Thursday 22nd, February 2018
canara news

ಜು.16: ಮಾಟುಂಗದಲ್ಲಿ ಕನ್ನಡ ಸಂಘ ಮುಂಬಯಿ ಸಂಸ್ಥೆಯಿಂದ ಕನ್ನಡ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ-ಪ್ರಮಾಣಪತ್ರ ವಿತರಣೆ

Published On : 13 Jul 2017   |  Reported By : Rons Bantwal


ಮುಂಬಯಿ, ಜು.13: ಕನ್ನಡ ಸಂಘ ಮುಂಬಯಿ ವಾರ್ಷಿಕವಾಗಿ ಆಯೋಜಿಸುತ್ತಿರುವ ಕನ್ನಡ ಸರ್ಟಿಫಿಕೇಟ್ ಕೋರ್ಸ್‍ನ ಉದ್ಘಾಟನೆ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವು ಇದೇ ಜು.16ನೇ ಭಾನುವಾರ ಪೂರ್ವಾಹ್ನ 10.00 ಗಂಟೆಗೆ ಮಾಟುಂಗ (ಸೆಂಟ್ರಲ್ ರೈಲ್ವೇ) ಭಾವುದಾಜಿ ರಸ್ತೆಯ ವೆಂಕಟೇಶ್ ನಿವಾಸದ ಸಂಘದ ಕಛೇರಿಯಲ್ಲಿ ಜರಗಲಿದೆ ಎಂದು ಸಂಘದ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ತಿಳಿಸಿದ್ದಾರೆ.

   

S K Sunder                                G.N Nayak

   

S K Bhavani                            Satish N.Bangera

ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮಕ್ಕೆ ಸಾಹಿತ್ಯ ಬಳಗ ಮುಂಬಯಿ ಇದರ ಗೌರವ ಕಾರ್ಯದರ್ಶಿ ಎಸ್.ಕೆ ಸುಂದರ್ ಅವರು 2017-18ನೇ ಸಾಲಿನ ಕನ್ನಡ ಸರ್ಟಿಫಿಕೇಟ್ ಕೋರ್ಸ್‍ನ ಚಾಲನೆ ನೀಡಲಿದ್ದಾರೆ ಎಂದು ಸಂಘದ ಗೌರವ ಖಜಾಂಚಿ ಸುಧಾಕರ್ ಸಿ.ಪೂಜಾರಿ ತಿಳಿಸಿದ್ದಾರೆ.

ಸಂಘದ ಗೌ| ಜೊತೆ ಕಾರ್ಯದರ್ಶಿ ಸೋಮನಾಥ್ ಕರ್ಕೇರ ಮಹಿಳಾ ವಿಭಾಗಧ್ಯಕ್ಷೆ ರಜನಿ ವಿ.ಪೈ, ವಾಚನಾಲಯದ ಮುಖ್ಯಸ್ಥ ಎಸ್.ಕೆ ಪದ್ಮನಾಭ, ಕನ್ನಡ ತರಬೇತಿ ಶಿಕ್ಷಕಿ ಆರ್ಚನಾ ಆರ್.ಪೂಜಾರಿ ಉಪಸ್ಥಿತಿಯಲ್ಲಿ ಜರಗುವ ಅವಳಿ ಕಾರ್ಯಕ್ರಮದಲ್ಲಿ ಮಹಾನಗರದಲ್ಲಿ ಹೆಚ್ಚಿನ ಕನ್ನಡಾಭಿಮಾನಿಗಳು, ಭಾಶಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಎನ್. ಬಂಗೇರ ಈ ಮೂಲಕ ವಿನಂತಿಸಿದ್ದಾರೆ.

 

 
More News

“ಗುಮಟ್ ವಿಶ್ವದಾದ್ಯಂತ ಹೆಸರುವಾಸಿಯಾದ ಕೊಂಕಣಿಗರ ಜನಪದ ಪ್ರಕಾರ”
“ಗುಮಟ್ ವಿಶ್ವದಾದ್ಯಂತ ಹೆಸರುವಾಸಿಯಾದ ಕೊಂಕಣಿಗರ ಜನಪದ ಪ್ರಕಾರ”
ಸರ್ವೋತ್ಕೃಷ್ಟ ಉತ್ಪಾದಕ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ್ ಶೆಟ್ಟಿ
ಸರ್ವೋತ್ಕೃಷ್ಟ ಉತ್ಪಾದಕ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ್ ಶೆಟ್ಟಿ
ಪದೇ ಪದೇ ಏಕೆ ರಾಜೀನಾಮೆ ನೀಡುತ್ತೀರಿ? ಎಂದು ಹಾಲಾಡಿಯವರನ್ನು ಪ್ರಶ್ನಿಸಿ ಮೊಳಹಳ್ಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರಾಕೇಶ್ ಮಲ್ಲಿ
ಪದೇ ಪದೇ ಏಕೆ ರಾಜೀನಾಮೆ ನೀಡುತ್ತೀರಿ? ಎಂದು ಹಾಲಾಡಿಯವರನ್ನು ಪ್ರಶ್ನಿಸಿ ಮೊಳಹಳ್ಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರಾಕೇಶ್ ಮಲ್ಲಿ

Comment Here