Monday 19th, March 2018
canara news

ಆ.14-15 ರಂದು ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಸಾಂಪ್ರದಾಯಿಕ ಶ್ರೀಕೃಷ್ಣ ಜನ್ಮಾಷ್ಟಮಿ (ವಿಟ್ಲ ಪಿಂಡಿ) ಆಚರಣೆ

Published On : 10 Aug 2017   |  Reported By : Rons Bantwal


ಮುಂಬಯಿ, ಆ.10: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಮತ್ತು ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆಶೀರ್ವದಗಳೊಂದಿಗೆ ಇದೇ ಆ.14 ಮತ್ತು 15ರಂದು ಪೇಜಾವರ ಮಠ ಮುಂಬಯಿ ಶಾಖೆಯಾದ ಶ್ರೀಪೇಜಾವರ ಮಠ ಪ್ರಭಾತ್ ಕಾಲೋನಿ ಸಾಂತಾಕ್ರೂಜ್ ಪೂರ್ವ ಮುಂಬಯಿ ಇಲ್ಲಿ ಸಾಂಪ್ರದಾಯಿಕ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು (ವಿಟ್ಲ ಪಿಂಡಿ) ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಮಠದ ವಕ್ತಾರ ರಾಮದಾಸ ಉಪಾಧ್ಯಾಯ ರೇಂಜಳ ತಿಳಿಸಿದ್ದಾರೆ.

ಆ ಪ್ರಯುಕ್ತ ಆಗಸ್ಟ್ 14ರ ಮಂಗಳವಾರ ಸಂಜೆ 7.00 ಗಂಟೆಯಿಂದ ರಾತ್ರಿ ತನಕ ಶ್ರೀಕೃಷ್ಣ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರಿಂದ ಹರಿಕಥೆ ಕಾರ್ಯಕ್ರಮ. ರಾತ್ರಿ 9.30 ಗಂಟೆಗೆ ಶ್ರೀಕೃಷ್ಣ ದೇವರಿಗೆ ತುಳಸೀ ಅರ್ಚನೆ ಬಳಿಕ 11.00 ಗಂಟೆಗೆ ಮಹಾಪೂಜೆ, ಕೃಷ್ಣಾರ್ಘ್ಯ ಪ್ರದಾನ. ಮಾರನೇ ದಿನ 15ರ ಬುಧÀವಾರ ಸಂಜೆ 4.30 ಗಂಟೆಯಿಂದ ಮಠದ ವಠಾರ ಮತ್ತು ಪ್ರಭಾತ್ ಕಾಲೋನಿಯಲ್ಲಿ ವಿವಿಧ ವೇಷಭೂಷಣ, ವಾದ್ಯ ವೈವಿಧ್ಯಗಳ ನಾದದೊಂದಿಗೆ ಶ್ರೀಕೃಷ್ಣ ವಿಟ್ಲ ಪಿಂಡಿ ಉತ್ಸವ (ಮೆರವಣಿಗೆ) ನಡೆಸಲಾಗುವುದು. ಸಂಜೆ 6.00 ಗಂಟೆಯಿಂದ ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ, ಬಳಿಕ ಕು| ವಿಂದ್ಯಾ ಆಚಾರ್ಯ ಉಡುಪಿ ಅವರಿಂದ ಭರತನಾಟ್ಯ ಕಾರ್ಯಕ್ರಮ. 7.30 ಗಂಟೆಯಿಂದ ವಿದ್ವಾನ್ ಮುಕುಂದ ಪೈ ಕಾರ್ಕಳ ಅವರಿಂದ ದಾಸವಾಣಿ ಕಾರ್ಯಕ್ರಮ ಆ ಯೋಜಿಸಲಾ ಗಿದೆ. ಅಧಿಕ ಮಾಹಿತಿಗಾಗಿ ಪೇಜಾವರ ಮಠದ ದೂರವಾಣಿ 26126614 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಲಾಗಿದೆ.

ಈ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ನಾಡಿನ ಸಮಸ್ತ ಭಕ್ತಾಭಿಮಾನಿಗಳು ಸಹಭಾಗಿಗಳಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗುವಂತೆ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಹಾಗೂ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗ್ಟೆ ಈ ಮೂಲಕ ತಿಳಿಸಿದ್ದಾರೆ.
More News

ಕಥೊಲಿಕ್ ಸಭಾ ಕುಂದಾಪುರ ಘಟಕಕ್ಕೆ ಹೊಸ ಪದಾಧಿಕಾರಿಗಳು
ಕಥೊಲಿಕ್ ಸಭಾ ಕುಂದಾಪುರ ಘಟಕಕ್ಕೆ ಹೊಸ ಪದಾಧಿಕಾರಿಗಳು
ಗೋರೆಗಾಂವ್ ಕರ್ನಾಟಕ ಸಂಘದ ವಜ್ರಮಹೋತ್ಸವಕ್ಕೆ ಚಾಲನೆ
ಗೋರೆಗಾಂವ್ ಕರ್ನಾಟಕ ಸಂಘದ ವಜ್ರಮಹೋತ್ಸವಕ್ಕೆ ಚಾಲನೆ
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ಸಾಂಸ್ಕೃತಿಕ ಕಲಾಮಹೋತ್ಸವ
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ಸಾಂಸ್ಕೃತಿಕ ಕಲಾಮಹೋತ್ಸವ

Comment Here