Monday 6th, May 2024
canara news

ಸಾಂತಕ್ರೂಜ್‍ನಲ್ಲಿ 20ನೇ ವಾರ್ಷಿಕ ಮಹಾಸಭೆ ಪೂರೈಸಿದ ಅಖಿಲ ಕರ್ನಾಟಕ ಜೈನ ಸಂಘ

Published On : 07 Aug 2017   |  Reported By : Rons Bantwal


ಸಂಕಟ ಬಂದಾಗ ಸಂಘದ ಸಹವಾಸ ಸಲ್ಲದು : ಮುನಿರಾಜ ಅಜಿಲ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.07: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ (ರಿ.) ಇದರ 20ನೇ ವಾರ್ಷಿಕ ಮಹಾಸಭೆಯು ಸಾಂತಕ್ರೂಜ್ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ಇಂದಿಲ್ಲಿ ರವಿವಾರ ಸಂಘದ ಅಧ್ಯಕ್ಷ ಬಿ.ಮುನಿರಾಜ ಅಜಿಲ ಅಧ್ಯಕ್ಷತೆಯಲ್ಲಿ ಜರುಗಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಉದಯ ಅಥಿüಕಾರಿ, ಗೌ| ಜತೆ ಕಾರ್ಯದರ್ಶಿಗಳಾದ ಮನೀಷ್ ಹೆಗ್ಡೆ, ರಘುವೀರ್ ಹೆಗ್ಡೆ, ಜತೆ ಕೋಶಾಧಿಕಾರಿ ಸಂಪತ್‍ಕುಮಾರ್ ಎಸ್.ಜೈನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾ ದ ಲೋಕನಾಥ್ ಜೈನ್, ಶ್ರೀಮತಿ ವಿನಂತಿ ಜೈನ್, ರಾಜೇಂದ್ರ ಹೆಗ್ಡೆ, ಪಿ.ವಸಂತ್ ಕೈಲಾಜೆ, ಪಿ.ಯುವರಾಜ್ ಜೈನ್, ಮಹಾವೀರ ಜೈನ್, ಪದ್ಮರಾಜ ಹೆಗ್ಡೆ ಆಸೀನರಾಗಿದ್ದು, ಗೌ| ಕಾರ್ಯದರ್ಶಿ ಪವನಂಜಯ ಬಲ್ಲಾಳ್ ಗತ ವಾರ್ಷಿಕ ಮಹಾಸಭೆಯ ವರದಿ ಭಿತ್ತರಿಸಿ, ಗತ ವಾರ್ಷಿಕ ಕಾರ್ಯಚಟುವಟಿಕೆ ವಿವರಿಸಿ ಸಭಾ ಕಲಾಪ ನಡೆಸಿದರು. ಗೌರವ ಕೋಶಾಧಿಕಾರಿ ಪಿ.ಅನಂತ ರಾಜ ಗತ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಅಧ್ಯಕ್ಷರು ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾಥಿರ್ü ವೇತನ ವಿತರಿಸಿ ಅಭಿನಂದಿಸಿದರು.

ಮುನಿರಾಜ ಅಜಿಲ ಅಧ್ಯಕ್ಷೀಯ ಭಾಷಣಗೈದು ಸಂಘವು ನಮ್ಮ ಹಿರಿಯರು ಸಮುದಾಯದ ಸಮೃದ್ಧಿಯ ದೂರದೃಷ್ಠಿಯಿಂದ ಆರಂಭಿಸಿದ್ದು, ಸುಮಾರು ಎರಡು ದಶಕಗಳ ಮುನ್ನಡೆಯಲ್ಲಿ ಹಲವು ಏರು ಪೇರುಗಳನ್ನು ಕಂಡರೂ ಏಕತೆಯತ್ತ ಸಾಗಿದೆÉ. ವಿವಿಧ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ಕ್ರೀಡಾ ಮತ್ತು ಶೈಕ್ಷಣಿಕ ಸೇವೆಯೊಂದಿಗೆ ಸ್ವಸಮುದಾಯದ ಹಿತಕ್ಕಾಗಿ ಶ್ರಮಿಸಿದೆ. ಈ ಸಂಘ ಜೈನ ಕುಟುಂಬ ಇದ್ದಂತೆ. ಸಂಘದ ಮೂಲಕ ಸೇವೆಗೈಯಲು ಬಂಧುಗಳು ಪುರುಸೊತ್ತು ಮಾಡಿದಾಗÀಲೇ ಎಲ್ಲರಲ್ಲೂ ಸೇವಾ ಉಮೇದು ಬರುವುದು. ಅದಕ್ಕಾಗಿ ಯುವಪೀಳಿಗೆ ಸಾಮಾಜಿಕ ಕಾಳಜಿ ರೂಪಿಸಬೇಕು. ಅವಾಗಲೇ ಹೊಸತಲೆಮಾರು ಮುಂದೆ ಬರಲುಸಾಧ್ಯ. ಸಂಘದ ಏಕತೆ ಎಲ್ಲರ ಮನಸ್ಸಿನಲ್ಲಿ ಮೂಡಿದಾಗ ಎಲ್ಲಾ ಕೆಲಸಗಳು ಸಲೀಸಾಗುವುದು. ಸಂಘದಿಂದ ಪದಾಧಿಕಾರಿಗಳಿಗೆ ಕಷ್ಟವಾಗಬಾರದು. ಸಂಕಟ ಬಂದಾಗ ಸಂಘದ ಸಹವಾಸಕ್ಕಿಂತ ಸಹಾಯವಾಗುವಾಗಲೇ ಸಂಘದ ಜೊತೆಗೆ ಸದಾ ನಿಕಟವಾಗಿದ್ದರೆ ಸಂಘಸಂಸ್ಥೆಗಳು ತನ್ನೀಂತಾನೇ ಮುನ್ನಡೆಯಲು ಸಾಧ್ಯವಾಗುವುದು. ಆದುದರಿಂದ ಸಮುದಾಯದ ಹಿತದೃಷ್ಠಿಯಿಂದ ಸೇವೆ ಮಾಡುವ ಭಾವನೆ ಹೃದಯದಿಂದ ಮೂಡಲಿ ಎಂದು ಮುನಿರಾಜ ಅಜಿಲ ಅಧ್ಯಕ್ಷೀಯ ಭಾಷಣದಲ್ಲಿ ಕರೆಯಿತ್ತರು.

ಸಭೆಯಲ್ಲಿ ಸಂಘದ 2017-2019ನೇ ದ್ವಿವಾರ್ಷಿಕ ಸಾಲಿಗೆ ನವೀನ ಕಾರ್ಯಕಾರಿ ಸಮಿತಿಗೆ 16 ಸದಸ್ಯರನ್ನು ಸಭೆಯು ಅವಿರೋಧವಾಗಿ ಆಯ್ಕೆಗೊಳಿಸಿತು. ನಂತರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಬಿ.ಮುನಿರಾಜ ಅಜಿಲ ಪುನಾರಾಯ್ಕೆ ಗೊಂಡರು. ಅಂತೆಯೇ ಮಹಿಳಾ ವಿಭಾಗಧ್ಯಕ್ಷೆ ಆಗಿ ವಿಜಯಮಾಲಾ ಕೋರಿ ಮತ್ತು ಯುವ ವಿಭಾಗಧ್ಯಕ್ಷರಾಗಿ ವಿಕ್ರಾಂತ್ ಅಥಿüಕಾರಿ ಆರಿಸಲ್ಪಟ್ಟರು.

ಮಹಿಳಾ ವಿಭಾಗಧ್ಯಕ್ಷೆ ಕವಿತಾ ಎಸ್.ಜೈನ್ ಮತ್ತು ಯುವ ವಿಭಾಗಧ್ಯಕ್ಷ ಭರತ್ ಜೈನ್, ಉಪ ಸಮಿತಿಗಳ ಮುಖಸ್ಥರು ಸೇರಿದಂತೆ ಸದಸ್ಯರನೇಕರು ಹಾಜರಿದ್ದು, ಸಂಘದ ಮಹಿಳಾ ವಿಭಾಗದ ಶ್ರಾವಕಿಯ ಕೀರ್ತನೆಯೊಂದಿಗೆ ಸಭೆ ಆದಿಗೊಂಡಿತು. ಬಳಿಕ ಇತ್ತೀಚೆಗೆ ಅಗಲಿದ ಅಖಿಲ ಕರ್ನಾಟಕ ಜೈನ ಸಂಘದÀ ಸ್ಥಾಪಕ ಸದಸ್ಯರಲ್ಲೋರ್ವರೂ, ಹಾಲಿ ಕಾರ್ಯಕಾರಿ ಸಮಿತಿ ಸದಸ್ಯ ಜಯ ಎ.ಜೈನ್ ಮತ್ತು ಅಗಲಿದ ಸರ್ವ ಜೈನಬಂಧುUಳು, ಸಂಘದ ಹಿತೈಷಿಗಳಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು.

ಸಂಘದ ಸಕ್ರೀಯ ಕಾರ್ಯಕರ್ತರೂ ಶಿಕ್ಷಕರಾದ ಸನತ್‍ಕುಮಾರ್ ಜೈನ್, ವಾಣಿ ವೈದ್ಯ, ವತ್ಸಲಾ ಅರಿಗ ಮತ್ತು ಚಂದನ ಯು.ಪಡಿವಾಳ್ ಸಭಿಕರ ಪರವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಸಂಘದ ಮುನ್ನಡೆಗೆ ಮಹಿಳಾ ವಿಭಾಗ ಮತ್ತು ಯುವ ವಿಭಾದ ಅನುಪಮ ಸೇವೆಯನ್ನು ಮನವರಿಸಿದ ಪವನಂಜಯ ಬಲ್ಲಾಳ್ ವಂದನಾರ್ಪಣೆಗೈದರು.

 

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here