Friday 26th, April 2024
canara news

ಮಂಗಳೂರು ಜೈಲಿನಲ್ಲಿ ಸಿಸಿಟಿವಿ ಸೌಲಭ್ಯ

Published On : 06 May 2017   |  Reported By : Canaranews Network


ಮಂಗಳೂರು: ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಸಿಸಿಟಿವಿ ಸೌಲಭ್ಯ ಬಂದಿದ್ದು, ಇನ್ನು ಜೈಲಿನ ಎಲ್ಲಾ ಆಗು ಹೋಗುಗಳ ಬಗ್ಗೆ ವಿಡಿಯೋ ದಾಖಲೆಗಳು ಪೊಲೀಸ್ ಇಲಾಖೆಗೆ ಸಿಗಲಿವೆ.ಆದರೆ, ಇದೀಗ ರಾಜ್ಯ ಕಾರಾಗೃಹ ಇಲಾಖೆ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯದ ಎಲ್ಲಾ ಸೆಂಟ್ರಲ್ ಮತ್ತು ಜಿಲ್ಲಾ ಕಾರಾಗೃಹದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ನಿರ್ಧರಿಸಿದ್ದು, ಈ ಮುಖಾಂತರ ರಾಜ್ಯದ 8 ಸೆಂಟ್ರಲ್ ಜೈಲು ಮತ್ತು 20 ಜಿಲ್ಲಾ ಜೈಲುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಪ್ರಕ್ರಿಯೆ ಪೂರ್ಣವಾಗಿದೆ. ಅದರಂತೆ, ಮಂಗಳೂರು ಜೈಲಿಗೂ ಸಿಸಿಟಿವಿ ಕ್ಯಾಮೆರಾ ಸೌಲಭ್ಯ ಬಂದಿದೆ.ಇದರಿಂದಾಗಿ, ಜೈಲುಗಳ ಒಳ ಆವರಣಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ.

ಈ ಮುಂಚೆ ರಾಜ್ಯದ ಸೆಂಟ್ರಲ್ ಜೈಲ್ ಗಳಾದ ಬೆಂಗಳೂರು, ಬೆಳಗಾವಿ , ಬಳ್ಳಾರಿ , ವಿಜಾಪುರ, ಗುಲ್ಬರ್ಗಾ, ಮೈಸೂರು, ಧಾರವಾಡ ಹಾಗೂ ತುಮಕೂರಿನಲ್ಲಿ 445 ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿತ್ತು




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here