿಗೆ ಕೊಟ್ಟಿದ್ದಾರೆ. ಆ ಪ್ರತಿಭೆಯನ್ನು ನಾವು ಬೆಳೆಸಬೇಕು ಎಂದರು. ಕನ್ನಡದಲ್ಲೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಮಗೆ ಹೆಮ್ಮೆಯ ಸಂಗತಿ ಎಂದ ಅವರು ನಮ್ಮ ಜೀವನವನ್ನು ನಾಡುನುಡಿಗೆ ಮೀಸಲಾಗಿಡಬೇಕು ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮಾತನಾಡಿ ಕನ್ನಡ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕು. ಸಣ್ಣ ಸಣ್ಣ ವಿಷಯಗಳಲ್ಲೂ ಕನ್ನಡವನ್ನು ಬಳಸಬೇಕು. ಪೆಪ್ಸಿ, ಕೋಲಾ ಕುಡಿಯುವುದನ್ನು ಬಿಟ್ಟು ಎಳನೀರನ್ನು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದೆಂದು ತಮ್ಮ ಕವನದ ಮೂಲಕ ಸಭೆಗೆ ತಿಳಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಬಲ್ಲಾಳ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡದ ಬಗ್ಗೆ ಉದಾಸೀನತೆ ಸಲ್ಲದು, ಸರಕಾರಿ ಕಾರ್ಯಕ್ರಮಗಳಲ್ಲಿ ಕನ್ನಡದಲ್ಲೇ ಮಾತನಾಡಬೇಕೆಂದು ಸರಕಾರ ಸರಕಾರಿ ಕಛೇರಿಗಳಿಗೆ ಸುತ್ತೋಲೆ ಹೊರಡಿಸಿದೆ ಎಂದರು. ಕನ್ನಡದ ಬಗ್ಗೆ ಮಾತನಾಡುತ್ತೇವೆ, ಆದರೆ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುತ್ತೇವೆ. ಇದು ಬೇಸರದ ಸಂಗತಿ ಎಂದರು. ಕನ್ನಡ ಕಲಿತರೆ ನಮ್ಮ ಮಕ್ಕಳು ಸುಸಂಸ್ಕøತರಾಗುತ್ತಾರೆ. ವಿದೇಶಗಳಲ್ಲಿ ಕೂಡ ಕನ್ನಡಕ್ಕೆ ಗೌರವ ಸಿಗ್ತಾ ಇದೆ. ಅಮೇರಿಕಾದಲ್ಲಿ `ಅಕ್ಕ' ಸಮ್ಮೇಳನ ನಡೆಸುತ್ತಿದ್ದಾರೆ. ಹಾಗಾಗಿ ಕನ್ನಡ ಕಲಿತರೆ ಬೆಲೆಯಿಲ್ಲ ಎಂದು ತಿಳಿಯಬಾರದು ಎಂದರು.

ಹೃದಯವಾಹಿನಿ ಇದರ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಹೊರನಾಡು ಮತ್ತು ಅನಿವಾಸಿ ಕನ್ನಡಿಗರು ಕನ್ನಡದ ಕೆಲಸವನ್ನು ತುಂಬಾ ಸಡಗರದಿಂದ ಮಾಡುತ್ತಾರೆ. ಅದೇ ಹುಮ್ಮಸ್ಸು ನಮ್ಮೆಲ್ಲರಲ್ಲೂ ಮೂಡಿ ಬರಬೇಕೆಂದು ಅಭಿಪ್ರಾಯ ಪಟ್ಟರು.

ಕು| ಅವಿನ್ಯಾ ಮತ್ತು ಬಳಗದವರಿಂದ ಪ್ರಾರ್ಥನೆ ಹಾಡಿದರು. ಅತಿಥಿü ತರಬೇತಿ ಅಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದು, ಎಂ.ರವಿ ಮಂಗಳೂರು ಕನ್ನಡ ಚಿಂತನ ಉಪನ್ಯಾಸ ನೀಡಿದರು. ಸ್ವರ ಸಂಗಮ ತಂಡದವರಿಂದ ಗೀತ ಗಾಯನ ಕಾರ್ಯಕ್ರಮ ನಡೆಸಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here