Saturday 4th, May 2024
canara news

ಗೋ ಮಾಂಸ ಭಕ್ಷಣೆಗೆ ಹಿಂಸಾಚಾರಕ್ಕೆ ಪ್ರತಿಭಟನೆ ಮೊವಾಡಿ ಚಲೊ ಜಾಥಾ ಯಶಸ್ವಿ

Published On : 13 Jun 2017   |  Reported By : Bernard J Costa


ಕುಂದಾಪುರ: ತ್ರಾಸಿ ಬಳಿ ಮೊವಾಡಿ ಎಂಬಲ್ಲಿ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕೊರಗ ಸಮುದಾಯದ ಮೇಲೆ ಗೋ ಮಾಂಸ ಅಡಿಗೆ ಮಾಡುತ್ತಿದ್ದಾರೆಂದು ಕೊರಗ ಯುವಕರು ಹಾಗೂ ಮಹಿಳೆ ಶಕುಂತಲಾ ಎಂಬವರ ಮೇಲೆ ಸಂಘಪರಿವಾರದ ಗೋ ಭಯೋತ್ಪಾದಕರು ನಡೆಸಿದ ಥಳಿತ ಹಲ್ಲೆಯಯನ್ನು ಖಂಡಿಸಿ ಸಮತಾ ಸೈನಿಕ ದಳ ಉಡುಪಿ, ಕೊರಗ ಸಂಘಟನೆಗಳ ಅಭಿವ್ರದ್ದಿ ಒಕ್ಕೂಟ, ಜಿಲ್ಲಾ ಮುಸ್ಲಿಮ್ ಒಕ್ಕೂಟ, ಭಾರತೀಯ ಕ್ರೈಸ್ತ ಒಕ್ಕೂಟ, ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತಾರಾಷ್ಠ್ರಿಯ ಒಕ್ಕೂಟ, ಕರ್ನಾmಕ ಕೋಮು ಸೌಹಾರ್ದ ವೇದಿಕೆ ಮತ್ತು ಜನಪರ -ಪ್ರಗತಿಪರ ಸಂಘಟನೆಗಳ ಉಡುಪಿ ಜಿಲ್ಲೆ ಇವರು ಆಯೋಜಿಸಿದ ಮೊವಾಡಿ ಚಲೊ ಕಾಂiÀರ್iಕ್ರಮವನ್ನು, ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪ ಸಂಖ್ಯಾಖ್ಯಾತ ಇದರ ಗೌರವಾಧ್ಯಕ್ಷರಾದ ವಂದನೀಯ ಧರ್ಮಗುರು ವಿಲಿಯಂ ಮಾರ್ಟಿಸ್ ಮೊವಾಡಿಯಲ್ಲಿ ಮೊವಾಡಿ ಚಲೊ ಜಾಥವನ್ನು ಉದ್ಘಾಟಿಸಿ ‘ದಲಿತರಾದ ನೀವು ಈ ಮಣ್ಣಿನ ಮೂ¯ ನಿವಾಸಿಗಳು, ಈ ದೇಶ ನಿಮ್ಮದು, ಈ ದಬ್ಬಾಳಿಕೆಗೆ ಹೆದರ ಬೇಡಿ ನಾವೆಲ್ಲಾ ನಿಮ್ಮ ಜೊತೆಯಲ್ಲಿ ಇದ್ದೆವೆ ಎಂದು ಹೇಳಿ ಶಕುಂತಲಾ ಇವರು ಮತ್ತು ಕುಟುಂಬಕ್ಕೆ ಧೈರ್ಯ ತುಂಬಿ ಜಾಥಕ್ಕೆ ಚಾನನೆ ನೀಡಿದರು.

 

ಅದ ನಂತರ ತ್ರಾಸ್, ಹೆಮ್ಮಾಡಿ ತಲ್ಲೂರು ಮುಖಾಂತರ ಹಲವಾರು ವಿವಿದ ರೀತಿಯ ವಾಹನಗಳಿಂದ ಜಾಥ ನೆಡೆ¸ ಕುಂದಾಪುರ ಶಾಸ್ತ್ರಿ ಸರ್ಕಲನಲ್ಲಿ ಸಭೆಯನ್ನು ಜರುಗಿಸಲಾಯಿತು.

ಆಲ್ಲಿ ನೆಡೆದ ಸಭೆಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್ ‘ ಇಂದು ಇಡೀ ಭಾರತದಾದ್ಯಂತ ಚಿಗುರುತ್ತಿರುವ ಮನುಷ್ಯರ ಮಾರಣಹೋಮ ಮಾಡುವ ಈ ಗೋ ಭಯೋತ್ಪಾದಕ ಪಡೆ ಮತ್ತೆ ಮತ್ತೆ ಇಂತಹ ಹಲ್ಲೆ ಮಾಡುವುದರ ಮುಖಾಂತರ ನಮ್ಮನ್ನು ನಮ್ಮ ಎಕತೆ ಇನ್ನೂ ಗಟ್ಟಿ ಪಶಿಸುತ್ತದೆ ಇಂದಿನ ದಲಿತ ಸಂಘಟನೆಗಳ ಎಕತೆ ಕಂಡು ಅವರಿಗೆ ಎದೆ ನಡುಗಬೇಕು. ಸಾರ್ವಜನಿಕವಾಗಿ ಸಂಘಪರಿವಾರದವರು ಹೇಡಿಗಳು ಎನ್ನುತ್ತಾ ಹಲ್ಲೆಯನ್ನು ಖಂಡಿಸಿ ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಘೋಷ ವಾಕ್ಯ ಹೊರಡಿಸಿ ಅಂಬೇಡ್ಕರ ಭಾವ ಚಿತ್ರಕ್ಕೆ ಮಾಲಾರ್ಪಣೆಯನ್ನು ಮÁಡಿ ಗುಡುಗಿದರು ಗುಡುಗಿದರು. ಕರಾವಳಿಯಲ್ಲಿ ದಲಿತರು, ಮುಸ್ಲಿಮರು ಕ್ರೈಸ್ತರು ಹಿಂದುಳಿದವರು ಬದುಕ ಬಾರದೆಂಬ ದೋರಣೆ ಸಂಘ ಪರಿವಾದವರದಾಗಿದೆಯೆಂದು ತಿಳಿಸಿ, ಇಅದರ ಬಗ್ಗೆ ಮುಖ್ಯಮಂತ್ರಿಗಳ ಜೊತೆಯೂ ಮೊವಾಡಿಯ ಹಲ್ಲೆ ಪ್ರಕರಣದ ಕುರಿತು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು .. ಆಹಾರ ನಮ್ಮ ಆಯ್ಕೆ. ಬಿಜೆಪಿಯ ವಾಜಪೇಯಿಯವರಿಗೆ ಗೋಮಾಂಸವೆಂದರೆ ತುಂಬಾ ಪ್ರೀತಿ ಅವರು ಕೂಡ ದನವನ್ನು ತಿನ್ನುತ್ತಿದ್ದರು. ನಾವು ಅದನ್ನು ವಿರೋಧ ಮಾಡುತ್ತಿಲ್ಲ. ಆದರೆ ಇದೇ ಶ್ರೇಷ್ಠ ಇದೇ ನಿಕೃಷ್ಟ ಎಂದು ಹೇಳಲು ಇವರ್ಯಾರು ಎಂದು ಸಂಘಪರಿವಾರಕ್ಕೆ ಪ್ರಶ್ನಿಸಿದರು. ಇವರ ಜನರೆ ಗೋ ಮiಂಸ ರಪ್ತು ಮÁಡುತಿದ್ದಾರೆ ಇದಕ್ಕೆ ಇಅವರ್ ವಿರೋದವಿಲ್ಲಾ, ಅಂದರೆ ಇದೆಲ್ಲಾ ಬೂಟಾಟಿಕೆ, ಗೋ ನಿಷೇಧ ಈ ಭಾರತದ ಬಹುಸಂಖ್ಯಾತ ಹಿಂದೂಗಳ ಪ್ರಶ್ನೆ. ದನಗಳ ಹೆಸರಿನಲ್ಲಿ ಭಾರತದುದ್ದಗಲಕ್ಕೂ ಜನಗಳ ಮಾರಣಹೋಮ ನಡೆಯುತ್ತಿದೆ ಎಂದು ಕೆ.ಎಲ್ ಅಶೋಕ್ ಕಳವಳ ವ್ಯಕ್ತಪಡಿಸಿದರು ಜಾನುವಾರುಗಳನ್ನು ಏನು ಮಾಡುವುದು ಎಂಬುವುದು ನಮ್ಮ ಪ್ರಶ್ನೆ. ಇಡೀ ದೇಶದಲ್ಲಿ 28 ಕೋಟಿ ಜಾನುವಾರುಗಳಿವೆ. ಪ್ರತೀ ವರ್ಷ 10 ಕೋಟಿ ಜಾನುವಾರುಗಳು ಹುಟ್ಟುತ್ತವೆ. ಒಂದು ಕರುವನ್ನು ಸಾಕಲು ದಿನಕ್ಕೆ 30 ರೂ ಬೇಕು. ಸಂಪೂರ್ಣ ಜಾನುವಾರು ಹತ್ಯೆ ನಿಷೇಧವಾದರೆ ಪ್ರತೀ ವರ್ಷ ಜಾಸ್ತಿಯಾಗುವ 10ಕೋಟಿ ದನವನ್ನು ಏನು ಮಾಡುವುದು. ಈ ಗೋಹತ್ಯೆ ನಿಷೇಧ ಅಂಬೇಡ್ಕರ್ ರಚಿಸಿರುವ ಸಂವಿಧಾನ ವಿರೋಧಿ ಕಾನೂನು, ಇದು ಪ್ರಜಾಪ್ರಭುತ್ವ ವಿರೋಧಿ ಕಾನೂನು, ಬಡವರ ಹಿಂದೂಗಳ ಮೇಲೆ ಪ್ರಭಾವ ಬೀರುವ ಕಾನೂನು. ಮುಂದಿನ ದಿನಗಳಲ್ಲಿ ಸಂಘಪರಿವಾರದ ಗೂಂಡಾಗಳು ಮತ್ತು ಗೋ ಭಯೋತ್ಪಾದಕರ ವಿರುದ್ದ ದೊಡ್ಡ ರಣಸಂಗ್ರಾಮ ಭಾರತಾದ್ಯಂತ ನಡೆಯುತ್ತದೆ ಎಂದು ಸಂಘಪರಿವಾರಕ್ಕೆ ಕೆ.ಎಲ್ ಅಶೋಕ್ ಎಚ್ಚರಿಕೆಯನ್ನು ಕೊಟ್ಟರು.

ದಲಿತ-ದಮನಿತ ಸ್ವಾಭಿಮಾನಿ ಹೋರಾಟ ಸಮಿತಿಯ ಸಂಚಾಲಕರಾದ ಬಿ.ಆರ್. ಭಾಸ್ಕರ್ ‘ಬಿಜೆಪಿ ಒಂದು ಕಡೆ ದನವನ್ನು ವಿದೇಶಗಳಿಗೆ ಮಾರಿ ಅಲ್ಲಿ ಬಂದಂತಹ ದುಡ್ಡುಗಳನ್ನು ತೆಗೆದುಂಡು ತಾನು ರಾಜಕಾರಣ ಮಾಡುತ್ತಾ ಮೆರೆಯುತ್ತಿದೆ. ಇನ್ನೊಂದೆಡೆ ಓಟಿನ ರಾಜಕಾರಣಕ್ಕಾಗಿ ಈ ದೇಶದ ಶೂದ್ರ ಸಮುದಾಯದ ಯುವಕರು, ದಲಿತ ಸಮುದಾಯದ ಯುವಕರಿಗೆ ದನದ ಮಾತೃ ಪ್ರೇಮದ ಭ್ರಮೆ ಮೂಡಸಿ ಬೀದಿಗಳಲ್ಲಿ ದನದ ರಕ್ಷಣೆಗಾಗಿ ಬಿಡುತ್ತಿದ್ದಾರೆ. ಇಂತವರು ಮನುಷ್ಯರಾ ಎಂದು ನಾವು ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತದೆ. ಸಂಘಪರಿವಾರದವರಿಗೆ ತಾಕತ್ತಿದ್ದರೆ ಸತ್ಯ ಒಪ್ಪಿಕೊಳ್ಳುವ ಮನಸಿದ್ದರೆ ನಿಮ್ಮ ಮೋದಿಜಿಗೆ ಹೇಳಿ ಮೋದಿಯವರೆ ನಿಮಗೆ ತಾಕತ್ತಿದ್ದರೆ ಮೊದಲು ದನದ ಮಾಂಸವನ್ನು ರಫ್ತು ಮಾಡುವುದನ್ನು ಬ್ಯಾನ್ ಮಾಡಿ ಎನ್ನಿರಿ ಎಂದು ಪ್ರಸಾದ್ ಸಂಘಪರಿವಾರದವರಿಗೆ ಸವಾಲನ್ನ್ ಹಾಕಿದರು ಎಷ್ಟು ಕೋಟಿ ದನಗಳು ಬಿದಿಗೆ ತಿರುಗುತ್ತಿರುತ್ತವೆ, ಇದು ಇವರ ಕಣ್ಣಿಗೆ ಕಣುವುದಿಲ್ಲಾ, ಒಂದೆಡೆ ಭೂಮಿ, ಆಶ್ರಯ,. ಕೇಂದ್ರ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲು ಸಾಧ್ಯವಿಲ್ಲ. ಈ ಮನುಷ್ಯ ವಿರೋಧಿ ಕಾನೂನನ್ನು ನಾವು ತಡೆಯುತ್ತೇವೆ. ಒಂದೆಡೆ ಈ ಕಾನೂನು ಸಾಧ್ಯವಾದರೂ ಕೂಡ ಮನುಷ್ಯ ಸಂತತಿ ಉಳಿಯಲು ಸಾಧ್ಯವಿಲ್ಲ ಎಂದವರು ಹೇಳಿದರು. . ದನವನ್ನು ತಂದೆ ತಾಯಿಗೆ ಹೋಲಿಸಿ ಮಾತನಾಡುವುದು ಸಂಘಪರಿವಾರದ ದೊಡ್ಡ ಅವಿವೇಕಿತನ. ಪರಿವಾರದವರು ತಂದೆ ತಾಯಿಯನ್ನು ದನಗಳಿಗೆ ಹೋಲಿಸುವುದಾದರೆ ಎಮ್ಮೆಯನ್ನೂ ಹೋಲಿಸಿಕೊಳ್ಳಲಿ. ದನವನ್ನು ತಾಯಿಗೆ ಹೋಲಿಸುವುದಾದರೆ ಎಮ್ಮೆಯನ್ನು ತಂದೆಗೆ ಹೋಲಿಸಲಿ. ಕುರಿ, ಮೇಕೆಗಳನ್ನು ಅಣ್ಣ-ತಮ್ಮ ಹಾಗೂ ಕೋಳಿ, ಬಾತು ಕೊಳಿಯನ್ನು ಅಕ್ಕ-ತಂಗಿ ಎಂದು ತಿಳಿದುಕೊಳ್ಳಿ ಎಂದು ಭಾಸ್ಕರ ಪ್ರಸಾದ್ ಲೇವಡಿಯಾಡಿದರು.

ಹಾಗೆ ಸಭೆಯನ್ನು ಉದ್ದೇಶಿಸಿ ಸಂತ್ರಸ್ತ ಮಹಿಳೆ ಶಕುಂತಲಾ, ಜಿ.ರಾಜ ಶೇಖರ, ಸುಂದರ ಬೆಳುವಾಯಿ, ವಿಶ್ವನಾಥ ಪೇತ್ರಿ ಮಾತಾನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷಗಳ ಸಮಿತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ವಹಿಸಿದ್ದು,ಮುಖ್ಯ ಅತಿಥಿಗಳಾಗಿ ವಿಲಿಯಂ ಮಾರ್ಟೀಸ್, ಸುಂದರ್ ಮಾಸ್ತರ್, ಶೇಖರ ಹೆಜಮಾಡಿ, ಪ್ರಶಾಂತ ಜತ್ತನ್ನ, ಚಂದ್ರ ಅಲ್ತಾರು, ಮೈಕಲ್ ಪಿಂಟೊ, ಶಬಾನ ಹಂಗಳೂರು, ಹನೀಫ್ ಗಂಗೊಳ್ಳಿ, ಸುಂದರ ಕಪ್ಪೆಟ್ಟು, ಶ್ಯಾಮಸುಂದರ್ ತೆಕ್ಕಟ್ಟೆ, ಬೊಗ್ರ ಕೊರಗ, ಚಾರ್ಲ್ಸ್ ಆಮ್ಲ, ಇದ್ರೀಸ್ ಹೂಡೆ, ಮಹಮ್ಮದ್ ಯಾಸೀನ್, ಗೌರಿ ಕೆಂಜೂರು ಮುಂತಾದವರು ಉಪಸ್ಥಿತರಿದ್ದರು. ಬಹಿರಂಗ ಸಭೆಯ ಆರಂಭಕ್ಕೂ ಮುನ್ನ ಎಲ್ಲಾ ಧರ್ಮಗಳ ಮುಖಂಡರು ಶಾಂತಿಯ ಸಂಕೇತವಾದ ಪಾರಿವಾಳವನ್ನು ಹಾರಿ ಬಿಡುವುದರ ಮೂಲಕ ಬಹಿರಂಗಸಭೆಗೆ ಚಾಲನೆ ನೀಡಿದರು.

ನಾರಾಯಣ ಮಣೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿನೋದ್ ಕ್ರಾಸ್ತಾ ಸ್ವಾಗತಿಸಿದರು. ಎಸ್.ಎಸ್ ಪ್ರಸಾದ್ ಧನ್ಯವಾದವಿತ್ತರು. ಅನಂತ ಮಚ್ಚಟ್ಟು ಹಾಗೂ ವಸಂತ ವಂಡ್ಸೆ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮರಾಜ್ ಭಿರ್ತಿ ಸಮಾವೇಶದ ನಿರ್ಣಯಗಳನ್ನು ಓದಿ ಹೇಳಿದರು.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here