Friday 26th, April 2024
canara news

ಹೊರನಾಡ ಶ್ರೇಷ್ಠ ಸಮಾಜ ಸೇವಕರಾಗಿ 2014ರ ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ತುಳು-ಕನ್ನಡಿಗರ ಹಿರಿಮೆಯ `ಶೇಠ್' ಪ್ರಸಿದ್ಧಿಯ `ಬಿಲ್ಲವ ಭೀಷ್ಮ' ಜಯ ಸಿ.ಸುವರ್ಣ

Published On : 01 Nov 2014   |  Reported By : Rons Bantwal


Jaya Suvarna the winner of  prestigious Karnataka Rajyotsava Award

ಮುಂಬಯಿ, ನ.01: ಉಡುಪಿ ಜಿಲ್ಲೆಯ ಪಡುಬಿದ್ರೆ ಅಡ್ವೆ ನಿವಾಸಿಗಳಾದ ಶ್ರೀ ಚಂದು ಪೂಜಾರಿ ಮತ್ತು ಶ್ರೀಮತಿ ಅಚ್ಚು ಪೂಜಾರಿ ಅವರ ಸುಪುತ್ರರಾಗಿ 1946ರ ಮೇ.15 ರಂದು ಜನಿಸಿದ ಜಯ ಸುವರ್ಣ ಅವರು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕ ಪುತ್ರ. ಆಚಾರ ಪ್ರಥಮೋ ಧರ್ಮ ಎಂಬಂತೆ ತನ್ನ ಬದುಕಿಗೆ ಸಂಸ್ಕೃತಿಯ ಚೌಕಟ್ಟನ್ನು ಸುಂದರವಾಗಿ ರೂಪಿಸಿದ ಬಿಲ್ಲವ ಸಮಾಜದ ಏಳಿಗೆಗಾಗಿ ತಮ್ಮ ಪ್ರಥಮ ಆದ್ಯತೆ ನೀಡಿದ ಹಾಗೂ ಸಮಾಜದ ಪ್ರಮುಖವಾಣಿಯಲ್ಲಿ ತಮ್ಮ ಸ್ವಜಾತೀಯ ಸಮಾಜ ಬಾಂಧವರನ್ನು ಗುರುತಿಸಿ ಪ್ರೋತ್ಸಾಹ ನೀಡಿದ ಧೀಮಂತ ನಾಯಕರಾಗಿ ತುಳು-ಕನ್ನಡಿಗರ ಹಿರಿಮೆಯ `ಶೇಠ್' ಪ್ರಸಿದ್ಧಿಯ ಜಯ ಸಿ.ಸುವರ್ಣರು ಬಿಲ್ಲವ ಸಮಾಜದ `ಬಿಲ್ಲವ ಭೀಷ್ಮ' ಎಂದೇ ಪ್ರಸಿದ್ಧರು.

ಪಡುಬಿದ್ರೆ ಸನಿಹದ ಪಲಿಮಾರು ಅಲ್ಲಿನ ಶಾಲೆಯಲ್ಲಿ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂಬಯಿ ಮಹಾನಗರ ಸೇರಿದ ಇವರು ವಡಾಲದ ಎನ್ಕೆಇಎಸ್ನಲ್ಲಿ ಹೈಸ್ಕೂಲ್ ಓದಿ ಅಂಧೇರಿಯ (ಈಗಿನ ಚಿನ್ನಯ್) ಕಾಲೇಜಿನಲ್ಲಿ ಕಾಲೇಜು ಓದುತ್ತಿರುವಾಗಲೇ ಹೊಟೇಲು ನೌಕರಿಯಲ್ಲಿ ಪಳಗಿ ಕ್ರಮೇಣ ಹೊಟೇಲು ಉದ್ಯಮಿಯಾಗಿ ಪರಿವರ್ತನೆಗೊಂಡ ಪ್ರಸಕ್ತ ಹಿರಿಯ ಹೊಟೇಲು ಉದ್ಯಮಿ ಆಗಿರುವರು. ಐದು ದಶಕಗಳ ಹಿಂದೆ ಗೋರೆಗಾಂವ್ ಪೂರ್ವದಲ್ಲಿ ಜಯಪ್ರಕಾಶ್ ಹೊಟೇಲ್ನ್ನು ಆರಂಭಿಸಿ ಇಂದು ಕೂಡಾ ಈ ಹೊಟೇಲಿನ ಜೊತೆಗೆ ಸಾಯಿವೆಜ್ ಶಾಖಾಹಾರಿ ರೆಸ್ಟೋರೆಂಟ್ ಮತ್ತು ಲೀಲಾ ಬ್ಯಾಂಕ್ವೆಟ್ ಹಾಲ್ ಮುಖೇನ ಜೀವನ ಗಳಿಕೆಯನ್ನು ಹೊಂದಿ ಉದ್ಯಮದ ಯಶಸ್ಸನ್ನು ಪಡೆದಿರುವರು. ಉದ್ಯಮದಲ್ಲಿ ಶೀಘ್ರತೆಯಲ್ಲಿ ಮುಂದುವರಿಯುತ್ತಲೇ ತನ್ನ ಸಮಾಜದ ಬಗ್ಗೆ ಚಿಂತನೆ ಮೂಡಿಸಿದ ಸುವರ್ಣರು ವಿಶೇಷವಾಗಿ ಬಿಲ್ಲವ ಸಮುದಾಯದ ಶ್ರೇಯೋಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿ ದಕ್ಷ ನಾಯಕತ್ವ ವಹಿಸಿದರು. ಕ್ರಮೇಣ ಪೂರ್ಣ ಪ್ರಮಾಣದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕಾರಣ ಅತ್ತ ತನ್ನ ಹೊಟೇಲು ಉದ್ಯಮದತ್ತ ನಿಗಾ ಹರಿಸದೆ ಹೊಟೇಲು ಉದ್ಯಮ ನಿಧಾನಗತಿಯಲ್ಲಿ ಸಾಗಿದರೂ ತನ್ನ ಸಮಾಜದ ವಿಕಾಸಕ್ಕಾಗಿ ಮಾತ್ರ ಪಣತೊಟ್ಟ ಕಾರಣ ಇಂದು ವಾಣಿಜ್ಯನಗರಿ ಮುಂಬಯಿಯಲ್ಲಿ ವಿಸ್ತ ್ಕ ೃತ `ಬಿಲ್ಲವ ಭವನ' ನಿಮಾ೯ಣಕ್ಕೆ ಕಾರಣೀಭೂತರಾದರು.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಶಾಲ ಮನೋಭಾವದಿಂದ ಸಾಮಾಜಿಕ ಕ್ರಾಂತಿಗೆ ಮುಂದಾದ ಇವರು ತಮ್ಮ ಬದುಕಿಗೆ ಆದರ್ಶ ದೈವೀಪುತ್ರ ಶ್ರೀ ನಾರಾಯಣ ಗುರುಗಳ ಸಿದ್ಧಾಂತ ಪ್ರೇರಣೆಯನ್ನಾಗಿಸಿದರು. ತತ್ಪರಿಣಾಮವಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಬ್ರಹ್ಮ ಶ್ರೀ ನಾರಾಯಣ ಗುರು ಎಜ್ಯುಕೇಶನ್ ಟ್ರಸ್ಟ್ ಬನ್ನಂಜೆ ಎಂಬ ವಿಶ್ವಸ್ಥ ಮಂಡಳಿಯ ಮೂಲಕ ಶ್ರೀ ನಾರಾಯಣ ಗುರು ಹೈಸ್ಕೂಲ್ ಪಡುಬೆಳ್ಳೆ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಸದ್ಯ ರಾಷ್ಟ್ರದ ಗಮನ ಸೆಳೆದ ಭಕ್ತರ ಮತ್ತು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾದ ಮಂಗಳೂರು ಕುದ್ರೋಳಿ ಅಲ್ಲಿನ ಶ್ರೀ ಗೋಕರ್ಣನಾಥ ದೇವಸ್ಥಾನದ ಜೀಣೊ೯ದ್ಧಾರ ಸಮಿತಿಯ ಮುಂಬಯಿ ಸಮಿತಿ ಅಧ್ಯಕ್ಷರಾಗಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಕೊಡವಲ್ಲಿ ಯಶಸ್ವಿ ಆಗಿರುವರು.

ಜನಾನುರಾಗ ಪ್ರಭಾವಾಹಿ ಸಂಪದಃ ಎಂಬ ಸೂಕ್ತಿಯಂತೆ ತಮ್ಮ ಜನಾನುರಾಗೀ ವ್ಯಕ್ತಿತ್ವವು ತಮ್ಮನ್ನು ಆಥಿ೯ಕ ಹಾಗೂ ಸಾಮಾಜಿಕ ಕ್ಷೇತ್ರದ ಉತ್ಸುಂಗಕ್ಕೇರಿತು. ಆ ಕ್ಷೇತ್ರಕ್ಕೆ ತಾವಿತ್ತ ಅಗಣಿತ ಸೇವೆಯನ್ನು ಗುರುತಿಸಿ ಅನೇಕ ಪುರಸ್ಕಾರಗಳನ್ನು ತಮ್ಮನ್ನರಿಸಿ ಬಂದಿರುವುದು ತಮ್ಮ ಸ್ವಯಂ ಪ್ರತಿಭೆಗೆ ಸಾಕ್ಷಿಯಾಗಿದೆ. ಬಿಲ್ಲವರ ಸಹಕಾರಿ ಭೂಷಣ, ಸಮಾಜ ಸೇವಾ ಧುರೀಣ, ಬಿಲ್ಲವ ರತ್ನ, ಬಿಲ್ಲವ ಶಿರೋಮಣಿ, ಬಿಲ್ಲವ ಕಣ್ಮಣಿ, ಶತಮಾನದ ಶ್ರೇಷ್ಠ ಧುರೀಣ, ಶತಮಾನದ ಶ್ರೇಷ್ಠ ಸಮಾಜ ಸೇವಕ, ಭಾರತ ಕರ್ಮಯೋಗಿ, ಶ್ರೀ ಶ್ರೀ ಕೃಷ್ಣಾಕೃಪಾ ಪಾತ್ರ, ಉದ್ಯೋಗ ರತ್ನ, ಸಮಾಜ ರತ್ನ, ಗುರುಚೈತನ್ಯ, ಜನಮಾನದ ನಾಯಕ, ಅಪೂರ್ವ ಸಮಾಜ ಸೇವಕ ಕಲಾ ಪೋಷಕ, ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಂತಾದ ವೈಶಿಷ್ಟ ್ಯಪೂರ್ಣ ಪುರಸ್ಕಾರ-ಬಿರುದುಗಳು ತಮ್ಮ ವ್ಯಕ್ತಿತ್ವದ ಶಿಖರವನ್ನಲಂಕರಿಸಿ ಜೀವನ ಪಾವನಗೊಳಿಸಿವೆ. ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಕ್ಷೇತ್ರ ಕೈಗೊಂಡ ಸಮಾಜದೇಳಿಗೆಯ ವೈವಿಧ್ಯಮಯ ಚಿಂತನೆಗೆ ತಮ್ಮ ಆದರ್ಶ ನೈತಿಕ ಬೆಂಬಲವನ್ನೊದಗಿಸಿದ್ದಾರೆ.

ಬಾಲ್ಯದಿಂದಲೇ ಅಪ್ಪಟ ಕಲಾಪ್ರೇಮಿ ಆಗಿರುವ ಜಯ ಸುವರ್ಣರು ಯಕ್ಷಗಾನ ತಮ್ಮ ಜೀವನದ ಒಂದು ಅಂಗವನಾಗಿಸಿ ಪ್ರೀತಿಯ ಕಲೆಯಾಗಿಸಿರುವರು, ಅಂತೆಯೇ ಯಕ್ಷಗಾನ ಕಲೆ ತನ್ನಿಂದಲೂ ಬೆಳೆಸಬೇಕು ಎನ್ನುವ ದೂರದೃಷ್ಠಿ ಮೈಗೂಡಿಸಿ ಸಂಕಲ್ಪದಂತೆಯೇ ವರ್ಷಂಪ್ರತೀ ತನ್ನ ಮಾತೃಶ್ರೀ ದಿ| ಶ್ರೀಮತಿ ಅಚ್ಚು ಪೂಜಾರಿ ಹೆಸರಿನಲ್ಲಿ ಬಿಲ್ಲವರ ಅಸೋಸಿಯೇಶನ್ ಸಂಚಾಲಕತ್ವದ ಯಕ್ಷಗಾನ ಮಂಡಳಿಯ ಮೂಲಕ `ಬ್ರಹ್ಮಶ್ರೀ ಗುರು ನಾರಾಯಣ ಯಕ್ಷಗಾನ ಪ್ರಶಸ್ತಿ'ಯನ್ನು ನಗದು 25,000/- ಮೊತ್ತದೊಂದಿಗೆ ಪ್ರತಿಭಾನ್ವಿತ ಯಕ್ಷಗಾನ ಕಲಾವಿದರಿಗೆ ಪ್ರಾಯೋಜಿಸಿ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಲೆಗೆ ಪ್ರೋತ್ಸಾಹ ನೀಡಿ ಆದರ್ಶರಾಗಿದ್ದಾರೆ.

ಭಾರತ್ ಬ್ಯಾಂಕ್ ಸಾಧನೆಯ ಸರದಾರ ಜಯ ಸುವರ್ಣ:

ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜದ ಹಿಂದುಳಿದ ವಿದ್ಯಾಥಿ೯ಗಳಿಗೆ ವಿದ್ಯಾಥಿ೯ವೇತನ, ದತ್ತುನಿಧಿ ಇತ್ಯಾದಿ ಅನೇಕ ಸಹಾಯಧನವನ್ನು ನೀಡುತ್ತಾ ಬಂದಿರುವ ಸುವರ್ಣರು ಆಥಿ೯ಕ ಕ್ಷೇತ್ರದಲ್ಲೂ ತನ್ನ ಮೈಲಿಗಲ್ಲನ್ನು ರೂಪಿಸಿದ್ದಾರೆ. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 1991 ಇಸವಿಯಿಂದ ಕಾಯಾ೯ಧ್ಯಕ್ಷರಾಗಿ ನೇಮಕಗೊಂಡು ಅವಾಗ ಬರೀ 5 ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಸದ್ಯ 58 ಶಾಖೆಗಳನ್ನು ತೆರೆದು ಅತ್ಯಾದ್ಭುತವಾದ ಸಾಧನೆಗೈದಿರುವರು. ಮಾತ್ರವಲ್ಲದೆ ಬ್ಯಾಂಕಿನ 

ನಿದೆ೯ಶಕ ಮಂಡಳಿ ಹಾಗೂ ಅಧಿಕಾರಿ ಮತ್ತು ನೌಕರ ವೃಂದದ ವಿಶ್ವಾಸಕ್ಕೆ ಪಾತ್ರರಾಗಿ ಅತೀ ಶೀಘ್ರದಲ್ಲೇ 100 ಶಾಖೆಗಳನ್ನು ತೆರೆಯುವ ಮುಂಚೂಣಿಯಲ್ಲಿದ್ದಾರೆ. ಇದೀಗಲೇ ಹತ್ತುಹಲವಾರು ಸವೊ೯ತ್ಕೃಷ್ಟ ಪುರಸ್ಕಾರಗಳೊಂದಿಗೆ ಗೌರವಿಸಲ್ಪಟ್ಟ ಭಾರತ್ ಬ್ಯಾಂಕ್ ಮೂಲಕ ರಾಷ್ಟ್ರದ ಸಹಕಾರಿ ಕ್ಷೇತ್ರವೇ ಜಯ ಸುವರ್ಣರ ಬ್ಯಾಂಕಿಂಗ್ ವಲಯದ ಸಾಹಸವನ್ನು ಸಂಶೋಧಿಸುವಂತೆ ಮಾಡಿದೆ. ಉಡುಪಿಯಲ್ಲಿ ತನ್ನ ಮಾರ್ಗದರ್ಶದಲ್ಲಿ ಸ್ಥಾಪಿಸಿದ ನಾರಾಯಣ ಗುರು ಕೋ.ಅಪರೇಟಿವ್ ಬ್ಯಾಂಕ್ ಮಂಡಳಿಗೆ ಸಲಹೆ ನೀಡಿ ಪೋಷಿಸುತ್ತಿದ್ದಾರೆ.

ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಇದರ ಸ್ಥಾಪಕರಾದ ಇವರು 220 ಬಿಲ್ಲವ ಸಂಘಗಳನ್ನು, 38 ಗರಡಿಗಳನ್ನು ಒಗ್ಗೂಡಿಸಿ ಕರಾವಳಿಯಲ್ಲಿ ಬಿಲ್ಲವ ಸಮಾಜವನ್ನು ಮಹಾಶಕ್ತಿ ಆಗಿರಿಸಿದ ಕೀತಿ೯ ಇವರದ್ದಾಗಿದೆ. ಪ್ರಸ್ತುತ ಬಿಲ್ಲವ ಮಹಾಮಂಡಲ ಮೂಲ್ಕಿ ಇದರ ಅಧ್ಯಕ್ಷರಾಗಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಜೀವ ಗೌರವಾಧ್ಯಕ್ಷರಾಗಿ, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಕಾಯಾ೯ಧ್ಯಕ್ಷ ಸೇರಿದಂತೆ ಅನೇಕ ಸಂಘಸಂಸ್ಥೆಗಳಲ್ಲಿ ಸೇವಾ ನಿರತರಾಗಿದ್ದಾರೆ. ಜಯ ಸಿ.ಸುವರ್ಣ ಅವರು ಸಮಾಜಕ್ಕೆ ಒಂದು ಪ್ರೇರಕಶಕ್ತಿ ಆಗಿದ್ದು, ವಿವಿಧ ಸಮಾಜದ ಜನತೆ ಅವರನ್ನು ಅನೇಕಾನೇಕ ಹೆಸರುಗಳಿಂದ ಉವಾಚಿಸುವುದು ಅವರ ಸರಳ ಸಜ್ಜನಿಕೆಯ ನಡತೆಗೆ ಸಾಕ್ಷಿಯಾಗಿದೆ. ಸುವರ್ಣರನ್ನು ದ ಮ್ಯಾಜೀಶಿಯನ್, ಏಸ್ ಅರ್ಗನೈಜರ್ (ನಿಷ್ಣಾತ ಸಂಘಟಕ), ಎ ರೇರ್ ಅಚೀವರ್ (ಓರ್ವ ಅಸಾಧಾರಣ ಸಾಧಕ), ಎ ಮೆನ್ ವಿಥ್ ಮಿಡಾಸ್ ಟಚ್ (ಸ್ಪಶಿ೯ಸಿದ್ದೆಲ್ಲಾ ಸ್ವರ್ಣಮಯದ ಯಜಮಾನ), ಎ ಪರ್ಪೆಚ್ಯುವಲ್ ವಿನ್ನರ್ (ಚಿರಸ್ಥಾಯಿ ವಿಜೇತ), ಆ್ಯನ್ ಏಬಲ್ ಲೀಡರ್ (ಓರ್ವ ಸಮರ್ಥ ನಾಯಕ), ಕಿಂಗ್ ಮೇಕರ್ (ರಾಜ ಸೃಷ್ಟಿಕಾರ), ಸಿಂಪ್ಲಿಸಿಟಿ ಪರ್ಸನ್ಪೈಡ್ (ಸರಳ ಸ್ವಭಾವಗಾರ) ಇತ್ಯಾದಿ ನಾಮಗಳಿಂದಲ್ಲೂ ಸಮಾಜ ಒಂದೆಡೆ ಸುವರ್ಣರನ್ನು ಗುರುತಿಸಿದರೆ ಮತ್ತೊಂದೆಡೆ ಸಮಗ್ರ ಜನತೆ ಅತ್ಮೀಯವಾಗಿ `ಶೇಠ್'ಎಂದೇ ಚಿರಪರಿಚಿತ ಜಯ ಸಿ.ಸುವರ್ಣ ಅವರಿಗೆ ಈ ಬಾರಿ ಕನಾ೯ಟಕ ಸರಕಾರವು 59ನೇ ಕನ್ನಡ ರಾಜ್ಯೋತ್ಸವದ ಶುಭಾವಸರದಿ ತವರೂರ ನೆಲದ ಸವೊ೯ತ್ಕೃಷ್ಟ ಗೌರವ 2014ರ ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತಿಯಾಗಿರುವುದು ಸರ್ವರಲ್ಲೂ ಸಂತಸ ಮೂಡಿಸಿದೆ.

ತಮ್ಮ ಬದುಕು ಬಿಂಬಿಸುವ `ಅಪೂರ್ವ ಸಮಾಜ ಸೇವಕ ಜಯ ಸುವರ್ಣರ ಬದುಕು ಮತ್ತು ಸಾಧನೆ' ಜೀವನಾಧಾರಿತ ಕೃತಿಯೇ ನಿಮ್ಮ ಸಾಧನೆಯ ಕೈಗನ್ನಡಿಯಾಗಿದೆ. ಧರ್ಮಪತ್ನಿ ಶ್ರೀಮತಿ ಲೀಲಾವತಿ ಮತ್ತು ನಾಲ್ವರು ಪುತ್ರರಾದ ಸೂರ್ಯಕಾಂತ್/ ನಿಶಿತಾ, ಸುಭಾಶ್/ ಸೌಮ್ಯ, ದಿನೇಶ್/ ದೀಪ್ತಿ ಮತ್ತು ಯೋಗೇಶ್/ ದೀಪ್ತಿ ಹಾಗೂ ಮೊಮ್ಮಕ್ಕಳೊಂದಿಗೆ ಕೂಡು ಸಂಸಾರದೊಂದಿಗೆ ವಾಸವಾಗಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here