Monday 6th, May 2024
canara news

ಶ್ರೀ ರಜಕ ಸಂಘ ಮುಂಬಯಿ ಸಂಸ್ಥೆಯಿಂದ ದಾದರ್‍ನಲ್ಲಿ ಆಚರಿಸಲ್ಪಟ್ಟ ಶ್ರೀ ವರಮಹಾಲಕ್ಷ್ಮೀ ಪೂಜೆ-ಭಜನೆ ಸಂಕೀರ್ತನೆ

Published On : 05 Aug 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.04: ರಜಕ ಸಂಘ ಮುಂಬಯಿ ಸಂಸ್ಥೆಯ ಮಹಿಳಾ ವಿಭಾಗ ಮತ್ತು ಸಾಂಸ್ಕೃತಿಕ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಶುಕ್ರವಾರ ದಾದರ್ ಪೂರ್ವದಲ್ಲಿನ ಕೊಹಿನೂರ್ ಭವನ್ ಸಭಾಗೃಹದಲ್ಲಿ ಶ್ರೀ ವರಮಹಾಲಕ್ಷಿ ್ಮೀ ಪೂಜಾ ಅರ್ಚನ ಕಾರ್ಯಕ್ರಮ ನಡೆಸಿತು. ರಜಕ ಸಂಘ ಮುಂಬಯಿ ಇದರ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ಪದಾಧಿಕಾರಿಗಳನ್ನು ಒಳಗೊಂಡು ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಪ್ರಯುಕ್ತ ಸಂಜೆ ಪ್ರಾರ್ಥನೆಯೊಂದಿಗೆ ಆರಂಭಗೊಳಿಸಲ್ಪಟ್ಟ ಧಾರ್ಮಿಕ ಕಾರ್ಯಕ್ರಮದಲ್ಲಿ ಹಳದಿ ಕುಂಕುಮಾ, ಭಜನೆ ಸಂಕೀರ್ತನೆ, ಗಣೇಶ ಪೂಜೆ, ವರಮಹಾಲಕ್ಷಿ ್ಮೀ ಪೂಜಾರ್ಚನೆ, ಸಹಸ್ರ ನಾಮಾವಳಿ, ಮಹಾ ಮಂಗಳಾರತಿ, ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ನಡೆಸಲ್ಪಟ್ಟಿತು.

ಗೀತಾ ಭುಜಂಗ ಸಾಲ್ಯಾನ್ ಧಾರ್ಮಿಕ ವಿಧಿವಿಧಾನಗಳನ್ನು ನೆರೆವೇರಿಸಿ ವಿವಿಧ ಪೂಜಾಧಿಗಳನ್ನು ಸ್ಥಾಪಿತ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ ಷೋಡಶೋಪಚಾರದಿಂದ ಪೂಜೆಗೈದು ಉಪಸ್ಥಿತ ರಜಕ ಭಗಿನಿಯರಿಗೆ (ಸುಮಂಗಲಿಯರಿಗೆ) ಅರಿಶಿನ ಕುಂಕುಮ ಹಚ್ಚಿದರು. ಡಿ.ಸಿ ಸಾಲ್ಯಾನ್ ಮತ್ತು ವಿಶಾಲ ಡಿ. ಸಾಲ್ಯಾನ್ ದಂಪತಿ ಗಣಪತಿ ಪೂಜಾ ಯಜಮಾನತ್ವ ವಹಿಸಿದ್ದರು.

ಮಹಿಳಾ ವಿಭಾಗದ ಸದಸ್ಯೆಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿದ್ದು ಈ ಸಂದರ್ಭದಲ್ಲಿ ಉಪಾಧ್ಯಕ್ಷ ದಾಸು ಸಿ.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ಸಿಎ| ವಿಜಯ್ ಕುಂದರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಮಿತಾ ಡಿ.ಸಾಲ್ಯಾನ್, ಸಂಘದ ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಡಿ.ಗುಜರನ್, ಕಾರ್ಯದರ್ಶಿ ಪ್ರೀತಿ ಸಾಲ್ಯಾನ್, ಅಂತರಿಕ ಲೆಕ್ಕಪರಿಶೋಧಕರಾದ ಮತ್ತಿತರರು ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಸುಮಿತ್ರಾ ಆರ್.ಪಲಿಮಾರ್ ವರಮಹಾಲಕ್ಷ್ಮೀ ಉತ್ಸವದ ಬಗ್ಗೆ ಮಾಹಿತಿಯನ್ನಿತ್ತು ಇಂದು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ. ಇದು ಪೂರ್ಣಿಮೆಯ ಹಿಂದಿನ ಸುದಿನ. ವರಗಳನ್ನು ಕೊಡುವ ಲಕ್ಷ್ಮೀದೇವಿಯನ್ನು ವಿಶೇಷವಾಗಿ ಆರಾಧಿಸುವ ಪುಣ್ಯದಿನ. ಇಂತಹ ಆಚರಣೆ ಬಾಹ್ಯ ಸಂಪತ್ತಿಕ್ಕಿಂತ ಮಾನವ ಅಂತರಿಕ ಜೀವನ ಸಂಪತ್ತನ್ನು ವೃದ್ಧಿಸುವಂತಾಗಬೇಕು. ವೈಭವ ಲಕ್ಷ್ಮಿಯು ನಾಡಿನ ಸಮಸ್ತ ಜನತೆಗೆ ಆಯುರಾರೋಗ್ಯದೊಂದಿಗೆ ಐಶ್ವರ್ಯ ಅಭಿವೃದ್ಧಿ ಪ್ರಾಪ್ತಿಸಿ ಕಾಪಾಡಲಿ. ವರಮಹಾಲಕ್ಷ್ಮಿ ನಮ್ಮೆಲ್ಲರನ್ನು ಅನುಗ್ರಹಿಸಿ ಕಾಪಾಡಲಿ ಎಂದು ಹಾರೈಸಿದರು.

ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರುಗಳಾದ ಸಂಜೀವ್ ಎಕ್ಕಾರ್, ಭಾಸ್ಕರ್ ಕುಂದರ್, ಡೊಂಬಿಬಿಲಿ ಪ್ರಾದೇಶಿಕ ಕಾರ್ಯಧ್ಯಕ್ಷ ಬಾಲಕೃಷ್ಣ ಸಾಲ್ಯಾನ್, ಪಶ್ಚಿಮ ಪ್ರಾದೇಶಿಕ ಸಮಿತಿ ಉಪ ಕಾರ್ಯಧ್ಯಕ್ಷ ದಯಾನಂದ ಸಾಲ್ಯಾನ್, ಕಾರ್ಯಾಧ್ಯಕ್ಷೆ ನಳಿನಿ ಕುಂದರ್, ಮಹಿಳಾ ಉಪ ಕಾರ್ಯಾಧ್ಯಕ್ಷೆ ಲೋಲಾಕ್ಷಿ ಕುಂದರ್, ನವಿಮುಂಬಯಿ ಪ್ರಾದೇಶಿಕ ಮಹಿಳಾ ವಿಭಾಗೀಯ ಕಾರ್ಯಾಧ್ಯಕ್ಷೆ ಹೇಮಾ ಕುಂದರ್, ವಸಾಯಿ ಕಾರ್ಯಾಧ್ಯಕ್ಷ ರಮೇಶ್ ಪಲಿಮಾರ್, ಸೆಂಟ್ರಲ್ ಸಮಿತಿ ವಿಭಾಗೀಯ ಕಾರ್ಯಾಧ್ಯಕ್ಷೆ ಶಾಂತಿ ಕುಂದರ್, ವಸಾಯಿ ಉಪ ಕಾರ್ಯಾಧ್ಯಕ್ಷೆ ಹೇಮಾ ಸಾಲ್ಯಾನ್ ಮತ್ತಿತರ ಮುಖ್ಯಸ್ಥರು, ಸದಸ್ಯರನೇಕರು ಉಪಸ್ಥಿತರಿದ್ದರು.

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here