Saturday 27th, April 2024
canara news

ತುಳುನಾಡಿನಾದ್ಯಂತ ವಿಶು ಹಬ್ಬದ ಸಂಭ್ರಮ

Published On : 15 Apr 2017   |  Reported By : Canaranews Network


ಮಂಗಳೂರು: ತುಳುನಾಡಿನ ಜನರಿಗೆ ಶುಕ್ರವಾರ ವಿಶು ಹಬ್ಬದ ಸಡಗರ. ತುಳುವರಿಗೆ ಹೊಸ ವರ್ಷದ ಆರಂಭ ಎಂದೆ ಕರೆಯಲ್ಪಡುವ ಈ ಹಬ್ಬವನ್ನು ತುಳುನಾಡಿನ ಜನ ಸಾಂಪ್ರಾದಾಯಿಕ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದರು.ವಸಂತ ಕಾಲದಲ್ಲಿ ಸಿಗುವ ಪ್ರಾಕೃತಿಕ ಫಲ ಪುಷ್ಪ ಗಳನ್ನು ಈ ವಿಶು ಹಬ್ಬದ ದಿನ ಮನೆಗಳಲ್ಲಿ,ದೇವಸ್ಥಾನಗಳಲ್ಲಿ,ದೈವಸ್ಥಾನಗಳಲ್ಲಿ ಕಣಿ ಇಟ್ಟು ಹೊಸ ವರ್ಷವನ್ನು ಸ್ವಾಗತಿಸೋದು ಈ ಹಬ್ಬದ ವಿಶೇಷ.

ಕಣಿಯ ವಿಶೇಷತೆ:

ಕಣಿ ಇಡೋದೆಂದರೆ ಹೊಸ ಫಸಲುಗಳಾದ ಭತ್ತ,ಅಕ್ಕಿ,ತರಕಾರಿಗಳು,ಹಣ್ಣು ಹಂಪಲುಗಳನ್ನು ದೇವರ ಮುಂದೆ ಇಟ್ಟು ಅದರಲ್ಲೊಂದು ಕನ್ನಡಿಯನ್ನು ಇಡುತ್ತಾರೆ.ನಂತರ ಈ ಕನ್ನಡಿಯಲ್ಲಿ ಮನೆ ಮಂದಿಯೆಲ್ಲಾ ದೇವರ ಮೂರ್ತಿಯನ್ನು ನೋಡಿ ಈ ಹೊಸ ವರ್ಷದ ಪೂರ್ತಿ ಒಳಿತು ಕೆಡುಕಗಳ ಬಗ್ಗೆ ತಿಳುವಳಿಕೆಯನ್ನು ನೀಡು,ಮುಂದಿನ ವರ್ಷ ಪೂರ್ತಿ ಸುಖ ಶಾಂತಿ ನೆಮ್ಮದಿಯನ್ನು ತರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಜಾತಿ ಮತ ಭೇಧ ದ ಪಂಥವಿಲ್ಲದೆ ಮನೆ ಮಂದಿಯೆಲ್ಲಾ ಜೊತೆಗೂಡಿ ವಿಶು ಹಬ್ಬವನ್ನು ಆಚರಿಸಿ ಸಂಭ್ರಮ ಪಡುತ್ತಾರೆ.ದೇಶದ ವಿವಿಧೆಡೆಯಲ್ಲಿ ವಿಶು ಹಬ್ಬವನ್ನು ಆಚರಿಸಿದ್ರೂ ಕರಾವಳಿ ಮತ್ತು ಕೇರಳ ರಾಜ್ಯದಲ್ಲಿ ಪ್ರಕ್ರತಿ ಆರಾಧನೆ ಮೂಲಕ ಹಬ್ಬವನ್ನು ವಿಶೇಷ ವಾಗಿ ಆಚರಿಸುತ್ತಾರೆ.

ಮಂಗಳೂರಿನ ಪಿಲಿಕುಳದಲ್ಲಿ ವಿಶು ಹಬ್ಬದ ಸಂಭ್ರಮ:

ಮಂಗಳೂರಿನ ಪಿಲಿಕುಲದಲ್ಲಿರುವ ಗುತ್ತಿನ ಮನೆಯಲ್ಲಿ ವಿಶು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಮೊದಲೇ ತುಳುನಾಡಿನ ಸೊಬಗನ್ನು ಹೊತ್ತಿರುವ ಗುತ್ತಿನ ಮನೆಯಲ್ಲಿ ನಡೆದ ವಿಶು ಹಬ್ಬ ಅಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ನಡೆಯಿತು. ಮಂಗಳೂರು ಜಿಲ್ಲಾಡಳಿತದ ವತಿಯಿಂದ ಪಿಲಿಕುಳದ ಗುತ್ತಿನಮನೆಯಲ್ಲಿ ವಿಶು ಹಬ್ಬವನ್ನು ಆಚರಿಸಲಾಯಿತು..ಗುತ್ತಿನಮನೆಯ ಗತ್ತು ಹಬ್ಬಕ್ಕೆ ಕಳೆ ತಂದಿದ್ದು,ಹಳ್ಳಿಯಿಂದ ನಗರಕ್ಕೆ ಬಂದು ನಗರದ ಜಂಜಾಟದ ಜೀವನದಲ್ಲಿ ಕಳೆದು ಹೋಗಿದ್ದ ಜನ ಗುತ್ತಿನ ಮನೆಯಲ್ಲಾದ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ರು

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ನಗರ ಜೀವನ ಶೈಲಿ ಬದಲಾಗಿರೋದರಿಂದ ಹೆಚ್ಚಿನ ನಗರವಾಸಿಗಳು ಈ ಆಚರಣೆಗೆ ಮಹತ್ವ ನಿಡುತ್ತಿಲ್ಲ.ಆದರೆ, ಹಳ್ಳಿ ಪ್ರದೇಶಗಳಲ್ಲಿ ಇವತ್ತಿಗೂ ಈ ಆಚರಣೆ ಜೀವಂತವಾಗಿದ್ದು ಸಡಗರ ಸಂಭ್ರಮದಿಂದ ಬಿಸು ಹಬ್ಬವನ್ನು ಸಾಂಪ್ರಾದಾಯಿಕ ರೀತಿಯಲ್ಲಿ ಆಚರಿಸುತ್ತಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here