Friday 26th, April 2024
canara news

ಜೀವನದಲ್ಲಿ ನಮಗೆ ಬೇಕಾದದ್ದನ್ನು ನಾವು ಶ್ರಮ ಪಟ್ಟು ಪಡೆದುಕೊಳ್ಳಬೇಕು - ಪ್ರಮೋದ್ ಮಧ್ವರಾಜ್

Published On : 17 Jun 2017   |  Reported By : Bernard J Costa


ಕುಂದಾಪುರ, ಜೂ.17: ‘ಪ್ರಪಂಚ ಇವತ್ತು ಸ್ಪರ್ಧಾತ್ಮಕವಾಗಿದೆ, ಕನಿಷ್ಠ ಹುದ್ದೆಗಳನ್ನು ಪಡೆಯ ಬೇಕಾದರೂ ನಾವು ಶ್ರಮ ಪಡ ಬೇಕಾದಂತ ಪರಿಸ್ಥಿತಿ ಎದುರಾಗಿದೆ. ಒಂದೊಂದು ಅಂಕಗಳು ನಮಗೆ ಅತೀ ಮುಖ್ಯವಾಗಿವೆ, ಹಾಗಾಗಿ ವಿಧ್ಯಾರ್ಥಿಗಳು ಬಹಳ ಶ್ರಮ ಪಟ್ಟು ಕಲಿಯ ಬೇಕಾಗಿದೆ, ಜೀವನದಲ್ಲಿ ನಮಗೆ ಬೇಕಾದ್ದನ್ನು ನಾವು ಶ್ರಮ ಪಟ್ಟು ಪಡೆದು ಕೊಳ್ಳಬೇಕು. ಹಾಗಾಗಿ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಾದ, ಶ್ರಮ ಪಟ್ಟರೆ ನೀವು ಆಶಿಸಿದಂತೆ ಆಗುತ್ತದೆ’ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನೂಗಾರಿಕಾ ಸಚಿವರಾದ ಪ್ರಮೋದ ಮಧ್ವರಾಜ್ ಕುಂದಾಪುರದ ಪ್ರತಿಶ್ಠೆಯುಳ್ಳ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಈ ವರ್ಷದ ಶೈಕ್ಷಣಿಕ ಆರಂಭೋತ್ಸವದ ದಿನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ವಿಧ್ಯಾರ್ಥಿಗಳಿಗೆ ಹಿತವಚನ ನೀಡಿದರು.

‘ಪ್ರಪಂಚದಲ್ಲಿ ನಮ್ಮ ಭಾರತಲ್ಲಿದ್ದಸ್ಟು ಯುವ ಶಕ್ತಿ ಬೇರಲ್ಲೂ ಇಲ್ಲಾ, ಪ್ರಪಂಚಕ್ಕೆ ಬೇಕಾಗುವಸ್ಟು ಮಾನವ ಶಕ್ತಿ ನಮ್ಮಲ್ಲಿ ಇದೆ, ಹಾಗಾಗಿ ಪರ ದೇಶಗಳಲ್ಲಿಯೂ ಉದ್ಯೋಗ ಸಂಪಾದನೆ ಮಾಡುವ ಸಂದರ್ಭಗಳಿವೆ, ಅದಕ್ಕೂ ನೀವು ಸಿದ್ದರಿರಬೇಕು. ಈ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ದೊರಕುತ್ತದೆ ಎಂದು ನಮ್ಮ ನಂಬಿಕೆ, ನೀವು ಉತ್ತಮ ಶಿಕ್ಷಣ ಪಡೆದಲ್ಲಿ, ನಿಮಗೆ ಉತ್ತಮ ಭವಿಶ್ಯ ದೊರಕುವುದು’ ಎಂದು ಮಕ್ಕಳಿಗೆ ಅವರು ಶುಭ ಹಾರೈಸಿದರು.

ಮುಖ್ಯ ಅಥಿತಿಯಾಗಿ ಆಗಮಿಸಿದ ಡಾ| ಮಧು ಮಯೂರಿ ಕಾಲೇಜಿನ ಮ್ಯಾಗಝಿನ್ ‘ಬ್ಲೊಸಮ್’ ನ್ನು ಉದ್ಘಾಟನೆ ಮಾಡಿ ‘ವಿಧ್ಯಾರ್ಥಿಗಳಾದ ನೀವು ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಆರೋಗ್ಯ ಚೆನ್ನಾಗಿದ್ದರೆ ನಿಮ್ಮ ಮನಸ್ಸು ಚೆನ್ನಾರುತ್ತದೆ, ಮನಸ್ಸು ಚೆನ್ನಾಗಿದ್ದರೆ, ವಿಧ್ಯಾಭಾಷಕ್ಕೆ ಒಳ್ಳೆಯ ಗಮನ ನೀಡಬಹುರು, ದೇಹಕ್ಕೆ ವ್ಯಾಯಮ ಸಿಗುವಂತ ಆಟಗಳನ್ನು ಆಡಬೇಕು, ಮೊಬಾಯ್ಲನ್ನು ಹೆಚ್ಚು ಉಪಯೋಗಿಸ ಬಾರದೆಂದು’ ಅವರು ವಿಧ್ಯಾರ್ಥಿಗಳಿಗೆ ತಿಳಿ ಹೇಳಿದರು.

ಸಂತ ಮೇರಿಸ್ ಸಮೂಹ ವಿಧ್ಯಾ ಸಂಸ್ಥೆಗಳ ಸಂಚಾಲಕರಾದ ವಂ|ಫಾ|ಅನಿಲ್ ಡಿಸೋಜಾ ವಿಧ್ಯಾರ್ಥಿಗಳನ್ನುದ್ದೇಶಿಸಿ ‘ಮಕ್ಕಳೆ ನಿಮ್ಮ ಮೇಲೆ ನಮಗೆ ನಂಬಿಕೆ ಇದೆ, ನಿಮ್ಮ ಹೆತ್ತವರ ಮೇಲೆ ನಮಗೆ ಅಭಿಮಾನ ಇದೆ, ನೀವು ನಮ್ಮ ಸಂಸ್ಥೆಯ ಮೇಲೆ ನಂಬಿಕೆ ಮತ್ತು ನಿಮ್ಮ ಮೇಲೆ ನಂಬಿಕೆ ಇಟ್ಟು ವಿಧ್ಯೆಯನ್ನು ಕಲಿತು ಕಾಲೇಜಿಗೆ ಮತ್ತು ಹೆತ್ತವರಿಗೆ ಕೀರ್ತಿಯನ್ನು ತರಬೇಕು, ಪ್ರಾಂಶುಪಾಲರು ಮತ್ತು ಶಿಕ್ಷಕ ವ್ರಂದದವರು ನಿಮಗಾಗಿ ತ್ಯಾಗ ಮಾಡಿ ಚೆನ್ನಾಗಿ ವಿಧ್ಯಾರ್ಜನೆ ಮಾಡುತಿದ್ದಾರೆ, ಅವರಿಗೆ ಗೌರವ ಸಲ್ಲಿಸಿ, ಅವರು ನೀಡುವ ಶಿಕ್ಷಣದ ಲಾಭವನ್ನು ಪಡೆದು ನೀವು ಉತ್ತಮ ಭವಿಶ್ಯವನ್ನು ಕಟ್ಟಿಕೊಳ್ಳಿ’ ಎಂದು ಅವರು ಸಂದೇಶ ನೀಡಿದರು.

ಪ್ರಾಂಶುಪಾಲ ವಂ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಕಾಲೇಜಿನ ಬಗ್ಗೆ, ಕಾಲೇಜಿನ ನೀತಿ ನಿಯಮಗಳ ಬಗ್ಗೆ ವಿಧ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ದ್ರಶ್ಯ ಮಾಧ್ಯಮದ ಮೂಲಕ ತಿಳುವಳಿಕೆ ನೀಡಿದರು. ಮಕ್ಕಳ ಪೆÇೀಷಕರ ಪ್ರತಿನಿಧಿಯಾಗಿ ಸುಜಾತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಜೊತೆ ತಮ್ಮ ಅನುಭವಳನ್ನು ಹಂಚಿಕೊಂಡರು. ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ಸ್ವಾಗತ ಕೋರಿದರು. ಉಪನ್ಯಾಸಕಿ ರೀಮಾ ಸಲ್ಡಾನ್ಹಾ ಧನ್ಯವಾದಗಳನ್ನು ಅರ್ಪಿಸಿದರು. ಉಪನ್ಯಾಸಕಿ ಪ್ರೀತಿ ಕ್ರಾಸ್ತಾ ಕಾರ್ಯಕ್ರವನ್ನು ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here