Wednesday 15th, May 2024
canara news

ವೆನ್ಲಾಕ್ ಆಸ್ಪತ್ರೆಗೆ ಸೇರ್ಪಡೆಯಾಗುತ್ತಿವೆ ಸೂಪರ್ ಸ್ಪೆಷಾಲಿಟಿ ವಿಭಾಗಗಳು

Published On : 28 Jul 2017   |  Reported By : Canaranews Network


ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 8 ಜಿಲ್ಲೆಗಳ ಪಾಲಿಗೆ ವರದಾನವಾಗಿರುವ ವೆನ್ಲಾಕ್ ಆಸ್ಪತ್ರೆಗೆ 2 ಸೂಪರ್ಸ್ಪೆಷಾಲಿಟಿ ವಿಭಾಗಗಳು ಸೇರಿದಂತೆ 4 ಹೊಸ ವಿಭಾಗಗಳು ಸದ್ಯವೇ ಸೇರ್ಪಡೆಯಾಗಲಿವೆ. ಆಸ್ಪತ್ರೆಯ 200 ಹಾಸಿಗೆಗಳ ಮೆಡಿಸಿನ್ ಸೂಪರ್ ಸ್ಪೆಷಾಲಿಟಿ ವಿಭಾಗ ನಿರ್ಮಾಣಕ್ಕೆ ರಾಜ್ಯ ಸರಕಾರ 10 ಕೋ.ರೂ. ಮಂಜೂರುಗೊಳಿಸಿದೆ. ಐಎಂಎಗೆ ಹೊಂದಿಕೊಂಡಿರುವಂತೆ ಇರುವ ಆಸ್ಪತ್ರೆಯ ಜಾಗದಲ್ಲಿ ಈ ವಿಭಾಗ ನಿರ್ಮಾಣವಾಗಲಿದೆ.

ಹೃದ್ರೋಗ ವಿಭಾಗ, ಕ್ಯಾಥ್ ಲ್ಯಾಬ್, ಎಂಡೋಸ್ಕೋಪಿ, ಐಸಿಯು, ಜನರಲ್ ವಾರ್ಡ್, ಡಯಾಲಿಸಿಸ್, ಬ್ಲಿಡ್ ಬ್ಯಾಂಕ್ ಮುಂತಾದ ವಿಭಾಗಗಳು ಕಾರ್ಯಾಚರಿಸಲಿವೆ. ಆಸ್ಪತ್ರೆಯಲ್ಲಿ ಮೆಡಿಸಿನ್ ಸೂಪರ್ ಸ್ಪೆಷಾಲಿಟಿ ಸುಸಜ್ಜಿತ ವಿಭಾಗವೊಂದು ನಿರ್ಮಾಣವಾಗಬೇಕೆಂಬ ಬಹುದಿನದ ಬೇಡಿಕೆ ಈಗ ಸಾಕಾರಗೊಳ್ಳುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗ (ಕೆಎಚ್ಎಸ್ಡಿಆರ್ಪಿ) ಯೋಜನೆಯನ್ನು ಸಿದ್ಧಪಡಿಸಿದೆ.

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here