Friday 26th, April 2024
canara news

ಉಳ್ಳಾಲ: ಸಯ್ಯದ್ ಮದನಿ ಅರಬಿಕ್ ಕಾಲೇಜು ಮದನಿ ಬಿರುದು ಪ್ರಧಾನ

Published On : 07 May 2017   |  Reported By : Rons Bantwal


ಉಳ್ಳಾಲ: ಸಯ್ಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಇದರ ಆಶ್ರಯದಲ್ಲಿರುವ ಸಯ್ಯದ್ ಮದನಿ ಅರಬಿಕ್ ಕಾಲೇಜಿನ 47ನೇ ವಾರ್ಷಿಕ ಮತ್ತು 36ನೇ ಸನದುದಾನ ಮಹಾ ಸಮ್ಮೇಳನವು ಉಳ್ಳಾಲ ದರ್ಗಾ ವಠಾರದಲ್ಲಿ ಜರುಗಿತು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ರವರು ಮಾತಾಡಿ ಉಳ್ಳಾಲದಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರಗಳು ಬೆಳೆದು ನಿಲ್ಲಲು ಇಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಸಯ್ಯದ್ ಮದನಿ ತಂಙಳ್‍ರವರ ಪವಾಢವೇ ಕಾರಣ. ತಾಜುಲ್ ಉಲಮಾ ಮತ್ತು ಇಬ್ರಾಹೀಂ ಹಾಜಿಯವರ ಶ್ರಮ ಮತ್ತು ಸೇವೆ ಈ ಶಿಕ್ಷಣ ಕೇಂದ್ರಕ್ಕೆ ಬಹಳಷ್ಟಿದೆ. ಅದನ್ನು ಉಳಿಸಿಕೊಂಡು ಬಂದು ಈ ಶಿಕ್ಷಣ ಕೇಂದ್ರವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಕಾರ್ಯ ನಾವು ಮಾಡಬೇಕು ಎಂದರು.

ಸಯ್ಯದ್ ಮದನಿ ಅರಬಿಕ್ ಕಾಲೇಜು ಫ್ರೊಪೆಸರ್ ಸಯ್ಯದ್ ಚೆರುಕುಂಞÂ ತಂಙಳ್ ಪ್ರಾರ್ಥನೆ ನೆರವೇರಿಸಿದರು. ಫ್ರೊಪೆಸರ್ ಹಾಜಿ ಅಹ್ಮದ್ ಬಾವಾ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫೆÇ್ರಪೆಸರ್ ಅಬ್ದುಲ್ ರಶೀದ್ ಮದನಿ ಸನದುದಾನ ಭಾಷಣ ಮಾಡಿದರು. 58 ವಿದ್ಯಾರ್ಥಿಗಳಿಗೆ ಮದನಿ (M.F.M–ಮೌಲವಿ ಫಾಲಿಲ್ ಮದನಿ) ಬಿರುದು ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್‍ನ ಪೌಂಡರ್ ಟ್ರಸ್ಟಿ ಬಾವ ಫಕೀರ್ ಸಾಬ್‍ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಮಾಜಿ ಖತೀಬ್ ಅಬ್ದುಲ್ ರವೂಫ್ ಮುಸ್ಲಿಯಾರ್, ಪ್ರಸ್ತುತ ಖತೀಬ್ ಮುಹಮ್ಮದ್ ಶಮೀಮ್ ಸಖಾಫಿ, ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞÂಮೋನು, ಕೋಟೆಪುರ ಜುಮಾ ಮಸೀದಿ ಖತೀಬ್ ಹುಸೈನ್ ಇರ್ಷಾದ್ ಸಖಾಫಿ, ಮೇಲಂಗಡಿ ಮೊಯ್ಯದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ಅಳೇಕಲ ಜುಮಾ ಮಸೀದಿಯ ಖತೀಬ್ ಅಬೂಝಿಯಾದ್ ಪಟ್ಟಾಂಬಿ, ಮುಕ್ಕಚೇರಿ ಜುಮಾ ಮಸೀದಿ ಖತೀಬ್ ಮುಹಮ್ಮದ್ ಸ್ವಾದಿಕ್ ಸಖಾಫಿ, ಕಲ್ಲಾಪು ಜುಮಾ ಮಸೀದಿ ಖತೀಬ್ ಅಬ್ದುಲ್ ನಾಸಿರ್ ಸಅದಿ, ಒಂಭತ್ತುಕರೆ ಜುಮಾ ಮಸೀದಿ ಅಬ್ದುಲ್ ಸಮದ್ ಅಹ್ಸನಿ, ಸಯ್ಯದ್ ಮದನಿ ದಅïವಾ ಕಾಲೇಜು ಪ್ರಿನ್ಸಿಪಾಲ್ ಇಬ್ರಾಹಿಂ ಅಹ್ಸನಿ, ಹಿಫ್ಲುಲ್ ಕುರ್ ಆನ್ ಕಾಲೇಜು ಪೆÇ್ರಫೆಸರ್ ಅಬ್ದುಲ್ ರಹ್ಮಾನ್ ಸಖಾಫಿ, ಮುಪತ್ತಿಶ್ ಸುಲೈಮಾನ್ ಸಖಾಫಿ, ಸಯ್ಯಿದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಉಪಾಧ್ಯಕ್ಷರಾದ ಯು.ಎಚ್. ಮುಹಮ್ಮದ್, ಹಾಜಿ ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಯು.ಪಿ. ಅಬ್ಬಾಸ್, ಉಳ್ಳಾಲ ದರ್ಗಾ ಉಪಾಧ್ಯಕ್ಷರಾದ ಯು.ಕೆ. ಮೋನು, ಬಾವಾ ಮಹಮ್ಮದ್, ಪ್ರ.ಕಾರ್ಯದರ್ಶಿ ಮುಹಮ್ಮದ್ ತ್ವಾಹಾ, ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಲೆಕ್ಕಪರಿಶೋಧಕ ಯು.ಟಿ. ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರುಗಳಾದ ಮುಸ್ತಫ ಅಬ್ದುಲ್ಲ, ಯು.ಕೆ. ಇಬ್ರಾಹಿಂ, ಜತೆ ಕಾರ್ಯದರ್ಶಿ ಎ.ಕೆ. ಮೊಹಿದ್ದೀನ್, ಕೋಶಾಧಿಕಾರಿ ಜೆ. ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಹಾಜಿ ಎಂ. ಅಮೀರ್ ಸ್ವಾಗತಿಸಿದರು. ಶಿಹಾಬುದ್ದೀನ್ ಮಖ್‍ದೂಮಿ ಖ್ವಾರಿ ಕಿರಾಅತ್ ಪಠಿಸಿದರು
್ಮು




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here