Saturday 27th, April 2024
canara news

ವಿ.ಪಿ.ಎಮ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಮಾರಂಭ

Published On : 23 Aug 2017   |  Reported By : Rons Bantwal


“ಜವಾಬ್ದಾರಿ ಮತ್ತು ಹೊಣೆಗಾರಿಕೆ ಪ್ರಜಾಪ್ರಭುತ್ವದ ಲಕ್ಷಣ”-ಶ್ರೀಯುತ ಕಮಲಾಕ್ಷ ನರಸಿಂಹ ಭಟ್

ಸುಂದರ ಸಮರ್ಥ ಪ್ರಜಾರಾಜ್ಯ ಸರ್ವೋದಯದ ರಾಷ್ಟ್ರ ನಿರ್ಮಾಣ ಮಾಡಲು ಪಾಲಕರು, ಶಿಕ್ಷಕರು, ಶಾಲಾ-ಕಾಲೇಜುಗಳು ಮನ-ಮನಗಳಲ್ಲಿ, ಮನೆ-ಮನೆಗಳಲ್ಲಿ ಸದೃಡ ಮತ್ತು ಜವಾಬ್ದಾರಿಯುತ ನಾಗರಿಕರನ್ನು ರೂಪಿಸಬೇಕಾಗಿದೆ. ಸ್ವಾತಂತ್ರ್ಯದ ಪ್ರಜಾಪ್ರಭುತ್ವದ ಗುಟ್ಟು ಪ್ರತಿಯೊಬ್ಬ ಆದರ್ಶ ನಾಗರಿಕರ ನಿರ್ಮಾಣ ಕಾರ್ಯದಲ್ಲಿದೆ. ಎಲ್ಲಿಯವರೆಗೆ ಶಾಂತಿ. ಸಮಯ ಪ್ರಜ್ಞೆ, ಉನ್ನತ-ಉದಾತ್ತ ವಿಚಾರಗಳು ವಿಕಾಸವಾಗುವುದಿಲ್ಲವೋ ಅಲ್ಲಿಯವರೆಗೆ ಸ್ವಾತಂತ್ರ್ಯದ ಕನಸನ್ನು ಯಶಸ್ವಿಗೊಳಿಸಲು ಸಾಧ್ಯವಿಲ್ಲ. ಸದೃಡವಾದ ಮನಸ್ಸು, ಆರೋಗ್ಯದಿಂದ, ಕ್ರೀಡೆ, ಮುಕ್ತ ವಾತಾವರಣ, ಸಮೂಹ ಭಾವನೆಗಳಿಂದ ಗಾಂದೀಜಿಯ ಗ್ರಾಮ ಸ್ವರಾಜ್ಯ, ಕನಸಿನ ಭಾರತವನ್ನು ನನಸುಗೊಳಿಸಬಹುದು. ವಿಜ್ಞಾನ-ತಂತ್ರಜ್ಞಾನದ ಸದುಪಯೋಗವಾಗಿ ಮನಸಿನ ಅಂತರಾಳದ ಭಾವನೆಯನ್ನು ಹಂಚಿಕೊಂಡು ಪ್ರಗತಿ ಪಥದತ್ತ ಸಾಗುವಂತಿರಬೇಕೆ ವಿನ: ದುರುಪಯೋಗವಾಗಬಾರದೆಂದು ಶಾಲೆಯ ಹೊರಾಂಗಣದಲ್ಲಿ ಧ್ವಜಾರೋಣಗೊಳಿಸಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ವ್ಯಾಪಾರಿ ಹಾಗೂ ಸಮಾಜಸೇವಕರಾದ ಶ್ರೀಯುತ ಕಮಲಾಕ್ಷ ನರಸಿಂಹ ಭಟ್ 71 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತ ಮಾತನಾಡುತ್ತಿದ್ದರು!

ಈ ಸಮಾರಂಭದ ಅಧ್ಯಕ್ಷರು, ಸಂಸ್ಥೆಯ ಪ್ರಧಾನ ಗೌರವ ಕಾರ್ಯದರ್ಶಿಗಳಾದ ಡಾ|| ಪಿ.ಎಮ್ ಕಾಮತ್‍ರು ಅನುಮೋದನೆ ನೀಡಿ, ಅತಿಥಿ-ಗಣ್ಯರಿಗೆ ಪುಷ್ಪಗುಚ್ಛ ವಿತರಿಸಿ ವಂದಿಸುತ್ತಾ ಗುಲಾಮಗಿರಿಗೆ ಕೊನೆ ಹಾಡಿ 71 ವರ್ಷಗಳಿಂದ ಸ್ವಾತಂತ್ರ್ಯೋತ್ಸವದ ರಾಷ್ಟ್ರೀಯ ಹಬ್ಬವನ್ನು ಹೇಗೆ ಸಡಗರ-ಸಂಭ್ರಮದಿಂದ ಆಚರಿಸುತ್ತೇವೆಯೋ ಹಾಗೆಯೇ ಪ್ರತಿಯೋಬ್ಬ ನಾಗರಿಕನು ಅವರವರ ಕಾಯಕದಲ್ಲಿ ಪ್ರಯತ್ನ, ಪಾಮಾಣಿಕತೆ, ಶಿಸ್ತಿನ ಮೂಲಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಅದರಿಂದಲೇ ಆದರ್ಶ ರಾಷ್ಟ್ರವನ್ನು ನಿರ್ಮಾಣ ಮಾಡಲು ಸಾಧ್ಯ. ತಮ್ಮ ತಮ್ಮ ಕಾರ್ಯದಲ್ಲಿ ತಾವು ತೊಡಗಿಸಿಕೊಂಡರೆ, ಸೇವಾ ಮನೋಭಾವನೆ ಬೆಳೆಯುತ್ತದೆ. ಆನಸೇವೆ ಮತ್ತು ಸಮಾಜ ಸೇವೆಗಿಂತ ಮಿಗಿಲಾದ ಸೇವೆ ಮತ್ತು ಧರ್ಮವಿಲ್ಲ. ಇಂತಹ ಸೇವೆಯಿಂದಲೇ ಮಹಾನಂದವು ಇಮ್ಮಡಿಯಾಗಿರುತ್ತದೆ. ಕಾಯಕಕ್ಕೆ ಕಟೀಬದ್ದರಾಗಿರುವುದೇ ನಮ್ಮ ಆದ್ಯ ಕರ್ತವ್ಯವಾಗಬೇಕು. ಜನರ-ರಾಷ್ಟ್ರದ ರಕ್ಷಣೆಯಾಗಬೇಕಾದರೆ, ವ್ಯಕ್ತಿಯಿಂದ- ರಾಷ್ಟ್ರದ ಜನರವರೆಗೆ, ಕುಟುಂಬದಿಂದ- ದೇಶದವರೆಗೆ ಛಲ, ಆತ್ಮವಿಶ್ವಾಸ, ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಅವಶ್ಯ-ಅನಿವಾರ್ಯವಿದೆಯೆಂದು ಎಲ್ಲರಿಗೂ 71 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸಿದರು!

ವಿದ್ಯಾರ್ಥಿನಿಯರ ಪ್ರಾರ್ಥನೆಯಿಂದ ಪ್ರಾರಂಭವಾದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಡಾ|| ಪಿ.ಎಮ್ ಕಾಮತ್, ಉಪ ಪ್ರಾಂಶುಪಾಲ ಸಾಯಿನಾಥ್ ಶೆಣೈ ಹಾಗೂ ಶ್ರೀಯುತ ಪ್ರಸನ್ನ ಪಂಡಿತ ಉಪಸ್ಥಿತರಿದ್ದು, ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಕವಿತಾ ಶರ್ಮಾ, ಸುವಿನಾ ಆರ್ ಶೆಟ್ಟಿ, ನೆಲ್ಸನ್, ಅರುಣಾಭಟ್, ಗೀತಾ ನಾಡ ಗೌಡ ಆಸೀನರಾಗಿದ್ದರು. ಸಮಾರಂಭದಲ್ಲಿ ಬಾಲವಾಡಿಯಿಂದ- ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ದೇಶ ಭಕ್ತಿಗೀತೆ, ಸ್ವಾತಂತ್ರ್ಯ ವೀರರ, ಯೋಧರ ಘೋಷಣೆ, ಪ್ರದರ್ಶನ, ಹೋರಾಟ, ಧೈರ್ಯ, ಸಾಹಸ, ಪ್ರಾಣತ್ಯಾಗ, ರಾಷ್ಟ್ರಪ್ರೇಮದ ಪ್ರತೀಕತೆಯನ್ನು ಪ್ರಸ್ತುತ ಪಡಿಸಿದರು. ಉಪ ಪ್ರಾಂಶುಪಾಲರು, ಪರಿವೀಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕೇತರ ಸಿಬ್ಬಂದಿಗಳು ಧ್ವಜಾ ವಂದನೆ ಸಲ್ಲಿಸಿದರು. ಅತಿಥಿ-ಗಣ್ಯರ ಪರಿಚಯ, ಸ್ವಾಗತ-ನಿರ್ವಹಣೆ-ಧನ್ಯವಾದವನ್ನು ಶಿಕ್ಷಕಿ ಶ್ರೀಮತಿ ವಿದ್ಯಾ ಚವ್ಹಾಣ್ ನಿರ್ವಹಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು

Comment Here