Monday 6th, May 2024
canara news

ಮೂರು ವರ್ಷಗಳಲ್ಲೇ ಹೊರಬಂದ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು

Published On : 03 Aug 2017   |  Reported By : Rons Bantwal


ಬ್ಯಾರಿ ಅಕಾಡೆಮಿಯ ಸಾಧನೆ ಮಹಮ್ಮದ್ ಹನೀಫ್‍ರ ಯಶಸ್ವಿ ಕಾರ್ಯ

ಮುಂಬಯಿ, ಆ.02: ಭಾಷೆ ಮತ್ತು ಸಾಹಿತ್ಯ ಉಳಿಸುವ ದೃಷ್ಟಿಯಿಂದ ಹೋರಾಟದ ಅವಶ್ಯಕತೆ ಬಹಳಷ್ಟಿದೆ. ಭಾಷೆಯ ಉಳಿಕೆಗಾಗಿ ಬಹಳಷ್ಟು ಅಕಾಡೆಮಿಗಳು ಸ್ಥಾಪನೆಯಾಗಿದ್ದರೂ ಭಾಷೆಯ ಉಳಿಕೆಗಾಗಿ ಹೋರಾಟ ನಡೆದಿರುವುದು ಕಡಿಮೆ. ಕೆಲವು ಅಕಾಡೆಮಿಗಳು ಇದ್ದ ಭಾಷೆಯ ಕೆಲವು ವಿಚಾರಗಳನ್ನು, ಸಂಪ್ರದಾಯಗಳನ್ನು, ಸಂಸ್ಕøತಿಯನ್ನು ಉಳಿಸುವ ಕೆಲಸ ಮಾಡಿದೆಯೇ ಹೊರತು ಹೊಸದಾಗಿ ಶಬ್ದಗಳನ್ನು ಆವಿಷ್ಕಾರ ಮಾಡುವ ಶಬ್ದಗಳನ್ನು ಕ್ರೂಡೀಕರಿಸಿ ನಿಘಂಟು ತುರ್ತಾಗಿ ತರುವ ಕಾರ್ಯ ಮಾಡಿಲ್ಲ. ಪ್ರಸಕ್ತ ಮಾಡಿರುವ ಸಾಧನೆಗಳನ್ನು ಲೆಕ್ಕಾಚಾರ ಮಾಡಿ ನೋಡಿದರೆ ಬ್ಯಾರಿ ಅಕಾಡೆಮಿ ಮಾಡಿದ ಸಾಹತ್ಯದ ಉಳಿಕೆಗೆ ಮಾಡಿದ ಸಾಧನೆ ಬಹಳಷ್ಟಿದೆ.

ಬ್ಯಾರಿ ಅಕಾಡೆಮಿ ಸ್ಥಾಪನೆಯಾಗಿ ಕಳೆದ ಎಂಟು ವರ್ಷಗಳಲ್ಲಿ ಉತ್ತಮ ಸಾಧನೆಗೈದಿದೆ. ಬ್ಯಾರಿ ಭಾಷೆಯ ಉಳಿಕೆ ಮತ್ತು ಬೆಳವಣಿಗೆ ಮಾತ್ರವಲ್ಲದೇ ಭಾಷೆಯ ಶಬ್ದಗಳು ಕಣ್ಮರೆಯಾಗಿ ಅವನತಿಯತ್ತ ಸಾಗುವುದನ್ನು ರಕ್ಷಿಸಲು ಪ್ರಥಮ ಬಾರಿಗೆ ಬ್ಯಾರಿ-ಕನ್ನಡ- ಇಂಗ್ಲಿಷ್ ನಿಘಂಟುನ್ನು ಹೊರ ತಂದಿದೆ. ಈ ಒಂದು ನಿಘಂಟು ತಯಾರಿಸಲು ಎಷ್ಟೊಂದು ಪ್ರಯಾಸ ಪಡಬೇಕು ಎಂದು ಇದಕ್ಕಾಗಿ ಸೇವೆಗೈದವರಿಗೆ ಮಾತ್ರ ಗೊತ್ತು. ಈ ಭಾಷಾ ನಿಘಂಟು ಬಹಳಷ್ಟು ಖರ್ಚುವೆಚ್ಚದÀಲ್ಲಿ ತಯಾರು ಮಾಡಿದರೂ ಅದರ ಅವಶ್ಯಕತೆ ಬಹಳಷ್ಟು ಇದೆ. ಹೆಚ್ಚಾಗಿ ವಿದ್ಯಾಥಿರ್üಗಳಿಗೆ ಭಾಷಾ ಕಲಿಕೆಗೆ ಅನುಕೂಲವಾಗುತ್ತದೆ. ಇದರ ಅವಶ್ಯಕತೆಯನ್ನು ಅರ್ಥಮಾಡಿಕೊಂಡೇ ಬ್ಯಾರಿ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಮಹಮ್ಮದ್ ಹನೀಫ್ ಅವರು ಹಲವು ಸಭೆಗಳನ್ನು ನಡೆಸಿ ಒಮ್ಮತದಿಂದ ತೀರ್ಮಾನಕೈಗೊಂಡಿದ್ದು, ಮಾತ್ರವಲ್ಲದೇ ಈ ಬಾರಿಯ ಅಕಾಡೆಮಿಯ ಅವಧಿ ಮುಗಿಯುವ ಮೊದಲೇ ಬಿಡುಗಡೆ ಗೊಳಿಸುವ ಮೂಲಕ ಯಶಸ್ವಿ ಕಾರ್ಯ ಮಾಡಿದ್ದಾರೆ. ಅವರ ಈ ಅಚ್ಚುಮೆಚ್ಚಿನ ಸಾಧನೆಯನ್ನು ಎಲ್ಲರೂ ಮೆಚ್ಚಬೇಕಾದ್ದೆ. ಸುಮಾರು 35000 ಶಬ್ದಗಳನ್ನು ಕ್ರೂಡೀಕರಿಸಿ ಅದಕ್ಕೊಂದು ನಿಘಂಟು ಹೊರತರುವ ಯೋಜನೆ ಅಧ್ಯಕ್ಷ ಹನೀಫ್‍ರವರಲ್ಲಿತ್ತು. ಆದರೆ ಸಮಯವಕಾಶದ ಕೊರತೆಯಿಂದ ಶಬ್ದಗಳ ಸಂಖ್ಯೆಯನ್ನು 20,000ಕ್ಕೆ ಸೀಮಿತಗೊಳಿಸಿ ಅವಧಿ ಮುಗಿಯುವ ಮೊದಲೇ ಕಾರ್ಯ ಮುಗಿಸಿದ್ದು ಅವರು ಮಾಡಿದ ಸಾಧನೆಗಳಲ್ಲಿ ದೊಡ್ಡ ಸಾಧನೆ ಎಂದರೂ ತಪ್ಪಾಗದು.

ಇದೇ ನಿಘಂಟನ್ನು ತಯಾರಿಸಲು 2014ರಂದು ಜೂನ್ ತಿಂಗಳರಂದು ಪತ್ರಕರ್ತ ಬಿ.ಎಂ ಹನೀಫ್ ಮತ್ತು ರಿಜಿಸ್ಟ್ರಾರ್ ಆಗಿದ್ದ ಉಮರಬ್ಬ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ನಿರ್ಧರಿಸಯಿತು. ಈ ನಿಘಂಟ್‍ನ ಹಿಂದೆ ಫ್ರೊ. ವಿವೇಕ ರೈ, ಫ್ರೊ.ಎ.ವಿ. ನಾವಡ, ಡಾ| ಯು.ಪಿ ಉಪಾಧ್ಯಾಯ ಡಾ| ಇಸ್ಮಾಯಿಲ್, ಕೆ.ಪಿ ರಾವ್, ಬಿ.ಎಂ ಹನೀಫ್ ಅವರ ಸೇವೆ ಬಹಳಷ್ಟಿದೆ. ಇವರೆಲ್ಲರು ಒಗ್ಗೂಡಿ ತುರ್ತಾಗಿ ಮಾಡಿದ ಸೇವೆಯಿಂದ ಈ ನಿಘಂಟು ಅಷ್ಟೇ ತುರ್ತಾಗಿ ಹೊರಬಂದಿದೆ ಎನ್ನುವುದರಲ್ಲಿ ಮಾತು ಬೇಡ.

ಸಲಹಾ ಸಮಿತಿಯವರು ಈ ನಿಘಂಟಿನ ಬೆನ್ನ ಹಿಂದೆ ಬಿದ್ದು ಆಗಾಗ ಶಬ್ದಗಳನ್ನು ಒಗ್ಗೂಡಿಸಿ ಕೊಡುವಲ್ಲಿಯೂ, ಶಬ್ದಗಳ ಸಂಗ್ರಹ ಮಾಡುವಲ್ಲಿಯೂ ತುರ್ತು ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಹೊರಬಂದ ಬ್ಯಾರಿ ನಿಘಂಟು ಹೇಳುತ್ತದೆ. ವ್ಯಾಪಾರಿಗಳಿಂದ, ಮೀನುಗಾರರಿಂದ ಅವರ ವ್ಯಾಪಾರಕ್ಕೆ ಸಂಬಂಧಪಟ್ಟಂತೆ ಬಳಸುವ ಶಬ್ದಗಳನ್ನು ಕೂಡಾ ಕ್ರೂಡಿಕರಿಸಿದ್ದಾರೆ. ಬ್ಯಾರಿ ಭಾಷೆ ಎಂಬ ಪದ ಪ್ರದೇಶದಿಂದ ಪ್ರದೇಶಕ್ಕೆ ವ್ಯೆತ್ಯಾಸ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಮಂಗಳೂರಿನ ಬ್ಯಾರಿ ಭ್ಯಾಷೆಗೂ, ಸುರತ್ಕಲ್ ಜನರು ಬಳಸುವ ಬ್ಯಾರಿ ಭಾಷೆಗೂ ಅಜಗಜಾಂತರ ವ್ಯೆತ್ಯಾಸಗಳಿವೆ. ಅದೇ ರೀತಿ ಬಂಟ್ವಾಳ, ಅಡ್ಯಾರ್ ಕಡೆಯವರು ಭಾಷೆಯಲ್ಲಿ ಬಳಸುವ ಪದಗಳೇ ಬೇರೆ. ಅಲ್ಲದೇ ಸಾಮಾನ್ಯವಾಗಿ ಎಲ್ಲರೂ ಮಾತನಾಡುವ ಮಲಬಾರಿ ಭಾಷೆಯಲ್ಲಿ ಹೊರ ಬರುವ ಶಬ್ದಗಳು. ಹೀಗೇ ವ್ಯತ್ಯಾಸಗಳಲ್ಲಿ ಕಾಣುವ ಭಾಷೆಯ ಪ್ರತಿಯೊಂದು ಕಡೆ ಬಳಕೆ ಮಾಡುವ ಶಬ್ದಗಳು ಕೂಡಾ ಈ ನಿಘಂಟಿನಲ್ಲಿ ಸೇರಿವೆ. ಇದು ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಮಹಮ್ಮದ್ ಹನೀಫ್ ಮತ್ತು ಸಲಹಾ ಸಮಿತಿ ಸದಸ್ಯರ ಸಾಧನೆಗಳಲ್ಲಿ ಒಂದು.

ಈ ಬ್ಯಾರಿ-ಕನ್ನಡ- ಇಂಗ್ಲಿಷ್ ನಿಘಂಟಿನ ಪ್ರಧಾನಸಂಪಾದಕರಾಗಿ ಬಿ.ಎ. ಮಹಮ್ಮದ್ ಹನೀಫ್, ಫ್ರೊ. ಬಿ.ಎಂ. ಇಚ್ಲಂಗೋಡು ಸಂಪಾದಕರಾಗಿ ಉಮರಬ್ಬ ಸದಸ್ಯ ಕಾರ್ಯದರ್ಶಿಯಾಗಿ, ಬಿ.ಎ. ಶಂಶುದ್ದೀನ್ ಮಡಿಕೇರಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಸಹಸಂಪಾದಕರಾಗಿ ದುಡಿದಿದ್ದಾರೆ. ಇವರೆಲ್ಲ ಜತೆ ಸೇರಿ ಮೂರು ವರ್ಷಗಳಲ್ಲಿ ಬಹಳಷ್ಟು ಶ್ರಮವಹಿಸಿ ದುಡಿದ ಕಾರಣ ಈ ನಿಘಂಟು ಇಷ್ಟು ಬೇಗ ಹೊರ ಬಂದಿದೆ ಎಂದೇ ಹೇಳಬಹುದು. ಕೃಷಿಕರಿಂದ ಕೃಷಿಗೆ ಸಂಬಂಧಪಟ್ಟಂತೆ ಬಳಸುವ ಶಬ್ದಗಳು, ಅದೇ ರೀತಿ ಕಾರ್ಮಿಕರು, ವ್ಯಾಪಾರಿಗಳು, ಬ್ಯಾರಿ ಅಧ್ಯಾಪಕರು, ಮೀನು ವ್ಯಾಪಾರಸ್ಥರು, ಸಾಹಿತಿಗಳು, ಸಮಾಜದ ಹಿರಿಯ ವ್ಯಕ್ತಿಗಳು ಮೊದಲಾದವರೊಂದಿಗೂ ಚರ್ಚಿಸಿ ಕೆಲವು ಶಬ್ದಗಳನ್ನು ಕಲೆ ಹಾಕಿದ್ದಾರೆ ಎಂದ ಮೇಲೆ ನಿಘಂಟು ತಯಾರಿಸಲು ಇವರಿಗಿದ್ದ ಉತ್ಸಾಹ ಎಷ್ಟಿತ್ತು ಎನ್ನುವುದನ್ನು ಬೇರೆ ವಿವರಿಸಿ ಹೇಳಬೇಕಾಗಿಲ್ಲ.

ಪ್ರಸಕ್ತ ಸಂಸ್ಕøತ ಭಾಷೆ ಮಾತನಾಡುವವರು ಇರುವುದು 14000, ಬ್ಯಾರಿ ಭಾಷೆ ಮಾತನಾಡುವವರು 15 ಲಕ್ಷಕ್ಕೂ ಮಿಕ್ಕಿ ಇದ್ದಾರೆ. ತುಳು ಭಾಷೆ ಕರಾವಳಿಯ ಭಾಷೆಯಾಗಿದೆ. ಉಳಿದ ಅಕಾಡೆಮಿಗಳಲ್ಲಿ ಇಷ್ಟು ತುರ್ತಾಗಿ ನಿಘಂಟುಗಳು ಬರಲಿಲ್ಲ. ತುಳುವಿನಲ್ಲಿ ಲಿಪಿ ಹೊರಬರಲು ಬಹಳಷ್ಟು ಸಮಯ ಹಿಡಿದಿದೆ. ಉಳಿದ ಅಕಾಡೆಮಿಗಳ ಸಾಧನೆಗಳಿಗೆ ಬ್ಯಾರಿ ಅಕಾಡೆಮಿಯ ಸಾಧನೆಯನ್ನು ಹೋಲಿಸಿದರೆ ಉನ್ನತ ಸ್ಥಾನದಲ್ಲೇ ಬ್ಯಾರಿ ಅಕಾಡೆಮಿಯ ಸಾಧನೆ ಇದೆ.

ಯಾರು ಏನೇ ಹೇಳಲಿ, ಎಷ್ಟೇ ವಿರೋಧಗಳು ಇರಲಿ, ಮೂರು ವರ್ಷಗಳಲ್ಲಿ ಒಂದು ನಿಘಂಟು ಬಹಳಷ್ಟು ಹಠ ಹಿಡಿದು ಹೊರ ತಂದಿರುವುದರಿಂದ ಬಹಳಷ್ಟು ಜನರಿಗೆ ಶಬ್ದಗಳ ಬಗ್ಗೆ ಅರ್ಥಮಾಡಿಕೊಳ್ಳಲು, ಭಾಷೆ ಗೊತ್ತಿಲ್ಲದವರಿಗೆ ಭಾಷೆಯ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಇದೇ ನಿಘಂಟುನ ಕುರಿತು ಮುಂಬರುವ ಸಮಿತಿ ಪಟ್ಟು ಹಿಡಿದು ಇನ್ನಷ್ಟು ಶಬ್ದಗಳನ್ನು ಕ್ರೂಡೀಕರಿಸಿ, ಇದೀಗ ರಚನೆಗೊಂಡ ನಿಘಂಟಿನಲ್ಲಿ ಆಗಿರುವ ಲೋಪಗಳನ್ನು ಪತ್ತೆ ಹಚ್ಚಿ ಅದನ್ನು ತಿದ್ದುಪಡಿ ಮಾಡಿ ಹೊಸದಾಗಿ ಇನ್ನೊಂದು ನಿಘಂಟು ಹೊರ ತಂದಲ್ಲಿ ಭಾಷಾಭಿವೃದ್ಧಿ ಮತ್ತು ಶಬ್ದಗಳ ಉಳಿಕೆ, ಸಾಹಿತ್ಯ ಮತ್ತು ಸಂಸ್ಕøತಿಗಳ ಬೆಳವಣಿಗೆ ಸಾಧ್ಯವಾಗುತ್ತದೆ. ಸಾಹಿತ್ಯ, ಮತ್ತು ಸಂಸ್ಕøತಿಯ ಉಳಿಕೆಗಾಗಿ ಸೇವೆ ಮಾಡುವ ಈ ಬ್ಯಾರಿ ಅಕಾಡೆಮಿ ಶ್ರಮವಹಿಸಿ ಕಾರ್ಯ ಮಾಡಿದರೆ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ ಎನ್ನುವ ಮಾತನ್ನು ಮಾತ್ರ ನಾವಿಲ್ಲಿ ನೆನಪಿನಲ್ಲಿಟ್ಟು ಕೊಳ್ಳಬೇಕಾಗಿದೆ. ಅಂತಹ ಉತ್ಸಾಹ, ಆಸಕ್ತಿ ಇಲ್ಲದೇ ಕೇವಲ ಅಧಿಕಾರದ ದೃಷ್ಟಿಯಿಂದ ಮಾತ್ರ ಸಭೆ ಕರೆದು ಸಣ್ಣಪುಟ್ಟ ಕಾರ್ಯಗಳನ್ನು ಮಾಡಿದರೆ ಅದರಿಂದ ಯಾವುದೇ ಪರಿಣಾಮ ಬೀರದು ಎಂಬುದು ಮಾತ್ರ ಸ್ಟಷ್ಟ. ಅಕಾಡೆಮಿ ಇರಲಿ, ಭಾಷೆ ಇರಲಿ, ಅದನ್ನು ಬೆಳೆಸುವ ದಾರಿ ನಾವು ನೋಡಬೇಕು. ಅದು ಸದಸ್ಯರ ಮುಖ್ಯ ಕೆಲಸ. ಅದನ್ನು ಸಾಧಿಸಿ ತೋರಿಸಬೇಕು. ಆಗ ಮಾತ್ರ ಜನರ ಬೆಂಬಲ ಸಿಗಲು ಸಾಧ್ಯ.




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here