Monday 6th, May 2024
canara news

ಬಂಟರ ಭವನದಲ್ಲಿ ಜರುಗಿದ ಮಾತೃಭೂಮಿ ಕ್ರೆಡಿಟ್ ಸೊಸೈಟಿ 29ನೇ ವಾರ್ಷಿಕ ಮಹಾಸಭೆ

Published On : 07 Aug 2017   |  Reported By : Rons Bantwal


ಬಂಟರ ಬ್ಯಾಂಕ್ ಶೀಘ್ರವೇ ಸಕಾರಗೊಳ್ಳಲಿದೆ : ಸಿಎ| ಶಂಕರ್ ಬಿ.ಶೆಟ್ಟಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


ಮುಂಬಯಿ, ಆ.07: ಬಂಟರ ಸಂಘ ಮುಂಬಯಿ ಸಂಯೋಜಕತ್ವದ ಮಾತೃಭೂಮಿ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಇಪ್ಪತ್ತೋಂಬತ್ತನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರದ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಮಾತೃಭೂಮಿ ಸೊಸೈಟಿ ಕಾರ್ಯಾಧ್ಯಕ್ಷ ಸಿಎ| ಶಂಕರ ಬಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ನೇರವೇರಿತು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಸಭೆಗೆ ಚಾಲನೆಯನ್ನಿತ್ತರು.

ಕ್ರೆಡಿಟ್ ಸೊಸೈಟಿ ಉಪ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌರವ ಕಾರ್ಯದರ್ಶಿ ಸಿಎ| ರಮೇಶ್ ಎ.ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ನಿರ್ದೇಶಕರುಗಳಾದ ಶಿವರಾಮ ಜಿ.ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಐಕಳ ಸುಜಾತಾ ಗುಣಪಾಲ್ ಶೆಟ್ಟಿ, ಸಂತೋಷ ಎಂ.ಜಾವಂದಲೆ, ಬಾಂಬೇ ಬಂಟ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಉಪ್ಪೂರು ಶೇಖರ್ ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದರು.

ಇದೊಂದು ಹಣಕಾಸು ಸಂಸ್ಥೆಯಾಗಿದ್ದು ಇಲ್ಲಿ ನಾವು ಆರ್‍ಬಿಐ ಮತ್ತು ಸರಕಾರಿ ಸಹಕಾರಿ ನಿಯಮಾನುಸಾರ ನಡೆದಾಗಲೇ ಸಂಸ್ಥೆಯು ಭದ್ರವಾಗಿ ಮುನ್ನಡೆಯಲು ಸಾಧ್ಯ ಇದರಿಂದ ನಮ್ಮ ಪಥಸಂಸ್ಥೆಯೊಡನೆ ಷೇರುದಾರರ ಮತ್ತು ಗ್ರಾಹಕರ ವಿಶ್ವಾಸವೂ ಹೆಚ್ಚುವುದು. ಇದೀಗಲೇ ಎ ಮಾನ್ಯತೆಗೆ ಪಾತ್ರವಾದ ಈ ಮಾತೃಭೂಮಿ ಕ್ರೆಡಿಟ್ ಸೊಸೈಟಿಯನ್ನು ಶೀಘ್ರವೇ ಏಕೈಕ ಶಾಖೆವುಳ್ಳ ರತ್ನಗಿರಿ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆಯೊಡನೆ ವಿಲೀನಗೊಳಿಸಲು ಮಾತೃಸಂಸ್ಥೆ ಬಂಟ್ಸ್ ಸಂಘ ಮತ್ತು ಮಾತೃಭೂಮಿ ನಿರ್ದೇಶಕ ಮಂಡಳಿ ತೀರ್ಮಾನಿಸಿದೆ. ಪ್ರಕ್ರಿಯೆಗಳು ಶೀಘ್ರಗತಿಯ ಲ್ಲಿ ಸಾಗುತ್ತಿದ್ದು ಯೋಜನೆ ಸಿದ್ಧಿಯಾದಲ್ಲಿ ರತ್ನಗಿರಿ ಬ್ಯಾಂಕ್ ನಮ್ಮ ಸೊಸೈಟಿ ಕಛೇರಿಯಲ್ಲಿ ಕಾರ್ಯಚರಿಸಿ ಮಾತೃಭೂಮಿಯ ಮುಂದಿನ ಮಹಾಸಭೆಯನ್ನು ಇಲ್ಲೇ ನಡೆಸುವ ಆಶಯ ನಮ್ಮದಾಗಿದೆ. ಆ ಮೂಲಕ ಬಂಟರ ಸ್ವಂತಿಕೆಯ ಬ್ಯಾಂಕ್ ಶೀಘ್ರವೇ ಸಕಾರಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ. ಗತಸಾಲಿನಲ್ಲಿ ಈ ಸೊಸೈಟಿ ನಮ್ಮ ನಿರೀಕ್ಷೆಕ್ಕಿಂತಲೂ ಮಿತಿಮೀರಿದ ಸಾಧನೆ ಮಾಡಿದೆ. ಆದುರಿಂದ ಈ ಬಾರಿ ಸೊಸೈಟಿಯು ಷೇರುದಾರರಿಗೆ 13% ಲಾಭಾಂಶ (ಡಿವಿಡೆಂಡ್) ನೀಡಲಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಶಂಕರ ಬಿ. ಶೆಟ್ಟಿ ತಿಳಿಸಿದರು.

ಪ್ರಭಾಕರ ಎಲ್.ಶೆಟ್ಟಿ ಮಾತನಾಡಿ ಬಂಟರ ಸ್ವಂತಿಕೆಯ ಬ್ಯಾಂಕ್‍ನ ಬಹುಕಾಲದ ಕನಸು ಶೀಘ್ರವೇ ನನಸಾಗುವ ಬಗ್ಗೆ ತಿಳಿದು ಅಭಿಮಾನವಾಗುತ್ತಿದೆ. ಇದಕ್ಕೆ ಸಮಗ್ರ ಬಂಟರ ಸಹಯೋಗ ಅವಶ್ಯವಾಗಿದೆ ಎಂದರು.

ಸಭೆಯಲ್ಲಿ ರತ್ನಗಿರಿ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸುಜೀತ್ ಝಿಮನ್, ಉದ್ಯಮಿ ಜಗದೀಶ್ ಶೆಟ್ಟಿ ಮುಲುಂಡ್, ಕಿಶೋರ್‍ಕುಮಾರ್ ಕುತ್ಯಾರು, ಸೊಸೈಟಿಯ ಹಿರಿಯ ವ್ಯವಸ್ಥಾಪಕಿ ಮಲ್ಲಿಕಾ ಪಿ.ಶೆಟ್ಟಿ, ಹಣಕಾಸು ಪ್ರಬಂಧಕಿ ಶಶಿಕಲಾ ಎಸ್.ಶೆಟ್ಟಿ, ವ್ಯವಸ್ಥಾಪಕರುಗಳಾದ ಕಿಶೋರ್ ಎಂ.ಪಾಟೀಲ್, ಶಂಕರ್ ಬಿ.ಶೆಟ್ಟಿ ಸೇರಿದಂತೆ ಸೊಸೈಟಿಯ ಧನಸಂಗ್ರಹಣಾ ಪ್ರತಿನಿಧಿಗಳಾದ ತಾರಾನಾಥ ಆರ್.ಶೆಟ್ಟಿ, ಸಂದ್ಯಾ ಮಲ್ಲಿ (ಥಾಣೆ ಸೆಂಟರ್), ಸದಾಶಿವ ಎಸ್.ಶೆಟ್ಟಿ, ಸಂದೇಶ್ ಆರ್.ಶೆಟ್ಟಿ (ಸಾಕಿವಿಹಾರ್), ಸದಾಶಿವ ಎಂ.ಶೆಟ್ಟಿ ಪುರುಷೋತ್ತಮ ಸುವರ್ಣ (ವಸಾಯಿ), ಪ್ರೇಮನಾಥ ಅಮೀನ್, ಶೇಖರ್ ಆರ್.ಶೆಟ್ಟಿ (ವಾಶಿ), ಪ್ರಸಾದ್ ಪಿ.ಶೆಟ್ಟಿ, ಮಹಾಬಲ ಟಿ.ಶೆಟ್ಟಿ (ಕಲ್ಯಾಣ್), ಗತ ಶೈಕ್ಷಣಿಕ ಸಾಲಿನಲ್ಲಿ ಗರಿಷ್ಠ ಅಂಕ ಗಳಿಸಿದ ನೌಕರ ವೃಂದದ ಮಕ್ಕಳಲಲ್ಲಿನ ಕು| ಸೃಷ್ಠಿ ಶೆಟ್ಟಿ, ಕು| ಸುರಭಿ ಆರ್.ಶೆಟ್ಟಿ, ಮಾನಸ ಎಸ್.ಶೆಟ್ಟಿ ಹಾಗೂ ಹಿರಿಯ ಬಂಟ ಮುಂದಾಳುಗಳು, ವಿವಿಧ ಬಂಟ ಸಂಸ್ಥೆಗಳ ಮುಖ್ಯಸ್ಥರುಗಳÀನ್ನು ಕಾರ್ಯಾಧ್ಯಕ್ಷ ಶಂಕರ ಶೆಟ್ಟಿ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿ ಅಭಿನಂದಿಸಿದರು.

ಸಭಿಕರ ಪರವಾಗಿ ನ್ಯಾ| ಆರ್.ಸಿ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಸುಧಾಕರ್ ಎಸ್.ಹೆಗ್ಡೆ, ಶಂಕರ್ ಶೆಟ್ಟಿ ಮಾತನಾ ಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನಿತ್ತು ನಿರ್ದೇಶಕ ಮಂಡಳಿಯ ಕಾರ್ಯವೈಖರಿ ಪ್ರಶಂಸಿಸಿ ಬ್ಯಾಂಕ್‍ವನ್ನಾಗಿ ಪರಿವರ್ತಿಸುವ ಸಾಧನೆಗಾಗಿ ಶುಭಾರೈಸಿದರು. ಸಿಎ| ರಮೇಶ್ ಎ.ಶೆಟ್ಟಿ ಸ್ವಾಗತಿಸಿ ಗತವಾರ್ಷಿಕ ವರದಿ ವಾಚಿಸಿ. ಆಯವ್ಯಯದ ಪಟ್ಟಿ (ಬ್ಯಾಲನ್ಸ್ ಶೀಟ್) ಮತ್ತು ವಾರ್ಷಿಕ ಲಾಭನಷ್ಟಗಳ ಬಗ್ಗೆ ಮಾಹಿತಿ ನೀಡಿದರು. ಪ್ರವೀಣ್ ಬಿ.ಶೆಟ್ಟಿ ವಾರ್ಷಿಕ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು. ಉಳ್ತೂರು ಮೋಹನ್‍ದಾಸ್ ಶೆಟ್ಟಿ ವಂದಿಸಿದರು.

 

 




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here