Monday 6th, May 2024
canara news

ಬಿಲ್ಲವರ ಸಂಸ್ಥೆಗಳ ಏಕೀಕರಣಸಭೆ : ಬಿಲ್ಲವರ ಅಸೋಸಿಯೇಶನ್‍ಗೆ ನೂತನ ಪದಾಧಿಕಾರಿಗಳು

Published On : 02 Aug 2017   |  Reported By : Rons Bantwal


ಪುರುಷೋತ್ತಮ ಎಸ್.ಕೋಟ್ಯಾನ್-ಮಹೇಂದ್ರ ಸೂರು ಕರ್ಕೇರ ನೂತನ ಉಪಾಧ್ಯಕ್ಷರು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.31: ಬಿಲ್ಲವ ಸಮನ್ವಯಕ ಸಮಿತಿ ಕಳೆದ ಭಾನುವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಆಯೋಜಿಸಿದ್ದ `ಬಿಲ್ಲವರ ಸಂಸ್ಥೆಗಳ ಏಕೀಕರಣ' ಸಭೆಯಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಸ್ಥೆಯೊಡನೆ ಐಕ್ಯಗೊಂಡ ಬಿಲ್ಲವ ಜಾಗೃತಿ ಬಳಗ ಸಂಸ್ಥೆಯ ವಿಲೀನೀಕರಣದಿಂದಾಗಿ ತಾತ್ಕಲಿಕ ಸಮಿತಿಯೊಂದನ್ನು ರಚಿಸಿ (ಅಸೋಸಿಯೇಶನ್‍ಗೆ ಬರುವ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ ತನಕ) ನೂತನ ಪದಾಧಿಕಾರಿಗಳ ಆಯ್ಕೆ ನಡೆಸಿತು. ಪುರುಷೋತ್ತಮ ಎಸ್.ಕೋಟ್ಯಾನ್ ಮತ್ತು ಮಹೇಂದ್ರ ಸೂರು ಕರ್ಕೇರ (ಉಪಾಧ್ಯಕ್ಷರು), ಜೆ.ಎಂ ಕೋಟ್ಯಾನ್ ಮತ್ತು ಕೇಶವ ಕೆ. ಕೋಟ್ಯಾನ್ (ಜೊತೆ ಕಾರ್ಯದರ್ಶಿಗಳು), ಡಿ.ಬಿ ಅವಿೂನ್, ಭಾಸ್ಕರ್ ಕರ್ನಿರೆ, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ (ಕಾರ್ಯಕಾರಿ ಸಮಿತಿ ಸದಸ್ಯರು), ಸಂತೋಷಿ ಎಸ್.ಪೂಜಾರಿ, ಯಶೋಧಾ ಎನ್.ಟಿ ಪೂಜಾರಿ (ಮಹಿಳಾ ವಿಭಾಗದ ಉಪಾಧ್ಯಕ್ಷೆಯ ರು), ಕೃಪಾ ಭೋಜ್‍ರಾಜ್, ಹೀರಾ ಡಿ.ಅಮೀನ್, ಪೂಜಾ ಪುರುಷೋತ್ತಮ್, ಗಿರಿಜಾ ಚಂದ್ರಶೇಖರ್, ರೇಖಾ ಸದಾನಂದ್, ಪ್ರಭಾ ಎನ್.ಪಿ ಸುವರ್ಣ (ವಿಶೇಷ ಆಮಂತ್ರಿತ ಸದಸ್ಯೆಯರು) ಅವರನ್ನು ಆಯ್ಕೆಗೊಳಿಸಲಾಯಿತು.

ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮೂಲ್ಕಿ ಅಧ್ಯಕ್ಷ ಜಯ ಸಿ.ಸುವರ್ಣ ಅವರು ಕಲ್ಪವೃಕ್ಷ ಗಿಡಕ್ಕೆ ನೀರಿನ ಸಿಂಚನಗೈದು ಸಭೆಗೆ ಚಾಲನೆ ನೀಡಿದ್ದು ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರಗಿಸಲ್ಪಟ್ಟ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ವೇದಿಕೆಯಲ್ಲಿ ಸುರೇಶ್ ಎಸ್.ಪೂಜಾರಿ, ಎನ್.ಟಿ ಪೂಜಾರಿ, ಪುರುಷೋತ್ತಮ ಎಸ್.ಕೋಟ್ಯಾನ್, ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ, ಶಾರದ ಸೂರು ಕರ್ಕೇರ, ಸಂಧಾನ ಸಮಿತಿ ಸಮನ್ವಯಕರುಗಳಾದ ಎಲ್.ವಿ ಅಮೀನ್, ಕೆ.ಭೋಜರಾಜ್, ವಿ.ಆರ್ ಕೋಟ್ಯಾನ್, ದಯಾನಂದ ಬೋಂಟ್ರಾ ಬರೋಡ, ಗಂಗಾಧರ್ ಕೆ.ಅಮೀನ್ ನಾಸಿಕ್, ನ್ಯಾಯವಾದಿಗಳಾದ ರೋಹಿಣಿ ಜೆ.ಸಾಲ್ಯಾನ್, ರಾಜ ವಿ.ಸಾಲ್ಯಾನ್, ಗೋಪಾಲ್ ಸಿ.ಪೂಜಾರಿ, ಆನಂದ ಎಂ.ಪೂಜಾರಿ, ಸಿಎ| ಅಶ್ವಜಿತ್ ಹೆಜ್ಮಾಡಿ, ಭಾರತ್ ಬ್ಯಾಂಕ್‍ನ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ವೇದಿಕೆಯಲ್ಲಿ ಅಸೀನರಾಗಿದ್ದರು.

ಶಾರದಾ ಕರ್ಕೇರ ಮಾತನಾಡಿ ಜಯ ಸುವರ್ಣ ಅವರನ್ನು ನಾವು ಸದಾ ಗುರುಸ್ಥಾನದಲ್ಲಿರಿಸಿದ್ದೇವೆವು ಅಂತಹದಲ್ಲಿ ಅನಪೇಕ್ಷಿತ ಘಟನೆ ನಡೆದೋದÀವು. ಇದೀಗ ಮತ್ತೆ ಒಂದಾದೆವು ಎನ್ನುವುದನ್ನು ತಿಳಿಸಲು ಅಭಿಮಾನವೆಣಿಸುತ್ತಿದೆ. ಈ ಬಾಂಧ್ಯವವನ್ನು ವರ್ಣಿಸಲು ಶಬ್ದಗಳಿಲ್ಲ. ಎರಡು ನದಿಗಳಾಗಿ ಬೇರ್ಪಟ್ಟಿದ್ದ ನಾವು ಸಾಗರವಾಗಿ ಒಂದಾಗಿದ್ದೇವೆ. ಇದು ಸಮುದ್ರದಂತೆ ವಿಶಾಲ ನಿರ್ಮಾಲವಾಗಿ ಸರ್ವರಿಗೂ ಆಸರೆಯಾಗೋಣ ಎಂದು ಆಶಯ ವ್ಯಕ್ರಪಡಿಸಿದರು.

ಜಯ ಸುವರ್ಣರು ಮಾತನಾಡಿ ನಮ್ಮೊಳಗಿನ ಒಗ್ಗಟ್ಟಿನ ಹಿಂದೆ ಇವತ್ತೂ ಮತ್ಸರವುಳ್ಳವರಿದ್ದಾರೆ. ಕೋಟಿಚೆನ್ನಯರ ಕಾಲದಲ್ಲೂ ಚಂದುಗಿಡಿ ಅಂತಹವರು ಇದ್ದರು. ಈಗಲೂ ಅಂತಹವರು ಇರಲಾರು ಎನ್ನಲಾಗದು. ಬಿಲ್ಲವರ ಒಳಿತನ್ನು ಸಹಿಸಲಾರದವರು ಬಹಳಷ್ಟು ಜನರಿರಬಹುದು. ಆದುದರಿಂದ ರಾಜಿ ಪ್ರಕ್ರಿಯೆಗೆ ಎದೆಯೊಡ್ಡಿದ ಎನ್.ಟಿ ಪೂಜಾರಿ ಯಾರ ಟೀಕೆಗೆ ಹೆದರಬೇಕಾಗಿಲ್ಲ. ನಿಮ್ಮ ಹಿಂದೆ ಇಡೀ ಬಿಲ್ಲವ ಸಮಾಜವೇ ಇದೆ. ಮುಂದಿನ ಜನಾಂಗ ನಿಮ್ಮನ್ನು ಎಂದೆಂದಿಗೂ ನೆನಪಿಸಲಿದೆ. ರಾಷ್ಟ್ರದಾದ್ಯಂತ ನೆಲೆಯಾದ ನಮ್ಮ ಯುವಜನತೆಯಲ್ಲಿ ಸ್ವಸಮಾಜದ ಹಿತದೃಷ್ಟಿಯನ್ನು ಮೂಡಿಸುವ ಕೆಲಸ ಶೀಘ್ರವೇ ನಡೆಯಬೇಕಾಗಿದೆ. ಅದಕ್ಕಾಗಿ ಯುವ ಜನತೆಗೆ ಕೌನ್ಸಿಲಿಂಗ್ ಮಾಡಿಸಬೇಕು. ನಮ್ಮೊಳಗಿನ ಸಂಸ್ಥೆಗಳ ಸಬಲೀಕರಣಕ್ಕೆ ಚುನಾವಣೆ ನಡೆಸಬೇಕು. ಚುನಾವಣೆಗಳಿಂದ ಆರಿಸಲ್ಪಟ್ಟ ಮುಂದಾಳುಗಳಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.

ಎಲ್.ವಿ ಅಮೀನ್ ಮಾತನಾಡಿ ಬಿಲ್ಲವರ ಸಮಾಜ ಬಂಧುಗಳಲ್ಲಿನ ದಯಾನಂದ ಬೋಂಟ್ರಾ, ಗಂಗಾಧರ್ ಅಮೀನ್ ಮತ್ತಿತರ ಅನ್ಯೋನ್ಯತಾ ಮಿತ್ರರು ಸಮಾಜ ಅಭಿವೃದ್ಧಿಗೆ ತೊಡಕಾಗದಂತೆ ಬಿಲ್ಲವ ಸಮಾಜವನ್ನು ಹೆಮ್ಮರವಾಗಿ ಬೆಳೆಯಲು ಪ್ರಯತ್ನಿಸಿದ ಫಲವೇ ಈ ಒಗ್ಗೂಡುವಿಕೆಯಾಗಿದೆ. ಇವರೆಲ್ಲರ ಸಹಯೋಗದಿಂದ ವಿಭಜನೆಯಿಂದ ಮತ್ತೆ ಒಂದಾಗುವ ಸುಸಂದರ್ಭ ಇಂದು ಒದಗಿ ಬಂತು. ಉಭಯ ಸಂಸ್ಥೆಗಳ ಮುಖಂಡರೊಡನೆ ಸದಾ ನಿಕಟ ಸಂಬಂಧವನ್ನಿರಿಸಿ ಸಮಾಜ ಇಬ್ಭ್ಬಾಗವನ್ನು ತಡೆಯಲೂ ಕಡಿವಣ ಹಾಕಿದವ ನಾನು. ಅದಕ್ಕಾಗಿಯೇ ಸ್ವಸಮುದಾಯದ ಸಂಸ್ಥೆಯಲ್ಲಿ ಸಕ್ರೀಯನಾದೆ. ಬಿಲ್ಲವ ಸಮಾಜ ಒಟ್ಟಾಗಿಸುವುದೇ ನನ್ನ ಸ್ಪಷ್ಟ ಉದ್ದೇಶವಾಗಿತ್ತು ಎನ್ನುತ್ತಾ ಆಗುಹೋಗುಗಳ ಬಗ್ಗೆ ಸ್ಥೂಲವಾಗಿ ಮಾಹಿತಿಯನ್ನೀಡಿ ಇಂತಹ ಐತಿಹಾಸಿಕ ಘಟನೆಯ ಸಂಧಿಯಲ್ಲಿ ಸಮನ್ವಯಕರಾಗಿ ಶ್ರಮಿಸಿದ ಗಂಗಾಧರ ಅಮೀನ್, ದಯಾನಂದ ಬೋಂಟ್ರಾ ಅವರ ಸಹಕಾರ ಮರೆಯಲಸಾಧ್ಯ ಎಂದರು.

ದೇವರ ದಯೆ ಇದ್ದಲ್ಲಿ ಎಲ್ಲವೂ ಸಿದ್ಧಿಗೊಳ್ಳುವುದು. ಅಂದು ಜಯ ಸುವರ್ಣರು ಮೋದಿ ಸ್ಟ್ರೀಟ್‍ನಿಂದ ನಾರಾಯಣ ಗುರುಗಳ ಮೂರ್ತಿ ಬಿಲ್ಲವರ ಭವನಕ್ಕೆ ತಂದು ಪ್ರತಿಷ್ಠಾಪಿಸಿದ ಉದ್ದೇಶ ಅರ್ಥಪೂರ್ಣವಾದದ್ದು. ನಮ್ಮೆಲ್ಲರ ಒಗ್ಗಟ್ಟಿಗೆ ನಾರಾಯಣ ಗುರುಗಳೇ ಕಾರಣ. ಇದೇಗ ಜಯ ಸುವರ್ಣ ಮತ್ತು ಸೂರು ಕರ್ಕೇರ ಇವರು ಗಂಗಾ ನದಿಯಲ್ಲಿ ಮಿಂದುಬರಬೇಕು. ಇಂದು ನಮ್ಮೊಳಗಿನವರಲ್ಲಿನ ಅಪವಾದಗಳ ಕೆಟ್ಟಕಲೆ ಮಾಸಿ ಹೋದಂತಾಯಿತು. ಜಯ ಸುವರ್ಣರು ಓರ್ವ ಗಾನಮೇಳದ (ಆರ್ಕೇಸ್ಟ್ರಾ) ಮೇಧಾವಿಯಂತೆ. ಎಲ್ಲಿ ಯಾವಾಗ ಹೇಗೆ ಸಂಗೀತ ನುಡಿಸಬೇಕು ಎನ್ನುವುದು ತಿಳಿದ ಜಾಣ್ಮೆವುಳ್ಳವರು. ಅವರ ಮಾರ್ಗದರ್ಶನದಂತೆ ನಾವೆಲ್ಲರೂ ಭವಿಷ್ಯತ್ತಿನಲ್ಲಿ ಒಂದಾಗಿ ಬಾಳೋಣ ಎಂದು ಸುರೇಶ್ ಪೂಜಾರಿ ತಿಳಿಸಿದರು.

ಬಿಲ್ಲವರೆಲ್ಲರೂ ಒಂದು ಮನಸ್ಸಿನಿಂದ ಒಟ್ಟಾದರೆ ಕಾಲೇಜು, ಇಂಜಿನೀಯರ್ ಕಾಲೇಜು ಕಟ್ಟಲು ಸುಲಭವಾಗುವುದು ಎಂಬುವುದು ನನ್ನ ಅಭಿಮತವಾಗಿತ್ತು. ಇನ್ನಾದರೂ ಮನಸ್ಥಿತಿ ಬದಲಾಯಿಸಿ ಸಮುದಾಯದ ಮುಖೇನ ವಿದ್ಯಾಸಂಸ್ಥೆ ಕಟ್ಟಿದರೆ ಜಾತಿಗೊಂದು ಕೀರ್ತಿ ಬರಬಹುದು. ಅದಕ್ಕಾಗಿ ನಮ್ಮಲ್ಲಿನ ಯುವಶಕ್ತಿಗೆ ಅವಕಾಶ ನೀಡಿ ಪೆÇ್ರೀತ್ಸಾಹಿಸಬೇಕು ಎಂದು ಕೆ.ಬೋಜರಾಜ್ ತಿಳಿಸಿದರು.

ಹಾಲಿನ ಪಾತ್ರೆಗೆ ಒಂದು ಹನಿ ನಿಂಬೆ ಹುಳಿ ಹಿಂಡಿದರೆ ಅದು ಹೇಗೆ ಮೊಸರು ಆಗುವುದೋ ಹಾಗೆಯೇ ನಮ್ಮಲ್ಲಿನ
ಕಳಹ ನಡೆದೋಯಿತು. ಇದೀಗ ಮೊಸರಿನಿಂದ ತುಪ್ಪ, ಬೆಣ್ಣೆ ತೆಗೆದು ಸ್ವಚ್ಛಂದ ಮನೋಭಾವ ಬೆಳೆಸಿ ಮುನ್ನಡೆಯಬೇಕು. ಅದಕ್ಕಾಗಿ ಯುವಜನತೆಯನ್ನು ಪೆÇ್ರೀತ್ಸಹಿಸಿ ಮುನ್ನಡೆಸಬೇಕು. ಒಳ ರಾಜಕೀಯಕ್ಕೆ ಅಂತ್ಯವಾಡಿ, ಸಾರ್ವಜನಿಕ ಚುನಾವಣೆಗಳ ರಾಜಕೀಯಕ್ಕೆ ಧುಮುಕುತ್ತಾ ರಾಜಕಾರಣಿಗಳಾಗಿ ಬೆಳೆದರೆ ಅದು ಸಮುದಾಯದ ಮುನ್ನಡೆಗೆ ಶಕ್ತಿಆಗಬಲ್ಲದು. ಅದಕ್ಕಾಗಿ ನಾವೂ ಸಾಧಿಸಬೇಕಾದದ್ದು ಬಹಳಷ್ಟಿದೆ ಎಂದು ರೋಹಿಣಿ ಸಾಲ್ಯಾನ್ ತಿಳಿಸಿದರು.

ಚತು:ರ್‍ಮೂರ್ತಿಗಳ ಅವಿರತ ಹೋರಾಟ ಹಾಗೂ ವಿಶೇಷವಾಹಿ ಎನ್.ಟಿ ಪೂಜಾರಿ ದಿಟ್ಟ ನಿಲುವಿನ ತ್ಯಾಗದ ಫಲ ಇದಾಗಿದೆ. ಇಂದಿನಿಂದ ಬಿಲ್ಲವರು ಎಂದೂ ಸಾಂಘಿಕವಾಗಿ ಹಿಂದುಳಿದವರಲ್ಲ, ಮುಂದುಳಿದವರು. ಮುಂದಿನ ದಿನಗಳಲ್ಲಿ ಈ ಸುದಿನವನ್ನು ಬಿಲ್ಲವರ ಏಕತಾ ಹುಟ್ಟುಹಬ್ಬವನ್ನಾಗಿಸೋಣ ಎಂದು ಪುರುಷೋತ್ತಮ ಕೋಟ್ಯಾನ್ ಅಭಿಪ್ರಾಯ ಪಟ್ಟರು.

ದಯಾನಂದ ಬೋಂಟ್ರಾ ಮಾತನಾಡಿ ಎಲ್.ವಿ ಅಮೀನ್ ಅವರ ಧೃಡ ಸಂಕಲ್ಪದ ವಿಚಾರಧಾರೆಯಿಂದ ಈ ಅನುಬಂಧ ಸಲೀಸಾಯಿತು. ಅಂತಃಕರಣದಲ್ಲಿ ಅಡಗಿದ್ದ ಸಮಾಜದ ಬಗೆಗಿನ ಸದ್ಭವನಾ ವಿಚಾರ ತಿಳಿಯಾಗಿದ್ದು ಇನ್ನು ಏಕತೆಯ ಮಂತ್ರವಷ್ಟೇ ಉದ್ದೇಶವಾಗಲಿ. ಆ ಮೂಲಕ ನಮ್ಮಲ್ಲಿನ ಬಂಧುತ್ವ ಭ್ರಾತೃತ್ವ ವಿಶಾಲವಾಗಿ ಬೆಳೆಯಲಿ. ದೀರ್ಘಾವಧಿ ಕಲಹ ದೂರಪಡಿಸುವಲ್ಲಿ ಬಳಗವು ಹೃದಯಶ್ರೀಮಂತಿಕೆ ತೋರಿದೆ ಎಂದರು.

ನನ್ನ ಜೀವನದ ಅತೀ ಖುಷಿತ್ವದ ದಿನ ಇದಾಗಿದೆ. ಈ ದಿನ ನನಗೆ ಬಿಲ್ಲವ ಎನ್ನುವ ಗೌರವವೂ ಗರ್ವವೂ ಆಗಿದೆ. ಇನ್ನಾದರೂ ನಮ್ಮಲ್ಲಿನ ಬಂಧುತ್ವದಲ್ಲಿ ಪ್ರೀತಿ ಭಾವನೆ ಮೂಡಲಿ. ಪ್ರೀತಿ ಮೈಗೂಡಿಸಲು ಏನೂ ಖರ್ಚುವಿಲ್ಲ. ಇನ್ನು ಯಾವುದೇ ಕಾರಣಕ್ಕೆ ನಮ್ಮಲ್ಲಿ ಮತಬೇಧ ಬೇಡವೇ ಬೇಡ. ಸ್ಪರ್ಧೆಮುಕ್ತ ಸಮಾಜವಾಗಿಸಿ ನಮ್ಮ ಸಂಸ್ಥೆಗಳನ್ನು ಮುನ್ನಡೆಸೋಣ. ವ್ಯಕ್ತಿಯಿಂದ ಸಮಾಜ ಹಿಂದುಳಿಯುತ್ತದಯೇ ಹೊರತು ಜಾತಿಯಿಂದಲ್ಲ. ನಮ್ಮ ಮಕ್ಕಳನ್ನು ವಿದ್ಯಾವಂತನ್ನಾಗಿಸಿ ಸಮಾಜವನ್ನು ಬಲಗೋಳಿಸೋಣ ಎಂದು ಗಂಗಾಧರ ಅಮೀನ್ ನುಡಿದರು.

ವಿ.ಆರ್ ಕೋಟ್ಯಾನ್ ಮಾತನಾಡಿ ನಿತ್ಯಾನಂದ ಕೋಟ್ಯಾನ್ ಮತ್ತು ಎನ್.ಟಿ ಪೂಜಾರಿ ಅಂತಹ ಯುವ ಮುಂದಾಳುಗಳ ದೂರದೃಷ್ಠಿತ್ವವೇ ಈ ಸಾಧನೆ ಹಿಂದಿನ ಶಕ್ತಿಯಾಗಿದೆ. ಅವರಿಬ್ಬರಿಗೂ ಅಭಿವಂದನೆಗಳು. ಮುಂದೆಂದಿಗೂ ನಮ್ಮೊಳಗೆ ಅಹಿತಕರ ಘಟನೆಗೆ ಅವಕಾಶ ನೀಡದೆ ಒಂದಾಗಿ ಸಾಗೋಣ. ಈ ಸಂಧಾನ ಜಗತ್ತಿನಾದ್ಯಂತ ಬಿಲ್ಲವರ ಆಶಯವಾಗಿತ್ತು ಎಂದರು.

ಮುಂದಿನ ಬಾಳಿಗೆ ಬಿಲ್ಲವರಲ್ಲಿ ಒಗ್ಗಟ್ಟು ಅತೀ ಮುಖ್ಯವಾದದ್ದು. ಬಿಲ್ಲವರು ಒಂದಾದರೆ ನಮ್ಮಂತೆ ಬಲ್ಲವರಾರೂ ಇರಲಾರರು. ಮುಂದೆ ಒಂದೇ ತಾಯಿಯ ಮಕ್ಕಳಾಗಿ ಮುನ್ನಡೆಯೋಣ. ಪರಸ್ಪರ ಶುದ್ಧಮನದಿಂದ ಈ ಮಾತೃಸಂಸ್ಥೆಯನ್ನು ಮುನ್ನಡೆಸೋಣ. ಇನ್ನು ಬೇರೆ ಯಾವ ಸಂಘವೂ ನಮ್ಮೊಳಗೆ ಹುಟ್ಟದಿರಲಿ. ಎಲ್ಲರೂ ಒಟ್ಟಾಗಿ ಮುನ್ನಡದೆ ಎಲ್ಲರ ಉನ್ನತಿ ಸಾಧ್ಯವಾಗುವುದು ಎನ್.ಟಿ ಪೂಜಾರಿ ತಿಳಿಸಿದರು.

ಸೂರ್ಯ ಚಂದ್ರರಿರುವ ತನಕ ಬಿಲ್ಲವರಾದ ನಾವೆಲ್ಲರೂ ಒಂದು ಬಂಧುತ್ವ ಭಾವನೆಯಿಂದ ಒಂದಾಗಿ ಬಾಳುವಂತಾಗಬೇಕು. ಪ್ರತೀ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಸ್ವಾಭಾವಿಕ. ಆದರೆ ಅವುಗಳನ್ನೇ ಅಸ್ತ್ರವಾಗಿಸಿ ಹೋರಾಡಿದರೆ ಯಾರೂ ಏನೂ ಸಾಧಿಸಲಾರರು. ಸದ್ಯ ಬಿಲ್ಲವ ಪಂಚಮ ಪುರುಷ ಶಕ್ತಿಗಳ ಅವಿರತ ಸಾದನೆಯಿಂದ ಒಗ್ಗಟ್ಟನ್ನು ಸಾಧಿಸಿದ್ದು ಈ ಏಕತಾಮುಷ್ಠಿ ಸದಾ ಬಿಗಿಯಾಗಿರಿಸಿ ಬಲಗೊಳಿಸೋಣ. ಸಮಾಜ ಸೇವೆಯಲ್ಲಿ ಸ್ವಾರ್ಥ ಮರೆತು ಒಂದಾಗಿ ಮುನ್ನಡೆಯೋಣ. ಒಂದಾಗಿ ಶ್ರಮಿಸೋಣ. ಬಿಲ್ಲವರು ನಾವೆಲ್ಲರೂ ಒಂದು ಬಿಲ್ಲವರು ನಾವೆಲ್ಲ ಬಂಧು ಎನ್ನುತ್ತಾ ಪ್ರೀತಿಯನ್ನು ಹೃದಯದಲ್ಲಿರಿಸಿ ಒಂದೇ ಕುಟುಂಬವಾಗಿ ಬಾಳೋಣ ಎಂದು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ಭಾಷಣದಲ್ಲಿ ಸಮಗ್ರ ಬಿಲ್ಲವರಿಗೆ ಕರೆಯಿತ್ತರು.

ಸಭೆಯಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ ಮತ್ತು ಡಾ| ಯು.ಧನಂಜಯ ಕುಮಾರ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಯುವಾಭ್ಯುದಯ ಉಪ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್ ಸೇರಿದಂತೆ ನೂರಾರು ಬಿಲ್ಲವ ಧುರೀಣರು ಉಪಸ್ಥಿತರಿದ್ದರು.

ಆದಿಯಲ್ಲಿ ನೃತ್ಯ ವೈವಿಧ್ಯತೆ, ಸಾಕ್ಷ ್ಯ ಚಿತ್ರ ಪ್ರದರ್ಶನ ನಡೆಸಲ್ಪಟ್ಟಿತು. ರಕ್ಷಿತ್ ಪೂಜಾರಿ ಸ್ವಾಗತನೃತ್ಯ ಪ್ರಸ್ತುತ ಪಡಿಸಿದರು. ಹರೀಶ್ ಪೂಜಾರಿ ಕೊಕ್ಕರ್ಣೆ ಪ್ರಸ್ತಾವನೆಗೈದÀರು. ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಧನ್ಯವದಿಸಿದರು.

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here